ರಾಧಾ ಕಲ್ಯಾಣದ 'ವಿಶು' ಚಂದನ್ ಮನದಾಳದ ಮಾತು
Next »
« Previous
Chandan
ಕಲಾವಿದನೊಬ್ಬನಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎನಿಸಿ ಹೃದಯ ತುಂಬಿಬಂತು. ಎಲ್ಲೇ ಹೋದರೂ ಜನರು 'ರಾಧಾ ಕಲ್ಯಾಣ'ದ ಕೃಷ್ಣನ ಪಾತ್ರ ಹಾಗೂ ರಿಯಾಲಿಟಿ ಶೋ ಮೂಲಕ ನನ್ನನ್ನು ಮನೆಮಗನಂತೆ ಮಾತನಾಡಿಸುತ್ತಾರೆ. ಈ ಜನಪ್ರಿಯತೆ ನಾನೇ ಹೇಳಿಕೊಳ್ಳಬಾರದ ಆದರೆ ಹೇಳಿಕೊಳ್ಳಲೇಬೇಕಾದ ಸಂಗತಿ. ಏಕೆಂದರೆ ಅಷ್ಟೊಂದು ಪ್ರೀತಿ ತೋರಿಸುವ ಅಭಿಮಾನಿಗಳ ಆ ಮನತುಂಬಿದ ಆಶೀರ್ವಾದ, ಅಭಿಮಾನದ ಬಗ್ಗೆ ಹೇಳಿಕೊಳ್ಳದಿರುವುದಾದರೂ ಹೇಗೆ?...
*ಮರೆಯಲಾಗದ ಘಟನೆ...?
ನನ್ನ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಯೂ ನನಗೆ ಮರೆಯಲಾಗದ್ದು. ಅದರಲ್ಲೂ ನನ್ನಿಷ್ಟದ ಈ ನಟನೆಯ ಬದುಕಿನ ಪ್ರತಿಯೊಂದು ಘಟನೆಯನ್ನೂ ನಾನು ಎಂದೂ ಮರೆಯುವ ಹಾಗಿಲ್ಲ. ನನ್ನೊಳಗಿನ ಕಲಾವಿದನ ಪ್ರತಿಭೆಯ ಬಲವೋ, ಇಲ್ಲಾ ಅದೃಷ್ಟವೋ..., ನನಗೆ ಹೇಳಿಕೊಳ್ಳುವಂತಹ ಕೆಟ್ಟ ಅನುಭವವಂತೂ ಆಗಿಲ್ಲ.
ಆದರೆ ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರಿಯುವುದು ಹಾಗೂ ಮಾತನಾಡಿಸುವುದು ಇವನ್ನೆಲ್ಲಾ ಮರೆಯಲಾಗುವುದಿಲ್ಲ. ಅದರಲ್ಲೂ ಒಬ್ಬರು ಕಾಲೇಜ್ ಹುಡುಗರಿಗೆ ಮೊಬೈಲ್ ನಂಬರ್ ಸಿಕ್ಕಿಬಿಟ್ಟರೆ ಇಡೀ ಕಾಲೇಜ್ ಹುಡುಗ-ಹುಡುಗಿಯು ಕಾಲ್ ಮಾಡಿ ಮಾತನಾಡಲು ತೊಡಗುವುದರಿಂದ ಈಗಾಗಲೇ ನಾಲ್ಕೈದು ನಂಬರ್ ಬದಲಾಯಿಸಬೇಕಾಗಿ ಬಂದಿದೆ. ಅದಕ್ಕಾಗಿ ಬೇಸರವೇನೂ ಇಲ್ಲ. ಆದರೆ ಜನಪ್ರಿಯತೆ ನಿಭಾಯಿಸುವುದು ಕಷ್ಟ ಎಂಬ ಅರಿವಾಗಿದೆ.
*ಸಿನಿಮಾ ಆಫರ್ ಬಂದಿದ್ದು ಹೇಗೆ?
ನಾನು ಕಾಲೇಜ್ ಓದುತ್ತಿದ್ದಾಗಿನಿಂದಲೂ ಆಫರ್ ಗಳು ಬರುತ್ತಿದ್ದವು. ಆದರೆ ಆಗ ವಿದ್ಯಾಭ್ಯಾಸದ ಕಡೆ ಗಮನ ನೀಡುವುದು ನನ್ನ ಹಾಗೂ ಮನೆಯವರ ಆದ್ಯತೆಯಾಗಿತ್ತು. ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿಕೊಂಡ ಮೇಲೆ ಕೂಡ ಸಾಕಷ್ಟು ಆಫರ್ ಗಳು ಬಂದಿದ್ದವು. ಆದರೆ ಮನೆಯವರ ಸಲಹೆಯಂತೆ ಅವನ್ನೆಲ್ಲ ಬಿಟ್ಟಿದ್ದೆ. ನಂತರ 'ಪ್ಯಾಟೆ ಮಂದಿ ಕಾಡಿಗೆ ಹೋದ್ರು' ರಿಯಾಲಿಟಿ ಶೋ ಮುಗಿದಾಗಿನಿಂದಲೂ ನನಗೆ ಸಿನಿಮಾ ಆಫರ್ ಗಳು ಬರುತ್ತಲೇ ಇವೆ.
ಆದರೆ ನನಗೆ ಆಫರ್ ಮಾಡಲಾದ ಪಾತ್ರಗಳು ನನಗೆ ಇಷ್ಟವಾಗಲಿಲ್ಲ. ಹೀಗಾಗಿ ನಯವಾಗಿ ತಿರಸ್ಕರಿಸಿ ಕೆಲವೇ ಅವಕಾಶಗಳನ್ನು ನನ್ನದಾಗಿಸಿಕೊಂಡೆ. 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಲುಪ್ರಾರಂಭಿಸಿದ ಮೇಲಂತೂ ಬಹಳಷ್ಟು ಅಚಕಾಶಗಳು ಬಂದವು. ಆದರೆ ನಾನು ಈ ಮೊದಲು ಹೇಳಿದಂತೆ ಬಹಳಷ್ಟು ಆಫರ್ ಗಳು ಇಷ್ಟವಾಗಲಿಲ್ಲ, ನಟಿಸಲಿಲ್ಲ. ಮುಂದಿನ ಪುಟ ನೋಡಿ....
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X