Anu Janardhan : 'ಸತ್ಯ' ಧಾರಾವಾಹಿಯಲ್ಲಿ ಸಿಡಿಮಿಡಿ ಎಂದು ಸಿಡುಕುವ ಕೀರ್ತನಾ ರಿಯಲ್ ಲೈಫ್ ಸಖತ್ ಇಂಟ್ರೆಸ್ಟಿಂಗ್?
'ಸತ್ಯ' ಧಾರಾವಾಹಿಯಲ್ಲಿ ಅನು ಜನಾರ್ಧನ್ ನೋಡಿ ವಾವ್ಹ್ ಎನ್ನದವರಿಲ್ಲ. ಅವರ ಫ್ಯಾಷನ್, ಅವರ ಸ್ಟೈಲ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಸೀರೆ ಕಲೆಕ್ಷನ್‌ನಲ್ಲೂ ಅನು ಜನಾರ್ಧನ್ ಚ್ಯೂಸಿ. ಫ್ಯಾಷನ್ ವಿಚಾರಕ್ಕೆ ಬಂದರೆ ಅವರನ್ನು ಫಾಲೋ ಮಾಡಲೇಬೇಕು ಎನ್ನುವಷ್ಟು ಕ್ಯೂಟ್ ಆಗಿ ಡ್ರೆಸ್, ಮೇಕಪ್ ಮಾಡಿಕೊಳ್ಳುತ್ತಾರೆ.
ಸದ್ಯ 'ಸತ್ಯ' ಧಾರಾವಾಹಿಯಲ್ಲಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಯಾವಾಗಲೂ ಬುಸು ಬುಸು ಅಂತ ಸಿಡುಕುತ್ತಲೇ ಇರುತ್ತಾರೆ. ಬೇರೆಯವರಿಗೆ ತೊಂದರೆ ಕೊಡುತ್ತಾ, ತಾನು ಸುಖವಾಗಿರಬೇಕೆಂದು ಬಯಸುವ ಗುಣವದು. ಅಷ್ಟೇ ಅಲ್ಲ ಕುಟುಂಬಸ್ಥರು ಮಾನವೀಯತೆಗೆ ಬೆಲೆ ಕೊಟ್ಟರೂ, ಕೀರ್ತನಾ ಮಾತ್ರ ಹಣ, ಅಂತಸ್ತಿಗೆ ಮಾತ್ರ ಬೆಲೆ ಕೊಡುತ್ತಾರೆ. ಅಂದ್ಹಾಗೆ ಇದು ಕೇವಲ ಧಾರಾವಾಹಿಗಷ್ಟೆ ಇವರ ರಿಯಲ್ ಲೈಫ್ ಬೇರೆನೇ ಇದೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣುವ ಕೀರ್ತನಾ ಅಲಿಯಾಸ್ ಅನು ಜನಾರ್ಧನ್ ರಿಯಲ್ ಲೈಫ್‌ನಲ್ಲಿ ಇನ್ನು ಹೆಚ್ಚು ಫ್ಯಾಷನ್ ಲೇಡಿ.

