ಪುಟ್ಟಕ್ಕನ ಮಕ್ಕಳು: ಬಂಗಾರಮ್ಮನ ಮಾತು ಕೇಳಿ ಕಂಠಿ ಜೀವ ಬಾಯಿಗೆ ಬಂದಿದೆ..!
ಅಯ್ಯೋ ಪಾಪ ಕಂಠಿ ಪಾಡು ಯಾರಿಗೆ ಹೇಳುವುದು. ಆಗಾಗ ಎದುರಾಗುವ ವಿಚಾರಕ್ಕೆ ಕರೆಂಟ್ ಹೊಡೆದ ಕಾಗೆಯಂತಾಗುತ್ತಿದ್ದಾನೆ ನಮ್ಮ ಕಂಠಿ. ಇನ್ನು ಪ್ರೀತಿ ಹೇಳಿಕೊಳ್ಳುವುದಕ್ಕೆ ಆಗುವುದಕ್ಕೆ ಒದ್ದಾಡುತ್ತಿದ್ದರೆ ಒಂದಲ್ಲ ಒಂದು ಸಮಸ್ಯೆಗಳು ಬುಡಕ್ಕೆ ಬಂದು ಕೂರುತ್ತಿವೆ. ಇದು ಕಂಟಿಗೆ ಬಿಸಿ ಹಾಲು ಕುಡಿದ ಬೆಕ್ಕು ಒದ್ದಾಡುವುದಿಲ್ಲ ಹಾಗೇ ಒದ್ದಾಡುತ್ತಿದ್ದಾನೆ.
ಅವ್ವನಿಂದ ಸೊಸೆಯನ್ನು ಹೈಡ್ ಮಾಡುವುದಕ್ಕೆ ಸಾಕಷ್ಟು ಪ್ರಯತ್ನ ಪಡುತ್ತಲೇ ಇದ್ದಾನೆ ಕಂಠಿ. ಅವ್ವನ ಎಂಟ್ರಿ, ಹುಡುಗಿಯ ಎಂಟ್ರಿ ಇಬ್ಬರದ್ದೂ ಸೈಕಲ್ ಗ್ಯಾಪ್‌ನಲ್ಲಿ ಬೇರೆ ಬೇರೆಯಾಗಿ ಪ್ರಾಣ ಉಳಿದಿದೆ. ಅಲ್ಲೆಲ್ಲಾ ಸರಿಯಾಗಿರುವ ಸಮಸ್ಯೆ ಇದೀಗ ಮನೆಗೆ ಬಂದು ಕೂರುವ ಸಾಧ್ಯತೆ ಇದೆ. ಕಂಠಿಯ ಪ್ರೀತಿಯನ್ನು ಪ್ರೀತಿಯ ಅವ್ವನೇ ಮನೆಗೆ ಆಹ್ವಾನಿಸಿದ್ದಾಳೆ.

ಅತ್ತೆ-ಸೊಸೆ ಎದುರು ಬದುರಾಗುತ್ತಾರಾ..?
ಒಂದು ಕಡೆ ಕಂಠಿ ತಾನು ಯಾರು ಎಂಬುದನ್ನು ಹೇಳಿಲ್ಲ. ಮತ್ತೊಂದು ಕಡೆ ಪುಟ್ಟಕ್ಕನ ಆ ಪ್ರತಿಭಾವಂತ ಮಗಳು ಯಾರು ಎಂಬುದು ಬಂಗಾರಮ್ಮನಿಗೆ ಗೊತ್ತಿಲ್ಲ. ಆ ಕಡೆ ಬಂಗಾರಮ್ಮನ ಮಗ ಎಂದರೆ ಕೆಂಡಕಾರುವ ಸ್ನೇಹಾಳಿಗೂ ಕಂಠಿನೆ ಬಂಗಾರಮ್ಮನ ಮಗ ಎಂಬುದು ಗೊತ್ತಿಲ್ಲ. ಈ ಗೊತ್ತಿಲ್ಲದಿರುವಿಕೆಯ ನಡುವೆಯೇ ನಡೆಯುತ್ತಿದೆ ಒಂದು ಅದ್ಭುತವಾದ ಸಂಬಂಧ. ಒಂದು ವೇಳೆ ಈ ಮೂರು ಸಂಬಂಧಗಳು ಒಟ್ಟಿಗೆ ಸೇರಿದರೆ ಅಲ್ಲಿ ಯುದ್ಧವೇ ನಡೆಯುತ್ತದೆ. ಈಗಾಗಲೇ ಸ್ನೇಹಾಳನ್ನು ನೋಡಿರುವ ಬಂಗಾರಮ್ಮನಿಗೆ ಆಕೆಯ ಬಗ್ಗೆ ಒಳ್ಳೆಯ ಭಾವನೆ ಇಲ್ಲ. ಇತ್ತ ಬಂಗಾರಮ್ಮನ ಮಗ ಎಂದರೆ ಹೊಡಿ ಬಡಿ ಅಂತ ಬಡವರ ಪ್ರಾಣ ತಿನ್ನುತ್ತಾನೆ ಅಂತ ಸ್ನೇಹಾಳಿಗೆ ಮನಸ್ಸಲ್ಲಿಯೇ ದ್ವೇಷ ಹುಟ್ಟಿಕೊಂಡಿದೆ. ಇದರ ನಡುವೆ ಬಂಗಾರಮ್ಮನೇ ತನ್ನ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾಳೆ.

