Puttakkana Makkalu: ಸುಮಾ ಕಾಲೇಜು ಫೀಸ್ ಕಟ್ಟಿದ್ದು ಬಂಗಾರಮ್ಮ ಎಂದು ಸ್ನೇಹಾಗೆ ಗೊತ್ತಾಯ್ತು!

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಹಳ ಕುತೂಹಲಕರವಾಗಿ ನೋಡುಗರ ಮನದಲ್ಲಿ ಆಸಕ್ತಿಯನ್ನು ತುಂಬುತ್ತಿದೆ. ಇದೀಗ ಪುಟ್ಟಕ್ಕನಿಗೆ ರಾಜಿಯ ಕಾಟ. ಗೋಪಾಲನ ಕೈಯಿಂದಲೇ ಪುಟ್ಟಕ್ಕನ ತಾಳಿಯನ್ನ ತೆಗೆದು ಹಾಕಲೇಬೇಕೆಂದು ಹಠ ಮಾಡುತ್ತಾಳೆ.

ಆದರೆ ಗೋಪಾಲ ಮಾತ್ರ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ರಾಜಿಗೆ ಒಂದು ಬಾರಿ ಹೇಳಿದ ಮಾತು ಅಷ್ಟಾಗಿ ನೆನಪಿಗೆ ಬರುವುದಿಲ್ಲ ಆದ ಕಾರಣ ರಾಜ್ಯ ಹೇಳಿದ ಮಾತಿಗೆ ಆಯಿತು ಎಂದು ತಲೆ ಅಲ್ಲಾಡಿಸುತ್ತಾನೆ. ಬಳಿಕ ಏನು ಮಾತನಾಡದೆ ಸುಮ್ಮನಾಗುತ್ತಾನೆ. ರಾಜಿ ಪುಟ್ಟಕ್ಕನಿಗೆ ಯಾವುದು ಒಂದು ಆಶ್ರಮಕ್ಕೆ ಹೋಗಲು ಹೇಳುತ್ತಾಳೆ.

Zee Kannada serial Puttakkana Makkalu written updated on 27th October

ಆದರೆ ಪುಟ್ಟಕ್ಕ ಮಾತ್ರ ಇದ್ಯಾವುದಕ್ಕೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ರಾಜಿಯ ಕಾಟಕ್ಕೆ ಪುಟ್ಟಕ್ಕನಿಗೆ ತಲೆಕೆಟ್ಟು ಹೋಗುತ್ತದೆ. ಇತ್ತ ಬಂಗಾರಮ್ಮನ ಮನೆಯಲ್ಲಿ ಬಹುದೊಡ್ಡ ಹೈಡ್ರಾಮವೇ ನಡೆಯುತ್ತಿದೆ. ಹೌದು ಇದೀಗ ವಸುವನ್ನು ಮನೆಗೆ ಕರೆದುಕೊಂಡು ಹೋಗಲು ಚಂದ್ರು ಬರುತ್ತಾನೆ. ಆದರೆ ಕೆಲವೊಂದು ವಿಚಾರವನ್ನು ಬಂಗಾರಮ್ಮ ತಾನೇ ಏನೋ ಅಂದುಕೊಂಡು ಅಳಿಯನಿಗೆ ಅವಮಾನ ಮಾಡುತ್ತಾಳೆ.

ಬಂಗಾರಮ್ಮನವರ ಮಾತಿಗೆ ನೊಂದ ಚಂದ್ರು

ನಂಜಮ್ಮನಿಗೆ ಬೇಲ್ ಕೊಟ್ಟಿದ್ದು ನೀವೇ ಎಂದು ಜೋರಾಗಿ ಹೇಳುತ್ತಾಳೆ. ನನ್ನ ಮಗಳನ್ನು ನೀವು ಚೆನ್ನಾಗಿ ನೋಡಿಕೊಳ್ಳುತ್ತೀರೋ ಇಲ್ಲವೋ ಎಂಬುದು ನನಗೆ ಬಹಳ ಅನುಮಾನವಾಗುತ್ತಿದೆ ಆದ ಕಾರಣ ವಸು ಇಲ್ಲೇ ಇರಲಿ ಎಂದು ಹೇಳುತ್ತಾಳೆ. ಆದರೆ ಚಂದ್ರು ವಸುವಿನೊಂದಿಗೆ ಬದುಕಲೇಬೇಕು ಎಂದು ಮನೆ ಬಿಟ್ಟು ಬಂದಿರುತ್ತಾನೆ. ಆದರೆ ಬಂಗಾರಮ್ಮ ಇದ್ಯಾವುದಕ್ಕೂ ಒಪ್ಪಿಗೆ ಸೂಚಿಸುವ ಯೋಚನೆಯಲ್ಲೇ ಇಲ್ಲ ಸ್ನೇಹಾ ಮೇಲೆ ಬಂಗಾರಮ್ಮ ಬಹಳ ಕಿರಿಕಾರುತ್ತಿರುತ್ತಾರೆ.

