ಪುಟ್ಟಕ್ಕನ ಮಕ್ಕಳು: ಕಂಠಿಗೆ ಕಂಟಕವಾಗಿದ್ರಾ ಸರಳ, ಪೂರ್ವಿ?

By ಎಸ್ ಸುಮಂತ್

ಕಂಠಿಗೆ ದುಷ್ಮನ್ ಎಲ್ಲಿದ್ದಾರೆ ಅಂತ ತಿರುಗಿ ನೋಡಿದರೆ ಅವರ ಮನೆಯ ತುಂಬೆಲ್ಲಾ ಸಿಗುತ್ತಾರೆ. ಅದಕ್ಕೆ ಉದಾಹರಣೆ ಇಂದಿನ ಎಪಿಸೋಡ್ (ಮೇ 16). ಮೊದಲೇ ಬೆಂಕಿಯ ಬಾಂಡಲಿಗೆ ಬಿದ್ದ ಬೆಕ್ಕಿನಂತಾಗಿದ್ದಾರೆ. ಈ ಸಮಸ್ಯೆಯ ಸುಳಿಯಿಂದ ಹೇಗಪ್ಪ ಸಹಿಸಿಕೊಳ್ಳುವುದು ಅಂತ ದಾರಿ ಹುಡುಕುತ್ತಿದ್ದರೆ, ಆ ದಾರಿಗೆ ಮತ್ತಷ್ಟು ಜನ ಅಡ್ಡ ಬಂದು ನಿಲ್ಲುತ್ತಿದ್ದಾರೆ.

ಅದರಲ್ಲಿ ಸರಳ ಮತ್ತು ಪೂರ್ವಿ ಕೂಡ ಸೇರಿಕೊಂಡಿದ್ದಾರೆ. ಮನೆಗೆ ಊಟಕ್ಕೆ ಬರುವವರನ್ನು ತಡೆಯಲು ಹೊರಟ ಕಂಠಿಗೆ ಅತ್ತೆ, ಬಾವಿ ಪತ್ನಿ ಆಗಬೇಕಿರುವವಳು ಎದುರಾಗಿದ್ದಾರೆ. ಕಂಠಿಗೆ ಮೊದಲೇ ಟೆನ್ಶನ್ ಇನ್ನು ಇವರಿಂದ ಮತ್ತೆಲ್ಲಿ ಅಪಾಯ ಆಗುತ್ತದೆಯೋ ಎಂಬ ದುಗುಡದಿಂದಲೇ ಮುನ್ನಡೆದಿದ್ದಾನೆ. ಕಂಠಿಗೆ ಈಗ ಮುಂದಿರುವುದು ಪುಟ್ಟಕ್ಕನನ್ನು ತಡೆಯುವುದು. ಅದಕ್ಕಾಗಿಯೇ ಎದುರು ಸಿಕ್ಕಿದ ಸರಳ ಮತ್ತು ಪೂರ್ವಿಯನ್ನು ಅವ್ವನೆದುರಿಗೆ ಪ್ರೀತಿಯಿಂದಲೇ ಮಾತನಾಡಿಸಿದ್ದಾನೆ.

ಸ್ನೇಹಾಳಿಗೆ ಅವಮಾನ ಮಾಡಲು ಮಾಸ್ಟರ್ ಫ್ಲ್ಯಾನ್

ಸ್ನೇಹಾಳಿಗೆ ಅವಮಾನ ಮಾಡಲು ಮಾಸ್ಟರ್ ಫ್ಲ್ಯಾನ್

ಸ್ನೇಹಾ ಮತ್ತು ಪೂರ್ವಿ ಆಗಾಗ ಎದುರು ಬದುರಾದಾಗ ಸುಮ್ಮನೆ ಹೋದ ದಿನಗಳೆ ಇಲ್ಲ. ಕಂಠಿಗೆ ಪುಟ್ಟಕ್ಕನ ಮೆಸ್ ಊಟ ಎಂದರೆ ಎಲ್ಲಿಲ್ಲದ ಪ್ರೀತಿ. ಅದು ಪೂರ್ವಿಗೆ ಒಂದಷ್ಟು ಕೋಪ ತರಿಸಿದೆ. ಅದಕ್ಕೆ ಸ್ನೇಹಾ ಎಂದರೆ ಕೆಂಡಕಾರುತ್ತಾಳೆ. ಬಂಗಾರಮ್ಮ ಸ್ನೇಹಾಳನ್ನು ಊಟಕ್ಕೆ ಕರೆದಿರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಸ್ನೇಹಾಳ ಬಗ್ಗೆ ಕೆಟ್ಟದಾಗಿ ಹೇಳಲು ಹೊರಟು, ಅತ್ತೆ ಮುಂದೆ ಕೆಟ್ಟವಳಾಗಬಾರದು ಎಂಬ ಕಾರಣಕ್ಕೆ ಸುಮ್ಮನಾಗಿ ಬಿಟ್ಟಿದ್ದಾಳೆ. ಆದರೆ ಇದೀಗ ಪುಟ್ಟಕ್ಕನ ಮಕ್ಕಳಲ್ಲಿ ಸ್ನೇಹಾಳನ್ನು ಕೆಡ್ಡಕ್ಕೆ ಕೆಡವಲು ತಯಾರಾಗಿದ್ದಾಳೆ. ಅದೇ ಫ್ಲ್ಯಾನ್ ಮಾಡಿಕೊಂಡು ಸರಳ ಮತ್ತು ಪೂರ್ವಿ, ಬಂಗಾರಮ್ಮನ ಮನೆಗೆ ಬಂದಿದ್ದಾರೆ.

