ಪುಟ್ಟಕ್ಕನ ಮಕ್ಕಳು: ಸ್ನೇಹಾ ಬಳಿ ತಗಲಾಕಿಕೊಂಡ ಬಡ್ಡಿ ಬಂಗಾರಮ್ಮನ ಮಗ!

By ಎಸ್ ಸುಮಂತ್

ಸ್ನೇಹಾಳನ್ನು ತುಂಬಾನೇ ಪ್ರೀತಿ ಮಾಡುತ್ತಿರುವ ಕಂಠಿಗೆ ಸತ್ಯ ಹೇಳುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಯಾಕೆಂದರೆ, ಸತ್ಯ ಹೇಳಿದರೆ ಸ್ನೇಹಾ ದೂರಾಗುತ್ತಾಳೆ ಎಂಬ ಭಯ. ಮೊದಲೇ ಬಂಗಾರಮ್ಮ ಮತ್ತು ಬಂಗಾರಮ್ಮನ ಮಗನನ್ನು ಕಂಡರೆ ಕೆಂಡಕಾರುತ್ತಾಳೆ. ಇನ್ನು ನಾನೇ ಬಂಗಾರಮ್ಮನ ಮಗ ಎಂದು ಹೇಳಿಕೊಂಡರೆ ಸುಮ್ಮನೆ ಬಿಡುತ್ತಾಳಾ ?

ಸ್ನೇಹಾಳ ಮೊದಲ ಟಾರ್ಗೆಟ್ ಬಂಗಾರಮ್ಮನ ಮಗನನ್ನು ಹೇಗಾದರೂ ಮಾಡಿ ಜೈಲಿಗೆ ಹಾಕಿಸಬೇಕು ಎಂಬುದಾಗಿತ್ತು. ಇದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಪುಟ್ಟಕ್ಕನ ಮಗಳು ಸ್ನೇಹ ಮಾಡುತ್ತಲೇ ಇದ್ದಾಳೆ. ಅದರ ಜೊತೆಗೆ ಊರಿಗೆ ಹೊಸದಾಗಿ ಬಂದ ಪೊಲೀಸ್‌ ಕೂಡ ಸೇರಿಕೊಂಡಿದ್ದಾನೆ. ಹೀಗಾಗಿ ಬಂಗಾರಮ್ಮನ ಮಗನ ಹುಡುಕಾಟ ಜೋರಾಗಿ ನಡೆಯುತ್ತಲೇ ಇದೆ.

ಸ್ನೇಹಾ ಮುಂದೆ ನಿಂತ ಬಡ್ಡಿಬಂಗಾರಮ್ಮನ ಮಗ

ಸ್ನೇಹಾ ಮುಂದೆ ನಿಂತ ಬಡ್ಡಿಬಂಗಾರಮ್ಮನ ಮಗ

ಮಾತು ಎತ್ತಿದರೆ ಆ ಬಂಗಾರಮ್ಮನ ಮಗನನ್ನು ಪೊಲೀಸರಿಗೆ ಹಿಡಿದು ಕೊಡಬೇಕೆಂಬ ಸ್ನೇಹಾಳ ಮಾತು ಕಂಠಿಯ ಗಮನವನ್ನು ವಿಚಲಿತಗೊಳಿಸಿತ್ತು. ಇದೇ ಕಾರಣಕ್ಕೆ ಕಂಠಿ ಒಂದು ನಿರ್ಧಾರಕ್ಕೆ ಬಂದಿದ್ದ. ಕಂಠಿ ಸಿಗದೆ ಹೋದರೆ ಸ್ನೇಹಾ ಅಂತು ಈ ವಿಚಾರ ಬಿಡುವುದಿಲ್ಲ. ಹೀಗಾಗಿ ಬಂಗಾರಮ್ಮನ ಮಗ ಅರೆಸ್ಟ್ ಆಗುವುದೇ ಉತ್ತಮ ಎಂದು ನಿರ್ಧರಿಸಿದ್ದ. ಅದಕ್ಕಾಗಿಯೇ ಮಾಸ್ಟರ್ ಫ್ಲ್ಯಾನ್ ಮಾಡಿದ್ದ. ಒಂದಷ್ಟು ಹುಡುಗರನ್ನು ಕರೆಸಿದ ಕಂಠಿ, ತನ್ನನ್ನು ಹೋಲುವಂತ ಒಬ್ಬನನ್ನು ತಯಾರು ಮಾಡಿದ. ಮಾರ್ಕೆಟ್‌ನಲ್ಲಿ ಬಿಟ್ಟು, ಬಂಗಾರಮ್ಮನ ಮಗನನ್ನು ತೋರಿಸುತ್ತೇನೆಂದು ಸ್ನೇಹಾಳನ್ನು ಕರೆದುಕೊಂಡು ಬಂದಿದ್ದಾನೆ. ಹುಡುಗರೆಲ್ಲಾ ಸೇರಿ ಬಂಗಾರಮ್ಮನ ಮಗ ಅಂತ ರೆಡಿ ಮಾಡಿದ್ದಾರೆ. ಆತ ಬಡ್ಡಿ ಬಂಗಾರಮ್ಮನ ಮಗ ಅಂತ ಲೇಬಲ್ ಅಂಟಿಸಿಕೊಂಡಿದ್ದಾನೆ. ಆತ ಬೇರೆ ನಾನೇ ಬಂಗಾರಮ್ಮನ ಮಗ ಎಂದಿದ್ದಾನೆ. ಇದರಿಂದ ಸ್ನೇಹಾಳಿಗೆ ಅನುಮಾನ ಬರುವ ಸಾಧ್ಯತೆಯೂ ಇದೆ.

