ಸಹನಾ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಾರಾ ಪುಟ್ಟಕ್ಕ?

By ಪೂರ್ವ

'ಪುಟ್ಟಕ್ಕನ ಮಕ್ಕಳು' ಧಾರವಾಹಿ ಚೆನ್ನಾಗಿ ಮೂಡಿ ಬಂದಿದೆ. ಇದೀಗ ಪುಟ್ಟಕ್ಕನ ಮನೆಯಲ್ಲಿ ಮದುವೆ ಕಳೆ ಎದ್ದು ಕಾಣಿಸುತ್ತಿದೆ. ಆದರೆ ಮದುಮಗಳು ಮಾತ್ರ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಆದರೆ ಇದಾವುದೂ ಪುಟ್ಟಕ್ಕಗೆ ತಿಳಿದಿಲ್ಲ. ತಾನು ಏನು ಮಾಡಿದರೂ ಅದು ತನ್ನ ಮಕ್ಕಳಿಗೋಸ್ಕರ ಎನ್ನುವ ಮನಸ್ಥಿತಿ ಆಕೆಯದ್ದು. ಇದರ ನಡುವೆ ಬಂಗಾರಮ್ಮನ ಮಗಳು ವಸು ಮನೆಬಿಟ್ಟು ಬಂದು ತೋಟದ ಮನೆಯಲ್ಲಿ ಇದ್ದಾಳೆ.

ಬಂಗಾರಮ್ಮ ಮನೆಯಲ್ಲಿ ಗಂಡನಿಗೆ ಊಟ ತಿನ್ನಿಸುವ ವೇಳೆ ಕೆಲಸದಾಕೆ ಹೇಳುತ್ತಾಳೆ ವಸು ಅಕ್ಕ ಕಂಠಿ ಅಣ್ಣನ ಜೊತೆ ಇಲ್ಲ ಅನ್ಸುತ್ತೆ ಎಂದಾಗ ಭಯಗೊಂಡ ಬಂಗಾರಮ್ಮ ಕಂಠಿಗೆ ಕರೆ ಮಾಡಿ ವಸು ಇದ್ದಾಳೆನಪ್ಪ ಅಲ್ಲಿ ಎಂದಾಗ ಹು ಅಮ್ಮಾ ಜೊತೆಯಲ್ಲೇ ಇದ್ದಾಳೆ. ಕರೆದುಕೊಂಡು ಬರುತ್ತೇನೆ ಎಂದಾಗ ಸ್ವಲ್ಪ ಸಮಾಧಾನ ಮಾಡಿಕೊಂಡ ಬಂಗಾರಮ್ಮ ಏನೇ ನೀನು ಹೆದರಿಸಿ ಬಿಟ್ಟಿದ್ದಿಯಾ ನನ್ನ ಜೊತೆಗೆ ಇದ್ದಾರಂತೆ ಇಬ್ಬರು ಎಂದಾಗ ಕೆಲಸದಾಕೆ ಗೆ ಸಮಾಧಾನವಾಗುತ್ತದೆ.

ಇತ್ತ ಬಂಗಾರಮ್ಮ ನ ಗಂಡ ಹೇಳುತ್ತಾರೆ ವಸು ತುಂಬಾ ಬೇಸರದಲ್ಲಿ ಇದ್ದಾಳೆ. ನೀನೊಮ್ಮೆ ನಂಜಮ್ಮನ ಬಳಿ ಯಾಕೆ ಮಾತನಾಡಬಾರದು ಎನ್ನುತ್ತಾನೆ. ಅದಕ್ಕೆ ಬಂಗಾರಮ್ಮ ಆಕೆಯ ಜೊತೆ ಮಾತನಾಡುವುದೂ ಒಂದೇ ನಾಲಗೆಯನ್ನು ಕೆಂಡಕ್ಕೆ ಉಜ್ಜಿಕೊಳ್ಳುವುದು ಒಂದೇ. ಅವಳ ಗಂಡ ಅಮ್ಮ ಹೇಳಿದ ಒಂದು ಮಾತನ್ನು ದಾಟುವುದಿಲ್ಲ. ಇನ್ನೂ ವಸುನ ಹೇಗೆ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಭಯ ಶುರುವಾಗಿದೆ ಎನ್ನುತ್ತಾಳೆ.