'ಪುಟ್ಟಕ್ಕನ ಮಕ್ಕಳ'ನ್ನು ತಡೆಯುತ್ತಾನಾ ಕಂಠಿ?
ಪುಟ್ಟಕ್ಕನ ಮಗಳು ಸಾಧನೆ ಮಾಡಿದ್ದಾಳೆ ಎಂಬುದಷ್ಟೇ ಗೊತ್ತು. ಬಂಗಾರಮ್ಮನಿಗೆ ಹಲವು ಬಾರಿ ಸ್ನೇಹಾನೇ ಪುಟ್ಟಕ್ಕನ ಮಗಳು ಎಂಬ ಸತ್ಯ ತಿಳಿಯುವಷ್ಟರಲ್ಲಿ ಪಾಸ್ ಆಗಿ ಹೋಗಿದೆ. ಸ್ನೇಹಾಳ ಸಾಧನೆಗೆ ಬಂಗಾರಮ್ಮ ಗೌರವ ಇದೆ. ಆದರೆ ಅದು ಅದೇ ಸ್ನೇಹಾ ಅಂತ ಗೊತ್ತಾದರೆ ಚಂಡಿ ಚಾಮುಂಡಿಯಾಗಿ ಬಿಡುತ್ತಾರೆ. ಅವ್ವ ನೋಡಿದರೆ ಹಠ ತೊಟ್ಟು ನಿಂತಿದ್ದಾರೆ. ಪುಟ್ಟಕ್ಕ ಕೂಡ ಬರಲು ಒಪ್ಪಿಕೊಂಡಿದ್ದಾರೆ. ಕಂಠಿಗೆ ಯೋಚನೆ ಮಾಡುವುದಕ್ಕೂ ಆಗುತ್ತಿಲ್ಲ. ಅಷ್ಟು ಟೆನ್ಶನ್ ಆಗಿದ್ದಾನೆ. ಅತ್ತ ವಸು ಕಡೆಯಿಂದಲೂ ಯಾವುದೇ ಸಹಾಯ ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಈ ಊಟದ ಆಹ್ವಾನವನ್ನು ತಡೆಯಲೇ ಬೇಕು ಅಂತ ತೀರ್ಮಾನಿಸಿದ್ದಾನೆ.