ಬಡ್ಡಿ ಬಂಗಾರಮ್ಮನ ಮಗನ ಮೇಲೆ ಸ್ನೇಹಾ ಗರಂ

ಬಡ್ಡಿ ಬಂಗಾರಮ್ಮನ ಮಗನ ಮೇಲೆ ಸ್ನೇಹಾ ಗರಂ

ಸ್ನೇಹಾ ಮತ್ತು ಕಂಠಿ ಈಗ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಕಂಠಿ ಜೊತೆ ಓಡಾಡುತ್ತಾ ಮತ್ತಷ್ಟು ಪ್ರೀತಿಯನ್ನು ಹೆಚ್ಚು ಮಾಡುತ್ತಿದ್ದಾಳೆ. ಕನಸು ಕಾಣುತ್ತಾ ಕಂಠಿ ಕೂಡ ಸ್ನೇಹಾಳ ಜೊತೆ ಓಡಾಡುತ್ತಿದ್ದಾನೆ. ಬಡ್ಡಿ ಬಂಗಾರಮ್ಮನ ಮಗ ಅಂತ ಅದ್ಯಾರನ್ನೋ ತೋರಿಸಿ ನಂಬಿಸಿರುವ ಕಂಠಿ ಅವನಿಂದಲೇ ಒದೆ ತಿಂದಿದ್ದಾನೆ. ತನ್ನ ಶ್ರೀಗೆ ಒದೆ ಕೊಡುತ್ತಿದ್ದಂತೆ ಸ್ನೇಹಾ ಕೆಂಡಾಮಂಡಲವಾಗಿದ್ದಾಳೆ. ನಮ್ಮ ಶ್ರೀಗೆ ಹೊಡಿತಾನಾ ಇವನು ಎಂಬ ಕೋಪ ತೋರಿದ್ದಾಳೆ. ಶ್ರೀ ನೀನು ಹೆದರಬೇಡ, ಅವನನ್ನು ಕರೆದುಕೊಂಡು ಹೋಗಲು ಈಗಲೇ ಪೊಲೀಸಿನವರು ಬರುತ್ತಾರೆ ಎಂದಿದ್ದಾಳೆ. ಅಷ್ಟೆ ಅಲ್ಲ, ಶ್ರೀಗೆ ಹೊಡೆದ ಆ ಬಡ್ಡಿ ಬಂಗಾರಮ್ಮನ ಮಗನ ಮುಂದೆ ಗದರಿದ್ದಾಳೆ.

ಪೊಲೀಸ್ ಕೂಡ ನಂಬುತ್ತಾರಾ?

ಪೊಲೀಸ್ ಕೂಡ ನಂಬುತ್ತಾರಾ?

