ಗೌತಮಿ ಜಾದವ್: ಪರ್ಪಲ್ ಲೆಹೆಂಗಾದಲ್ಲಿ ಮಿಂಚಿದ ಸತ್ಯ

By ಎಸ್ ಸುಮಂತ್

'ಸತ್ಯ'ಧಾರಾವಾಹಿ ಈಗ ಭಾವನೆಗಳ ತೊಳಲಾಟದಲ್ಲಿ ತೂಗಾಡುತ್ತಿದೆ. ಸತ್ಯ ಅನಿವಾರ್ಯತೆಯಿಂದಾಗಿ‌ ಕಾರ್ತಿಕ್‌ನನ್ನು ಮದುವೆಯಾಗಿದ್ದಾರೆ. ಆದರೆ ಕಾರ್ತಿಕ್ ಅದನ್ನು ಅರ್ಥವೇ ಮಾಡಿಕೊಳ್ಳದೆ ಯಾವಾಗಲೂ ಸತ್ಯಾಳ ಮೇಲೆ ಹೆಗರಾಡುವುದೇ ಕೆಲಸ ಮಾಡಿಕೊಂಡಿದ್ದಾನೆ. ಮನೆಯಲ್ಲಿ ತಾಯಿಯ ಮಾತಿಗೆ ಬೆಲೆ ಕೊಟ್ಟಿರುವ ಸತ್ಯ, ಎಲ್ಲಾ ಅವಮಾನವನ್ನು ಸಹಿಸುತ್ತಾ ಬರುತ್ತಿದ್ದಾಳೆ. ಎಷ್ಟೇ ನೋವಾದರೂ ನುಂಗಿಕೊಂಡು ನಡೆಯುತ್ತಿದ್ದಾಳೆ. ಆದರೆ ಸತ್ಯಾಳ ಹೊಸ ಅವತಾರವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಸತ್ಯ ಒಂದಷ್ಟು ಜನರ ಸ್ಪೂರ್ತಿ. ಅದರಲ್ಲೂ ಆಕೆಯ ವೇಷ-ಭೂಷಣವೆಂದರೆ ಮಕ್ಕಳಿಗೂ ಇಷ್ಟ. ಅದೆಷ್ಟೋ ಮಕ್ಕಳು ಆಕೆಯಂತೆಯೇ ಟಾಮ್ ಬಾಯ್ ಥರ ಸ್ಟೈಲ್ ಮಾಡಿಕೊಂಡು, ಆಕೆಯಂತೆಯೇ ಡ್ರೆಸ್ ತೊಟ್ಟು, ಗತ್ತು ಗಾಂಭೀರ್ಯದಿಂದಲೇ ನಡೆದುಕೊಳ್ಳಲು ಟ್ರೈ ಮಾಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ಆದರೆ, ಇದೀಗ ಸತ್ಯ ಕಂಪ್ಲೀಟ್ ಬದಲಾಗಿದ್ದಾಳೆ. ಟಾಮ್ ಬಾಯ್ ವೇಷ ಭೂಷಣ ಹೋಗಿ, ಪಕ್ಕಾ ಗೃಹಿಣಿಯಾಗಿದ್ದಾಳೆ.