ಕೋಪದಲ್ಲಿರುವ ವಸು

ಕೋಪದಲ್ಲಿರುವ ವಸು

ಇನ್ನೂ ವಸು ಮತ್ತು ಸ್ನೇಹಾ, ಕಂಠಿ ಮತ್ತು ಗೆಳೆಯರು ಗದ್ದೆಯ ಬಳಿಯ ಮನೆಯಲ್ಲಿ ಇರುತ್ತಾರೆ. ಸ್ನೇಹಾ ವಸುಗೆ ಸಮಾಧಾನ ಹೇಳುತ್ತಿರುತ್ತಾರೆ. ಅಣ್ಣಯ್ಯ ನಿಮ್ಮನ್ನು ತುಂಬಾ ಪ್ರೀತಿ ಮಾಡುತ್ತಾರೆ. ಆದರೆ ಅತ್ತೆ ಒಂದೊಂದು ಸಲ ಒಂದೊಂದು ರೀತಿ ಆಡುತ್ತಾರೆ ಎಂದು ಸಮಾಧಾನ ಹೇಳುತ್ತಿರುತ್ತಾರೆ. ಬಳಿಕ ಸ್ನೇಹಾ ಹೇಳುತ್ತಾಳೆ ಅತ್ತಿಗೆ ಸಮಯ ಮಿರುತ್ತಾ ಬಂತು ಮನೆಗೆ ಹೋಗಿ ಅತ್ತೆ ಎಂದು ಹೇಳುತ್ತಾಳೆ. ಬನ್ನಿ ನಾನೇ ಡ್ರಾಪ್ ಮಾಡುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಸ್ನೇಹಾ ವಸು ಹೊರಡುತ್ತಾರೆ. ಕಂಠಿನು ಅವರ ಗೆಳೆಯರಿಗೆ ಹೇಳುತ್ತಾನೆ ಹೊತ್ತಾಯಿತು ಕಣ್ರೋ ನೀವು ಮನೆಗೆ ಹೋಗಿ ಎಂದು ಹೇಳಿ ಸ್ನೇಹಾ ವಸು ಹಿಂದೆ ಹೋಗುತ್ತಾನೆ.

ಕಂಠಿ ಖುಷಿ ಪಡುತ್ತಾನೆ

ಕಂಠಿ ಖುಷಿ ಪಡುತ್ತಾನೆ

ಸ್ನೇಹಾ, ವಸುವನ್ನು ಮನೆಯ ಗೇಟ್ ವರೆಗೆ ಕರೆದುಕೊಂಡು ಬಿಡುತ್ತಾಳೆ ಬಳಿಕ ಅಲ್ಲಿಂದ ಸ್ನೇಹಾ ಹೋಗುತ್ತಾಳೆ. ವಸು ಅಲ್ಲಿಂದ ಹೊರಡಬೇಕು ಎನ್ನುವಷ್ಟ್ರಲ್ಲಿ ಕಂಠಿ ಬರುತ್ತಾನೆ. ಅವನನ್ನು ನೋಡಿದ ವಸು ಬಾ ಎಂದು ಕರೆಯುತ್ತಾಳೆ. ಇದಕ್ಕೆ ಕಂಠಿ ಬಹಳ ಖುಷಿಪಡುತ್ತಾನೆ. ತಂಗಿ ಎಷ್ಟೇ ಕೋಪ ಮಾಡಿದ್ದರು ಸಿಚುವೇಶನ್ ನ ಅರ್ಥ ಮಾಡಿಕೊಳ್ಳುತ್ತಾಳೆ ಎಂದುಕೊಂಡು ವಸುನ ಹಿಂದೆ ಕಂಠಿ ಹೋಗುತ್ತಾನೆ.

