'ಸತ್ಯ' ಧಾರಾವಾಹಿ ನಟಿಯೇ ಪ್ರೇರಣೆ: ತುಮಕೂರಿನ ಈ ಜೂನಿಯರ್ ಸತ್ಯ ಯಾರು?

By ಎಸ್ ಸುಮಂತ್

ಸತ್ಯ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಏನೋ ಕಾರ್ತೀಕ್ ಅಮ್ಮ ಜಾನಕಿಗೆ ಮತ್ತು ಕೀರ್ತನಾಗೆ ಮಾತ್ರ ಇಷ್ಟವಾಗುತ್ತಿಲ್ಲ ಅಷ್ಟೇ. ಆದರೆ ಮುಂದೊಂದು ದಿನ ಸತ್ಯ ಗುಣ ಖಂಡಿತ ಅವರಿಗೂ ಇಷ್ಟವಾಗಿ ಮಗಳಂತೆ ನೋಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಸತ್ಯ ಎಷ್ಟೆ ಒರಟುತನದವಳಾದರೂ ಆಕೆಯ ಹಿಂದೆ ಕಷ್ಟದ ದಿನಗಳಿವೆ. ಜವಾಬ್ದಾರಿಯ ನಡೆ ಇದೆ. ಹೀಗಾಗಿಯೇ ಸತ್ಯ ಗಂಡು ಬೀರಿಯಂತೆ ಬೆಳದಿರುವುದು.

ಸತ್ಯ ಎಂದರೆ ಚಿಕ್ಕವರಿಂದ ಹಿಡಿದು ವೃದ್ಧರವರೆಗೂ ಸಿಕ್ಕಾಪಟ್ಟೆ ಇಷ್ಟ. ಅದರಲ್ಲೂ ಸತ್ಯಳ ಟಾಮ್ ಬಾಯ್ ಸ್ಟೈಲ್‌ಗೆ ಸಾಕಷ್ಟು ಜನ ಫಿದಾ ಆಗಿದ್ದಾರೆ. ಗಿರಿಜಾ ಲೋಕೇಶ್ ಕೂಡ ಒಂದು ದಿನದ ಮಟ್ಟಿಗೆ ಅದೇ ಟಾಮ್ ಬಾಯ್ ವೇಷ ಧರಿಸಿದ್ದರು. ಬಾಲನಟಿ ದಿಶಾ ಕೂಡ ಸತ್ಯಳ ವೇಷದಲ್ಲಿ ಫೋಟೊಶೂಟ್ ಮಾಡಿಸಿದ್ದಳು. ಮಕ್ಕಳಿಗೆ ಒಂಥರ ಮಾದರಿಯೇ ಆಗಿದ್ದಾಳೆ ಸತ್ಯ. ಇದೀಗ ಆದ್ಯಾ ಎಂಬ ಐದು ವರ್ಷದ ಪುಟಾಣಿಯ ಮನಸ್ಸನ್ನು ಸಹ ಸತ್ಯ ಕದ್ದಿದ್ದಾರೆ.

ಜೂ.ಸತ್ಯಳನ್ನು ಕಾಡಿದ ಒರಿಜಲ್ ಸತ್ಯ

ಜೂ.ಸತ್ಯಳನ್ನು ಕಾಡಿದ ಒರಿಜಲ್ ಸತ್ಯ

ಮೊದಲೇ ಹೇಳಿದಂತೆ ಸತ್ಯ ಎಲ್ಲರನ್ನು ಅಟ್ರಾಕ್ಟ್ ಮಾಡುತ್ತಾಳೆ. ಸತ್ಯಳ ಟಾಮ್ ಬಾಯ್ ವೇಷವಂತು ಎಲ್ಲರ ಗಮನ ಸೆಳೆಯುತ್ತೆ. ಎಲ್ಲರಿಗೂ ಅವಾಜ್ ಹಾಕುತ್ತಾ, ನಮ್ಮದೇ ಅಡ್ಡ ನಿರ್ಮಿಸಿಕೊಳ್ಳಬೇಕು ಎಂದುಕೊಂಡವರಿಗಂತು ಸತ್ಯ ಮಾದರಿಯೇ ಸರಿ. ಟಾಮ್ ಬಾಯ್ ರೀತಿ ಸತ್ಯ ನಡೆದುಕೊಂಡು ಬರುತ್ತಾ ಇದ್ದರೆ, ಎದುರು ಬಂದವರು ಸೈಡಿಗೆ ಹೋಗದೆ ಇರುವುದಕ್ಕೆ ಸಾಧ್ಯವಿಲ್ಲ. ಇಂಥ ಲುಕ್ ಮಕ್ಕಳನ್ನು ಆಕರ್ಷಿಸದೆ ಇರುತ್ತದೆಯೇ. ತುಮಕೂರು ಜಿಲ್ಲೆಯ ಅರಕೆರೆ ಗ್ರಾಮದ ಆದ್ಯಾಳನ್ನು ಈ ಸ್ಟೈಲ್ ಸೆಳೆದಿದೆ. ಇದೇ ಕಾರಣಕ್ಕೆ ಸತ್ಯಳಂತೆ ಡ್ರೆಸ್ ಮಾಡಿಕೊಂಡು, ಫುಲ್ ಫೋಟೊಶೂಟ್ ಮಾಡಿಸಿದ್ದಾಳೆ. ಥೇಟ್ ಜೂನಿಯರ್ ಸತ್ಯಳಂತೆ ಕಾಣುತ್ತಿದ್ದಾಳೆ.

