Puttakkana Makkalu: ಸ್ನೇಹಾ ಮೇಲೆ ಆಪಾದನೆ ಮಾಡಿದ ಮಾರ, ಮತ್ತೆ ಬಂಗಾರಮ್ಮನ ಕೆಂಗಣ್ಣಿಗೆ ಗುರಿಯಾದ ಸ್ನೇಹಾ
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಇದೀಗ ಜೈಲಿನಲ್ಲಿ ಇದ್ದ ಮಾರ ಬಿಡುಗಡೆಯಾಗಿ ಬಂಗಾರಮ್ಮ ಮನೆಗೆ ಬಂದಿದ್ದಾನೆ. ಮನೆಗೆ ಬಂದ ಮಾರ ಸ್ಫೋಟಕ ಹೇಳಿಕೆ ನೀಡಿ ಬಂಗಾರಮ್ಮ ಹಾಗೂ ಸ್ನೇಹಾ ಮಧ್ಯೆ ತಂದಿಡುವ ಎಲ್ಲಾ ಲಕ್ಷಣ ಕಾಣುತ್ತಿದೆ.
ಮಾರ ಬಂಗಾರಮ್ಮನ ಬಳಿ ಇದಕ್ಕೆಲ್ಲ ಸ್ನೇಹಾ ಕಾರಣ ಆಕೆಯೇ ಇದೆಲ್ಲ ಮಾಡಿಸಿದ್ದು ಅನ್ನುವ ಹಾಗೆ ಮಾತನಾಡುತ್ತಾ ಇರುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ನೇರವಾಗಿ ಕಂಠಿಗೆ ಕರೆ ಮಾಡಿ ಎಲ್ಲಿದಿಯ ಎಂದೆಲ್ಲ ವಿಚಾರಣೆ ಮಾಡಿದಾಗ ಕಂಠಿ ಅಲ್ಲಿ ನಡೆಯುತ್ತಿರುವ ವಿಚಾರವನ್ನು ತಿಳಿಸಿ ಆದಷ್ಟು ಬೇಗ ಮನೆಗೆ ಬರುತ್ತೇನೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಬಂಗಾರಮ್ಮ .. ನೀನು ಬಾ.. ನಿನ್ನ ಜೊತೆ ಇರುವವರು ಬರುವುದಕ್ಕಿಂತ ಇಲ್ಲಿಗೆ ಬಾರದೆ ಇದ್ದರೆ ಚೆನ್ನ ಎಂದು ಹೇಳುತ್ತಾರೆ ಇದನ್ನು ಕೇಳಿಸಿಕೊಂಡ ಕಂಠಿ ಯಾಕೆ ಏನಾಯಿತು ಎಂದೆಲ್ಲ ವಿಚಾರಣೆ ಮಾಡಿದಾಗ ಬಂಗಾರಮ್ಮ ಏನು ಉತ್ತರಿಸದೆ ಇರುವುದನ್ನು ಕಂಡು ಆದಷ್ಟು ಬೇಗ ಮನೆಗೆ ಬರುತ್ತೇನೆ ಏನು ಎಂಬುವುದನ್ನು ಹೇಳಿ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ.
ಸಹನಾ ಮಾತಿಗೆ ಬೆಲೆ ಕೊಟ್ಟು ಮನೆಗೆ ಹೊರಟ ಸ್ನೇಹಾ
ಇತ್ತ ರಾಜೀ ಬಂಗಾರಮ್ಮಗೆ ಈ ಮುಂಚೆಯೇ ಸ್ನೇಹಾ ಬಗ್ಗೆ ಮಾತನಾಡುತ್ತಾಳೆ ಇದಕ್ಕೆಲ್ಲ ಕಾರಣ ಆಕೆಯೇ ಎಂಬುವುದನ್ನು ಹೇಳಿ ಬಂಗಾರಮ್ಮನ ಮನದಲ್ಲಿ ಸಾಕಷ್ಟು ಅನುಮಾನಗಳ ಹುತ್ತವನ್ನು ಬೆಳೆಸಿದ್ದಾಳೆ. ಇದೀಗ ಮಾರ ಕೂಡ ಅದೇ ಕೆಲಸ ಮಾಡುತ್ತಾ ಇದ್ದಾನೆ..
