Sathya Serial: ರಾಯರನ್ನು ನೋಡಲು ಬಂದ ಸತ್ಯ ನೋವುಂಡಿದ್ದೇಕೆ?

By ಎಸ್ ಸುಮಂತ್

'ಸತ್ಯ' ಧಾರಾವಾಹಿಯಲ್ಲಿ ಸತ್ಯ ಮತ್ತು ಮೋಸದ ನಡುವಿನ ಯುದ್ಧ ನಡೆಯುತ್ತಿದೆ. ಮೋಸದಾಟಕ್ಕೆ ಸತ್ಯ ಇಕ್ಕಟ್ಟಿಗೆ ಸಿಲುಕಿದ್ದಾಳೆ. ದಿವ್ಯಾಳ ಅತಿಯಾಸೆಯಿಂದಾಗಿ ನಾನಾ ಸಮಸ್ಯೆಗಳು ಶುರುವಾಗಿದೆ. ಸತ್ಯ ಜೈಲಿಗೆ ಹೋಗಿ ಬಂದಿದ್ದಾಯ್ತು. ಆದರೆ ಈಗ ಸತ್ಯಳನ್ನು ಕಾರ್ತಿಕ್ ಕ್ಷಮಿಸುವ ಸ್ಥಿತಿಯಲ್ಲೇ ಇಲ್ಲದಂತಾಗಿದೆ. ಸತ್ಯಳನ್ನು ಮಾತಾಡಿಸಿದ್ರೆ ಖುಷಿ ಪಡುತ್ತಿದ್ದ ಕಾರ್ತಿಕ್ ಇಂದು ಅವಳನ್ನು ಕಂಡರೆ ಕಿಡಿಕಾರುತ್ತಿದ್ದಾನೆ.

ಇದಕ್ಕೆಲ್ಲಾ ಕಾರಣ ದಿವ್ಯಾಳ‌ ಮನಸ್ಸಿನೊಳಗಿರುವ ದುರಾಸೆ. ಆಕೆಗೆ ಬಾಲ‌ ಮತ್ತು ಕಾರ್ತಿಕ್ ನಡುವೆ ಆಯ್ಕೆಯ ಗೊಂದಲ ಇತ್ತು. ಕೊನೆಗೆ ಬಾಲನೇ ಸರಿ ಎಂಬ ನಿರ್ಧಾರಕ್ಕೆ ಬಂದಳು. ಆದರೆ ಇಲ್ಲಿ‌ಮದುವೆ ಮನೆ ಬಿಟ್ಟು ಹೋಗುವ ಹಾಗಿಲ್ಲ. ಬಾಲನನ್ನು ಬಿಡುವ ಹಾಗೂ ಇಲ್ಲ. ಏನೂ ತೊಂದರೆಯಾಗದಂತೆ ಬಾಲನನ್ನು ಪಡೆಯುವ ಹುನ್ನಾರ ಹೆಣೆದಳು. ಆ ಎಳೆಯಲ್ಲೂ ಸತ್ಯ ಸಿಕ್ಕಿ ಬಿದ್ದಳು.

ಸತ್ಯ ತೊಂದರೆಗೆ ಸಿಲುಕಿದ್ದೇಕೆ?

ಸತ್ಯ ತೊಂದರೆಗೆ ಸಿಲುಕಿದ್ದೇಕೆ?