ಸತ್ಯಳಂತೆ ಸ್ಟ್ರಾಂಗ್ ಆಗಬೇಕೆಂದ ಆದ್ಯ ವಿನಯ್

ಸತ್ಯಳಂತೆ ಸ್ಟ್ರಾಂಗ್ ಆಗಬೇಕೆಂದ ಆದ್ಯ ವಿನಯ್

ಸತ್ಯ ಧಾರಾವಾಹಿಯಲ್ಲಿ ಯಾವುದಕ್ಕೂ ಹೆದರದ ಗಟ್ಟಿ ಹೆಣ್ಣು. ಯಾವುದೇ ಸಮಸ್ಯೆ ಬಂದರು ಅದಕ್ಕೆ ಹೆದರಿ ಓಡಿ ಹೋಗುವ ಬದಲಿಗೆ, ಸಮಸ್ಯೆಗೆ ಪರಿಹಾರ ಏನು ಎಂಬುದನ್ನು ಕಂಡು ಹಿಡಿದುಕೊಳ್ಳುತ್ತಾಳೆ. ಅದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಾಳೆ. ಇದು ಸತ್ಯಳಿಗಿರುವ ಶಕ್ತಿ. ಇದೇ ಶಕ್ತಿ, ಇದೇ ಕಾನ್ಫಿಡೆನ್ಸ್ ಆದ್ಯಾಳನ್ನು ಸೆಳೆದಿದೆ. ಆದ್ಯಾಳಿಗೆ ಕೇವಲ ಐದು ವರ್ಷ. ಆದರೆ ಅವಳ ಮನಸ್ಸು ವಾಲಿದ್ದು, ಸತ್ಯಳ ಒಳ್ಳೆಯ ಗುಣದ ಬಗ್ಗೆ ಇದು ನಿಜಕ್ಕೂ ಖುಷಿ ಪಡಬೇಕಾದಂತ ವಿಚಾರವೇ ಸರಿ. ಸತ್ಯ ಮಕ್ಕಳನ್ನು ಸಿಕ್ಕಾಪಟ್ಟೆ ಆವರಿಸಿದ್ದಾಳೆ ಎಂಬುದಕ್ಕೆ ಇದೇ ಸಾಕ್ಷಿ. ಆದ್ಯಾ ಸ್ಕೂಲಿಂದ ಬಂದು ಸ್ವಲ್ಪ ಸಮಯ ಸ್ನೇಹಿತರ ಜೊತೆ ಆಟವಾಡುತ್ತಾಳೆ. ಬಳಿಕ ಅಜ್ಜಿಯ ಜೊತೆ ಕೂತು ಸತ್ಯ ಧಾರಾವಾಹಿ ನೋಡುತ್ತಾಳೆ. ಈ ಧಾರಾವಾಹಿ ಒಂದೆರಡು ದಿನ ನೋಡಿದ್ದು ಅಷ್ಟೇ, ಆಮೇಲೆ ಆ ಸಮಯಕ್ಕೆ ಸರಿಯಾಗಿ ಸತ್ಯಳನ್ನು ನೋಡಬೇಕು ಎನ್ನುತ್ತಾಳೆ. ಆಗಾಗ ಸತ್ಯಳ ಧೈರ್ಯದ ಬಗ್ಗೆ ಮಾತನಾಡುತ್ತಾಳೆ. ನಾನು ಕೂಡ ಸತ್ಯಳ ರೀತಿ ಸ್ಟ್ರಾಂಗ್ ಆಗಿರಬೇಕು ಎನ್ನುತ್ತಿರುತ್ತಾಳೆ ಎಂದು ಆದ್ಯಾ ತಾಯಿ ನಯನ ಫಿಲ್ಮಿಬೀಟ್ ಗೆ ಮಾಹಿತಿ ನೀಡಿದ್ದಾರೆ.

