ಸುಜಾತ ಅಕ್ಷಯ್: ʻಸತ್ಯʼ ವಿಲನ್ ಚಿದಗ್ನಿ ಬಳಿ ಇರೋ ಜ್ಯುವೆಲ್ಲರಿ ಕಲೆಕ್ಷನ್ ನೋಡಿದ್ದೀರಾ?

By ಎಸ್ ಸುಮಂತ್

'ಸತ್ಯ' ಧಾರಾವಾಹಿಯಲ್ಲಿ ಯಾರು ವಿಲನ್ ಹುಟ್ಟಿಕೊಂಡಿಲ್ಲವಲ್ಲ ಎನ್ನುವಾಗಲೇ, ನಾನಿದ್ದೀನಿ ಅಂತ ಪ್ರತ್ಯಕ್ಷ ಆಗಿದ್ದು ಇದೇ ಚಿದಗ್ನಿ ಬಾಯಿ. ಸತ್ಯಳ ಮುಖವನ್ನೇ ನೋಡದೆ ದ್ವೇಷ ಹುಟ್ಟಿಸಿಕೊಂಡಿದ್ದಳು. ಸತ್ಯ ಎದುರು ಬಂದಾಗ ನಿಗಿ ನಿಗಿ ಕೆಂಡವಾದಳು. ಸತ್ಯಳ ಪ್ರಪಂಚವೇ ಆಗಿದ್ದ ತಂದೆಯ ಕೊಲೆಗೆ ಈಕೆಯೆ ಕಾರಣವಾಗಿದ್ದಳು. ಆದರೆ ಆ ಸತ್ಯವನ್ನು ಯಾರು, ಎಲ್ಲಿಯೂ ಬಾಯಿ ಬಿಡುವ ಆಗಿಲ್ಲ. ಅಷ್ಟು ಭಯಂಕರವಾದ ಗ್ಯಾಂಗ್ ಸಂಭಾಳಿಸಿದ್ದಳು ಇದೇ ಚಿದಗ್ನಿ ಬಾಯಿ.

ಆದರೆ ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಎಂಬುದು ಎಲ್ಲರಿಗೂ ಗೊತ್ತೆ ಇದೆ. ಸತ್ಯಳನ್ನು ಅವಳ ಲೋಕದಿಂದ ಓಡಿಸಬೇಕು ಎಂದುಕೊಂಡು ಹಲವು ರೀತಿಯಲ್ಲಿ ಸ್ಕೆಚ್ ಹಾಕಿದಳು. ಸತ್ಯಳ ಮನೆಯವರೆದುರು ಬಂದಾಗ ತಂದೆಯ ಸಾವಿನ ಸತ್ಯ ಬಟಾಬಯಲಾಗಿತ್ತು. ಸತ್ಯಳನ್ನು ಕೊಲ್ಲಬೇಕೆಂದುಕೊಂಡಿದ್ದ ಚಿದಗ್ನಿ ತಾನೇ ಬೇರೊಬ್ಬರಿಂದ ಪ್ರಾಣ ಕಳೆದುಕೊಂಡಳು. ಸದ್ಯ ಚಿದಗ್ನಿ ಬಾಯಿ ಪಾತ್ರ ಸತ್ಯ ಧಾರಾವಾಹಿಯಲ್ಲಿ ಮುಗಿದಿದೆ. ಆದರೆ ಸುಜಾತ ಅಕ್ಷಯ್ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ.

ಚಿದಗ್ನಿ ರಿಯಲ್ ಲೈಫ್ ನೋಡಿದ್ದೀರಾ?

ಚಿದಗ್ನಿ ರಿಯಲ್ ಲೈಫ್ ನೋಡಿದ್ದೀರಾ?