ಸ್ನೇಹಾ ಮೇಲೆ ಕಂಠಿಗ್ಯಾಕೆ ಭಯ

ಸ್ನೇಹಾ ಮೇಲೆ ಕಂಠಿಗ್ಯಾಕೆ ಭಯ

ತಲೆ ಮೇಲೆ ತಲೆ ಬಿದ್ದರು ಬಂಗಾರಮ್ಮನ ಮನೆಗೆ ಬರಲ್ಲ ಎಂದು ಸ್ನೇಹಾ ಹಠ ತೊಟ್ಟು ಕುಳಿತಿದ್ದಾಳೆ. ಬಂಗಾರಮ್ಮ ಎಂದರೆ ನಿಜವಾದ ರಾಕ್ಷಸಿ ಎಂದೇ ನಂಬಿರುವ ಸ್ನೇಹಾ, ಆಕೆಯ ಮನೆಗೆ ಔತಣಕೂಟಕ್ಕೆ ಹೋಗುವ ಮಾತೆ ಇಲ್ಲ. ಪುಟ್ಟಕ್ಕ ಆದಷ್ಟು ಸ್ನೇಹಾಳಿಗೆ ಅರ್ಥ ಮಾಡಿಸಲು ಹೊರಟಿದ್ದಾಳೆ. ಬಂಗಾರಮ್ಮನಲ್ಲಿಯೂ ಮಾನವೀಯತೆಯ ಗುಣ ಹೆಚ್ಚಾಗಿದೆ. ಆಕೆ ಬಡ್ಡಿಯನ್ನೇ ಕೊಟ್ಟರು ಒಳ್ಳೆಯವಳು ಎಂದು ಎಷ್ಟೇ ಹೇಳಿದರು ಸ್ನೇಹಾಳಿಗೆ ಆಕೆ ಮೇಲೆ ಕೋಪ ಹೆಚ್ಚಾಗುತ್ತಾ ಇದೆಯೇ ವಿನಃ ಶಮನವಾಗುತ್ತಿಲ್ಲ. ಬಂಗಾರಮ್ಮ ಕೂಡ ರಾಜೇಶ್ವರಿ ಜೊತೆಗೆ ಸೇರಿಕೊಂಡು, ಊಟ ಹಾಕಿಸಿ ಮನೆ ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾಳೆ ಅಂತ ಪುಟ್ಟಕ್ಕನ ಯೋಚನಾ ಹಾದಿಯ ದಿಕ್ಕನ್ನೇ ತಪ್ಪಿಸಲು ಹೊರಟಿದ್ದಾಳೆ.

ಎಡವಟ್ಟು ಮಾಡಿಕೊಳ್ಳುತ್ತಾನಾ ಬಂಗಾರಮ್ಮನ ಮಗ?

ಎಡವಟ್ಟು ಮಾಡಿಕೊಳ್ಳುತ್ತಾನಾ ಬಂಗಾರಮ್ಮನ ಮಗ?

