Puttakkana Makkalu: ತಾಂಡವನನ್ನು ಕಿಡ್ನಾಪ್ ಮಾಡಿದ ಕಂಠಿ, ಪುಟ್ಟಕ್ಕನ ಮೆಸ್‌ಗೆ ಬೆಂಕಿ ಹಚ್ಚಿದ್ದು ಕಾಳಿ ಎಂದು ತಿಳಿಯುತ್ತಾ?
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ದುಃಖದಲ್ಲಿ ಇರುವ ಬಂಗಾರಮ್ಮನ ಮುಖ ನೋಡುತ್ತಾ ಇರುತ್ತಾನೆ. ಬಂಗಾರಮ್ಮಗೆ ಮರು ಮದುವೆ ಮಾಡುವುದು ಚೂರು ಇಷ್ಟ ಇರೋದಿಲ್ಲ. ಪುಟ್ಟಕ್ಕ ಹಾಗೂ ಅಮ್ಮನಿಗೆ ಯಾವುದೇ ನೋವು ಆಗಬಾರದು ಅವರು ಎನು ಹೇಳುತ್ತಾರೋ ಅದೇ ನಡೆಯಲಿ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇರುತ್ತಾಳೆ.
ಇನ್ನೂ ಪುಟ್ಟಕ್ಕನ ಮೆಸ್‌ಗೆ ಬೆಂಕಿ ಹತ್ತಿಕೊಂಡ ವಿಚಾರವಾಗಿ ಬಂಗಾರಮ್ಮ ಸಾಕಷ್ಟು ನೋವು ತಿಂದು ಇರುತ್ತಾಳೆ. ತಾನು ಮಾಡದ ತಪ್ಪಿಗೆ ಸ್ಟೇಶನ್ ಮೆಟ್ಟಿಲು ಹತ್ತಿದೆನಲ್ಲ ಎಂದು ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಅದಕ್ಕಿಂತ ದೊಡ್ಡದಾಗಿ ನನ್ನ ಮಗನಿಗೆ ನಾನು ಬೇಡವಾಗಿ ಬಿಟ್ಟೆನಲ್ಲ. ಆತನಿಗೆ ಆತನ ಹೆಂಡತಿಯೇ ಬಹು ದೊಡ್ಡ ಪ್ರಾಮುಖ್ಯ ಆಗಿ ಹೋಯಿತು ನಾನು ಆತನಿಗೆ ಈಗ ಬೇಡ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.

ತಾಳಿ ಶಾಸ್ತ್ರ ಮಾಡಿ ಆಯಿತು. ಆದ ನಂತರ ಕಂಠಿ ಮೆತ್ತಗೆ ಮನೆಯಿಂದ ಹೊರಗೆ ಬರುತ್ತಾನೆ. ಕಂಠಿ ತಾಂಡವನನ್ನು ಮನೆಯ ಹಿತ್ತಲ ಬಳಿ ಕೂಡಿ ಹಾಕಿ ಇರುವ ವಿಚಾರ ಆತನ ಅಜ್ಜಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿಲ್ಲ. ಕಂಠಿಗೆ ಕೊಡಲು ಅನುಮಾನ ಬಂದಿರುವುದು ತಾಂಡವನ ಮೇಲೆ. ಯಾಕೆಂದರೆ ಬಂಗಾರಮ್ಮನ ವರ್ಚಸ್ಸನ್ನು ಹೇಗಾದರೂ ಮಾಡಿ ಕುಂದಿಸಬೇಕು ಎಂದು ಯೋಚನೆ ಮಾಡಿದ್ದೆ ತಾಂಡವ ಹಾಗೂ ನಂಜಮ್ಮ.
