ಪುಟ್ಟಕ್ಕನ ಮಕ್ಕಳು: ರಾಜೇಶ್ವರಿ ಮನೆ ಕೆಲಸದ ಆಳಾಗುತ್ತಾರಾ ಬಂಗಾರಮ್ಮ?

By ಎಸ್ ಸುಮಂತ್

ಕಂಠಿ-ಸ್ನೇಹಾ ಬಂಗಾರಮ್ಮನಿಗೆ ಸಾಕಷ್ಟು ಬಾರಿ ಸಿಕ್ಕಿಬೀಳುವ ಸಾಧ್ಯತೆ ಇತ್ತು. ಆದರೆ ಅದೃಷ್ಟವಶಾತ್ ಎರಡು-ಮೂರು ಸಲ ಬಚಾವ್ ಆಗಿದ್ದಾರೆ. ಆದರೆ ಅದ್ಯಾಕೋ ಪ್ರೇಕ್ಷಕರಿಗೆ ಇದೊಂದು ಭಯ ಕಾಡಲು ಶುರುವಾಗಿದೆ. ರಾಜೇಶ್ವರಿ ಕುತಂತ್ರದಿಂದ ಇಬ್ಬರ ನಡುವೆ ಬಿರುಕು ಮೂಡಿ ಬಿಡುತ್ತಾ? ಕಂಠಿಗೆ ಕಂಟಕ ಎದುರಾಗುತ್ತಾ? ಎಂಬ ಅನುಮಾನ ಶುರುವಾಗಿದೆ. ಅದಕ್ಕೆಲ್ಲಾ ಉತ್ತರ ಇಂದಿನ ಎಪಿಸೋಡಿನಲ್ಲಿ ಸಿಗಲಿದೆ.

ಕಂಠಿ ಅವ್ವನ ಮಗ. ಅವ್ವ ಎಂದರೆ ಎಲ್ಲಿಲ್ಲದ ಪ್ರೀತಿ. ಯಾರೇ ಅವ್ವನ ಬಗ್ಗೆ ಮಾತನಾಡಿದರೂ ಸಹಿಸಿಕೊಳ್ಳುವುದಿಲ್ಲ. ಆದರೆ ಸ್ನೇಹಾ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗಿದೆ. ಸ್ನೇಹಾಳ ಪ್ರೀತಿ ಸಂಪಾದಿಸಲು ತಾನೂ ಬಂಗಾರಮ್ಮನ ಮಗ ಎಂಬುದನ್ನು ಮುಚ್ಚಿಟ್ಟಿದ್ದಾನೆ. ಆದರೆ ಅದು ಈಗ ಸ್ನೇಹಾ ಎದುರು ಬಯಲಾಗಿ ಬಿಡುತ್ತಾ ಎಂಬ ಆತಂಕ ಎಲ್ಲರಲ್ಲಿಯೂ ಶುರುವಾಗಿದೆ.

ಕಂಠಿ ಬಂಗಾರಮ್ಮನ ಬಳಿ ತಗಲಾಕಿಕೊಳ್ಳುತ್ತಾನಾ..?

ಕಂಠಿ ಬಂಗಾರಮ್ಮನ ಬಳಿ ತಗಲಾಕಿಕೊಳ್ಳುತ್ತಾನಾ..?

ಸ್ನೇಹಾಳಿಗೆ ಸರಳವಾಗಿ ಇರುವವರು ಎಂದರೆ ಎಲ್ಲಿಲ್ಲದ ಗೌರವ. ಕಂಠಿಯನ್ನು ಬಡವರ ಮನೆಯ ಹುಡುಗ, ಕಷ್ಟಪಟ್ಟು ಜೀವನ ಮಾಡುತ್ತಾನೆ ಎಂದುಕೊಂಡಿದ್ದಾಳೆ. ಅದೇ ಕಾರಣಕ್ಕೆ ಶ್ರೀಗೆ ಗೌರವ ಕೊಡುತ್ತಾಳೆ. ಆತನ ಜೊತೆ ಫ್ರೆಂಡ್‌ಶಿಪ್ ಬೆಳೆಸಿದ್ದಾಳೆ. ಕಂಠಿ ಕೆಲಸ ಮಾಡುವ ಗದ್ದೆ ನೋಡುವ ಆಸೆಯನ್ನು ಸ್ನೇಹಾ ವ್ಯಕ್ತಪಡಿಸಿದ್ದ ಕಾರಣ, ಮುಂಗುಸಿ ಮತ್ತು ನಾಗ ಇಬ್ಬರು ಸೇರಿ ಯಾವುದೋ ಒಂದು ಗದ್ದೆಯನ್ನು ಕಂಠಿ ಕೆಲಸ ಮಾಡುತ್ತಿರುವ ಗದ್ದೆಯಾಗಿ ಮಾಡಿದ್ದಾರೆ. ಆ ಗದ್ದೆಗೆ ಸ್ನೇಹಾ ಮತ್ತು ಸುಮನನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ಈ ಗದ್ದೆಯ ಭೇಟಿ ಕಂಠಿಗೆ ಕಂಟಕವಾಗುವುದರಲ್ಲಿ ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ. ಬಂಗಾರಮ್ಮ ಇದೀಗ ಗದ್ದೆಯ ಕಡೆಗೆ ಬರುತ್ತಿದ್ದಾರೆ.

