ಸ್ನೇಹಾ-ಕಂಠಿ ಮರು ಮದುವೆ: ಮತ್ತೆಂದೂ ಸುಳ್ಳು ಹೇಳುವುದಿಲ್ಲ ಎಂದು ಪ್ರಮಾಣ ಮಾಡಿದ ಕಂಠಿ

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಸ್ನೇಹಾ ಹಾಗೂ ಕಂಠಿ ಮಾತು ಮದುವೆ ನೋಡಲೇಬೇಕು ಎಂದು ಜನರು ಹಾಗೆಯೇ ಮನೆ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಸ್ನೇಹಾ ಒಪ್ಪಿಗೆ ಕೊಡುತ್ತಾಳ ಎನ್ನುವುದು ಎಲ್ಲರ ಪ್ರಶ್ನೆ ಆಗಿದೆ.

ಹೌದು.. ಸ್ನೇಹಾ ಮಾತ್ರ ಕಂಠಿಯನ್ನೂ ಅದೆಷ್ಟೇ ದ್ವೇಷ ಮಾಡಿದರು ಪ್ರೀತಿ ಮಾಡುತ್ತಾ ಇರುತ್ತಾಳೆ. ಆದರೆ ಕಂಠಿಗೆ ಸ್ನೇಹಾ ಅಂದರೆ ಕೊಂಚ ಭಯ. ಮರು ಮದುವೆಗೆ ಎನು ಹೇಳುತ್ತಾಳೆ ಎನ್ನುವ ಭಯದಲ್ಲಿ ಇರುತ್ತಾನೆ. ಇನ್ನೂ ರೂಮ್ ನತ್ತ ಬಂದ ಸ್ನೇಹಾ ಹಾಗೂ ಕಂಠಿ ಮುಖ ಮುಖ ನೋಡುತ್ತಾ ಇರುತ್ತಾರೆ. ಸ್ನೇಹಾಗೆ ಒಂದು ರೀತಿಯ ಭಯ.

zee-kannada-serial-puttakkana-makkalu

ಯಾಕೆಂದರೆ ಎಲ್ಲಾದರೂ ನಾನು ಮರು ಮದುವೆ ಆಗಲು ಒಪ್ಪಿಕೊಳ್ಳದೆ ಹೋದರೆ ಅಮ್ಮನಿಗೆ ಬಹಳ ಬೇಸರ ಆಗಬಹುದು ಎನ್ನುವ ದೃಷ್ಟಿಯಲ್ಲಿ ಇರುತ್ತಾಳೆ. ಆದರೆ, ಕಂಠಿ ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಲು ಕೂಡ ಆಗದೆ ಎನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಕಂಠಿ ಸ್ನೇಹಾ ಬಳಿ ಮೆತ್ತಗೆ ಕೇಳುತ್ತಾನೆ. ಸ್ನೇಹಾ ಮರು ಮದುವೆಗೆ ನೀವು ಒಪ್ಪಿಗೆ ಕೊಟ್ಟರೆ ಮಾತ್ರ ನಡೆಯುತ್ತದೆ ಎಂದು ಹೇಳಿದಾಗ, ಸ್ನೇಹಾ ಮೆತ್ತಗೆ ಹೇಳುತ್ತಾಳೆ ಮನೆಯವರು ಎನು ಹೇಳುತ್ತಾರೋ ಅದೇ ಪ್ರಕಾರ ನಡೆದುಕೊಳ್ಳಿ ಎಂದು.