ಸಹನಾಗೆ ಮದುವೆ ಇಷ್ಟವಿಲ್ಲದಿರುವುದನ್ನು ಅಮ್ಮನಿಗೆ ಹೇಳುತ್ತಾಳ ಸುಮಾ

ಸಹನಾಗೆ ಮದುವೆ ಇಷ್ಟವಿಲ್ಲದಿರುವುದನ್ನು ಅಮ್ಮನಿಗೆ ಹೇಳುತ್ತಾಳ ಸುಮಾ

ಇನ್ನೂ ಸಹನಾ ಮತ್ತು ಸುಮಾ ಮಾತನಾಡಿಕೊಂಡು ಇರುತ್ತಾರೆ. ಅಕ್ಕ ನಿನಗೆ ಈ ಮದುವೆ ನಿಜವಾಗಲೂ ಇಷ್ಟ ಇದೆಯಾ ಅಥವಾ ಬಲವಂತಕ್ಕೆ ಒಪ್ಪಿಕೊಳ್ಳುತಿದ್ದಿಯಾ ಎಂದಾಗ ಛೇ ಛೇ ಹಾಗೇನಿಲ್ಲ ಕಣೆ ಎಂದು ಸಹನಾ ಹೇಳುತ್ತಾಳೆ. ಆದರೆ ಸುಮಾ, ಸಹನಾ ಕೈ ಯನ್ನು ಸುಮಾಳ ತಲೆ ಮೇಲೆ ಇರಿಸಿ ನಿಜ ಹೇಳಕ್ಕ ಎಂದಾಗ ಸಹನಾ ಅಳುತ್ತಾಳೆ. ಈ ಮದುವೆ ಇಷ್ಟ ಇಲ್ಲ. ಮುರಳಿ ಮೇಷ್ಟ್ರನ್ನ ಪ್ರೀತಿ ಮಾಡುತ್ತಿದ್ದೇನೆ ಎಂದಾಗ ಸುಮಾ ಹೇಳುತ್ತಾಳೆ ಯಾಕಕ್ಕ ಇದನ್ನು ಅವರ ಬಳಿ ಹೇಳಿಲ್ಲ, ಈ ಬಗ್ಗೆ ಅಮ್ಮನ ಬಳಿ ಒಂದು ಸಾರಿ ಮಾತನಾಡಬೇಕಿತ್ತು ಎಂದಾಗ. ಅಮ್ಮನಿಗೋಸ್ಕರನೆ ಈ ಸಂಬಂಧ ಒಪ್ಪಿದ್ದು ಇನ್ನೂ ಹೇಗೆ ಅವಳಿಗೆ ಮೋಸ ಮಾಡಲಿ ಎಂದು ಹೇಳಿ ಹೋಗುತ್ತಾಳೆ.