ಜೂ. ಸತ್ಯಳನ್ನು ನೋಡಿ ಸೀನಿಯರ್ ಸತ್ಯ ಹೇಳಿದ್ದೇನು?

ಜೂ. ಸತ್ಯಳನ್ನು ನೋಡಿ ಸೀನಿಯರ್ ಸತ್ಯ ಹೇಳಿದ್ದೇನು?

'ಸತ್ಯ' ಧಾರಾವಾಹಿ ಆರಂಭವಾದಾಗಿನಿಂದ ಅದರ ಕ್ರೇಜ್ ಎಷ್ಟಿದೆ ಎಂಬುದನ್ನು ಹೇಳಬೇಕಿಲ್ಲ. ಸಾಕಷ್ಟು ಜನ ರೀಲ್ಸ್ ಮಾಡಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರೇ, ಇನ್ನೊಂದಷ್ಟು ಜನ ಸತ್ಯಳಂತೆ ವೇಷ ಹಾಕಿಕೊಂಡು ಗೌತಮಿ ಜಾದವ್‌ಗೆ ಪ್ರೋತ್ಸಾಹ ನೀಡುತ್ತಿದ್ದರು. ಇದೆಲ್ಲ ನೋಡಿ ಗೌತಮಿ ಸಾಕಷ್ಟು ಖುಷಿಪಟ್ಟಿದ್ದರು. ಇನ್ನು ಇದೀಗ ಐದು ವರ್ಷದ ಮಗುಗೆ ನಾನು ಸ್ಪೂರ್ತಿಯಾಗಿದ್ದೇನೆಂದು ಮತ್ತಷ್ಟು ಖುಷಿ ಪಟ್ಟಿದ್ದಾರೆ. ಆದ್ಯಾ ತಂದೆ ವಿನಯ್ ಮಗಳ ಫೋಟೊ ಹಾಕಿದ್ದನ್ನು ಗೌತಮಿ ಜಾದವ್ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

ಜಾನಕಿಯನ್ನು ಒಪ್ಪಿಸುವುದೇ ದೊಡ್ಡ ಸವಾಲು

ಜಾನಕಿಯನ್ನು ಒಪ್ಪಿಸುವುದೇ ದೊಡ್ಡ ಸವಾಲು

ಸತ್ಯಳಿಗೆ ಯಾರಿಗಾದರೂ ನಾಲ್ಕು ಬಾರಿಸು ಅಂದರೆ ಪಟಾರ್ ಅಂತ ಬಾರಿಸುತ್ತಾಳೆ. ಇಂತದ್ದೊಂದು ಕೆಲಸ ಆಗಬೇಕು ಎಂದರೆ ಪಟ್ ಅಂತ ಮಾಡುತ್ತಾಳೆ. ಆದರೆ ಪೂಜೆ ಮಾಡು. ಅಡುಗೆ ಮಾಡು ಅಂದರೆ ಪಾಪ ಅಡುಗೆ ಮನೆ ಬಗ್ಗೆ ಗೊತ್ತೆ ಇಲ್ಲದ ಸತ್ಯ ಏನು ತಾನೇ ಮಾಡಿಯಾಳು. ಸತ್ಯಳಿಗೆ ಈಗ ಎದುರಾಗಿರುವ ಸವಾಲು ಎಂದರೆ ಅದೇ ನೋಡಿ. ಪಾಪ ಅಕ್ಕ ಓಡಿ ಹೋದಳು ಅಂತ ಮಾನ ಉಳಿಸಲು, ರಾಯರ ಮನವಿಗೆ ಸ್ಪಂದಿಸಿ ಮದುವೆ ಏನೋ ಆಗಿದ್ದಾಳೆ. ಆದರೆ ಮಾತು ಮಾತಿಗೂ ನಿಂಗೆ ಸಂಸ್ಕಾರ ಇಲ್ಲ ಅನ್ನೋ ಅತ್ತೆ ಜಾನಕಿಯ ಮನವೊಲಿಸುವುದೇ ಸವಾಲಿನ ಕೆಲಸವಾಗಿದೆ.

More from Filmibeat

English summary
Zee Kannada Serial Sathya Written Update On Junior Satya Photo shoot. Here is the details about Aadya Vinay copying Sathya style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X