ಅನು ಜನಾರ್ಧನ್ ಹಿನ್ನೆಲೆ ಏನು?
ಅನು ಶಾಸ್ತ್ರೀಯವಾಗಿ ನೃತ್ಯ ಕಲಿತಿದ್ದಾರೆ. ಆದರೆ ಆಯ್ಕೆ ಮಾಡಿಕೊಂಡಿದ್ದು ನಟನಾ ಕ್ಷೇತ್ರವನ್ನು. 'ರಂಗನಾಯಕಿ' ಧಾರಾವಾಹಿ ಮೂಲಕ ಅನು ಸೀರಿಯಲ್ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದಾರೆ. ವಿಭಾ ಪಾತ್ರದ ಮೂಲಕ ಈ ಸುಂದರ ಚೆಲುವೆ ಎಲ್ಲರ ಮನೆ ಮಾತಾಗಿದ್ದರು. 'ಬ್ರಹ್ಮಗಂಟು', 'ಅಮ್ನೋರು' ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದರು. ಆದರೆ ನೇಮು ಫೇಮು ತಂದುಕೊಟ್ಟ ಧಾರಾವಾಹಿ ಅಂದರೆ ಈಗ ನಟಿಸುತ್ತಿರುವ 'ಸತ್ಯ'. ಕೀರ್ತನಾ ಪಾತ್ರ ನೆಗೆಟಿವ್ ಶೇಡ್ ಆಗಿದ್ದರು ಕೂಡ ಸಖತ್ ಸ್ಟೈಲಿಶ್ ಆಗಿ ಮೂಡಿ ಬರುತ್ತಿದೆ. ಶಾಸ್ತ್ರೀಯ ನೃತ್ಯಗಾರ್ತಿಯೊಳಗೂ ಒಬ್ಬ ವಿಲನ್ ಇರುವುದು ಮನೆ ಮನೆಗೂ ಪರಿಚಯವಾಗಿದೆ.

ಅನು ಫ್ಯಾಷನ್ ಐಕಾನ್
ಫ್ಯಾಷನ್ ಅನ್ನೋದು ಅವರವರ ದೇಹಕ್ಕೆ ಹೊಂದಿಕೆಯಾಗುವಂತೆ ಇರಬೇಕು. ಯಾವುದೇ ಡ್ರೆಸ್ ಆಗಲಿ, ಇನ್ಯಾವುದೇ ಸ್ಟೈಲ್ ಆಗಲಿ. ಅನು ಈ ವಿಚಾರದಲ್ಲಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಾರೆ. ಧಾರಾವಾಹಿಯಲ್ಲಿ ಹೆಚ್ಚಾಗಿ ಸೀರೆಯನ್ನೇ ಹಾಕುವ ಅನು ಅದರಲ್ಲೂ ವೆರೈಟಿ ವೆರೈಟಿ ಸ್ಟೈಲ್ ಅನ್ನು ನೋಡುತ್ತಾರೆ. ಮೇಕಪ್ ಕೂಡ ಆ ಸೀರೆಯ ಸ್ಟೈಲ್‌ಗೆ ಮ್ಯಾಚ್ ಆಗುವಂತೆಯೆ ಇರುತ್ತದೆ. ಅದೆಷ್ಟೋ ಹುಡುಗಿಯರು ಅನು ಸ್ಟೈಲ್‌ನ ಫಾಲೋ ಮಾಡುತ್ತಾರೆ. ಸೀರೆ ಬಗ್ಗೆ ಆಸಕ್ತಿ ಇರುವವರಿಗೆ, ಮಾಡರ್ನ್ ಡ್ರೆಸ್ ವೇರ್ ಮಾಡಬೇಕೆನ್ನುವವರಿಗೆ ಒಂಥರ ಮಾಡೆಲ್ ಇದ್ದಂಗೆ. ಇತ್ತೀಚಿನ ಫ್ಯಾಷನ್ ಐಕಾನ್ ಕೂಡ ಇವರೇ.

ಅನು ಫ್ಯಾಷನ್ ಗುರು
ಧಾರಾವಾಹಿ ಆಗಲಿ, ಸಿನಿಮಾ ಆಗಲಿ ಕಾಸ್ಟ್ಯೂಮ್ ಡಿಸೈನರ್ ಬೇಕೇ ಬೇಕು. ಅದರಲ್ಲೂ ಧಾರಾವಾಹಿಯಲ್ಲಿ ಸ್ಟೈಲಿಶ್ ಲುಕ್‌ನಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆಯುವವರು ಅನು ಜನಾರ್ಧನ್. ಆನ್ ಸ್ಕ್ರೀನ್ ಮಾತ್ರವಲ್ಲ ಆಫ್ ದಿ ಸ್ಕ್ರೀನ್ ಕೂಡ ಅನು ಜನಾರ್ಧನ್ ಸ್ಟೈಲಿಶ್. ಹೀಗಾಗಿಯೇ ಕೆಲವೊಮ್ಮೆ ಧಾರಾವಾಹಿಯಲ್ಲೂ ಆಗಾಗ ಅಡ್ವೈಸ್ ಮಾಡುತ್ತಾ ಇರುತ್ತಾರೆ. ಕಾಸ್ಟ್ಯೂಮ್ ಬಗ್ಗೆ ಹೇಳುತ್ತಾ ಇರುತ್ತಾರೆ.