ಬಂಗಾರಮ್ಮ ಮಗ ಕಂಠಿ ಎಂಬುದು ಸ್ನೇಹಾಗೆ ಗೊತ್ತಾಗುತ್ತಾ?

ಬಂಗಾರಮ್ಮ ಮಗ ಕಂಠಿ ಎಂಬುದು ಸ್ನೇಹಾಗೆ ಗೊತ್ತಾಗುತ್ತಾ?

ಮಗ ಎಂದರೆ ಅತಿಯಾಗಿ ಪ್ರೀತಿಸುವ ತಾಯಿಗೆ ಮಗನ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರು ಇಷ್ಟವಾಗುವುದಿಲ್ಲ. ಮಗನ ಮೇಲೆ ಬೆಟ್ಟದಷ್ಟು ನಂಬಿಕೆ ಇಟ್ಟುಕೊಂಡಿದ್ದಾಳೆ ಬಂಗಾರಮ್ಮ. ನನ್ನ ಮಾತನ್ನು ಮೀರುವುದಿಲ್ಲ ಎಂದೇ ತನ್ನ ಅಣ್ಣನ ಮಗಳು ಪೂರ್ವಿಯನ್ನು ಸೊಸೆಯನ್ನಾಗಿ ಮಾಡಿಕೊಳ್ಳುತ್ತಿದ್ದಾಳೆ. ಅವ್ವನ ಮಾತಿಗೆ ಬೆಲೆ ಕೊಡುವ ಕಂಠಿ ಕೂಡ ಎದುರು ಮಾತನಾಡಲು ಆಗದೆ ಸುಮ್ಮನೆ ಆಗಿಬಿಟ್ಟಿದ್ದಾನೆ. ಮೊದಲು ಪ್ರೀತಿಯನ್ನು ಸಕ್ಸಸ್ ಮಾಡಿಕೊಂಡು ಆ ಬಳಿಕ ತಾಯಿ ಬಳಿ ಹೇಳಿದರಾಯಿತು ಎಂಬ ನಿರ್ಧಾರಕ್ಕೆ ಬಂದು ಸ್ನೇಹಾ ಹಿಂದೆ ತಿರುಗಾಟ ಹೆಚ್ಚು ಮಾಡಿದ್ದಾನೆ. ಅತ್ತ ಸ್ನೇಹಾ ಎಂದರೆ ನಿಗಿ ನಿಗಿ ಕೆಂಡದಂತಾಗುವ ಬಂಗಾರಮ್ಮನಿಗೆ ತನ್ನ ಮಗ ಪ್ರೀತಿ ಮಾಡುತ್ತಿರುವುದು ಇದೇ ಹುಡುಗಿಯೆಂದು ಗೊತ್ತಾದರೆ ಕಥೆ ಮುಗೀತು.

