Puttakkana Makkalu: ಕಂಠಿ-ಸ್ನೇಹಾ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್! ಸ್ನೇಹಾಳನ್ನು ಕಾಪಾಡಿದ ಆತ ಯಾರು..?

By ಎಸ್ ಸುಮಂತ್

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಹನಾ ಮದುವೆ ಕಾರ್ಯ ಅದ್ದೂರಿಯಾಗಿ ನಡೆಯುತ್ತಿದೆ. ಎಲ್ಲಾ ನೋವು ಸಂಕಷ್ಟಗಳನ್ನು ಪುಟ್ಟಕ್ಕ ಒಬ್ಬಳೇ ನುಂಗಿಕೊಂಡು, ಮಗಳ ಮದುವೆ ಮಾಡಲೇಬೇಕೆಂಬ ಹಠ ತೊಟ್ಟಿದ್ದಾಳೆ. ಅದಕ್ಕೆಂದೆ ಗಂಡಿನ ಅಮ್ಮ ಯಾವುದೇ ರೀತಿಯ ಅವಮಾನ ಮಾಡಿದರು, ಗಂಡಿನ ಮನೆ ಅಳಿಯ ಎಷ್ಟೇ ನಷ್ಟ ಮಾಡಿದರೂ ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮಗಳ ಮದುವೆಗಷ್ಟೇ ಗಮನ ಕೊಟ್ಟಿದ್ದಾಳೆ ಪುಟ್ಟಕ್ಕ.

ಇನ್ನು ಸ್ನೇಹಾಗೆ ಆಗಾಗ ಕೆಲವೊಂದು ವಿಚಾರದಲ್ಲಿ ಕೋಪ ಬರುತ್ತಾ ಇರುತ್ತೆ. ಆದರೂ ಅದನ್ನೆಲ್ಲಾ ಪುಟ್ಟಕ್ಕನೇ ಅವೈಡ್ ಮಾಡುತ್ತಾ ಇರುತ್ತಾಳೆ. ಸ್ನೇಹಾಳಿಗೆ ಸಹಾಯವಾಗಿ ಬಂಗಾರಮ್ಮನ ಮಗ ಕೂಡ ಸ್ನೇಹಾಳಿಗೆ ಬೆಂಬಲವಾಗಿ ನಿಂತಿದ್ದಾನೆ. ಇನ್ನೇನು ಪ್ರೀತಿಯನ್ನು ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ ಹೊಸ ದುಷ್ಮನ್ ಹುಟ್ಟಿಕೊಂಡಿದ್ದಾನೆ.‌

ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ಕುಟುಂಬ

ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ಕುಟುಂಬ

ಈಗಾಗಲೇ ಪುಟ್ಟಕ್ಕನ ಮನೆಯಲ್ಲಿ ಒಂದೊಂದೆ ಮದುವೆ ಶಾಸ್ತ್ರಗಳು ಶುರುವಾಗಿವೆ. ಚಪ್ಪರದ ಶಾಸ್ತ್ರ ಮುಗಿಯಿತು. ಈಗ ಅರಿಶಿನದ ಶಾಸ್ತ್ರ ಆರಂಭವಾಗಿದೆ. ಮನೆಯಲ್ಲಿಯೇ ಅರಿಶಿನದ ಕೊಂಬುಗಳನ್ನು, ಒನಕೆಯಿಂದ ಕುಟ್ಟಿ ಪುಡಿ ಮಾಡುವ ಶಾಸ್ತ್ರ, ಸಂಪ್ರದಾಯ ಅವರಲ್ಲಿದೆ. ಹೀಗಾಗಿ ಮುತ್ತೈದೆಯರೆಲ್ಲಾ ಸೇರಿ ಇಂದು ಅರಿಶಿನ ಕುಟ್ಟಿ, ಗಂಧ ಸಿದ್ಧ ಮಾಡಿದ್ದಾರೆ. ಹೆಣ್ಣಿನ ಮನೆಯಿಂದಾನೆ ಗಂಡಿನ ಮನೆಗೂ ಅರಿಶಿನ ಹೋಗಬೇಕಾದ ಕಾರಣ ಹೆಣ್ಣಿನ ಮನೆಯಲ್ಲಿಯೇ ಹೆಚ್ಚಿನ ಅರಿಶಿನ ರೆಡಿ ಮಾಡಿದ್ದಾರೆ.

