twitter
    For Quick Alerts
    ALLOW NOTIFICATIONS  
    For Daily Alerts

    ಪುಟ್ಟಕ್ಕನ ಮನೆಗೆ ಮಂಜುಳಾನೇ ಕಂಟಕ: ಸ್ನೇಹಾಳಿಗೆ ಗೊತ್ತಾಗುವುದು ಯಾವಾಗ?

    By ಎಸ್ ಸುಮಂತ್
    |

    ಪುಟ್ಟಕ್ಕ ಅದೆಷ್ಟು ಮುಗ್ಧಳು ಎಂಬುದನ್ನು ಬಾಯಿ ಬಿಟ್ಟು ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಪುಟ್ಟಕ್ಕ ಯಾರ ಬಳಿಯೂ ತನ್ನ ಕೋಪ ತೋರಿಸಿಕೊಳ್ಳಲ್ಲ. ಹಾಗೇ ಕೆಟ್ಟದ್ದನ್ನು ಮಾಡಿದವರಿಗೂ ಒಳ್ಳೆಯದ್ದನ್ನೇ ಬಯಸುವ ಪುಟ್ಟಕ್ಕ. ಅಷ್ಟೇ ಅಲ್ಲ ತನ್ನ ಜೊತೆ ಕೆಲಸ ಮಾಡುವವರನ್ನು ತಮ್ಮವರಂತೆ ಕಾಣುವ ಪುಟ್ಟಕ್ಕ ಜೊತೆಯಲ್ಲಿ ಒಂದು ಕ್ರಿಮಿಕೀಟ ಸೇರಿಕೊಂಡಿದೆ ಅದರ ಹೆಸರು ಮಂಜುಳಾ.

    ನೂಲಿನಂತೆ ಸೀರೆ, ತಾಯಿಯಂತೆ ಮಕ್ಕಳು ಎಂಬ ಗಾದೆ ಮಾತಿದೆ. ಗಾದೆ ಮಾತುಗಳನ್ನು ಸುಮ್ಮ ಸುಮ್ಮನೆ ಮಾಡಿಲ್ಲ ಎಂಬುದಕ್ಕೆ 'ಪುಟ್ಟಕ್ಕನ ಮಕ್ಕಳು' ಕೂಡ ಸಾಕ್ಷಿಯಾಗುತ್ತದೆ. ಮೆಸ್‌ನಲ್ಲಿ ಕೆಲಸ ಮಾಡುವವರನ್ನು ಪುಟ್ಟಕ್ಕ ಹೇಗೆ ನಮ್ಮವರಂತೆ ಕಾಣುತ್ತಾರೋ, ಮಕ್ಕಳು ಕೂಡ ಅಷ್ಟೇ ಆತ್ಮೀಯವಾಗಿ ಕಾಣುತ್ತಾರೆ. ಅಷ್ಟೇ ನಂಬಿಕೆ ಇಟ್ಟಿದ್ದಾರೆ. ಆದರೆ ಮಂಜುಳಾ ಮಾಡುವ ಕಿತಾಪತಿ ಸ್ನೇಹಾಳಿಗೆ ಗೊತ್ತಾದರೆ ಅಂದು ಕಥೆ ಮುಗೀತು.

    ಬೆಟ್ಟದ ಹೂ: ಗೌತಮ್ ಬಿಡಿಸಿದ್ದ ಗೌರ ಚಿತ್ರ ಕಂಡು ಹೂವಿ ಮನಸ್ಸಲ್ಲಿ ನೂರೆಂಟು ಪ್ರಶ್ನೆ..! ಬೆಟ್ಟದ ಹೂ: ಗೌತಮ್ ಬಿಡಿಸಿದ್ದ ಗೌರ ಚಿತ್ರ ಕಂಡು ಹೂವಿ ಮನಸ್ಸಲ್ಲಿ ನೂರೆಂಟು ಪ್ರಶ್ನೆ..!