ಸತ್ಯಳಿಗೆ ಯಾವತ್ತಿಗೂ ತನ್ನ ಕುಟುಂಬವೇ ಮೊದಲಾಗಿತ್ತು. ಅದಕ್ಕಾಗಿಯೇ ಹಗಲು ರಾತ್ರಿಯೆನ್ನದೇ ದುಡಿದು ದುಡಿದು ತನ್ನ ಖುಷಿಯನ್ನೇ ತ್ಯಾಗ ಮಾಡಿದ್ದಳು. ಇದ್ಯಾವುದೂ ದಿವ್ಯಾಳಿಗೆ ಅವಶ್ಯಕತೆ ಇರಲಿಲ್ಲ. ಹೀಗಾಗಿಯೇ ಸತ್ಯಳ ತ್ಯಾಗಕ್ಕೆ ಅವಳಲ್ಲಿ ಬೆಲೆ ಇರಲಿಲ್ಲ. ಸತ್ಯ ತನ್ನ ಕುಟುಂಬಸ್ಥರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿ ನಿಂತಿದ್ದಳು. ಕೊನೆಗೆ ತನ್ನ ಪ್ರೀತಿಯನ್ನು ಪಡೆಯುವ ಅಧಿಕಾರ, ಗಟ್ಟಿತನ ಇದ್ದರೂ, ಆಕೆ ಆ ಧೈರ್ಯವನ್ನು ಉಪಯೋಗಿಸಿಕೊಂಡಿದ್ದು ಮಾತ್ರ ತನ್ನವರ ಖುಷಿಗಾಗಿ. ಕೊನೆಗೆ ಆಕೆಗೆ ಸಿಕ್ಕಿದ್ದಾದರೂ ಏನು? ನೋವು, ಜೈಲುವಾಸ.

ಪ್ರೀತಿಸಿದವೇ ಅವಮಾನ ಮಾಡಿದ

ಪ್ರೀತಿಸಿದವೇ ಅವಮಾನ ಮಾಡಿದ

ಸತ್ಯ ಮತ್ತು ಕಾರ್ತಿಕ್ ಮೊದ ಮೊದಲಿಗೆ ಸ್ನೇಹಿತರೇ ಆಗಿದ್ದರು. ದಿವ್ಯಾಳ ಜೊತೆ ಮ್ಯಾರೇಜ್ ಫಿಕ್ಸ್ ಆಗಿದ್ದರು ಸಹ, ಕಾರ್ತಿಕ್ ಸತ್ಯಾಳ ಕಡೆಗೆ ವಾಲುತ್ತಿದ್ದ. ದಿವ್ಯಾಳಿಗಿಂತ ಅಮೂಲ್ ಬೇಬಿ ಮನಸ್ಸು ಹೆಚ್ಚು ಬೇಡಿದ್ದು ಸತ್ಯಾಳನ್ನು. ಆದರೆ ಕಾರ್ತಿಕ್ ತನ್ನ ಅಕ್ಕನ ಗಂಡ ಆಗುತ್ತಿರುವ ವರ ಎಂದು ಗೊತ್ತಾದ ಕೂಡಲೇ ಸತ್ಯ ತನ್ನೆಲ್ಲಾ ನೋವನ್ನು ನುಂಗಿಕೊಂಡಳು. ಅಮೂಲ್ ಬೇಬಿಯ ನೆನಪನ್ನು ಬೆಂಕಿಯಲ್ಲಿ ಸುಟ್ಟಳು. ಇಷ್ಟಾದರೂ ಕೊನೆಗೆ ಕುಟುಂಬಸ್ಥರಿಂದ ಅಷ್ಟೇ ಯಾಕೆ, ತಾನೂ ಪ್ರೀತಿಸಿದವರಿಗಿಂತ ಬೇರೆ ಯಾರು ಇಷ್ಟು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬಂತಿದ್ದ ಅಮೂಲ್ ಬೇಬಿಯಿಂದಲೂ ನೋವು ತಿಂದಳು.

ಸತ್ಯಗೆ ಆಘಾತ ಆಗಿದ್ದು ಏಕೆ?

ಸತ್ಯಗೆ ಆಘಾತ ಆಗಿದ್ದು ಏಕೆ?