ಪ್ರವಾಸ ಅಂದ್ರೆ, ಬಲು ಪ್ರೀತಿ
ಮಾಡ್ರನ್ ಸುಂದರಿ ಅನುಗೆ ಟ್ರಾವೆಲ್ ಮಾಡುವುದು ಅಂದರೆ ಇನ್ನಿಲ್ಲದ ಪ್ರೀತಿ. ಗ್ಯಾಪ್ ಸಿಕ್ಕಿದರೆ ಸಾಕು ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡು ಅಲ್ಲಿ ಇಲ್ಲಿ ಸುತ್ತುವುದಕ್ಕೆ ಹೊರಟು ಬಿಡುತ್ತಾರೆ. ಇತ್ತೀಚೆಗೆ ಅನು ತನ್ನ ಫ್ರೆಂಡ್ಸ್ ಜೊತೆ ಗೋವಾಗೆ ಹೋಗಿ ಬಂದಿದ್ದರು. ಅಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಆ ಮಾಹಿತಿಯನ್ನು ತನ್ನ ಫಾಲೋವರ್ಸ್‌ಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಲ್ಲಿನ ವೆರೈಟಿ ಫುಡ್ ಟೇಸ್ಟ್ ಮಾಡಿ ರುಚಿ ಬಗ್ಗೆ ಹೇಳಿಕೊಂಡಿದ್ದಾರೆ. ಮಸ್ತ್ ಮಜಾ ಮಾಡಿದ್ದಾರೆ. ವಂಡರ್ ಲಾಗೂ ಸ್ನೇಹಿತರ ಜೊತೆಗೂಡಿ ಹೋಗಿ ಮಸ್ತ್ ಮಜಾ ಮಾಡಿದ್ದಾರೆ. ಶೂಟಿಂಗ್ ನಡು ನಡುವೆ ತನ್ನಿಷ್ಟದ ಸ್ಥಳಗಳಿಗೆ ಆಗಾಗ ಭೇಟಿ ನೀಡುತ್ತಲೆ ಇರುತ್ತಾರೆ.

ಹಳದಿ ಬಣ್ಣ ಪ್ರೀತಿ
ಒಬ್ಬೊಬ್ಬರಿಗೆ ಒಂದೊಂದು ಕಲರ್ ಮೇಲೆ ಸಾಮಾನ್ಯವಾಗಿ ಮೋಹವಿರುತ್ತದೆ. ತನ್ನಿಷ್ಟದ ಕಲರ್ ನಲ್ಲಿಯೇ ಹೆಚ್ಚೆಚ್ಚು ಬಟ್ಟೆಗಳನ್ನು ಹುಡುಕುತ್ತಾರೆ. ಇಷ್ಟದ ಕಲರ್ ಬಟ್ಟೆ ಸಿಕ್ಕಿದರೆ ಆಹಾ ಖುಷಿಯೋ ಖುಷಿ. ಅದನ್ನು ಹಾಕಿಕೊಂಡು ಓಡಾಡುವಾಗ ಹ್ಯಾಪಿ ಫೀಲ್ ಮೂಡುತ್ತೆ. ಅದರಂತೆ ಅನು ಜನಾರ್ಧನ್‌ಗೆ ಹಳದಿ ಕಲರ್ ಅಂದರೆ ತುಂಬಾ ಇಷ್ಟವಂತೆ. ಒಂದು ಕಡೆ ಹಳದಿ ನನ್ನ ಸಂತೋಷದ ವರ್ಣ ಎಂದಿದ್ದಾರೆ. ಆ ಬಣ್ಣದ ಬಟ್ಟೆಗಳನ್ನೇ ಸಾಕಷ್ಟು ತೊಟ್ಟಿದ್ದಾರೆ ಕೂಡ.