ಸ್ನೇಹಾಳನ್ನು ಕರೆದುಕೊಂಡು ಹೋಗುತ್ತಾಳಾ ಪುಟ್ಟಕ್ಕ?
ಈಗಾಗಲೇ ಸ್ನೇಹಾ ಮತ್ತು ಬಂಗಾರಮ್ಮ ಸಾಕಷ್ಟು ದಿನ ಎದುರು ಬದುರಾಗಿದ್ದಾರೆ. ಆಗೆಲ್ಲಾ ಜಗಳವಾಡದೆ ವಾಪಸ್ಸು ಬಂದಿರುವ ಉದಾಹರಣೆಗಳೆ ಇಲ್ಲ. ಇಂಥ ಹೆಣ್ಣು, ಸೊಸೆಯಾಗಿ ಹೋದವರ ಮನೆ ಅಷ್ಟೇ ಎಂಬುದು ಬಂಗಾರಮ್ಮ ಅವರ ಅಭಿಪ್ರಾಯ. ಇತ್ತ ಸ್ನೇಹಾಗೆ ಬಂಗಾರಮ್ಮನಿಗೆ ದುಡ್ಡಿನ ದರ್ಪ ಇದೆ ಎಂದು ಭಾವಿಸಿ ಆಕೆಯನ್ನು ದ್ವೇಷ ಮಾಡುತ್ತಿದ್ದಾಳೆ. ಆದರೆ ಆಕೆಯಲ್ಲೂ ಒಳ್ಳೆಯ ಮನಸ್ಸು ಇದೆ ಎಂಬುದನ್ನು ನೋಡುತ್ತಿಲ್ಲ. ತನ್ನ ತಾಯಿಯನ್ನು ಪಂಚಾಯ್ತಿಗೆ ಕರೆದಿದ್ದಾಳೆ ಎಂಬ ಕೋಪ ಮತ್ತಷ್ಟು ಬಲವಾಗಿದೆ. ಬಂಗಾರಮ್ಮನ ಹೆಸರು ಕೇಳಿದರೇನೆ ತಿರುಗಿ ಬೀಳುವ ಸ್ನೇಹಾ ಬಂಗಾರಮ್ಮ ಊಟಕ್ಕೆ ಕರೆದಿದ್ದಾರೆ ಎಂದರೆ ಹೋಗುತ್ತಾಳಾ? ನೋ ವೇ ಚಾನ್ಸೆ ಇಲ್ಲ. ಆದರೆ ಬಂಗಾರಮ್ಮನ ಆಹ್ವಾನವನ್ನು ತಿರಸ್ಕರಿದರೆ ಏನಾಗುತ್ತೆ ಅನ್ನೋ ಎಚ್ಚರಿಕೆಯನ್ನು ಕೋದಂಡ ಕೊಟ್ಟು ಹೋಗಿದ್ದಾನೆ. ಹೀಗಾಗಿ ಪುಟ್ಟಕ್ಕ ಸುಳ್ಳು ಹೇಳಿ ಕರೆದುಕೊಂಡು ಹೋದರು ಹೋಗಬಹುದು.

ಸುಳ್ಳಿನ ಸರಮಾಲೆಯಲ್ಲಿ ಸಿಲುಕಿರುವ ಕಂಠಿ
ಕಂಠಿಗೆ ಪ್ರೀತಿ ಹೇಳಿಕೊಳ್ಳುವುದು ಅಷ್ಟೆ ಅಲ್ಲ. ಸರತಿ ಸುಳ್ಳಿನ ಸರಮಾಲೆಯಲ್ಲಿ ಸಿಲುಕಿದ್ದಾನೆ. ಸ್ನೇಹಾ ಹುಡುಕುತ್ತಿರುವ ದೊರೆ, ಬಂಗಾರಮ್ಮನ ಮಗ ಕಂಠಿ ಅನ್ನೋ ಸತ್ಯವನ್ನು ಸಾಧ್ಯವಾದಷ್ಟು ಮುಚ್ಚಿಡಬೇಕಾದ ಅನಿವಾರ್ಯತೆ ಇದೆ. ಎದೆ ಮೇಲಿನ ಅವ್ವನ ಹಚ್ಚೆ ಕಂಡರಂತೂ ಮುಗಿದೇ ಹೋಯಿತು. ಅವ್ವನ ಮೇಲೆ ಅಪಾರ ಪ್ರೀತಿ ಇದ್ದರು ಅದನ್ನು ತೋರಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ಕಂಠಿ ಇದ್ದಾನೆ. ಹೀಗಾಗಿ ಕಂಠಿ ತನ್ನ ಪ್ರೀತಿ ಹೇಳಿಕೊಳ್ಳುವ ಮುನ್ನ ಈ ಎಲ್ಲಾ ಸುಳ್ಳುಗಳನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.


Click it and Unblock the Notifications