    ಪುಟ್ಟಕ್ಕನ ಮನೆಗೆ ದ್ರೋಹ ಬಗೆಯುತ್ತಿರುವ ಮಂಜುಳಾ

    ಪುಟ್ಟಕ್ಕನ ಮನೆಗೆ ದ್ರೋಹ ಬಗೆಯುತ್ತಿರುವ ಮಂಜುಳಾ

    ರಾಜೇಶ್ವರಿ ಪುಟ್ಟಕ್ಕನಿಂದ ಗಂಡ, ಮನೆ, ಜೀವನವನ್ನೇ ಕಿತ್ತುಕೊಂಡರು ಆಕೆಗಿನ್ನು ಸಮಾಧಾನವಾದಂತೆ ಕಾಣುತ್ತಿಲ್ಲ. ಪುಟ್ಟಕ್ಕನ ಮೇಲೆ ಹಗೆ ಸಾಧಿಸುತ್ತಲೇ ಇದ್ದಾಳೆ. ಹೇಗಾದರೂ ಮಾಡಿ, ಪುಟ್ಟಕ್ಕನ ಜೀವನವನ್ನು ಬೀದಿಗೆ ತರಲೇಬೇಕು, ಪುಟ್ಡಕ್ಕ ಬಂದು ಕಾಲಿಗೆ ಬೀಳಬೇಕು ಎಂಬುದೇ ರಾಜೇಶ್ವರಿ ಧ್ಯೇಯ. ಹೀಗಾಗಿಯೇ ಸಾಕಷ್ಟು ಬಾರಿ ಪುಟ್ಟಕ್ಕನಿಗೆ ತೊಂದರೆ ಕೊಟ್ಟಿದ್ದಾಳೆ. ಆದರೆ ಪುಟ್ಟಕ್ಕನ ಒಳ್ಳೆಯತನದಿಂದಾಗಿ ಎಲ್ಲಾ ಸಮಸ್ಯೆ ಬಗೆಹರಿದು, ರಾಜೇಶ್ವರಿ ಮಾಡಿದ ಅನ್ಯಾಯವೆಲ್ಲಾ ಆಕೆಗೆ ತಿರುಗಿದೆ. ಈಗ ಪುಟ್ಟಕ್ಕನ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತಿಳಿಯಲು ಮೆಸ್‌ನಲ್ಲಿ ಪುಟ್ಟಕ್ಕನ ಜೊತೆ ಸಹಾಯಕ್ಕಿರುವ ಮಂಜುಳಾನ ಬಳಸಿಕೊಳ್ಳುತ್ತಿದ್ದಾಳೆ. ಅಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ರಾಜೇಶ್ವರಿಗೆ ತಿಳಿಸುವ ಕಾರ್ಯದಲ್ಲಿ ಮಂಜುಳಾ ಬ್ಯುಸಿಯಾಗಿದ್ದಾಳೆ.

    ಮೋಸದ ಜನರ ಬಗ್ಗೆ ಸ್ನೇಹಾಗೆ ಚಿಂತೆಯಿಲ್ಲ

    ಮೋಸದ ಜನರ ಬಗ್ಗೆ ಸ್ನೇಹಾಗೆ ಚಿಂತೆಯಿಲ್ಲ

    ನಂಬಿಕೆ ಎಂಬುದೇ ಹಂಗೆ ಅಲ್ಲವೇ. ಒಮ್ಮೆ ಅವರು ನಮ್ಮವರು, ನಮ್ಮ ವಿರುದ್ಧ ಕತ್ತಿ ಮಸೆಯಲು ಸಾಧ್ಯವೇ ಇಲ್ಲ ಎಂಬುದು ಮನಸ್ಸಿಗೆ ಬಂದರೆ ಮುಗೀತು. ಅವರು ಹಿಂದೆ ಎಷ್ಟೇ ಮೋಸ ಮಾಡಿದರೂ, ಆ ಮೋಸದ ಅನುಮಾನ ಅವರ ಮೇಲೆ ಹುಟ್ಟುವುದಿಲ್ಲ. ಇದೀಗ ಪುಟ್ಟಕ್ಕನ ಮೆಸ್‌ನಲ್ಲಿ ಕೆಲಸ ಮಾಡುತ್ತಿರುವ ಮಂಜುಳಾನ ಅದೃಷ್ಟವೂ ಅಂತದ್ದೇ. ಪುಟ್ಟಕ್ಕನ ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದರು. ನಂಬಿಕೆಯೆಂಬ ಅಸ್ತ್ರ ಆಕೆಯನ್ನು ಕಾಪಾಡುತ್ತಿದೆ. ಬಂಗಾರಮ್ಮ ಮನೆಗೆ ಊಟಕ್ಕೆ ಹೋದಾಗಿನ ವಿಚಾರ ಸ್ನೇಹಾಳಿಗೆ ಗೊತ್ತಿಲ್ಲ ಎಂಬುದನ್ನು ರಾಜೇಶ್ವರಿಗೆ ಹೇಳಿದ್ದು ಯಾರು ಎಂಬ ಪ್ರಶ್ನೆಯನ್ನು ಸುಮಾ ತೆಗೆದಾಗಲೇ ಸ್ನೇಹಾ ಸ್ವಲ್ಪ ಸಮಯ ಕೊಟ್ಟು ಯೋಚಿಸಬೇಕಿತ್ತು. ಆಗ ಸತ್ಯ ಬಟಾಬಯಲಾಗುತ್ತಿತ್ತೇನೋ.

    ಮಂಜುಳ ಮಾತಿನಿಂದ ಮತ್ತೊಂದು ಯುದ್ಧ ಆಗುತ್ತಾ?

    ಮಂಜುಳ ಮಾತಿನಿಂದ ಮತ್ತೊಂದು ಯುದ್ಧ ಆಗುತ್ತಾ?

