ಪುಟ್ಟಕ್ಕನ ಮಕ್ಕಳು: ಕಂಠಿ-ಸ್ನೇಹಾ ಡ್ಯುಯೆಟ್ ಶುರು.. ಹ್ಯಾಂಡ್ಸಮ್ ಆಗೋದ ಕಂಠಿ..!

By ಎಸ್ ಸುಮಂತ್

ಪುಟ್ಟಕ್ಕನ ಮಕ್ಕಳಲ್ಲಿ ಸ್ನೇಹಾ ಮತ್ತು ಕಂಠಿ ಅದು ಯಾವಾಗ ಒಂದಾಗುತ್ತಾರೆ ಎಂದು ಕಾಯುತ್ತಿರುವವರ ಸಂಖ್ಯೆಯೇ ಹೆಚ್ಚು. ಆದರೆ ಅದಕ್ಕೆ ಒಂದಲ್ಲ ಒಂದು ಅಡ್ಡಿ ಆತಂಕ ಎದುರಾಗುತ್ತಲೇ ಇದೆ. ಸ್ನೇಹಾನೋ ಬಂಗಾರಮ್ಮನ ಮಗನನ್ನು ಜೈಲಿಗೆ ಹಾಕಿಸುವುದನ್ನೇ ರಬ್ಬರ್ ಥರದಲ್ಲಿ ಎಳೆಯುತ್ತಿದ್ದಾರೆ. ಕಂಠಿಗೆ ಇದೆ ದೊಡ್ಡ ಸಮಸ್ಯೆಯಾಗಿರುವುದು. ಅತ್ತ ಹೇಳಿರುವ ಸುಳ್ಳುಗಳಿಗೆ ಬಣ್ಣ ಹಚ್ಚಬೇಕೋ ಅಥವಾ ಮುಂದಿರುವ ಹುಡುಗಿಗೆ ಪ್ರೀತಿ ವ್ಯಕ್ತಪಡಿಸಬೇಕೋ ಒಂದು ತಿಳಿಯದೇ ಕಂಗಲಾಗಿ ಕೂತಿದ್ದಾನೆ.

ಸ್ನೇಹಾಳನ್ನು ನೋಡಿದರೆ ಸಾಕು ಭೂಮಿಯ ಮೇಲೆ ಕಾಲು ನಿಲ್ಲಲ್ಲ, ಕನಸಿನ ಲೋಕದಲ್ಲಿಯೇ ತೇಲಾಡುತ್ತಿರುತ್ತಾನೆ. ನಾಗ ಮತ್ತು ಮುಂಗುಸಿ ಎಷ್ಟೇ ಧೈರ್ಯ ತುಂಬಿದರು ಕಂಠಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಲೆ ಇಲ್ಲ. ಬಂಗಾರಮ್ಮ ನೋಡಿದರೆ ಅಣ್ಣನ ಮಗಳನ್ನೇ ಸೊಸೆ ಮಾಡಿಕೊಳ್ಳಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಕಂಠಿ ಲವ್ವಲ್ಲಿ ಬಿದ್ದಾಗಿದೆ. ಇನ್ನು ಪ್ರಪೋಸ್ ಮಾಡಿ, ಡ್ಯುಯೆಟ್ ಹಾಡಿದರೆ ಹೇಗಿರುತ್ತೆ ಎಂಬ ಕುತೂಹಲ ಅಭಿಮಾನಿಗಳದ್ದು. ಅದಕ್ಕೊಂದು ವಿಡಿಯೋ ಝಲಕ್ ಬಿಟ್ಟು ಖುಷಿ ಕೊಟ್ಟಿದೆ ಜೀ ಕನ್ನಡ.

