ಸಂಸ್ಕಾರದ ಬಗ್ಗೆ ಮಾತನಾಡಿದ ಜಾನಕಿಗೆ ಮೊದಲು ಕೀರ್ತನಾಳಿಗೆ ಬುದ್ಧಿ ಕಲಿಸು ಎಂದ ನೆಟ್ಟಿಗರು!

By ಎಸ್ ಸುಮಂತ್

ಫಸ್ಟ್ ಲವ್ ಈಸ್ ಬೆಸ್ಟ್ ಲವ್ ಅನ್ನೋ ಮಾತಿದೆ. ಜೊತೆಗೆ ಮೊದಲ ಪ್ರೀತಿಯನ್ನು ಮರೆಯುವುದು ತುಂಬಾ ಅಸಾಧ್ಯವೇ ಸರಿ. ಸತ್ಯಳಿಗೂ ಅಂತದ್ದೇ ಭಾವನೆ ಆಗಾಗ ಎದುರಾಗುತ್ತಲೇ ಇರುತ್ತದೆ. ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ. ಗಂಡುಬೀರಿ ಅಂತೆಲ್ಲಾ ಎನಿಸಿಕೊಂಡು, ಫುಲ್ ಬಿಂದಾಸ್ ಆಗಿ ಓಡಾಡುತ್ತಿದ್ದ ಸತ್ಯಳ ಮನಸ್ಸಲ್ಲಿ ಪ್ರೀತಿಯ ಮಳೆ ಸುರಿಸಿದ್ದು ಇದೇ ಕಾರ್ತಿಕ್. ಇದೇ ವೇಳೆ ಕಾರ್ತಿಕ್ ಮನಸ್ಸು ಕೂಡ ಕೊಂಚ ಡಿಸ್ಟರ್ಬ್ ಆಗಿತ್ತು.

ಸತ್ಯಳ ಸ್ನೇಹ ಮಾತ್ರ ಅಲ್ಲ ಕಾರ್ತಿಕ್‌ಗೆ ಪ್ರೀತಿ ಕೂಡ ಹುಟ್ಟಿತ್ತು. ಗೊಂದಲದಲ್ಲೇ ಇದ್ದ ಕಾರ್ತಿಕ್‌ಗೆ ಸತ್ಯ ಅರಿವಾಗುವುದು ಬಹಳ ದಿನ ಹಿಡಿದಿರಲಿಲ್ಲ. ಇನ್ನೇನು ತನ್ನೆಲ್ಲಾ ಮನಸ್ಸಿನ ಆಸೆ ಹೇಳಿಕೊಳ್ಳಬೇಕು ಎಂದುಕೊಂಡಿದ್ದ. ಆದರೆ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಬೇಡದೆ ಇರುವ ವಿಚಾರಗಳೆಲ್ಲಾ ಸತ್ಯ ಲೈಫ್‌ನಲ್ಲಿ ನಡೆದು ಹೋಗಿದೆ. ಈಗ ಸತ್ಯಳ ಮುಂದಿರುವುದು ತನ್ನ ಪ್ರೀತಿಗಿಂತ ಅಕ್ಕನ ಮದುವೆಯ ಜವಾಬ್ದಾರಿ ಹೆಚ್ಚಾಗಿದೆ.