ರಾಜೀ ಮೇಲೆ ಅನುಮಾನಗೊಂಡ ಸೀರಿಯಲ್ ಪ್ರೇಮಿಗಳು
ಕೌಸಲ್ಯ ಮನೆಯಲ್ಲಿ ಸುಮಾಳನ್ನು ಬಿಡಲು ಕಂಠಿ ಹಾಗೂ ಸ್ನೇಹಾ ಬಂದಿರುತ್ತಾರೆ. ಅಮ್ಮನ ಕರೆ ಬಂದ ತಕ್ಷಣ ಸ್ನೇಹಾಳನ್ನು ಕರೆದುಕೊಂಡು ಹೋಗಲು ಮುಂದೆ ಬಂದಾಗ ಸಹನಾ ಸ್ನೇಹಾನ ಬಳಿ ಹೇಳುತ್ತಾಳೆ.. ಸ್ನೇಹಾ ನೀನು ಹೋಗು ನಾನು ಇಲ್ಲಿ ಸುಮಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ಮಾರನ ಮಾತಿಗೆ ಸ್ನೇಹಾ ಶಾಕ್
ಇದನ್ನು ಕೇಳಿದ ಸ್ನೇಹಾ ಸರಿ ಎಂದು ಹೊರಡುತ್ತಾಳೆ. ಇನ್ನೂ ಮನೆಗೆ ಬಂದಾಗ ಮಾರ ಬಂಗಾರಮ್ಮನ ಪಕ್ಕ ನಿಂತಿರುವುದನ್ನು ಕಂಡು ಕಂಠಿ ಶಾಕ್ ಆಗುತ್ತಾನೆ. ನೀನೇನು ಇಲ್ಲಿ ಎಂದು ಗುರಾಯಿಸಿ ಒಂದು ಏಟು ಹೊಡೆಯಲು ಹೋದಾಗ ಬಂಗಾರಮ್ಮ ತಡೆಯುತ್ತಾರೆ. ಇನ್ನೂ ಕಂಠಿ ತನ್ನ ತಾಯಿಯ ಬಳಿ ಇಲ್ಲಿಗೆ ಯಾಕೆ ಊಟ ಬಂದಿದ್ದಾನೆ ಎಂಬೆಲ್ಲ ಪ್ರಶ್ನೆ ಕೇಳುತ್ತಾನೆ ಇದನ್ನು ಕೇಳಿದ ಬಂಗಾರಮ್ಮ ಮಾರ ಬಂದ ಉದ್ದೇಶವನ್ನು ಹೇಳುತ್ತಾಳೆ.
ಮಾರನ ಮಾತಿಗೆ ಕೋಪಗೊಂಡ ಕಂಠಿ
ಮಾರ ಹೇಳುತ್ತಾನೆ. ನನಗೆ ಪುಟ್ಟಕ್ಕನ ಮೆಸ್‌ಗೆ ಬೆಂಕಿ ಬಿದ್ದ ಸಂದರ್ಭ ಒಬ್ಬರು ಕರೆ ಮಾಡಿದ್ದರೂ.. ಅವರು ಬೇರೆ ಯಾರೂ ಅಲ್ಲ ಸ್ನೇಹಾ ಎಂದಾಗ ಸ್ನೇಹಾಗೆ ಶಾಕ್ ಆಗುತ್ತದೆ. ನಾನು ಈತನಿಗೆ ಕರೆ ಮಾಡಿದ್ದೆನಾ ಎಂದು ಶಾಕ್ ಆಗುತ್ತಾಳೆ. ಕಂಠಿ ಮಾತ್ರ ಮಾರನ ವಿರುದ್ದ ಸಿಡಿದು ನಿಲ್ಲುತ್ತಾನೆ.


Click it and Unblock the Notifications