ಅನು ಗ್ಲಾಮರ್ ಗೊಂಬೆಯಾಗಿದ್ದೇಗೆ?
ಅನು ಜನಾರ್ಧನ್ ಈ ಮುಂಚೆ ತೀರಾ ದಪ್ಪಗಿದ್ದರಂತೆ. ಆದರೆ ಈಗ ಬಳುಕುವ ಗೊಂಬೆಯಂತಾಗಿದ್ದಾರೆ. ಈ ಬಗ್ಗೆ ಅವರು ಹೇಳುವುದು ಹೀಗೆ, ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಾಡಿ ಟ್ರಾನ್ಸ್‌ಫರ್ಮೇಷನ್ ಕಂಡು ಅನೇಕರು ಇದರ ಗುಟ್ಟು ಏನು ಎಂದು ಕೇಳುತ್ತಿದ್ದರು. ನಾನು ಹೇಗೆ ವರ್ಕೌಟ್ ಮಾಡಿದೆ? ಹೇಗಿದೆ ಡಯಟ್ ಮಾಡಿದೆ? ಅಂತ ಅನೇಕರು ಪ್ರಶ್ನೆ ಮಾಡಿದ್ದಾರೆ. ಈಗಲೂ ಕೂಡ ಹಲವರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 2007 ರಿಂದ ನಮ್ಮ ದೇಹಕ್ಕೆ ಅನಗತ್ಯವಾದ ಕ್ಯಾಲರಿಗೆ ಗುಡ್ ಬೈ ಹೇಳಿದೆ. ಆಮೇಲೆ ಸಣ್ಣಗಾಗುವ ಪ್ರಕ್ರಿಯೆಗೆ 1 ವರ್ಷ ತೆಗೆದುಕೊಳ್ತು. ನಾನು ಈ ಹಿಂದೆ ಎಷ್ಟಿದ್ದೆನೋ ಅದರ ಅರ್ಧದಷ್ಟಾಗುವುದು ನನ್ನ ಕನಸಾಗಿತ್ತು. ಡಾನ್ಸ್ ಹಾಗೂ ಡಯಟ್ ನನಗೆ ತೂಕ ಕಳೆದುಕೊಳ್ಳಲು ಸಹಾಯ ಮಾಡಿತು ಎಂದಿದ್ದಾರೆ.

ರೀಲ್ಸ್‌ನಲ್ಲಿ ಫುಲ್ ಬ್ಯುಸಿ
ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಕೂಡ ರೀಲ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡುತ್ತಾ ಇರುತ್ತಾರೆ. ಅದರಲ್ಲೂ ಧಾರಾವಾಹಿಯಲ್ಲಿ ಶತ್ರುಗಳಾದರೂ ಹೊರಗಡೆ ಯಾವ ರೀತಿ ಇರುತ್ತಾರೆ ಅನ್ನುವುದು ಈ ರೀತಿಯ ರೀಲ್ಸ್‌ಗೆ ತಿಳಿಯುವುದು. ಅನು ಕೂಡ ಸತ್ಯ ಧಾರಾವಾಹಿಯಲ್ಲಿ ಯಾರನ್ನು ದ್ವೇಷಿಸುತ್ತಾರೋ ಅವರ ಜೊತೆಗೇನೆ ಹೆಚ್ಚು ರೀಲ್ಸ್ ಮಾಡಿದ್ದಾರೆ.


Click it and Unblock the Notifications