ಸತ್ಯ ಧಾರಾವಾಹಿಗೂ ಮುನ್ನ ಚಿದಗ್ನಿ ಬಾಯಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಲವು ಹೆಸರುಗಳಿಂದಲೇ ಖ್ಯಾತನಾಮರಾಗಿದ್ದಾರೆ. ಆದರೆ ಸತ್ಯ ಧಾರಾವಾಹಿಯ ಚಿದಗ್ನಿ ಬಾಯಿ ಅನ್ನೋ ಹೆಸರು ಹೆಚ್ಚು ಫೇಮಸ್ ಆಗಿದೆ. ಆದರೆ ಇವರ ನಿಜವಾದ ಹೆಸರು ಸುಜಾತ ಅಕ್ಷಯ್. ಸಿನಿಮಾ, ಧಾರಾವಾಹಿಗಳ ಜೊತೆ ಬ್ಯುಸಿ ಇರುವ ನಟಿ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸದಾ ಒಂದಿಲ್ಲೊಂದು ವಿಡಿಯೋ ಹಂಚಿಕೊಳ್ಳುತ್ತಿರುತ್ತಾರೆ. ಇವರು ಫೋಟೊಗಿಂತ ವಿಡಿಯೋ ಹಂಚಿಕೊಳ್ಳುವುದು ಹೆಚ್ಚು.

ಸುಜಾತ ಬಳಿ ಅದೆಷ್ಟು ಜ್ಯುವೆಲ್ಲರಿ ಇದೆ ಗೊತ್ತಾ..?

ಸುಜಾತ ಬಳಿ ಅದೆಷ್ಟು ಜ್ಯುವೆಲ್ಲರಿ ಇದೆ ಗೊತ್ತಾ..?

ಸೀರೆಯನ್ನು ಯಾವಾಗಲೂ ಉಡುವವರ ಬಳಿ ಹೆಚ್ಚು ಜ್ಯುವೆಲ್ಲರಿ ಇರಲೇಬೇಕು. ಹೋದಲ್ಲಿ ಬಂದಲ್ಲಿ ಶಾಪಿಂಗ್ ಮಾಡುವಾಗ ಅವರ ಕಣ್ಣುಗಳು ಜ್ಯುವೆಲ್ಲರಿ ಮೇಲೆ ಬೀಳುವುದು ಸಹಜ. ಆದರೆ ಸುಜಾತ ವಿಚಾರದಲ್ಲಿ ಕೊಂಚ ವಿಭಿನ್ನ. ಜ್ಯುವೆಲ್ಲರಿಯನ್ನು ಸುಜಾತ ಹುಡುಕಿ ಹೋಗುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಸುಜಾತಾರ ಬಳಿಯೇ ಜ್ಯುವೆಲ್ಲರಿ ಬರುತ್ತದೆ. ಅವರ ಇನ್‌ಸ್ಟಾಗ್ರಾಂ ತೆಗೆದು ಒಮ್ಮೆ ನೋಡಿದರೆ ಸಾಕು. ಅಬ್ಬಬ್ಬಾ ಕಣ್ಣು ತಿರುಗದೆ ಇರದು. ಪರಮಾಶ್ಚರ್ಯ ಆಗದೆ ಇರದು. ಅಷ್ಟು ಜ್ಯುವೆಲ್ಲರಿ ಕಲೆಕ್ಷನ್ ಸುಜಾತ ಅಕ್ಷಯ್ ಬಳಿ ಇದೆ.

ಊಟ ಎಂದರೆ ಸುಜಾತಾಗೆ ಅಚ್ಚುಮೆಚ್ಚು

ಊಟ ಎಂದರೆ ಸುಜಾತಾಗೆ ಅಚ್ಚುಮೆಚ್ಚು

ಸುಜಾತ ಊಟದ ವಿಚಾರದಲ್ಲಿ ನೋ ಕಾಂಪ್ರಮೈಸ್. ಡಯೆಟ್ ಫ್ಲ್ಯಾನ್ ಅದು ಇದು ಎಲ್ಲಾ ಆಮೇಲೆ. ಆದರೆ ಇಷ್ಟಪಡುವ ಫುಡ್ ತಿನ್ನಲೇಬೇಕು. ಬಿಡುವಿನ ವೇಳೆಯಲ್ಲಿ ಅಡುಗೆ ಮಾಡುವ ಕಡೆ ಗಮನ ಕೊಡುತ್ತಾರೆ. ಯಾವುದಾದರೂ ಪುಸ್ತಕದಲ್ಲಿ ಹೊಸ ಫುಡ್ ಬಗ್ಗೆ ಕಂಡರೂ, ಆ ಫುಡ್ ಟ್ರೈ ಮಾಡುವವರೆಗೂ ಸುಜಾತಾಗೆ ನಿದ್ದೆ ಇರಲ್ಲ. ವೆರೈಟಿ ವೆರೈಟಿ ದೋಸೆ, ರೈಸ್ ಐಟಂ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರ ಬಾಯಲ್ಲಿ ನೀರೂರುವುದು ಗ್ಯಾರಂಟಿ.