ಸೀರೆಯಲ್ಲೂ ಮುದ್ದಾಗಿ ಕಾಣುತ್ತಿರುವ ಸತ್ಯ

ಸೀರೆಯಲ್ಲೂ ಮುದ್ದಾಗಿ ಕಾಣುತ್ತಿರುವ ಸತ್ಯ

ಸತ್ಯಳನ್ನು ತೀರಾ ಹತ್ತಿರದಿಂದ, ಸೂಕ್ಷ್ಮವಾಗಿ ನೋಡಿದರೆ ಮುದ್ದು ಮುಖದ ಪರಿಚಯವಾಗುವುದಂತು ಸತ್ಯ. ಅದು ಟಾಮ್ ಬಾಯ್ ಲುಕ್‌ನಲ್ಲಿ ಆದರೂ ಸರಿ. ರೌಡಿ ಬೇಬಿ ವೇಷದಲ್ಲಿಯಾದರೂ ಸರಿ. ಸತ್ಯ ಎಂದರೆ ಗಂಡ್ ಹುಡುಗಿ ಥರ ಇದ್ದವಳು. ಆದರೆ ಈಗಂತು ಪಕ್ಕಾ ಗೃಹಿಣಿಯಾಗಿರುವ ಸತ್ಯ ಇನ್ನಷ್ಟು ಅಟ್ರ್ಯಾಕ್ಟ್ ಮಾಡುತ್ತಿದ್ದಾರೆ. ಹೇರ್ ಸ್ಟೈಲ್ ಒಂದು ಬಿಟ್ಟರೆ ಕಂಪ್ಲೀಟ್ ಲುಕ್ ಚೇಂಜ್ ಆಗಿದೆ. ಅದರಲ್ಲೂ ಸಿಕ್ಕಾಪಟ್ಟೆ ಮುದ್ದಾಗಿ ಕಾಣುವಂತ ಲುಕ್ ಅದು. ಹಣೆಯಲ್ಲಿ ಕುಂಕುಮ, ಕೈಯಲ್ಲು ಬಳೆ, ಅಚ್ಚುಕಟ್ಟಾಗಿ ಸೀರೆಯುಟ್ಟ ಸತ್ಯ ಥೇಟ್ ಗೊಂಬೆಯಂತೆಯೆ ಕಾಣಿಸುತ್ತಿದ್ದಾರೆ.

ಪರ್ಪಲ್ ಲೆಹೆಂಗಾದಲ್ಲಿ ಸತ್ಯ

ಪರ್ಪಲ್ ಲೆಹೆಂಗಾದಲ್ಲಿ ಸತ್ಯ

ಸತ್ಯ ಅಲಿಯಾಸ್ ಗೌತಮಿ ಜಾದವ್ 'ಸತ್ಯ' ಧಾರಾವಾಹಿ ಬಳಿಕ ತುಂಬಾನೇ ಖ್ಯಾತಿ ಪಡೆದಿದ್ದಾರೆ. 'ಸತ್ಯ' ಧಾರಾವಾಹಿ ನೋಡುಗರಿಗೆ ಆಕೆಯ ಹೇರ್ ಸ್ಟೈಲ್ ಮೇಲೆ ಸಿಕ್ಕಾಪಟ್ಟೆ ಕಣ್ಣಿರುತ್ತೆ. ಯಾಕೆಂದ್ರೆ ಧಾರಾವಾಹಿಗಾಗಿ ಕೂದಲು ಇಷ್ಟೊಂದು ಕಟ್ ಮಾಡಿಕೊಂಡರೆ ಹೇಗೆ ಎಂಬುದು ಪ್ರಶ್ನೆ. ಆದರೆ ಸತ್ಯ ಅಲಿಯಾಸ್ ಗೌತಮಿ ಜಾದವ್ ಸೋಶಿಯಲ್ ಮೀಡಿಯಾ ನೋಡಿದರೆ ಆಕೆಯ ಅಂದ ಗೊತ್ತಾಗುತ್ತದೆ. ಧಾರಾವಾಹಿಗಾಗಿ ಅದು ವಿಗ್ ಹಾಕಿರುವುದು. ಗೌತಮ್ ಜಾದವ್‌ನಷ್ಟೇ ಅವರ ಹೇರ್ ಸ್ಟೈಲ್ ಕೂಡ ಮುದ್ದಾಗಿದೆ. ಇದೀಗ ಹೊಸದೊಂದು ಫೋಟೊಶೂಟ್ ಎಲ್ಲರ ಕಣ್ಮನ ಸೆಳೆಯುತ್ತಿದೆ. ಅದು ಪರ್ಪಲ್ ಕಲರ್ ಲೆಹೆಂಗಾವಂತು ಸತ್ಯಾಳ ಅಂದವನ್ನು ಹೆಚ್ಚಿಸಿದೆ.