ದಿವ್ಯಾ ಮದುವೆ ವಿಚಾರದಲ್ಲಿ ಕಾರ್ತಿಕ್‌ಗಿಂತ ಬಾಲ ಉತ್ತಮ ಅಂತ ಆಯ್ಕೆ ಮಾಡಿಕೊಂಡಾಗಲೇ ಆ ಕಡೆಯಿಂದ ಮಾಸ್ಟರ್ ಫ್ಲ್ಯಾನ್ ರೆಡಿಯಾಗಿತ್ತು. ಯಾವುದೇ ತೊಂದರೆಯಾಗದಂತೆ ದಿವ್ಯಾಳ ಕಿಡ್ನ್ಯಾಪ್ ಮಾಡೋಕೆ ರೆಡಿಯಾಗಿದ್ದರು. ಆದರೆ ಸತ್ಯಾಳ ತಮ್ಮನಿಂದ ಈ ವಿಚಾರ ಬಯಲಾಗಿತ್ತು. ದಿವ್ಯಾ ಸೇರಿದಂತೆ ಎಲ್ಲರನ್ನು ಕಾಪಾಡಲೂ ಸತ್ಯ ರೌಡಿ ಬೇಬಿ ಅವತಾರ ತಾಳಿದ್ದಳು. ಎಲ್ಲರನ್ನು ತನ್ನ ಶಕ್ತಿಯಿಂದ ಹೊಡೆದುರುಳಿಸಿದಳು. ಇದೆಲ್ಲವನ್ನು ನೋಡಿದ ರಾಮಚಂದ್ರ ರಾಯರಿಗೆ ಆರೋಗ್ಯ ಸಮಸ್ಯೆ ಕಾಡಿತ್ತು. ಅತ್ತ ಸತ್ಯ ಜೈಲಿಗೆ ಹೋದಳು.

ಅಮೂಲ್ ಬೇಬಿ ಮನಸ್ಸು ಕರಗಿರಲಿಲ್ಲ

ಅಮೂಲ್ ಬೇಬಿ ಮನಸ್ಸು ಕರಗಿರಲಿಲ್ಲ

ಸತ್ಯ ಜೈಲಲ್ಲಿದ್ದಿದ್ದು ರಾಯರಿಗೆ ಬೇಸರ ತರಿಸಿತ್ತು. ಸತ್ಯಳನ್ನು ಬಿಡಿಸಿಕೊಂಡು ಬರುವಂತೆ ಹೇಳಿದ್ದರು. ಜೈಲಿಗೆ ಹೋದ ಕಾರ್ತಿಕ್‌ಗೆ ಸತ್ಯಳ ದುರಹಂಕಾರ ಕಂಡಿತೇ ವಿನಃ ಅದು ಆಕೆಯ ಗತ್ತು, ಆಕೆಯ ಗುಣ ಎಂಬುದು ಅರ್ಥವಾಗಲೇ ಇಲ್ಲ. ತಾನೇನು ತಪ್ಪು ಮಾಡಿಲ್ಲ ಎಂಬುದು ಸತ್ಯಳ ಭಾವನೆಯಾಗಿತ್ತು. ಕಾರ್ತಿಕ್ ಬಿಡಿಸಲಿಲ್ಲ. ಆದರೆ ಸತ್ಯ ಯಾವತ್ತೋ ಮಾಡಿದ್ದ ಒಳ್ಳೆಯ ಕೆಲಸ ಆಕೆಯನ್ನು ಜೈಲಿನಿಂದ ಹೊರಗೆ ಬರುವಂತೆ ಮಾಡಿತ್ತು. ಅದೇ ಖುಷಿಯಲ್ಲಿ ರಾಯರನ್ನು ನೋಡಲು ಹೋದರೆ ತಾಯಿ ಮೊದಲೇ ಒಪ್ಪಲಿಲ್ಲ. ಅಲ್ಲಿಗೆ ಬಂದ ಕಾರ್ತೀಕ್ ಸತ್ಯಳ ಮನವಿಯನ್ನು ಕೇಳಿಸಿಕೊಳ್ಳದೆ ಧರಧರನೆ ಎಳೆದು ಹೊರಗೆ ದಬ್ಬಿದ್ದಾನೆ.

More from Filmibeat

English summary
zee kannada serial Sathya Written Update on March 30th episode. Here is the details about Karthik Hate sathya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X