ಸತ್ಯಳನ್ನು ಕಂಡರೆ ಕೋಪ

ಸತ್ಯಳನ್ನು ಕಂಡರೆ ಕೋಪ

ಸತ್ಯ ಮಾಡಿದ್ದು ತಪ್ಪಲ್ಲದೆ ಹೋದರು, ಮದುವೆ ನಿಂತು ಅಪ್ಪನ ಆರೋಗ್ಯದಲ್ಲಿ ಏರುಪೇರು ಆಯಿತಲ್ಲ ಅನ್ನೋ ಬೇಸರ. ಕಾರ್ತಿಕ್‌ ತನ್ನ ಮನಸ್ಸಲ್ಲಿರುವ ಪ್ರೀತಿಯನ್ನು ಹೊರ ಹಾಕದೆ ಇರಲು ಕಾರಣ ಕೂಡ ಇದೇ ಫ್ಯಾಮಿಲಿ, ತಂದೆಯ ಆರೋಗ್ಯ. ತನಗಾದ ನಿಜವಾದ ಪ್ರೀತಿಯನ್ನು ಮರೆಮಾಚಿ, ದಿವ್ಯಾಳನ್ನು ಪ್ರೀತಿಸುತ್ತಿದ್ದೇನೆ ಅಂತ ಒಲ್ಲದ ಮನಸ್ಸಿನಲ್ಲಿಯೇ ಎಲ್ಲರ ಮುಂದೆ ಒಪ್ಪಿಕೊಂಡು, ತನಗೆ ತಾನೇ ಸಮಾಧಾನ ಮಾಡಿಕೊಂಡಾತ ಈ ಕಾರ್ತಿಕ್‌. ಅಪ್ಪನಿಗಾಗಿ ಎಲ್ಲವನ್ನೂ ಸಹಿಕೊಂಡವನಿಗೆ ಕಡೆಗೆ ಅಪ್ಪನ ಆರೋಗ್ಯವೇ ಕೈಕೊಟ್ಟಾಗ ಏನಾಗಬೇಡ. ಅದಕ್ಕೆಲ್ಲಾ ಸತ್ಯಳೇ ಕಾರಣ ಅಂತ ಆಕೆ ಎದುರುಗಡೆ ಬಂದರೆ ಸಾಕು ಸಿಡಿಮಿಡಿಗೊಳ್ಳುತ್ತಾನೆ. ಕಾಲು ಕೆರೆದುಕೊಂಡು ಜಗಳಕ್ಕೆ ಬಂದು ಬಿಡುತ್ತಾನೆ.

ಸತ್ಯಳ ಮೇಲೆ ಅಮ್ಮ-ಮಗನಿಗೆ ಅನುಮಾನ

ಸತ್ಯಳ ಮೇಲೆ ಅಮ್ಮ-ಮಗನಿಗೆ ಅನುಮಾನ

ಫೈನಲಿ ನಿಂತು ಹೋದ ಮದುವೆ ಮತ್ತೆ ಶುರುವಾಗಿದೆ. ಅದೂ ಷರತ್ತಿನ ಮೇಲೆ. ದಿವ್ಯಾ ಮತ್ತು ಕಾರ್ತಿಕ್‌ ಸತಿ-ಪತಿಗಳಾದ ಮೇಲೆ ಸತ್ಯ ಊರಿನಿಂದ ಹೊರಗುಳಿಯಬೇಕು. ಯಾರ ಸಂಪರ್ಕಕ್ಕೂ ಸಿಲುಕಬಾರದು. ಇದು ಕಾರ್ತಿಕ್‌ ತಾಯಿ ಜಾನಕಿಯ ಷರತ್ತು. ಸತ್ಯಳಿಗೊ ತನ್ನ ಜೀವನಕ್ಕಿಂತ ತಂದೆ ಬಿಟ್ಟು ಹೋದ ಜವಾಬ್ದಾರಿ ತುಂಬಾ ಮುಖ್ಯ. ಇದೇ ಕಾರಣಕ್ಕೆ, ಜಾನಕಿಯ ಮಾತಿಗೆ ಹಿಂದೆ- ಮುಂದೆ ನೋಡದೆ ಒಪ್ಪಿಗೆ ಸೂಚಿಸಿದ್ದಾಳೆ. ಈಗ ಮತ್ತೆ ಮದುವೆ ಮನೆ ತುಂಬೆಲ್ಲಾ ಓಡಾಡುವ ಸತ್ಯಳ ಮೇಲೆ ಮಗನಿಗೆ ಮತ್ತು ತಾಯಿಗೆ ಇಬ್ಬರಿಗೂ ಅನುಮಾನ. ಅದಕ್ಕಾಗಿಯೇ ಇಬ್ಬರು ಆಕೆಯ ಹಿಂದೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲ ಇನ್ನೆಲ್ಲಿ ಮಗನ ಮನಸ್ಸನ್ನು ಕೆಡಿಸಿಬಿಡುತ್ತಾಳೊ ಎಂಬ ಭಯ ಜಾನಕಿಯದ್ದು.