ಸುಜಾತಾ ಜ್ಯುವೆಲ್ಲರಿಯ ಅಂಬಾಸಿಡರ್?

ಸುಜಾತಾ ಜ್ಯುವೆಲ್ಲರಿಯ ಅಂಬಾಸಿಡರ್?

ನಟ-ನಟಿಯರಿಗೆ ಕೆಲವೊಂದು ಬಟ್ಟೆ ಅಂಗಡಿ, ಜ್ಯುವೆಲ್ಲರಿ ಶಾಪ್‌ನವರು ಆಗಾಗ ಸ್ಪಾನ್ಸರ್ ಮಾಡುತ್ತಾರೆ. ಅದು ಅವರ ಪ್ರಮೋಷನ್ ಮೆಥೆಡ್ ಕೂಡ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವರು, ಫೇಮಸ್ ಆಗಿರುವವರಿಗೆ ಹೆಚ್ಚು ಸ್ಪಾನ್ಸರ್ ಸಿಗುತ್ತೆ. ನೀವೊಮ್ಮೆ ಸುಜಾತ ಆಕ್ಷಯ್ ಸೋಶಿಯಲ್ ಮೀಡಿಯಾ ಇಣುಕಿ ನೋಡಿ. ಇಷ್ಟು ದಿನ ಯಾವ ನಟಿಯರಿಗೂ ಇಷ್ಟು ಸ್ಪಾನ್ಸರ್ ಬಂದಿರುವುದನ್ನು ಕಂಡಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತೆ. ಮತ್ತೊಂದು ಗಮನಿಸಬೇಕಾದ ವಿಚಾರ ಎಂದರೆ ಸುಜಾತಾಗೆ ಬಂದಿರುವ ಹೆಚ್ಚು ಗಿಫ್ಟ್ ಎಂದರೆ ಅದು ಜ್ಯುವೆಲ್ಲರಿಯೇ. ಯಾವುದೇ ಧಾರಾವಾಹಿ, ಸಿನಿಮಾದಲ್ಲಿ ಕಾಣಿಸಿಕೊಂಡರು ಈ ಚಿದಗ್ನಿ ಫುಲ್ ಜ್ಯುವೆಲ್ಲರಿ ಹಾಕಿ ಖಡಕ್ ಆಗಿ ಕಾಣುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಸುಜಾತಾ ಫುಲ್ ಫೇಮಸ್

ಸೋಶಿಯಲ್ ಮೀಡಿಯಾದಲ್ಲಿ ಸುಜಾತಾ ಫುಲ್ ಫೇಮಸ್

ನಟಿಯರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುವುದು ಸಹಜ. ಅವರದ್ದೇ ಆದ ಅಭಿಮಾನಿ ಬಳಗವಿರುತ್ತದೆ. ನಟಿಯರನ್ನು ಹೆಚ್ಚು ಜನ ಫಾಲೋ ಮಾಡುತ್ತಾರೆ. ಆದರೆ ಪೋಷಕ ನಟಿ, ವಿಲನ್‌ಗಳನ್ನು ಫಾಲೋ ಮಾಡುವುದು ಕಡಿಮೆ ಮಂದಿ. ಈ ರೀತಿ ನೀವೂ ಭಾವಿಸಿದರೆ ಅದು ಸುಜಾತ ವಿಚಾರದಲ್ಲಿ ತಪ್ಪು. ಸುಜಾತಾಗೆ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ.

More from Filmibeat

English summary
zee kannada serial Sathya Written Update on Chidagni bag lifestyle. Here is the Details About Sujatha Akshay Jewellery Gifts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X