ಅವಳ ಒಲವನಗೆ ಅಂತಿದ್ದಾನೆ ಕಂಠಿ

ಅವಳ ಒಲವನಗೆ ಅಂತಿದ್ದಾನೆ ಕಂಠಿ

ಸೆಲೆಬ್ರೆಟಿಗಳು ಇತ್ತೀಚೆಗೆ ಗ್ಯಾಪ್‌ನಲ್ಲಿ ರೀಲ್ಸ್ ಮಾಡುವುದು ಗೊತ್ತೆ ಇದೆ. ಇದು ಅವರ ಅಭಿಮಾನಿಗಳಿಗೂ ಖುಷಿ ಕೊಡುವ ವಿಚಾರ. ಪುಟ್ಟಕ್ಕನ ಮಕ್ಕಳು ಸಹ ಶೂಟಿಂಗ್ ಟೈಮ್‌ನಲ್ಲಿ ಸಾಕಷ್ಟು ರೀಲ್ಸ್ ಮಾಡುತ್ತಾ ಇರುತ್ತಾರೆ. ಆದರೆ ಜೀ ಕನ್ನಡ ಹಂಚಿಕೊಂಡಿರುವ ಈ ರೀಲ್ಸ್ ಒಂದು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅದು ಕಂಠಿ ಮತ್ತು ಸ್ನೇಹಾ ಡ್ಯುಯೆಟ್ ಸಾಂಗ್. ಕಂಠಿ ಧಾರಾವಾಹಿಯಲ್ಲಂತು ಆ ರೀತಿ ಡ್ರೆಸ್ ಅಂತು ಮಾಡಿಕೊಂಡಿಲ್ಲ. ಯಾವಾಗಲೂ ಮಾಸ್ ಹೀರೊ ಲುಕ್‌ನಲ್ಲಿರುವ ಕಂಠಿ ಬ್ಲಾಕ್ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾನೆ. ಇನ್ನು ಸ್ನೇಹಾ ಲೈಟ್ ಗ್ರೀನ್ ಲಾಂಗ್ ಟಾಪ್‌ನಲ್ಲಿ ಮಿಂಚುತ್ತಿದ್ದಾಳೆ. ಕಂಠಿ ಅವಳ ಒಲವನಗೆ ಅಂತ ಹಾಡೇಳುತ್ತಿರುವುದು ನೋಡುವುದಕ್ಕೆ ಮಜಾ ನೀಡುತ್ತಿದೆ. ಆದರೆ ಇದು ಕಂಠಿಯ ಕನಸಾ, ಧಾರಾವಾಹಿಯಲ್ಲಿ ಬರುತ್ತಾ ಎಂಬ ಪ್ರಶ್ನೆಗಳು ನೋಡುಗರದ್ದು. ಧಾರಾವಾಹಿಯದ್ದೇ ಆಗಿರಬೇಕು ಎಂದು ಅಂದಾಜಿಸಲಾಗಿದ್ದು, ಆದಷ್ಟು ಬೇಗ ಆ ಸೀನ್ ತೆರೆಮೇಲೆ ಬರಲಿ ಎನ್ನುತ್ತಿದ್ದಾರೆ.

ಕಂಠಿ-ಸ್ನೇಹಾ ರೊಮ್ಯಾನ್ಸ್: ಸಲಹೆಗಳ ಸುರಿಮಳೆ

ಕಂಠಿ-ಸ್ನೇಹಾ ರೊಮ್ಯಾನ್ಸ್: ಸಲಹೆಗಳ ಸುರಿಮಳೆ

ಕಂಠಿ ಧಾರಾವಾಹಿಯಲ್ಲಿ ಯಾವಾಗಲೂ ಮಾಸ್ ಹೀರೊ ಆಗಿನೇ ಕಾಣಿಸಿಕೊಂಡಿದ್ದಾನೆ. ಇನ್ನು ಸ್ನೇಹಾ ಯಾವಾಗಲೂ ಜಗಳಗಂಟಿ. ಇಬ್ಬರ ನಡುವೆ ಪ್ರೀತಿ ಶುರುವಾದರೆ ಇಬ್ಬರ ರೊಮ್ಯಾಂಟಿಕ್ ಸೀನ್ ನೋಡುವುದಕ್ಕೆ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಅದರ ಸಣ್ಣ ಝಲಕ್ ಇರುವ ವಿಡಿಯೋವೊಂದನ್ನು ಶೇರ್ ಮಾಡಿರುವ ಜೀ ಕನ್ನಡ, ಆ ಕ್ಯೂರಿಯಾಸಿಟಿಯನ್ನು ತಣಿಸಿದೆ. ಅವರಿಬ್ಬರ ಡ್ಯೂಯೆಟ್ ಹಾಡು ನೋಡಿದವರು ಕೆಲವರು ಖುಷಿ ಪಟ್ಟರೆ ಇನ್ನು ಕೆಲವರು ಗಾಬರಿಯಾಗಿದ್ದಾರೆ. ಕಂಠಿ ಮುಖದಲ್ಲಿ ಒಂದಷ್ಟು ಮುಗ್ಧತೆ ಎದ್ದು ಕಾಣುತ್ತಿದೆ. ಜೋಡಿ ಮಾತ್ರ ಸೂಪರ್ ಆಗಿದೆ ಎಂಬ ಕಮೆಂಟ್‌ಗಳು ಬರುತ್ತಿವೆ. ಕಂಠಿ ಮತ್ತು ಸ್ನೇಹಾಳನ್ನು ಅಣ್ಣ ಅತ್ತಿಗೆ ಎಂದೇ ನೆಟ್ಟಿಗರು ಕರೆಯುತ್ತಾರೆ. ಹೀಗಾಗಿ ಅಣ್ಣ ಅತ್ತಿಗೆಗೆ ಮನತುಂಬಿ ಹಾರೈಸುತ್ತಿದ್ದಾರೆ.