ಕಂಠಿ ಸಿಕ್ಕಿಬಿದ್ದರೆ ಬಂಗಾರಮ್ಮನ ಹಾರ್ಟ್ ಬ್ರೇಕ್

ಕಂಠಿ ಸಿಕ್ಕಿಬಿದ್ದರೆ ಬಂಗಾರಮ್ಮನ ಹಾರ್ಟ್ ಬ್ರೇಕ್

ಇಂದು ಮಾಡು ಇಲ್ಲವೆ ಮಡಿ ಅನ್ನುವ ಸ್ಥಿತಿ ಇರುತ್ತಲ್ಲ ಅದೇ ರೀತಿಯ ಎಪಿಸೋಡ್. ಬಂಗಾರಮ್ಮ ಎಂದರೆ ನ್ಯಾಯಕ್ಕೆ ತಲೆಬಾಗುವ, ಅನ್ಯಾಯ ಮಾಡದ, ಕೊಟ್ಟ ಮಾತನ್ನು ಯಾವತ್ತಿಗೂ ತಪ್ಪದವರು. ಆದರೆ ಮಗನಿಂದಲೇ ತಾಯಿಗೆ ಅವಮಾನವಾಗಿ ಬಿಡುತ್ತಾ ಎಂಬ ಅನುಮಾನ ಶುರುವಾಗಿದೆ. ಕಾರಣ ರಾಜೇಶ್ವರಿ ತನ್ನ ಮಗನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಬಂಗಾರಮ್ಮನಿಗೆ ಸಹಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ತನ್ನ ಮಗನ ಮೇಲಿನ ಅಪಾರವಾದ ನಂಬಿಕೆಯಿಂದ ರಾಜೇಶ್ವರಿಗೆ ಸವಾಲು ಹಾಕಿದ್ದಾಳೆ. ಒಂದು ವೇಳೆ ನೀನು ಹೇಳಿದ್ದೆ ಸತ್ಯವಾದರೆ ನಾನು ನಿಮ್ಮ ಮನೆಯ ಕೆಲಸದಾಳಾಗಿ ದುಡಿಯುತ್ತೀನಿ ಎಂದಿದ್ದಾಳೆ. ಅಲ್ಲಿ ನೋಡಿದರೆ ಗದ್ದೆಯಲ್ಲಿ ಜೇನು ನೊಣಗಳ ಜೊತೆ ಜೋಡಿ ಎಣಗಾಟ ನಡೆಸುತ್ತಿದೆ. ಕೋಪದಲ್ಲಿದ್ದ ಬಂಗಾರಮ್ಮ ಡ್ರೈವರ್ ಬರುವವರೆಗೂ ಕಾಯದೆ ಕಾರನ್ನು ಎತ್ತಿಕೊಂಡು ಹೊರಟೆ ಬಿಟ್ಟಿದ್ದಾಳೆ.

ಕಂಠಿಯ ಪ್ರೀತಿ ಚಿಗುರುವ ಮುನ್ನವೇ ಬಾಡಿ ಹೋಗುತ್ತಾ?

ಕಂಠಿ ಸಾಹಸ ಮಾಡಿ ಸಹನಾಳ ಸ್ನೇಹವನ್ನು ಸಂಪಾದಿಸಿದ್ದಾನೆ. ತನ್ನ ಅವ್ವನನ್ನು ಬಾಯಿಗೆ ಬಂದ ಹಾಗೇ ಬೈದರು ಪ್ರೀತಿಗಾಗಿ ಎಲ್ಲವನ್ನು ಸಹಿಸಿಕೊಂಡಿದ್ದಾನೆ. ಸ್ನೇಹ ಕೂಡ ಕಂಠಿಯನ್ನು ಒಬ್ಬ ಒಳ್ಳೆ ಬೆಸ್ಟ್ ಫ್ರೆಂಡ್ ಅಂತ ನಂಬಿದ್ದಾಳೆ. ಕಂಠಿ ಜೊತೆ ಆಗಾಗ ಓಡಾಡುತ್ತಿದ್ದಾಳೆ. ಈಗ ಜೋಡಿಯಾಗಿ ಓಡಾಡುತ್ತಾ, ಪ್ರೀತಿ ಪ್ರೇಮದ ಅಲೆಯಲ್ಲಿ ಒನ್ ವೇನಲ್ಲಿ ಕಂಠಿ ತೇಲುತ್ತಿದ್ದಾನೆ. ಆದಷ್ಟು ಬೇಗ ಈ ಜೋಡಿ ಒಂದಾಗಲಿ ಎಂದು ಪ್ರೇಕ್ಷಕರೆಲ್ಲಾ ಬೇಡಿಕೊಳ್ಳುತ್ತಿರುವಾಗಲೇ ರಾಜೇಶ್ವರಿ ಎಂಬ ವಿಲನ್ ಮತ್ತಷ್ಟು ಅಬ್ಬರಿಸಿದ್ದಾಳೆ. ಗದ್ದೆ ಕಡೆ ಬಂದು ಜೇನು ನೊಣ ಹೊಡೆಯುತ್ತಿರುವ ಕಂಠಿಯನ್ನು ಬಂಗಾರಮ್ಮ ನೋಡಿದರೆ ಪ್ರೀತಿ ಪ್ರೇಮಕ್ಕೆ ಇವತ್ತೆ ಫುಲ್ ಸ್ಟಾಪ್ ಇಡಬೇಕಾಗುತ್ತದೆ.

More from Filmibeat

English summary
Zee Kannada Serial Puttakkana Makkalu Written Update On May 9th Episode. Here is the details about Bangaramma Challenging on Rajeshwari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X