Puttakkana Makkalu: ಸ್ನೇಹಾ ಗಾಡಿಯಲ್ಲಿ ಮೀಟಿಂಗ್‌ಗೆ ಹೊರಟ ಬಂಗಾರಮ್ಮ, ಇನ್ನಾದರೂ ಅತ್ತೆ ಸೊಸೆ ಒಂದಾಗುತ್ತಾರಾ?

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಹಳ ಕುತೂಹಲ ಭರಿತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸನ್ನ ಸೆಳೆಯುತ್ತಿದೆ. ಇದೀಗ ರಾಧಾ ಪುಟ್ಟಕ್ಕನ ಮನೆ ಸೇರಿದ್ದಾಳೆ. ಕಂಠಿಯನ್ನು ಪಡೆಯಲೇಬೇಕೆ ಎನ್ನುವ ಉದ್ದೇಶದಿಂದಾಗಿಯೂ ಅಥವಾ ಮಾನಸಿಕ ಕಾರಣದಿಂದಾಗಿಯೂ ರಾಧಾ ಪುಟ್ಟಕ್ಕನ ಮನೆಯಲ್ಲಿ ಉಳಿಯುವ ಹಾಗೆ ಆಗಿದೆ.

ಬಂಗಾರಮ್ಮನ ಮನೆಯಲ್ಲಿ ಇನ್ನು ನಮಗೆ ಸ್ಥಾನವಿಲ್ಲ. ಪುಟ್ಟಕ್ಕ ನಮಗೆ ಸ್ಥಾನ ಕೊಟ್ಟೆ ಕೊಡುತ್ತಾರೆ ಎನ್ನುವ ಭರವಸೆ ರಾಧಾ ತಾಯಿಗೆ ಇರುತ್ತದೆ. ಹೇಗಾದರೂ ಮಾಡಿ ಪುಟ್ಟಕ್ಕ ಜೊತೆ ವಿಶ್ವಾಸವನ್ನ ಗಳಿಸಿಕೊಂಡು ಪುಟ್ಟಕ್ಕನ ಮನೆಯಲ್ಲಿ ಇರುವ ಹಾಗೆ ಉಪಾಯವನ್ನು ಮಾಡುತ್ತಾರೆ ಇನ್ನು ಬಂಗಾರಮ್ಮ ಸ್ನೇಹನಾ ಕಂಡರೆ ಉರಿದು ಬೀಳುತ್ತಾರೆ.

Zee Kannada serial Puttakkana makkalu written update on November 1st

ಒಂದು ಮುಖ್ಯವಾದ ಆಫೀಸ್ ಮೀಟಿಂಗ್‌ಗೆ ಬಂಗಾರಮ್ಮ ಕಾರಿನಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ ಕಾರು ಕೆಟ್ಟು ಹೋಗುತ್ತದೆ ಇದನ್ನು ನೋಡಿದ ಬಂಗಾರಮ್ಮಗೆ ಬಹಳ ಸಿಟ್ಟು ಬರುತ್ತದೆ. ಎರಡು ಕಡೆ ಕಾರಿನ ಚಕ್ರದ ಗಾಳಿ ಹೋಗಿರುತ್ತದೆ. ಬೇಗ ರಿಪೇರಿ ಮಾಡಿಸಿ ಎಂದು ಜೋರಾಗಿ ಹೇಳುತ್ತಾಳೆ . ಏನು ಮಾಡುವುದು ಎಂದು ಯೋಚನೆ ಮಾಡುತ್ತಿರುವಾಗ ಅಲ್ಲಿಗೆ ಸ್ನೇಹಾ ಬರುತ್ತಾಳೆ.