ಮನದಲ್ಲಿ ಸಂತಸ ವ್ಯಕ್ತ ಪಡಿಸಿದ ಪುಟ್ಟಕ್ಕ

ಇದನ್ನು ಕೇಳಿದ ಕಂಠಿಗೆ ಮಾತೇ ಬಾರದ ಹಾಗೆ ಆಗುತ್ತದೆ. ಎನು ಮಾಡುವುದು ಎಂದು ತಿಳಿಯದೇ ಮನದಲ್ಲಿ ಸಂತಸ ವ್ಯಕ್ತಪಡಿಸುತ್ತ ಇರುತ್ತಾನೆ. ಇನ್ನೂ ಸ್ನೇಹಾ ಬಳಿ ಕಂಠಿ ನೀವು ನನ್ನ ಮನಸಾರೆ ಒಪ್ಪಿಕೊಂಡರೆ ಮಾತ್ರ ನಾನು ತಾಳಿ ಕಟ್ಟುತ್ತೇನೆ. ಎಂದಾಗ ಸ್ನೇಹಾ ಕೊಂಚ ಕೋಪಗೊಂಡು ನಿಮ್ಮನ್ನು ಕ್ಷಮಿಸಲು ಸಾಧ್ಯ ಇಲ್ಲ. ನಾನು ನನ್ನ ಅಮ್ಮನಿಗಾಗಿ ಮದುವೆ ಆಗುತ್ತಾ ಇದ್ದೇನೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಹೇಳಿದಾಗ ಕಂಠಿಗೆ ಬೇಸರ ಆಗುತ್ತದೆ ಪುನಃ ಸ್ನೇಹಾ ಹೇಳುತ್ತಾಳೆ.

zee-kannada-serial-puttakkana-makkalu

ಕಂಠಿಯನ್ನು ಕ್ಷಮಿಸದ ಸ್ನೇಹಾ!

ನೀವು, ನಾವು ಪ್ರೇಮಿಸುತ್ತ ಇರುವಾಗ ಬಹಳಷ್ಟು ಸುಳ್ಳು ಹೇಳಿದಿರಿ. ಆದರೆ ಇನ್ನೂ ಮೇಲೆ ಅಂಥಹ ಸುಳ್ಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದುಕೊಂಡು ಇದ್ದೇನೆ ಎಂದಾಗ ಕಂಠಿ ಹೇಳುತ್ತಾನೆ. ಮಿಸ್ಸು ಖಂಡಿತವಾಗಿಯೂ ನಾನು ಸುಳ್ಳು ಹೇಳುತ್ತ ಇಲ್ಲ, ಮುಂದೆಯೂ ಹೇಳುವುದು ಇಲ್ಲ ದಯಮಾಡಿ ನನ್ನನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಾನೆ. ಅವರಿಬ್ಬರೂ ಎಲ್ಲರ ಮುಂದೆ ಹೋಗುತ್ತಾರೆ. ಪುರೋಹಿತರು ತಾಳಿ ಶಾಸ್ತ್ರ ಮಾಡುತ್ತಾರೆ. ಬಂಗಾರಮ್ಮಗೆ ಸ್ವಲ್ಪವೂ ಇಷ್ಟ ಇರುವುದು ಇಲ್ಲ.

ಬಂಗಾರಮ್ಮಗೆ ಇಷ್ಟ ಇಲ್ಲದ ಮದುವೆ

ಯಾಕೆಂದರೆ ಆಕೆಗೆ ಸ್ನೇಹಾ ಅಂದರೆ ಸ್ವಲ್ಪ ಕೂಡ ಇಷ್ಟ ಇಲ್ಲ. ಇನ್ನೂ ಮಗ ಹಾಗೂ ಸೊಸೆ ಮೇಲೆ ಅಕ್ಷತೆ ಹಾಕುವ ವೇಳೆ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ ಬಂಗಾರಮ್ಮ. ಕಂಠಿ ಸ್ನೇಹಾ ತಾಳಿ ಹಾಕಿ ಬಿಡುತ್ತಾನೆ. ಇದನ್ನು ನೋಡಿದ ಪುಟ್ಟಕ್ಕಗೆ ಬಹಳ ಖುಷಿ ಆಗುತ್ತದೆ. ಇನ್ನೂ ಬಂಗಾರಮ್ಮನ ತಾಯಿಗೆ ಮಾತ್ರ ಬಹಳ ಸಂತಸ ವ್ಯಕ್ತವಾಗುತ್ತದೆ.

More from Filmibeat

English summary
Kannada serial Puttakkana Makkalu written updated on 19th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X