ತಾಂಡವನ ಮೇಲೆ ಕಂಠಿ ಅನುಮಾನ
ಇನ್ನೂ ಆ ಕಾರಣದಿಂದ ಆಗಿ ತಾಂಡವನ ಮೇಲೆ ಕಂಠಿಗೆ ಅನುಮಾನ. ತಾಂಡವನ ಬಳಿ ನಿಜ ಎನು ಎಂದು ಎಷ್ಟೇ ಬಾಯಿ ಬಿಡಿಸಲು ಹೊರಟ್ಟಿದ್ದಾರೆ. ಆತ ಮಾತ್ರ ಎನು ಹೇಳುವುದು ಇಲ್ಲ ಅಷ್ಟೊತ್ತಿಗೆ ತಾಂಡವನ ಮೊಬೈಲ್‌ಗೆ ಕಾಳಿ ಕರೆ ಮಾಡುತ್ತಾನೆ ಅದು ಪೊಲೀಸ್ ಸ್ಟೇಶನ್ ನಿಂದಾ. ಕಂಠಿಗೆ ಈಗಾಗಲೇ ಕಾಳಿ ಮೇಲೆ ಅನುಮಾನ ಆಗುತ್ತಿರುವುದು ಮಾತ್ರ ಸತ್ಯ. ಯಾಕೆಂದರೆ ತಾಂಡವನಿಗೆ ಕರೆ ಮಾಡಿ ಎನು ಮಾತನಾಡುತ್ತಾನೆ ಎಂಬುವುದನ್ನು ಕೇಳಿಸಿಕೊಳ್ಳಲು ತಯಾರಾಗಿ ಇರುತ್ತಾನೆ.

ಪುಟ್ಟಕ್ಕನನ್ನೂ ಹಾಡಿ ಹೊಗಳಿದ ಬಂಗಾರಮ್ಮನ ತಾಯಿ
ಇನ್ನೂ ಪುಟ್ಟಕ್ಕನನ್ನೂ ಕಂಠಿ ಅಜ್ಜಿ ಬಹಳ ಹೊಗಳುತ್ತಾರೆ. ಯಾಕೆಂದರೆ ಮೂರು ಹೆಣ್ಣು ಮಕ್ಕಳನ್ನು ಒಬ್ಬೊಂಟಿಯಾಗಿ ನೋಡಿಕೊಂಡು ಇದ್ದೀರಲ್ಲ ಎಂದು ಬಹಳ ಮೆತ್ತಗೆ ಹೇಳುತ್ತಾರೆ. ಯಾಕೆಂದರೆ ಅಷ್ಟರ ಮಟ್ಟಿಗೆ ಕಷ್ಟ ಇರುತ್ತದೆ. ಇದೀಗ ಇಬ್ಬರು ಮಕ್ಕಳಿಗೆ ಮದುವೆ ಮಾಡಿದ್ದೀಯಾ ಇನ್ನೊಬ್ಬಳಿಗೆ ಮದುವೆ ಆಗುತ್ತದೆ ಎಂದು ಹೇಳಿದಾಗ ಸುಮಾ ಮಾತ್ರ ಅಮ್ಮನ ಬಿಟ್ಟು ಹೋಗುವುದು ಇಲ್ಲ ಎಂದು ಹಠ ಹಿಡಿಯುತ್ತಾಳೆ.
ಮುಂದಿನ ಶಾಸ್ತ್ರದ ಬಗ್ಗೆ ಪುಟ್ಟಕ್ಕ ಚರ್ಚೆ
ಇನ್ನೂ ಕಂಠಿ ಹಾಗೂ ಸ್ನೇಹಾ ಮೊದಲ ಶಾಸ್ತ್ರ ಬಗ್ಗೆ ಬಂಗಾರಮ್ಮನ ತಾಯಿ ಹಾಗೂ ಪುಟ್ಟಕ್ಕ ಮಾತನಾಡುತ್ತಾರೆ. ಆದರೆ ಇದೆಲ್ಲ ಬಂಗಾರಮ್ಮಗೆ ಕೊಂಚ ಕಿರಿ ಕಿರಿ ಆದರೂ ಪುಟ್ಟಕ್ಕನೀಗಾಗಿ ಮೆತ್ತಗೆ ಆಗುತ್ತಾಳೆ. ಯಾಕೆಂದರೆ ಪುಟ್ಟಕ್ಕ ಎಂದರೆ ಬಂಗಾರಮ್ಮಗೆ ಅತಿಯಾದ ಪ್ರೀತಿ. ಇನ್ನೂ ಇದಕ್ಕೆಲ್ಲ ಸ್ನೇಹಾ ಒಪ್ಪುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