    ಪುಟ್ಟಕ್ಕನ ಮನೆಯಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದನ್ನು ತಿಳಿದುಕೊಳ್ಳಲು ರಾಜೇಶ್ವರಿ, ಮಂಜುಳಾನ ಬಳಸಿಕೊಳ್ಳುತ್ತಿದ್ದಾಳೆ. ಬಂಗಾರಮ್ಮನ ಮಗನನ್ನು ಅರೆಸ್ಟ್ ಮಾಡಿಸಿದ್ದೀನಿ ಎಂದು ಹೇಳಿದಾಗ ಪುಟ್ಟಕ್ಕನ ಕೈಕಾಲು ಆಡುತ್ತಿಲ್ಲ. ಮಗಳು ದೊಡ್ಡ ತಪ್ಪು ಮಾಡಿದ್ದಾಳೆಂದು ಗಾಬರಿಯಾಗಿದ್ದಾಳೆ. ಆದರೆ ಕಂಠಿಯ ನಾಟಕದಿಂದ ಅರೆಸ್ಟ್ ಆಗಿರುವ ವ್ಯಕ್ತಿಯೇ ಬೇರೆಯಾಗಿದ್ದಾನೆ. ಈ ಸಂತಸದ ವಿಚಾರವನ್ನು ಮಂಜುಳಾ ತಕ್ಷಣ ಕರೆ ಮಾಡಿ ರಾಜೇಶ್ವರಿಗೆ ಹೇಳಿದ್ದಾಳೆ. ಈ ವಿಚಾರ ಕೇಳಿ ರಾಜೇಶ್ವರಿಗೆ ಹಾಲು ಕುಡಿದಷ್ಟೇ ಸಂತಸವಾಗಿದೆ. ಮುಂದೆ ಪುಟ್ಟಕ್ಕ ಬೀದಿಗೆ ಬಂದೇ ಬರುತ್ತಾಳೆ. ಆ ಮೆಸ್ಸು, ಮನೆ ನಂದೆ ಎನ್ನುತ್ತಿದ್ದಾಳೆ.

    ರಾಜೇಶ್ವರಿಯಿಂದ ಸ್ನೇಹಾ-ಬಂಗಾರಮ್ಮನ ನಡುವೆ ಯುದ್ಧ!

    ರಾಜೇಶ್ವರಿಯಿಂದ ಸ್ನೇಹಾ-ಬಂಗಾರಮ್ಮನ ನಡುವೆ ಯುದ್ಧ!

    ಅತ್ತ ಚಂದ್ರು ಫೈನಲಿ ಒಂದು ಡಿಸಿಷನ್‌ಗೆ ಬಂದಿದ್ದಾನೆ. ಬಂಗಾರಮ್ಮ ಬಳಿ ಕ್ಷಮೆ ಕೇಳಿ, ವಸು ಕಾಲಿಗೆ ಬಿದ್ದು ಮನೆಗೆ ಕರೆದುಕೊಂಡು ಹೋಗಬೇಕೆಂದು ನಿರ್ಧರಿಸಿದ್ದಾನೆ. ಆದರೆ, ನಂಜಮ್ಮ ಇದಕ್ಕೆ ಒಪ್ಪಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಪ್ರಾಣವನ್ನು ಒಣಕ್ಕಿಟ್ಟು ವಿಷ ಕುಡಿದೇ ಬಿಟ್ಟಿದ್ದಾಳೆ. ಅದೇ ಸಮಯಕ್ಕೆ ಬಂದ ಸ್ನೇಹಾ ಹೇಗೋ ಆಸ್ಪತ್ರೆಗೆ ಸೇರಿಸಿ ಪ್ರಾಣ ಕಾಪಾಡಿದ್ದಾಳೆ. ಈ ವಿಚಾರವನ್ನು ಪುಟ್ಟಕ್ಕನಿಗೆ ತಿಳಿಸಿದ್ದಾಳೆ. ಗಾಬರಿಯಾದ ಪುಟ್ಟಕ್ಕ, ಮೆಸ್ ನೋಡಿಕೊಳ್ಳಲು ಮಂಜುಳಾಗೆ ಹೇಳಿದ್ದಾರೆ. ಆದರೆ ಆ ಕೆಡುಕು ಬುದ್ದಿ ವಿಚಾರವನ್ನು ಕೆದಕಿ ಕೇಳಿದ್ದಾಳೆ. ನಂಜಮ್ಮ ವಿಷ ಕುಡಿದಿದ್ದಾಳೆ ಎಂದಾಗ ಮೆಸ್‌ಗೆ ಬಂದವರು ಕೂಡ ಶಾಕ್ ಆಗಿದ್ದಾರೆ. ಈ ವಿಚಾರವನ್ನು ರಾಜೇಶ್ವರಿಗೆ ಹೇಳಿದರೆ, ರಾಜೇಶ್ವರಿ ಈ ವಿಚಾರದ ಮೇಲೆ ಮತ್ತೊಮ್ಮೆ ಬಂಗಾರಮ್ಮ ಮತ್ತು ಸ್ನೇಹಾ ನಡುವೆ ಯುದ್ಧ ಮಾಡಿಸುವ ಗ್ರೌಂಡ್ ಆಗಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

    English summary
    Zee Kannada Serial Puttakkana Makkalu Written Update On June 3rd Episode. Here is the details.
    Friday, June 3, 2022, 20:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X