ಧಾರಾವಾಹಿಯಲ್ಲಿ ಏನಿದು ವಿಧಿಯಾಟ?

ಮದುವೆಯ ಸಂಭ್ರಮವೇನೋ ಅದ್ದೂರಿಯಾಗಿ ನಡೆಯುತ್ತಿದೆ. ಆದರೆ ಆ ಕಡೆ ಬೇಜಾನ್ ಸಂಚುಗಳ ಸರಣಿ ಸಿದ್ಧವಾಗಿದೆ. ಕೀರ್ತನಾಳಿಗೆ ತನ್ನ ನಾದಿನಿಯನ್ನು ಸೊಸೆ ಮಾಡುವಾಸೆ. ದಿವ್ಯಾಳಿಗೆ ಬಾಲನನ್ನು ವರಿಸುವಾಸೆ. ಆದರೆ ಇದಕ್ಕೆಲ್ಲಾ ಬಿಗಿಕಾವಲಾಗಿ ನಿಂತಿರುವುದು ಸತ್ಯ. ಸತ್ಯಳನ್ನು ದಾಟಿ ಹೋಗುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿಯೇ ಬಾಲನ ಜೊತೆಗೆ ದಿವ್ಯಾ ಓಡಿ ಹೋಗಲು ಕೀರ್ತನಾ ಸಹಾಯ ಮಾಡುತ್ತಿದ್ದಾಳೆ. ಆದರೆ ಈಗಾಗಲೇ ಕಾರ್ತಿಕ್‌ ಮತ್ತು ಸತ್ಯ ಮೇಲೆ ಸ್ವಾಮೀಜಿಯ ಗಟ್ಟಿ ಆಶೀರ್ವಾದ ಸಿಕ್ಕಿದೆ. ದಿವ್ಯಾ ಓಡಿ ಹೋದರೂ, ಕೀರ್ತನಾ ಬಯಸಿದಂತೆ ಏನು ಆಗಲ್ಲ. ಮನೆ ಮಂದಿಯೆಲ್ಲಾ ನಿರೀಕ್ಷೆ ಮಾಡದ ಘಟನೆ ನಡೆಯಬಹುದು. ಸತ್ಯಳ ಅಮ್ಮ-ಅಜ್ಜಿ ಖುಷಿಯಾಗಬಹುದು. ಈ ದಿನ ಬೇಗ ಬರಲಿ ಎಂಬುದೇ ಪ್ರೇಕ್ಷಕರ ಮನದಾಸೆ.

ಜಾನಕಿಗೆ ಕ್ಲಾಸ್

ಜಾನಕಿಗೆ ಕ್ಲಾಸ್

ಜಾನಕಿ ಅದ್ಯಾವಾಗ ಸತ್ಯಾಳ ಸಂಸ್ಕಾರದ ಬಗ್ಗೆ ಮಾತಾನಾಡಿದರೋ ಆಗ ಸತ್ಯಳಿಗೂ ಪಿತ್ತ ನೆತ್ತಿಗೇರಿದೆ. ಸರಿಯಾಗಿಯೇ ತಿರುಗೇಟು ನೀಡಿದ್ದಾಳೆ. ಈ ವಿಡಿಯೋ ಅಪ್ಲೋಡ್ ಆಗಿದ್ದೆ ತಡ ನೆಟ್ಟಿಗರ ಪಿತ್ತ ಕೂಡ ನೆತ್ತಿಗೇರಿದೆ. ಮೊದಲು ಕೀರ್ತನಾಳಿಗೆ ನೀನು ಸಂಸ್ಕಾರ ಹೇಳಿಕೊಡು ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಸತ್ಯ ಕೊಟ್ಟ ಉತ್ತರಕ್ಕೆ ಭೇಷ್ ಎನ್ನುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಬೆಂಕಿಯ ಸುರಿಮಳೆಯನ್ನೇ ಸುರಿಸಿದ್ದಾರೆ.

More from Filmibeat

English summary
Zee Kannada Serial Sathya Written Update on April 21st Episode. Here is the details about fans advise for Janaki to teach about culture for keerthana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X