ಸ್ನೇಹಾ ಆಯ್ತು ಈಗ ಸಹನಾ ವಿಡಿಯೋ

ಸ್ನೇಹಾ ಆಯ್ತು ಈಗ ಸಹನಾ ವಿಡಿಯೋ

ಪುಟ್ಟಕ್ಕನ ಮಕ್ಕಳಲ್ಲಿ ಇಬ್ಬರ ಲವ್ ಸ್ಟೋರಿ ಟ್ರ್ಯಾಕ್‌ಗೆ ಬರದೆ ಒದ್ದಾಡುತ್ತಿದೆ. ಕಂಠಿಯದ್ದು ಒನ್ ವೇ ಲವ್ವು. ಆದರೆ ಸಹನಾ ಮತ್ತು ಮುರುಳಿಯದ್ದು ಟುವೇ ಲವ್ವು. ಇಬ್ಬರ ಮನಸ್ಸಲ್ಲೂ ಪ್ರೀತಿ ಹುಟ್ಟಿದ್ದರು ಹೇಳಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಧೈರ್ಯ ಸಾಕಾಗುತ್ತಿಲ್ಲ. ಆದರೆ ಈಗ ಕಂಠಿ ಮತ್ತು ಸ್ನೇಹಾ ಡ್ಯುಯೆಟ್ ಸಾಂಗ್ ನೋಡಿದವರು ಸಹನಾ ಮತ್ತು ಮುರುಳಿ ಮೇಷ್ಟ್ರ ಸಾಂಗ್ ಬಿಡಿ ಎನ್ನುತ್ತಿದ್ದಾರೆ.

ಲವ್ ಯೂ ಹೇಳಲು ಪ್ರಾಕ್ಟೀಸ್ ಮಾಡುತ್ತಿರೊ ಮೇಷ್ಟ್ರು

ಸಹನಾಗೆ ಮದುವೆ ಮಾಡಲು ಮನೆಯಲ್ಲಿ ಅಂದಿನಿಂದ ಸಿದ್ಧತೆ ನಡೆಯುತ್ತಿದೆ. ಒಂದು ಸಂಬಂಧ ಈಗಾಗಲೇ ಮುರಿದುಬಿದ್ದಿದೆ. ಇದೀಗ ಮತ್ತೊಂದು ಸಂಬಂಧ ಅರಸಿ ಬಂದಿದೆ. ಇದು ಮುರುಳಿ ಮೇಷ್ಟ್ರಿಗೆ ಗೊತ್ತಾಗಿ ಮನಸ್ಸಲ್ಲಿಯೇ ಸಂಕಟ ಪಡುತ್ತಿದ್ದಾರೆ. ಶಾಲೆಯ ಜವಾನನ ಬಳಿ ಹೇಳಿದಾಗ ಮೊದಲು ಪ್ರೀತಿಯನ್ನು ಹೇಳಿಕೊಳ್ಳಿ ಎಂಬ ಸಲಹೆ ನೀಡಿದ್ದಾನೆ. ಜೊತೆಗೆ ಆತನಲ್ಲಿಯೇ ಸಹನಾಳನ್ನು ನೆನೆದು ಮುರುಳಿ ಮೇಷ್ಟ್ರು ಐ ಲವ್ ಯೂ ಹೇಳುವುದಕ್ಕೆ ಪ್ರಾಕ್ಟೀಸ್ ಮಾಡಿ ಆಗಿದೆ. ಇನ್ನೇನಿದ್ದರು ಸಹನಾ ಬಳಿ ಪ್ರೀತಿ ಹೇಳುವುದೊಂದೇ ಬಾಕಿ.

More from Filmibeat

English summary
Zee Kannada Serial Puttakkana Makkalu Written Update On Kanti And Sneha Love Story. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X