Sathya: ಕಾನೂನು ಉಲ್ಲಂಘಿಸಿದ ಕಾರ್ತಿಕ್‌ಗೆ ಸತ್ಯ ದಂಡ; ಸುಳ್ಳು ಹೇಳಿ ದಿವ್ಯಾ ಪಜೀತಿ
ಸತ್ಯ ಪೊಲೀಸ್ ಇನ್ಸ್‌ಪೆಕ್ಟರ್ ಆದ ಬಳಿಕ ಬಹಳ ಖಡಕ್ ಅಧಿಕಾರಿ ಎಂದೇ ಫೇಮಸ್ ಆಗಿದ್ದಾಳೆ. ಅನ್ಯಾಯದ ವಿರುದ್ಧ ಹೋರಾಡುವುದೇ ಆಕೆಯ ಕಾಯಕ. ಕಾರ್ತಿಕ್‌ಗೆ ಪೊಲೀಸ್ ಜೀಪ್ ಓಡಿಸಬೇಕು ಎನ್ನುವ ಆಸೆ. ಹೆಂಡತಿ ಪೊಲೀಸ್ ಅಧಿಕಾರಿ ಎನ್ನುವ ಜಂಭ. ಪೊಲೀಸ್ ಜೀಪ್‌ನಲ್ಲಿ ನಾನು ಎಲ್ಲಿ ಹೋದರೂ ನನ್ನನ್ನು ಯಾರು ಪ್ರಶ್ನೆ ಮಾಡುವುದು ಇಲ್ಲ ಎನ್ನುವ ಆಲೋಚನೆ.
ಕಾರ್ತಿಕ್ ಗೆಳೆಯನ ಜೊತೆ ಪೊಲೀಸ್ ಜೀಪ್‌ನಲ್ಲಿ ರೈಡಿಂಗ್ ಹೋಗುತ್ತಾನೆ. ರಸ್ತೆಯಲ್ಲಿ ಜೀಪ್ ನೋಡಿ ಕಾನ್ಸ್‌ಸ್ಟೇಬಲ್, ಸತ್ಯ ಮೇಡಂಗೆ ಕರೆ ಮಾಡುತ್ತಾನೆ. ಸತ್ಯ ಯೂನಿಫಾರಂ ತೊಟ್ಟು ರೆಡಿ ಆಗುತ್ತಿರುತ್ತಾಳೆ. ಸಹೋದ್ಯೋಗಿ ಕರೆ ಮಾಡಿ ಸತ್ಯ ಮೇಡಂ ನೀವು ಎಲ್ಲಿದ್ದಿರಾ ಎಂದಾಗ ಸತ್ಯ ಮನೆಯಲ್ಲಿ ಇದ್ದೇನೆ ಎಂದು ಹೇಳುತ್ತಾಳೆ. ಮೇಡಂ ಪೊಲೀಸ್ ಜೀಪ್ ನಿಮ್ಮದು, ನೀವು ಮನೆಯಲ್ಲಿ ಇದ್ದೇನೆ ಎನ್ನುತ್ತಿದ್ದೀರಿ, ಹಾಗಾದರೆ ಜೀಪ್‌ನಲ್ಲಿ ಯಾರು ಇದ್ದಾರೆ ಎಂದು ಪ್ರಶ್ನೆ ಮಾಡುತ್ತಾನೆ.

ಜೀಪ್ ಅನ್ನು ಸ್ಟಾಪ್ ಮಾಡಿ ನಾನು ಬರುತ್ತೇನೆ ಎಂದು ಸತ್ಯ ಅವಸರವಸರವಾಗಿ ಹೊರಡುತ್ತಾಳೆ. ಇತ್ತ ಕಾನ್ಸ್‌ಸ್ಟೇಬಲ್ ಜೀಪ್ ನಿಲ್ಲಿಸುತ್ತಾನೆ. ಕಾರ್ತಿಕ್ ಹಾಗೂ ಆತನ ಗೆಳೆಯ ಜೀಪ್‌ನಿಂದ ಕೆಳಗಿಳಿದು ಬಂದು ಪೊಲೀಸ್ ಪೇದೆ ಜೊತೆ ಮಾತಿಗೆ ಇಳಿಯುತ್ತಾರೆ. ನಾನು ಯಾರು ಗೊತ್ತಾ . ಸತ್ಯ ಗಂಡ ನಾನು ಎಂದು ಕೊಂಚ ದರ್ಪದಿಂದ ಹೇಳುತ್ತಾನೆ. ಆಗ ಸತ್ಯ ಬರುತ್ತಾಳೆ . ಯಾಕೆ ಈ ಪೊಲೀಸ್ ಜೀಪ್ ನಲ್ಲಿ ನೀವು ಬಂದ್ರಿ ಎಂದು ಸತ್ಯ, ಕಾರ್ತಿಕ್ ಬಳಿ ಪ್ರಶ್ನೆ ಮಾಡುತ್ತಾಳೆ. ಆತ ಕೋಪದಿಂದ ಪೊಲೀಸ್ ಜೀಪ್‌ನಲ್ಲಿ ಹೋಗೋಣ ಅಂದುಕೊಂಡಿದ್ದೆ. ಅದಕ್ಕೆ ಬಂದ್ವಿ . ಈಗ ಅಂತಹದ್ದು ಏನಾಗಿದೆ ಎಂದಾಗ ಸತ್ಯ ಏನು ಆಗಿಲ್ಲ. ಆದರೆ ಪೊಲೀಸ್ ಜೀಪ್ ಹತ್ತಿದ ತಪ್ಪಿಗೆ ಫೈನ್ ಕಟ್ಟಬೇಕು ಎಂದಾಗ ಕಾರ್ತಿಕ್‌ಗೆ ಕೋಪ ಬರುತ್ತದೆ .