ಕಂಠಿಗೆ ಸ್ನೇಹಾ ತಮ್ಮ ಮನೆಗೆ ಬರುತ್ತಿಲ್ಲ ಎಂಬ ವಿಚಾರ ಇನ್ನು ತಿಳಿದಿಲ್ಲ. ಪುಟ್ಟಕ್ಕ ಸಾಕಷ್ಟು ಪ್ರಯತ್ನ ಪಟ್ಟು ಸೋತಿದ್ದಾಳೆ. ಬಂಗಾರಮ್ಮನ ಮನೆಗೆ ಹೋಗಿ ಬರುವುದಕ್ಕೆ ಸ್ನೇಹಾ ಬಿಲ್‌ಕುಲ್ ಒಪ್ಪಲಿಲ್ಲ. ಸ್ನೇಹಾಳಿಗೋಸ್ಕರವೇ ಮಾಡಿರುವ ಔತಣಕೂಟವದು ಸ್ನೇಹಾಳೆ ಇಲ್ಲದೆ ಹೋದರೆ ಪುಟ್ಟಕ್ಕ ಒಬ್ಬರೆ ಹೋಗುವುದಾದರೂ ಹೇಗೆ..? ಹೀಗಾಗಿ ಏನಾದರೊಂದು ಕಾರಣ ಹೇಳಲುಬಹುದು. ಇದು ಇಲ್ಲಿಗೆ ಸಮಸ್ಯೆ ಬಗೆಹರಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಆದರೆ ಕಂಠಿ ಏನಾದರೊಂದು ಎಡವಟ್ಟು ಮಾಡಿಕೊಳ್ಳುವ ಸೂಚನೆಯೂ ಕಾಣುತ್ತಿದೆ. ಕಾರಣ ಕಂಠಿಗೆ ಅವ್ವ ಮತ್ತು ತಾನೂ ಪ್ರೀತಿಸುತ್ತಿರುವ ಹುಡುಗಿ ಎದುರು ಬದುರಾಗೋದು ಇಷ್ಟವಿಲ್ಲ. ಒಂದು ವೇಳೆ ಪ್ರಯತ್ನಗಳನ್ನು ಮೀರಿ ಎದುರಾದರೆ ಕಂಠಿ ಪ್ರೀತಿ, ಗೋವಿಂದ ಗೋವಿಂದಾ!

ಮತ್ತೆ ಬಂಗಾರಮ್ಮನ ಮಗನ ಮೇಲೆ ತಪ್ಪು ಕಲ್ಪನೆ

ಸ್ನೇಹಾ ಇಲ್ಲಿಯ ತನಕ ಬಂಗಾರಮ್ಮನ ಮಗ ಯಾರು ಎಂಬುದನ್ನು ನೋಡಲು ಸಾಧ್ಯವಾಗಿಲ್ಲ. ಕಂಠಿಯೇ ಬಂಗಾರಮ್ಮನ ಮಗ ಎಂಬ ಸತ್ಯ ಗೊತ್ತಾದ ದಿನ ಅಲ್ಲೊಂದು ರಣರಂಗ ನಿರ್ಮಾಣವಾಗುವುದು ಸತ್ಯ. ಆದರೆ ಈ ಮಧ್ಯೆ ಆ ರಣರಂಗವಾಗದಂತೆ ಕಾವಲು ಕಾಯುತ್ತಿರುವುದು ಮುಂಗುಸಿ ಮತ್ತು ನಾಗ. ತಮ್ಮ ಅಣ್ಣ, ಬಂಗಾರಮ್ಮನ ಮುದ್ದಿನ ಮಗ ಇನ್ನೇನು ಅತ್ತಿಗೆ ಕೈನಲ್ಲಿ ಸಿಕ್ಕಿಬೀಳಬೇಕು ಎನ್ನುವಷ್ಟರಲ್ಲಿ ಅವರಿಬ್ಬರು ಬಂದು ಕಾಪಾಡುತ್ತಿದ್ದಾರೆ. ಆದರೆ ಈಗ ಮುತ್ತಯ್ಯ ಹೇಳಲು ಹೊರಟ ವಿಚಾರವೇ ಬೇರೆಯಾಗಿರುವಾಗ, ಸ್ನೇಹಾ ಇನ್ನೇನನ್ನೋ ಅರ್ಥೈಸಿಕೊಳ್ಳುತ್ತಿದ್ದಾಳೆ. ಅವ್ವನ ಹಚ್ಚೆ ಬಗ್ಗೆ ಹೇಳಲು ಹೊರಟ ಮುತ್ತಯ್ಯ, ಬಂಗಾರಮ್ಮನ ಮಗ ಎಂದಷ್ಟೇ ಹೇಳಿದ್ದಾನೆ. ಮೊದಲೇ ಜ್ಞಾನ ತಪ್ಪಿ ಬಿದ್ದಿರುವ ಮುತ್ತಯ್ಯನ ಅರ್ಧಬರ್ಧ ಮಾತುಗಳು ಸ್ನೇಹಾಳನ್ನು ಮತ್ತಷ್ಟು ಕೋಪಗೊಳ್ಳುವಂತೆ ಮಾಡಿದೆ. ಬಂಗಾರಮ್ಮನ ಮಗನ ಮೇಲೆ ಮತ್ತಷ್ಟು ಹರಿಹಾಯ್ದಿದ್ದಾಳೆ.

More from Filmibeat

English summary
Zee Kannada Serial Puttakkana Makkalu Written Update On May 16th Episode. Here is the details about Kanti's visit to the Puttakkana Mess.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X