Puttakkana Makkalu: ಕುಸ್ತಿ ಪಂದ್ಯದಲ್ಲಿ ಗೆದ್ದ ಕಂಠಿ.. ಸ್ನೇಹಾ ಗಂಡನಿಗೆ ಕ್ಷಮೆ ಕೇಳಿದ್ದು ಯಾಕೆ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಲ್ಲಿಂದ ವೀಕ್ಷಕರನ್ನು ಸೆಳೆಯುತ್ತಲೇ ಇದೆ. ಸದ್ಯ ಈ ಧಾರಾವಾಹಿಯಲ್ಲಿ ಕಂಠಿಯ ಕುಸ್ತಿ ಪ್ರಸಂಗ ನಡೆಯುತ್ತಿದೆ. ಕಂಠಿ ಕುಸ್ತಿ ಪಂದ್ಯವನ್ನು ಗೆದ್ದಿದ್ದಾರೆ. ಪುಟ್ಟಕ್ಕ ಕಂಠಿ ಗೆದ್ದ ಖುಷಿಯಲ್ಲಿ ಇದ್ದಾನೆ. ಕುಸ್ತಿ ಪಂದ್ಯದಲ್ಲಿ ಮಾರನನ್ನು ಸೋಲಿಸಿದ ಕಂಠಿ ವಿಜಯೋತ್ಸವ ಆಚರಿಸಿದ್ದಾನೆ. ಇನ್ನು ಇದಕ್ಕೆಲ್ಲ ಕಾರಣ 'ಪುಟ್ಟಕ್ಕ ಪುಟ್ಟಕ್ಕ'. ಅವರು ಇಲ್ಲದೆ ಇದ್ದಿದ್ದರೆ, ಯಾವುದೇ ಕೆಲಸವೂ ಅಪೂರ್ಣ ಆಗುತ್ತಿತ್ತು.
ಕಂಠಿಗೆ ಮೊದಲು ಸ್ನೇಹ ಹಾಗೂ ಬಂಗಾರಮ್ಮ ಇಬ್ಬರೂ ಕೂಡ ಪ್ರೋತ್ಸಾಹ ನೀಡಲಿಲ್ಲ. ಆದರೆ, ಕಂಠಿಗೆ ಪ್ರೋತ್ಸಾಹ ನೀಡಿದ್ದು ಪುಟ್ಟಕ್ಕ. ಹೀಗಾಗಿ ಪುಟ್ಟಕ್ಕನನ್ನು ಕಂಠಿ ಹಾಡಿ ಹೊಗಳುತ್ತಾನೆ. ನನ್ನ ಅವ್ವ ಇಲ್ಲ ಎಂದಿದ್ದರೆ ನಾನು ಈ ಪಂದ್ಯದಲ್ಲಿ ಆಡುತ್ತಿರಲಿಲ್ಲ ಎಂದು ಹೇಳುತ್ತಾನೆ. ಬಳಿಕ ಸ್ನೇಹ ಕಡೆ ನೋಡಿ, ಈಕೆ ಇಲ್ಲ ಎಂದಿದ್ದರೆ ನನಗೆ ಕುಸ್ತಿ ಪಂದ್ಯದಲ್ಲಿ ಆಡುವ ಹುಮ್ಮಸ್ಸೆ ಬರುತ್ತಿರಲಿಲ್ಲ ಎಂದು ಹೇಳಿದಾಗ ಬಂಗಾರಮ್ಮ ಮಾತ್ರ ಕೊಂಚ ನೊಂದುಕೊಳ್ಳುತ್ತಾರೆ.