ಸ್ನೇಹ ಮಾತಿಗೆ ಕಿಡಿಕಾರಿದ ಬಂಗಾರಮ್ಮ

ಸ್ನೇಹಾ ನಂಜಮ್ಮನ ಪಾರ್ಟಿಯವಳು ಅವಳು ಮಾಡುವೆ ಎಲ್ಲ ಕೆಲಸಕ್ಕೆ ನಂಜಮ್ಮನ ಸಪೋರ್ಟ್ ಇದ್ದೇ ಇರುತ್ತದೆ. ಆದ ಕಾರಣಕ್ಕೆ ಸ್ನೇಹಾ ಮಾತನ್ನು ನಂಬುವುದನ್ನು ಬಿಟ್ಟು ಬಿಡುತ್ತಾಳೆ ಬಂಗಾರಮ್ಮ. ಆದರೆ ಸ್ನೇಹಾ ಮಾತ್ರ ಬಂಗಾರಮ್ಮನ ಮಾತುಗಳನ್ನು ಕೇಳಿ ಯಾಕೆ ಇತರ ಮಾತನಾಡುತ್ತಿದ್ದಾರೆ ಎನ್ನುವಂತಹ ಆಲೋಚನೆ ಮಾಡುತ್ತಾರೆ.

Zee Kannada serial Puttakkana Makkalu written updated on 27th October

ಅಣ್ಣನ ಜೀವನ ಸರಿ ಮಾಡಲು ಹೋದ ಸ್ನೇಹಾಗೆ ಅವಮಾನ

ತನ್ನ ಅಣ್ಣಯ್ಯ ಹಾಗೂ ಅತ್ತಿಗೆಯ ಸಂಸಾರ ಚೆನ್ನಾಗಿ ನಡೆಯಬೇಕು ಎಂದು ಆಸೆ ಪಡುತ್ತಾಳೆ. ಆದರೆ ಇದ್ಯಾವುದು ಬಂಗಾರಮ್ಮನಿಗೆ ಇಷ್ಟ ಆಗುವುದಿಲ್ಲ ಸ್ನೇಹಾಗೆ ಎಲ್ಲರ ಇದು ಅವಮಾನವಾಗುವ ಹಾಗೆ ಮಾತನಾಡುತ್ತಾಳೆ. ಆದರೆ ಸ್ನೇಹಾ ಮಾತ್ರ ಬಂಗಾರಮ್ಮನನ್ನು ಬಹಳ ಕಟುವಾಗಿ ನಿಂದಿಸುತ್ತಾಳೆ ಆ ವೇಳೆ ಚಂದ್ರು, ಬಂಗಾರಮ್ಮ ಅವರು ತುಂಬಾ ಒಳ್ಳೆಯವರು ಅವರ ಬಗ್ಗೆ ಗೊತ್ತಿಲ್ಲದೆ ಯಾವುದೇ ಮಾತುಗಳನ್ನು ಆಡಬಾರದು ಎಂದು ಸ್ನೇಹಾಗೆ ಹೇಳುತ್ತಾನೆ. ಹಾಗೆಯೇ ನಿನ್ನ ತಂಗಿ ಇವತ್ತು ಕಾಲೇಜಿಗೆ ಹೋಗಿ ಓದುತ್ತಾ ಇದ್ದಾಳೆ ಎಂದರೆ ಅದಕ್ಕೆ ಅತ್ತೆ ಅವರೇ ಕಾರಣ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡ ಎಂದು ನಡೆದಿದ್ದಲ್ಲವನ್ನು ಸ್ನೇಹಾಗೆ ವಿವರವಾಗಿ ಹೇಳುತ್ತಾನೆ.

More from Filmibeat

English summary
Puttakkana Makkalu written updated on 27th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X