ಪುಟ್ಟಕ್ಕನಿಗೆ ಸಹನಾ ಮೇಲೆ ಅನುಮಾನ

ಪುಟ್ಟಕ್ಕನಿಗೆ ಸಹನಾ ಮೇಲೆ ಅನುಮಾನ

ಇತ್ತ ಮುರಳಿ ಮೇಷ್ಟರಿಗೆ ನಿದ್ದೆಯೇ ಬರುತ್ತಿಲ್ಲ. ಸಹನಾಗೆ ಗಂಡು ನೋಡಲು ಬರುತ್ತಿದ್ದಾರೆ ಎಂದಾಗಲಂತೂ ತಲೆ ಕೆಟ್ಟು ಹೋಗಿದೆ ಎಂದು ಮನದಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. ಲೈಫಲ್ಲಿ ಪಸ್ಟ್ ಟೈಮ್ ಲವ್ ಆಗಿದೆ ಅದನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ಬೇಸರ ಪತ್ತುಕೊಳ್ಳುತ್ತಿರುತ್ತಾರೆ. ಇನ್ನು ಪುಟ್ಟಕ್ಕ ಹಾಗೂ ಮಕ್ಕಳು ಮಾತನಾಡುತ್ತಾ, ಸುಮಾ ಕೇಳುತ್ತಾಳೆ 'ಏನವ್ವ ಇದೆಲ್ಲ ಹೂ ಕಟ್ಟುತ್ತಿದ್ದಿಯಾ ಎಂದಾಗ ಪುಟ್ಟಕ್ಕ ಹೇಳುತ್ತಾಳೆ ಮದುವೆ ಸಂಭ್ರಮ ಅಲ್ವಾ ಅದಕ್ಕೆ ಅಂದ ಹಾಗೆ ನಾಳೆ ಗಂಡಿನ ಕಡೆಯವರು ಬರುವಾಗ ನೀನು ಇರಲ್ವಾ ಎಂದಾಗ ಸುಮಾ ಹೇಳುತ್ತಾಳೆ ನಾನು ಇರಲ್ಲ ಅಕ್ಕ ಬೇಸರ ಪಟ್ಟುಕೊಳ್ಳುವುದನ್ನು ನೋಡಲು ಅಂದಾಗ ಪುಟ್ಟಕ್ಕಾನಿಗೆ ಅರ್ಥವಾಗದೆ ಮಗಳ ಮುಖ ನೋಡುತ್ತಾರೆ. ಬಳಿಕ ಸ್ನೇಹಾ ಕೇಳುತ್ತಾಳೆ ಅಕ್ಕ ಯಾಕೆ ಮುಖ ಸಪ್ಪಗೆ ಆಗಿದೆ ಎಂದಾಗ ಎಲ್ಲಿ ಸ್ನೇಹಾ ಹಾಗೇನೂ ಇಲ್ಲ ಎಂದು ಹೇಳುತ್ತಾಳೆ. ಅದಕ್ಕೆ ಸುಮಾ ನಿಜ ಹೇಳ್ತೀಯ ಅಕ್ಕ ನಾನು ಹೇಳಲೋ ಎಂದು ಸುಮಾ ಹೇಳುತ್ತಾಳೆ. ಬಳಿಕ ಸುಮಾ ಹೇಳುತ್ತಾಳೆ ಅಕ್ಕನಿಗೆ ಈ ಮದುವೆ ಸತ್ಯವಾಗಿಯೂ ಇಷ್ಟವಿಲ್ಲ. ಎಂದಾಗ ಎಲ್ಲರಿಗೂ ಶಾಕ್ ಆಗುತ್ತದೆ ಬಳಿಕ ಪುಟ್ಟಕ್ಕ ಸಹನಾಳ ಮುಖ ನೋಡುತ್ತಾಳೆ. ಅವ್ವ ಅದು ಸ್ನೇಹಾ ಗೆ ಕೂಡ ಮದುವೆ ವಯಸ್ಸು ಆಯ್ತಲ್ಲ ಅವಳದ್ದು ಮದುವೆ ಆದ ಬಳಿಕ ನಾನು ಮದುವೆ ಆಗುವುದು ಎಂದು ಕೊಂಡಿದ್ದೆ ಎಂದು ಮೆತ್ತಗೆ ಹೇಳುತ್ತಾಳೆ. ಅದಕ್ಕೆ ಸ್ನೇಹಾ, ಅಕ್ಕ ಅದಕ್ಕೆಲ್ಲ ನೀನು ತಲೆಕೆಡಿಸಿಕೊಳ್ಳಬೇಡ ಎಂದು ಹೇಳಿ ಅಲ್ಲಿಂದ ಅಕ್ಕನನ್ನು ಕರೆದುಕೊಡು ಹೋಗುತ್ತಾಳೆ. ಇತ್ತ ಪುಟ್ಟಕ್ಕ ಗೆ ಸಹನಾ ಮೇಲೆ ಅನುಮಾನ ಶುರುವಾಗಿದೆ.

English summary
Zee Kannada serial Puttakkana Makkalu written updates on 30th June. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X