ನನ್ನ ಮಗ ಮುಂಚೆ ನನ್ನ ಹಿಂದೆ ಬರುತ್ತಿದ್ದ ಅವ್ವ ಎಂದೆಲ್ಲ ಹೇಳುತ್ತಿದ್ದ ಈಗ ಹೆಂಡತಿಯ ಹಿಂದೆ ಹೋಗುತ್ತಿದ್ದಾನೆ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾರೆ. ಆದರೆ, ಆ ಬೇಸರವನ್ನು ಬಂಗಾರಮ್ಮ ತೋರಿಸಿಕೊಳ್ಳುವುದಿಲ್ಲ. ಬಳಿಕ ಬಂಗಾರಮ್ಮ, ಸ್ನೇಹ, ಪುಟ್ಟಕ್ಕ ಹಾಗೂ ವಸು ಅನ್ನ ತೋರಿಸಿ, ಈ ಮೂರು ಕಂಬಗಳು ನನ್ನ ಜೊತೆ ಇಲ್ಲ ಎಂದಿದ್ದರೆ ನಾನು ಇಷ್ಟು ದೂರ ಬರಲು ಸಾಧ್ಯ ಆಗುತ್ತಿರಲಿಲ್ಲ ಎಂದು ಹೇಳುತ್ತಾನೆ ಖುಷಿಯಾಗುತ್ತದೆ.
ಚಿನ್ನದ ಪದಕವನ್ನು ಪುಟ್ಟಕ್ಕಗೆ ತೊಡಿಸಿದ ಕಂಠಿ
ಇನ್ನು ಪುಟ್ಟಕ್ಕಗೆ ಪದಕವನ್ನು ತೊಡಿಸಿದರೆ ಅಮ್ಮನಿಗೆ ಕಂಠಿ ಗದೆಯನ್ನೇ ಕೊಟ್ಟು ಬಿಡುತ್ತಾನೆ. ಇದನ್ನು ನೋಡಿದ ಬಂಗಾರಮ್ಮಗೆ ಬಹಳ ಖುಷಿಯಾಗುತ್ತೆ. ನನ್ನ ಮಗ ಗೆದ್ದು ಬೀಗಿದನಲ್ಲ ಎಂದು ಎಲ್ಲರ ಜೊತೆಗೆ ಹಬ್ಬ ಆಚರಿಸುತ್ತಾರೆ. ಇನ್ನು ಮನೆಗೆ ಬಂದ ಕಂಠಿ ಯೋಚನೆ ಮಾಡುತ್ತಿರುತ್ತಾನೆ. 10 ಲಕ್ಷ ರೂಪಾಯಿ ಗೆದ್ದಾಯಿತು ಇದೀಗ ಜಾಗ ಕೊಂಡುಕೊಂಡು ವ್ಯವಸಾಯ ಮಾಡಬೇಕು ಎಂದು ಕೊಳ್ಳುತ್ತಾನೆ.
ವ್ಯವಸಾಯ ಮಾಡಲು ನಿರ್ಧಾರ
ಆಗ ಅಲ್ಲಿಗೆ ಸ್ನೇಹ ಬರುತ್ತಾಳೆ. ಸ್ನೇಹವನ್ನು ನೋಡಿದ ಕಂಠಿ ಹೇಳುತ್ತಾನೆ "ನೀವು ನನಗೆ ಬೈಯುತ್ತಿರಿ ಎಂದು ಅಂದುಕೊಂಡಿದ್ದೆ. ಆದರೆ, ನನಗೆ ಸಪೋರ್ಟ್ ಮಾಡಿದ್ದ ರೀತಿ ನನಗೆ ಬಹಳ ಇಷ್ಟವಾಯಿತು. ನೀವೆಲ್ಲ ಇದ್ದಿದ್ದರಿಂದ ನಾನು ಪಂದ್ಯವನ್ನು ಗೆದ್ದೇ ಎಂದು ಖುಷಿಯಾಗಿ ಹೇಳುತ್ತಾನೆ. ಇದೆಲ್ಲವನ್ನು ಕೇಳಿದ ಸ್ನೇಹ ಮೆತ್ತಗೆ ಹೇಳುತ್ತಾಳೆ. ನಾನು ನಿಮ್ಮನ್ನು ಬಹಳ ತಪ್ಪು ತಿಳಿದುಕೊಂಡಿದ್ದೆ. ಆದರೆ ಇದೀಗ ನನಗೆ ನನ್ನ ತಪ್ಪಿನ ಅರಿವಾಗಿದೆ ನನ್ನನ್ನು ಕ್ಷಮಿಸಿಬಿಡಿ " ಎನ್ನುತ್ತಾಳೆ.

ಕಂಠಿ ಬಳಿ ಕ್ಷಮೆ ಕೇಳಿದ ಸ್ನೇಹಾ
ಇದನ್ನು ಕೇಳಿದ ಕಂಠಿ ಮೆತ್ತಗಾಗುತ್ತಾನೆ. ಬಳಿಕ ತನ್ನ ಹೆಂಡತಿಯ ಬಳಿ ಹೇಳುತ್ತಾನೆ. ನೀವು ನನ್ನನ್ನು ಯಾವತ್ತೂ ಬಿಟ್ಟು ಹೋಗಬೇಡಿ. ನಾನು ಇದೆಲ್ಲ ಮಾಡುತ್ತಿರುವುದು ನಿಮಗೋಸ್ಕರ. ನೀವೇ ನನ್ನ ಜೀವನದಲ್ಲಿ ಇಲ್ಲ ಎಂದಾದರೆ, ನಾನು ಎನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸ್ನೇಹಳನ್ನು ತಬ್ಬಿ ಕೊಳ್ಳುತ್ತಾನೆ.
ಕಂಠಿಯ ಮಾತಿಗೆ ಕರಗಿದ ಸ್ನೇಹಾ
ಕಂಠಿ ಏನೋ ತನ್ನ ಗುರಿಯನ್ನು ಸಾಧಿಸಿದ. ಆದರೆ, ನಾನು ಮಾತ್ರ ತಹಶೀಲ್ದಾರ್ ಆಗಬೇಕು ಎನ್ನುವಂತಹ ಕನಸನ್ನು ಇದೀಗ ಬದಿಗಿಟ್ಟಿದ್ದೆ. ಆದ್ರೀಗ ನಾನು ಹೇಗಾದರೂ ಮಾಡಿ ತಹಶೀಲ್ದಾರ್ ಆಗಲೇಬೇಕೆಂದು ಮತ್ತೆ ಪಣತೊಟ್ಟಿದ್ದಾಳೆ.


Click it and Unblock the Notifications