ಸ್ನೇಹಾಳನ್ನು ಕಂಡು ಕೋಪಗೊಂಡ ಬಂಗಾರಮ್ಮ

ಇನ್ನು ಬಂಗಾರಮ್ಮ ಕಾರಿನಿಂದ ಇಳಿದು ಆಟೋವನ್ನು ಆದರೂ ನೋಡಿ ಅದರಲ್ಲಿ ಹೋಗುತ್ತೇನೆ ಎಂದು ಹೇಳುತ್ತಿರುತ್ತಾರೆ. ಆಗ ಸ್ನೇಹಾ ಸಹಾಯ ಮಾಡಲು ಮುಂದೆ ಬರುತ್ತಾಳೆ. ನಿಮಗೆ ಯಾವುದೇ ಅಭ್ಯಂತರ ಇಲ್ಲ ಎಂದರೆ ನಾನು ಈ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದಾಗ ಬಂಗಾರಮ್ಮ ಬೇಡ ಎಂದು ನಿರಾಕರಿಸುತ್ತಾಳೆ. ಬಳಿಕ ಅನಿವಾರ್ಯ ಕಾರಣದಿಂದಾಗಿ ಸ್ನೇಹಾ ಜೊತೆ ಸ್ಕೂಟಿಯಲ್ಲಿ ಕುಳಿತುಕೊಂಡು ಪಾರ್ಟಿ ಆಫೀಸ್ ಮೀಟಿಂಗ್‌ಗೆ ತೆರಳುತ್ತಾಳೆ.

ಸ್ನೇಹಾ- ಬಂಗಾರಮ್ಮ ನಡುವಿನ ಅಂತರ ಕಡಿಮೆ ಆಗುತ್ತಾ?

ಹಾವು - ಮುಂಗುಸಿಯಂತೆ ಆಡುವ ಇನ್ನಾದರೂ ಬಂಗಾರಮ್ಮ ಹಾಗೂ ಸ್ನೇಹ ನಡುವಿನ ಅಂತರ ಕೊಂಚ ಕಡಿಮೆಯಾಗುತ್ತೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇನ್ನು ಕಂಠಿ ಬಹಳ ಶ್ರದ್ದಾ ಭಕ್ತಿಯಿಂದ ಕುಸ್ತಿಯನ್ನು ಕಲಿಯುತ್ತಿರುತ್ತಾನೆ. ಇದನ್ನು ನೋಡಿದ ಆತನ ಗುರುಗಳಿಗೆ ಬಹಳ ಖುಷಿಯಾಗುತ್ತದೆ ಗುರುಗಳು ಹೇಳುತ್ತಾರೆ ನನಗೆ ನಿನ್ನಂತಹ ಒಬ್ಬ ಶಿಷ್ಯನಿದ್ದ. ಆದರೆ ಆತ ಬಹಳ ಹಠವಾದಿಯಾಗಿದ್ದ, ಆದರೆ ಅವನಿಗೆ ಕುಸ್ತಿಪಟುವಲ್ಲ ಎಂದು ಹೇಳುತ್ತಾರೆ.

Zee Kannada serial Puttakkana makkalu written update on November 1st

ಕಂಠಿ ಮಾತಿಗೆ ಹೆಮ್ಮೆ ಪಟ್ಟ ಗುರುಗಳು

ಇದನ್ನು ಕೇಳಿದ ಕಂಠಿ ಗೆ ಬಹಳ ಆಶ್ಚರ್ಯ ಆಗುತ್ತದೆ. ಆತ ಗುರುಗಳ ಬಳಿ ಆತನ ಬಗ್ಗೆ ವಿಚಾರಣೆ ಮಾಡಿದಾಗ ಆತ ಮದುವೆಯಾಗಿರುವುದಾಗಿ ತಿಳಿದು ಬರುತ್ತದೆ. ಮದುವೆಯಾದ ಬಳಿಕ ಕುಸ್ತಿಯನ್ನು ಆಡದೇ ಇರುವುದನ್ನು ಕೇಳಿದ ಕಂಠಿಗೆ ಬಹಳ ನೋವಾಗುತ್ತದೆ. ಆ ಬಳಿಕ ಕಂಠಿ ಹೇಳುತ್ತಾನೆ ನನಗೂ ಮದುವೆಯಾಗಿದೆ ಆದರೆ ನಾನು ಯಾವತ್ತೂ ನನ್ನ ಗುರಿಯನ್ನು ತಲುಪಿಯೇ ತಲುಪುತ್ತೇನೆ ಎಂದು ಹೇಳಿದಾಗ ಕಂಠಿಯ ಗುರುಗಳಿಗೆ ಬಹಳ ಖುಷಿಯಾಗುತ್ತದೆ.

More from Filmibeat

English summary
November 1st Puttakkana makkalu serial written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X