Puttakkana Makkalu: ಸಹನಾ-ಮುರಳಿ ಬದುಕಲ್ಲಿ ಬಿರುಗಾಳಿ! ಅಮ್ಮನ ಬಳಿ ಗೋಳು ಹೇಳಿಕೊಂಡ ದೊಡ್ಡ ಮಗಳು

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇದೀಗ ಪುಟ್ಟಕ್ಕನಿಗೆ ಸಹನಾಳದೆ ಚಿಂತೆ. ಏಕೆಂದರೆ ಪುಟ್ಟಕ್ಕನಿಗೆ ಈಗಾಗಲೇ ಕಣಿ ಹೇಳುವವಳು ಬಂದು ತಲೆ ಕೆಡಿಸಿ ಬಿಟ್ಟಿದ್ದಾಳೆ. ಇತ್ತ, ಸಹನಾ ಮನೆಗೆ ಬರುತ್ತೇನೆ ಎಂದು ಹೇಳುತ್ತಿದ್ದು, ಪುಟ್ಟಕ್ಕ ಮಾತ್ರ ಬೇಡ ಎಂದು ಹೇಳುತ್ತಿದ್ದಾಳೆ. ಯಾಕೆಂದರೆ ಪುಟ್ಟಕ್ಕನ ಮನೆಗೆ ಕಂಠಿಯ ಅತ್ತೆ ಹಾಗೂ ಅತ್ತೆಯ ಮಗಳು ಬಂದಿದ್ದಾಳೆ. ಅದರಿಂದ ಪುಟ್ಟಕ್ಕ ಮಾತ್ರ ಮನೆಗೆ ಬರುವುದು ಬೇಡ ಎಂದು ಹೇಳುತ್ತಿರುತ್ತಾಳೆ.

ಇನ್ನು ಕಂಠಿಯ ಅತ್ತೆ ಮತ್ತು ಮಗಳು ಮನೆಗೆ ಬಂದಿರುವುದು ಮನೆ ಮಕ್ಕಳಿಗೆ ಗೊತ್ತಿರುವುದಿಲ್ಲ. ಆದರೂ ಪುಟ್ಟಕ್ಕ ಯಾರ ಬಳಿಯು ಹೇಳದೆ ರಾಧಾ ಹಾಗೂ ಆಕೆಯ ತಾಯಿಗೆ ಇರಲು ಜಾಗ ನೀಡಿದ್ದಾಳೆ. ಇನ್ನು ಮುರಳಿ ಸಹನಾಗೆ ಒಂದು ಮೊಬೈಲ್ ಫೋನ್ ತೆಗೆದು ಕೊಡುತ್ತಾನೆ. ಇದನ್ನು ತೆಗೆದುಕೊಂಡ ಸಹನಾಗೆ ಬಹಳ ಖುಷಿಯಾಗುತ್ತದೆ. ಆಕೆಗೆ ತನ್ನ ತಾಯಿ ಹಾಗೂ ಮುರಳಿಯ ಜೊತೆ ಮಾತನಾಡಬಹುದು ಎಂದು ಯೋಚನೆ ಮಾಡುತ್ತಿರುತ್ತಾಳೆ. ಆಗ ಮುರಳಿ 'ನಾನು ಮನೆಗೆ ಬಂದಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡ. ಯಾಕೆಂದರೆ ನಾನು ನೆನಪಾದಾಗೆಲ್ಲ ನೀನು ನನಗೆ ಫೋನ್ ಮಾಡುತ್ತಿರಬೇಕು' ಎಂದು ಹೇಳುತ್ತಾನೆ.

zee-kannada-serial-puttakkana-makkalu

ಇದನ್ನು ಕೇಳಿದ ಸಹನಾ, ಹಾಗಾದ್ರೆ ನನಗೆ ಫೋನೇ ಬೇಡ ನೀವು ಮನೆಗೆ ಬನ್ನಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮುರಳಿ ಸರಿ ಆಯಿತು ಎಂದು ಒಪ್ಪಿಕೊಳ್ಳುತ್ತಾನೆ. ಬಳಿಕ ಆತನ ಜೊತೆ ಬಂದಿದ್ದ ಮುರಳಿಯ ಗೆಳತಿ ಅಸಭ್ಯವಾಗಿ ನಡೆದುಕೊಂಡು ಸಹನಾಗೆ ಇನ್ನಷ್ಟು ಕಾಟ ಕೊಡುತ್ತಿದ್ದಾಳೆ. ಸಹನಾಗೆ ತನ್ನ ಗಂಡನ ಜೊತೆ ಆಕೆ ನಡೆದುಕೊಳ್ಳುವ ರೀತಿಯನ್ನು ಕಂಡು ಬಹಳ ಭಯಪಡುತ್ತಾಳೆ.