ಕಂಠಿ ಗ್ಯಾಂಗ್ ಜೊತೆಗೆ ಹೊರಟ ಸ್ನೇಹಾ

ಕಂಠಿ ಗ್ಯಾಂಗ್ ಜೊತೆಗೆ ಹೊರಟ ಸ್ನೇಹಾ

ಸ್ನೇಹಾಳ ಪ್ರೀತಿ ಪಡೆಯಲು, ಪುಟ್ಟಕ್ಕನ ಮುಗ್ಧತೆಗೆ ಕಂಠಿ ಅಂಡ್ ಗ್ಯಾಂಗ್ ಪುಟ್ಟಕ್ಕನ ಬೆಂಬಲಕ್ಕೆ ನಿಂತಿದೆ. ಮದುವೆ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಗ್ಯಾಂಗ್ ಸೇರಿಕೊಂಡು ಮಾಡಿದೆ. ಮನೆಗೆ ಸುಣ್ಣ ಬಣ್ಣ ಬಳಿಯುವುದರಿಂದ ಹಿಡಿದು, ಚಪ್ಪರದ ಶಾಸ್ರ್ರದ ತನಕ ಎಲ್ಲಾ ಕೆಲಸವನ್ನು ಕಂಠಿ ಅಂಡ್ ಗ್ಯಾಂಗ್ ಮಾಡಿದೆ. ಈಗ ಮುರುಳಿ ಮೇಷ್ಟ್ರು ಮನೆಗೆ ಅರಿಶಿನ ಕೊಟ್ಟು ಬರಲು ಸ್ನೇಹಾಳನ್ನು ಕರೆದುಕೊಂಡು ಕಂಠಿ ಹೊರಟಿದ್ದಾನೆ. ಸ್ನೇಹಾ ಕೂಡ ಎಲ್ಲಾ ಕೆಲಸಕ್ಕೂ ಕಂಠಿಯೇ ಇರಬೇಕೆಂದು ಬಯಸುತ್ತಾಳೆ. ಪ್ರಾಣಪಾಯದಿಂದ ಕಾಪಾಡಿದ ಕಂಠಿ ಮೇಲೆ ಸ್ನೇಹಾಗೆ ಮತ್ತಷ್ಟು ಪ್ರೀತಿ ಜಾಸ್ತಿಯಾಗಿದೆ.

ಸ್ನೇಹಾಳ ಮೋಹಕ್ಕೆ ಕಳೆದು ಹೋದ ಕಂಠಿ

ಸ್ನೇಹಾಳ ಮೋಹಕ್ಕೆ ಕಳೆದು ಹೋದ ಕಂಠಿ

ಕಂಠಿ ಮತ್ತು ಸ್ನೇಹಾ ಇತ್ತಿಚೆಗೆ ತುಂಬಾ ಆತ್ಮೀಯರಾಗಿ ಬಿಟ್ಟಿದ್ದಾರೆ. ತುಂಬಾ ಕ್ಲೋಸ್ ಆಗಿದ್ದಾರೆ. ಆದರೆ ಅನುಮಾನ ಎಂಬುದನ್ನು ಸ್ನೇಹಾ ಪಡಲ್ಲ. ಆದರೆ ಕಂಠಿಯೇ ದೊರೆ ಅಂತ ಗೊತ್ತಾದ ಮೇಲೆ ಸ್ನೇಹಾ ತುಂಬಾನೇ ಕಾಡಿಸುವುದನ್ನು ಕಲಿತ್ತಿದ್ದಾಳೆ. ಈಗ ಅರಿಶಿನದ ಡಬ್ಬಿ ತೆಗೆದುಕೊಂಡು ಗಂಡಿನ ಮನೆಗೆ ಹೋಗುವಾಗ, ಆ ಅರಿಶಿನದ ಘಮಕ್ಕೆ ಸ್ನೇಹಾ ಕಳೆದು ಹೋಗಿದ್ದಳು. ಆದರೆ ಕಂಠಿ ಸ್ನೇಹಾಳ ಮೋಹಕ್ಕೆ ಸಿಲುಕಿದ್ದ. ಸ್ನೇಹಾಗೆ ವಿಚಿತ್ರ ಎನಿಸಿದಾಗ ಮುಂದಿನ ಕೆಲಸ ನೋಡಿದ್ದಾಳೆ.

ಕಂಠಿಗೆ ಕಾಡಿಸುತ್ತಾಳಾ ಸ್ನೇಹಾ..?

ಕಂಠಿಗೆ ಕಾಡಿಸುತ್ತಾಳಾ ಸ್ನೇಹಾ..?

ಸ್ನೇಹಾ ಅರಿಶಿನ ಡಬ್ಬಿಯನ್ನು ಹಿಡಿದು ಮುರುಳಿ ಮೇಷ್ಟ್ರ ಮನೆಯ ಕಡೆಗೆ ಹೆಜ್ಜೆ ಹಾಕಿದ್ದಳು. ಆದ್ರೆ ಕಾಲು ಎಡವಿ ಸ್ನೇಹಾ ಕೂಡ ಬೀಳುವಷ್ಟರಲ್ಲಿ ಇದ್ದಳು. ಆದೆ ಸಮಯಕ್ಕೆ ಅರಿಶಿನದ ಡಬ್ಬಿ ಹಾಗೂ ಸ್ನೇಹಾ ಇಬ್ಬರನ್ನು ಕೆಳಗೆ ಬೀಳದಂತೆ ನೋಡಿಕೊಂಡಿದ್ದು ಮುರುಳಿ ಮೇಷ್ಟ್ರ ರಿಲೇಟಿವ್. ಮೊದಲೇ ಸ್ನೇಹಾಳನ್ನು ಮನಸಾರೆ ಲವ್ ಮಾಡುತ್ತಿರುವ ಕಂಠಿಗೆ ಆ ದೃಶ್ಯ ಇಷ್ಟವಾಗಲಿಲ್ಲ. ಮುರುಳಿ‌ ಮೇಷ್ಟ್ರನ್ನೇ ತಪ್ಪಾಗಿ ಭಾವಿಸಿ ಹೊಡೆಯಲು ಹೋಗಿದ್ದರು. ಈಗ ಹೊಸ ಎಂಟ್ರಿ. ಸ್ನೇಹಾ ಮೊದಲೇ ಕಂಠಿಯನ್ನು ದೊರೆ ಹೆಸರಲ್ಲಿ ಆಟವಾಡಿಸಲು ಶುರು ಮಾಡಿದ್ದಾಳೆ. ಈಗ ಮೇಷ್ಟ್ರ ಸಂಬಂಧಿ ಜೊತೆ ಸೇರಿ ಮತ್ತಷ್ಟು ಕಾಡಿಸುವ ಸಾಧ್ಯತೆ ಇದೆ.

More from Filmibeat

English summary
zee kannada serial Puttakkana makkalu Written Update on January 30th episode. Here is the details about on New Person entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X