ಪೊಲೀಸ್ ಕೂಡ ಬಂಗಾರಮ್ಮನ ಮಗನನ್ನು ಹುಡುಕುತ್ತಿದ್ದಾರೆ. ಮನೆವರೆಗೂ ಹೋಗಿ ಬಂದಿದ್ದಾರೆ. ಆದರೆ ಕಂಠಿ ಮಾತ್ರ ಸಿಗಲಿಲ್ಲ. ಬಂಗಾರಮ್ಮನ ಮಗನನ್ನು ಎದುರಾಕಿಕೊಂಡರೆ ಹೇಗಿರುತ್ತೆ ಎಂಬ ರುಚಿಯನ್ನು ಕಂಠಿ ಮಾರ್ಕೆಟ್‌ನಲ್ಲಿ ತೋರಿಸಿದ್ದಾನೆ. ಪೊಲೀಸ್‌ಗೆ ಹಿಗ್ಗ ಮುಗ್ಗಾ ಜಾಡಿಸಿ, ಬಂಗಾರಮ್ಮನ ಮಗನ ಹೆಸರು ಕೇಳಿದರೆ ನಡುಗಬೇಕು ಆ ರೀತಿ ಮಾಡಿದ್ದಾನೆ. ಈಗ ಮಾರ್ಕೆಟ್‌ನಲ್ಲಿಯೇ ಬಂಗಾರಮ್ಮನ ಮಗ ಇದಾನೆ ಎಂಬುದನ್ನು ಸ್ನೇಹಾ ತಿಳಿಸಿದ್ದಾಳೆ. ಪೊಲೀಸ್ ಕೂಡ ಸ್ಪಾಟ್‌ಗೆ ಬರಲು ಹೊರಟಿದ್ದಾರೆ. ವಿಶೇಷ ಅಂದರೆ, ಪೊಲೀಸ್ ಕೂಡ ಕಂಠಿ ಅಲಿಯಾಸ್ ಬಂಗಾರಮ್ಮನ ಮಗನ ಮುಖವನ್ನು ನೋಡಿಲ್ಲ. ಈಗ ಕಂಠಿ ಸೃಷ್ಟಿ ಮಾಡಿರುವ ಹುಡುಗನನ್ನೇ ಬಂಗಾರಮ್ಮನ ಮಗ ಎಂದು ನಂಬಿ ಎಳೆದುಕೊಂಡು ಹೋಗಬಹುದು. ಇಲ್ಲಾ ಬುದ್ಧಿವಂತಿಕೆ ಉಪಯೋಗಿಸಿ ಕಂಡು ಹಿಡಿಯಲೂಬಹುದು.

ಕಂಠಿ ಪ್ರೀತಿ ಹೇಳಿಕೊಳ್ಳುತ್ತಾನಾ ?

ಕಡೆಗೂ ಸ್ನೇಹಾ ಹುಡುಕುತ್ತಿದ್ದ ಬಂಗಾರನಮ್ಮನ ಮಗ ಸಿಕ್ಕಿದ್ದಾನೆ. ಕಂಠಿಗಿರುವ ತೊಡಕುಗಳು ನಿವಾರಣೆಯಾಗಿದೆ. ಈಗ ಏನಿದ್ದರು ಸ್ನೇಹಾ- ಕಂಠಿಯ ಪ್ರೀತಿಯ ಪಯಣ ಆರಂಭವಾಗಬೇಕು ಅಷ್ಟೇ. ಇಷ್ಟು ದಿನ ಸುಳ್ಳಿನ ಕೋಟೆ ಕಟ್ಟಿರುವ ಕಂಠಿ, ಇನ್ಮುಂದೆ ಆದರೂ ಸ್ನೇಹಾಳಿಗೆ ಪ್ರೀತಿ ಹೇಳಿಕೊಳ್ಳುತ್ತಾನಾ ಎಂಬುದನ್ನು ಕಾದು ನೋಬೇಕಿದೆ. ಸ್ನೇಹಾಳಿಗೂ ಕಂಠಿ ಮೇಲೆ ಒಳ್ಳೆ ಅಭಿಪ್ರಾಯವಿದೆ. ಹೀಗಾಗಿ ಅವನ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ ಎಂಬ ಕುತೂಹಲವಿದೆ.

More from Filmibeat

English summary
Zee Kannada Serial Puttakkana Makkalu Written Update On May 30th Episode. Here is the details about Sneha saw that Kanti is Bangaramma son.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X