ಈ ಅದ್ಭುತಕ್ಕೆ ಕಾರಣ ಯಾರು?

ಈ ಅದ್ಭುತಕ್ಕೆ ಕಾರಣ ಯಾರು?

ಬೋಟಿಕ್, ಜ್ಯುವೆಲ್ಲರಿ ಶಾಪ್, ಫೋಟೋಗ್ರಫಿ ಪ್ರಮೋಷನ್‌ಗಾಗಿ ಫೇಮಸ್ ಸೆಲೆಬ್ರೆಟಿಗಳ ಮೊರೆ ಹೋಗುವುದು ಸಹಜ. ಈ ಬಾರಿ ಸತ್ಯ ಇಷ್ಟು ಮುದ್ದಾಗಿ ಕಾಣುವಂತ ಫೋಟೊ ಹೊರಗೆ ಬರುವುದಕ್ಕೆ ಅದೇ ಕಾರಣ‌. ಪಿವಿ ಫ್ಯಾಷನ್ ಅವರು ಈ ಅಂದದ ಅರೆಂಜ್ಮೆಂಟ್ ಮಾಡಿದ್ದಾರೆ. ಸತ್ಯ ಜೊತೆಗೆ 'ಪಾರು' ವಿಲನ್ ಕೂಡ ಜೊತೆಯಾಗಿದ್ದಾರೆ. ಮಾನ್ಸಿ ಮತ್ತು ಗೌತಮ್ ಜಾದವ್ ಪಿವಿ ಫ್ಯಾಷನ್‌ನ ಸೂಪರ್ ಡ್ರೆಸ್ಸಿಗೆ ಸೆಲೆಬ್ರೆಟಿ ಮಾಡಲ್‌ಗಳಾಗಿ ಪೋಸ್ ಕೊಟ್ಟಿದ್ದು ಕಣ್ಣಿಗೆ ಅಂದ ಹೆಚ್ಚು ಮಾಡಿದೆ. ಇಂಥದ್ದೇ ಡ್ರೆಸ್ ತೆಗೆದುಕೊಂಡರೆ ಹೇಗಿರುತ್ತೆ ಎಂಬ ಐಡಿಯಾನ್ನೂ ನೀಡಿದ್ದಾರೆ.

ಸತ್ಯಳ ನ್ಯೂ ಲುಕ್‌ಗೆ ಫ್ಯಾನ್ಸ್ ದಿಲ್ ಖುಷ್

ಸತ್ಯಳ ನ್ಯೂ ಲುಕ್‌ಗೆ ಫ್ಯಾನ್ಸ್ ದಿಲ್ ಖುಷ್

ಗೌತಮಿ ಜಾದವ್ ಗೆ 'ಸತ್ಯ' ಧಾರಾವಾಹಿ ಶುರುವಾದ ಮೇಲೆ ಫ್ಯಾನ್ಸ್ ಫಾಲೋವರ್ಸ್ ಕೂಡ ಹೆಚ್ಚಾಗಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 136 ಸಾವಿರ ಫಾಲೋವರ್ಸ್ ಇದ್ದಾರೆ. ಅವರ ಫೋಟೊ, ವಿಡಿಯೋ, ಅವರ ಜೊತೆಗಿನ ಮಾತುಕತೆಗೆ ಅಭಿಮಾನಿಗಳು ಕೌತುಕತೆಯಿಂದ ಕಾಯುತ್ತಿರುತ್ತಾರೆ. ಇನ್ನು ಈ ಲುಕ್, ಹೊಸ ಹೇರ್ ಸ್ಟೈಲ್ ನೋಡಿ ವಾವ್ ಎನ್ನುತ್ತಿದ್ದಾರೆ. ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅವರ ಹೊಸ ಲುಕ್ಕಿಗೆ ಫಿದಾ ಆಗಿದ್ದಾರೆ.

More from Filmibeat

English summary
Zee Kannada Serial Sathya Actress Gouthami Jadav Biography And Life Style. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X