ಮುರಳಿ ವರ್ತನೆ ಕಂಡು ಭಯಪಟ್ಟ ಸಹನಾ

ನನ್ನ ಮುರಳಿ ನನ್ನ ಕೈ ತಪ್ಪಿ ಹೋಗುತ್ತಿದ್ದಾರೆ ಎನ್ನುವ ಭಯದಲ್ಲಿ ಇರುತ್ತದೆ ಸಹನಾಗೆ. ಇದರಲ್ಲಿ ಬೇರೆ ಅತ್ತೆಯ ಕಾಟ ಕೌಸಲ್ಯಾಗೆ ಹಣದ ಮೇಲೆ ಮೋಹದಿಂದ ತನ್ನ ಸೊಸೆಯ ಮೇಲೆ ದಬ್ಬಾಳಿಕೆ ಮಾಡುತ್ತಿರುತ್ತಾಳೆ. ಅತ್ತೆ ಏನೇ ಹೇಳಿದರೂ ಅದೆಲ್ಲ ಮಾಡಿಕೊಂಡು ಇದ್ದ ಸಹನಾ ಇದೀಗ ನೋವು ನುಂಗಿಕೊಂಡು ಮುರಳಿ ಮನೆಯಲ್ಲಿದ್ದಾಳೆ. ತನ್ನ ನೋವನ್ನ ಯಾರ ಬಳಿ ಹೇಳುವುದು ಎಂದು ಯೋಚನೆ ಮಾಡಿದಾಗ ಅಮ್ಮನ ನೆನಪಾಗುತ್ತದೆ. ಸಹನಾ ತನ್ನ ತಮ್ಮ ಪುರುಷೋತ್ತಮನ ಮೊಬೈಲಿಗೆ ಫೋನ್ ಮಾಡುತ್ತಾಳೆ.

zee-kannada-serial-puttakkana-makkalu

ಅಮ್ಮನಿಗೆ ಕರೆ ಮಾಡಿದ ಸಹನಾ

ಇದನ್ನು ಕಂಡ ಪುರುಷೋತ್ತಮ ನೇರವಾಗಿ ಪುಟ್ಟಕ್ಕನ ಮನೆಗೆ ಬರುತ್ತಾನೆ. ಅಕ್ಕ ಕರೆ ಮಾಡುತ್ತಿದ್ದಾಳೆ ಎಂದು ಹೇಳಿ ವಿಡಿಯೋ ಕಾಲ್ ಆನ್ ಮಾಡಿ ಪುಟ್ಟಕ್ಕನಿಗೆ ಕೊಡುತ್ತಾನೆ. ಮಗಳನ್ನು ನೋಡಿ ಬಹಳ ಖುಷಿಪಟ್ಟ ಪುಟ್ಟಕ್ಕ ಮೆತ್ತಗೆ ಆ ಕಡೆ ಈ ಕಡೆ ನೋಡುತ್ತಾಳೆ. ಯಾಕೆಂದರೆ ರಾಧಾ ಹಾಗೂ ಆಕೆಯ ತಾಯಿ ಅಲ್ಲಿ ಇದ್ದರು ಇಲ್ಲವೇ ಎನ್ನುವುದನ್ನು ನೋಡಿ ತನ್ನಲ್ಲಿದ್ದ ಸಂಶಯವನ್ನು ಬಗೆಹರಿಸಿಕೊಳ್ಳುತ್ತಾಳೆ. ಸಹನಾ ತನ್ನೆಲ್ಲ ನೋವನ್ನ ಪುಟ್ಟಕ್ಕನ ಬಳಿ ಹೇಳಿಕೊಳ್ಳುತ್ತಾಳೆ.

ಮಗಳಿಗೆ ಧೈರ್ಯ ಹೇಳಿದ ಪುಟ್ಟಕ್ಕ

ನಾನು ಮನೆಗೆ ಬಂದುಬಿಡುತ್ತೇನೆ ಅಮ್ಮ ನನಗೆ ಅವರಿಲ್ಲದೆ ಇಲ್ಲಿ ಇರಲು ಆಗುತ್ತಿಲ್ಲ ಹಾಗೆಯೇ ನನ್ನ ಅತ್ತೆಯ ಮಾತುಗಳನ್ನ ಕೇಳಿಸಿಕೊಳ್ಳಲು ಆಗುತ್ತಿಲ್ಲ ಎಂದೆಲ್ಲಾ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ. ಇತ್ತ, ಮುರಳಿಯ ವರ್ತನೆ ಬದಲಾದ ಹಾಗೆ ಕಾಣುತ್ತಿದೆ. ಯಾಕೆಂದರೆ ಆತನ ಜೊತೆ ಇದ್ದ ಲೇಡಿ ಟೀಚರ್ ಬಗ್ಗೆ ಸಹನಾಗೆ ಬಹಳ ಅನುಮಾನ ಮೂಡಿದೆ. ಆದರೂ ಇದೆಲ್ಲವನ್ನು ಯಾರ ಬಳಿಯು ಹೇಳದೆ ಸುಮ್ಮನೆ ಇರುತ್ತಾಳೆ. ಇನ್ನು ಪುಟ್ಟಕ್ಕ ಮಗಳಿಗೆ ಸಮಾಧಾನ ಮಾಡಿ ಅಲ್ಲೇ ಇರುವಂತೆ ಒತ್ತಾಯ ಮಾಡುತ್ತಾಳೆ.

More from Filmibeat

English summary
Puttakkana Makkalu serial 13th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X