ಕಾರ್ತಿಕ್ಗೆ ಫೈನ್ ಹಾಕಿದ ಸತ್ಯ
ಫೈನ್ ಕಟ್ಟುತ್ತೇವೆ ಎಂದಾಗ ಸತ್ಯ ಸುಮ್ಮನಾಗುತ್ತಾಳೆ. ಇತ್ತ ದಿವ್ಯಾ, ಬಾಲನನ್ನು ಹೇಗಾದರೂ ನನ್ನವನಾಗಿ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿತ್ತಾಳೆ. ಆ ಹಾದಿಯಲ್ಲಿ ಪಜೀತಿಗೆ ಸಿಲುಕಿದ್ದಾಳೆ. ಮನೆಯ ಎದುರು ಬಹಳ ದೊಡ್ಡ ರಂಗೋಲಿ ಹಾಕುತ್ತಾಳೆ ದಿವ್ಯ. ಇದನ್ನು ನೋಡಿದ ಗಿರಿಜಾಗೆ ಶಾಕ್ ಆಗುತ್ತದೆ. ದಿವ್ಯಾಗೆ ಹೇಗಾದರೂ ಮಾಡಿ ತನ್ನ ಮನೆಯವರ ಹಾಗೆಯೇ ಬಾಲ ಮನಸ್ಸು ಗೆಲ್ಲಬೇಕು ಎಂದು ಆಲೋಚನೆ ಮಾಡಿ ಸುಮ್ಮನೆ ರಂಗೋಲಿ ಬಿಡುವ ಹಾಗೆ ನಾಟಕ ಮಾಡುತ್ತಾಳೆ.
ರಂಗೋಲಿ ನೋಡಿ ಗಿರಿಜಮ್ಮ ಶಾಕ್
ರಂಗೋಲಿ ನೋಡಿ ಗಿರಿಜಾ ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಹುಟ್ಟಿದ್ದಾನೇ ಎಂದು ಆಲೋಚನೆ ಮಾಡುತ್ತಿರುತ್ತಾರೆ. ಇತ್ತ ದಿವ್ಯಾ ಮೆತ್ತಗೆ ಮನೆಯಾಚೆ ತಿರುಗಿ ನೋಡಿದಾಗ ಅಮ್ಮ ಅಜ್ಜಿ ಇಬ್ಬರು ಆಕೆಯನ್ನೇ ನೋಡುತ್ತಾ ಇರುತ್ತಾರೆ. ದಿವ್ಯಗೆ ಬಾಲನನ್ನು ಹೇಗಾದರೂ ಮಾಡಿ ಇಂಪ್ರೆಸ್ ಮಾಡಬೇಕು ಎನ್ನುವ ಆಲೋಚನೆ. ಮನದಲ್ಲಿ ನೋವಿದ್ದರೂ ಅದನ್ನು ಹೇಳಿಕೊಳ್ಳದೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುತ್ತಾಳೆ. ಬಾಲನ ಪ್ರೀತಿ ಗಳಿಸಬೇಕು ಎನ್ನುವ ಆಸೆಯಿಂದ ದಿವ್ಯ ಬದಲಾಗುತ್ತಾ ಇದ್ದಾಳೆ ಎಂದರೆ ಅದು ಎಲ್ಲರ ಭ್ರಮೆ ಅಷ್ಟೆ.

ದಿವ್ಯಾ ಪರಿಸ್ಥಿತಿ ನೋಡಿ ನಕ್ಕ ಮನೆ ಮಂದಿ
ಅಜ್ಜಿ ಹೊಗಳಬೇಕು ಎನ್ನುವಷ್ಟರಲ್ಲಿ ರಂಗೋಲಿ ಬಿಟ್ಟಾಕೆ ಬಂದು ದಿವ್ಯಾ ಅಕ್ಕ ನೂರು ರೂಪಾಯಿ ಕೊಡ್ತೀನಿ ಅಂದ್ರಿ. ನಾನು ರಂಗೋಲಿ ಬಿಟ್ಟಿದ್ದಕ್ಕೆ ನನಗೆ ನೂರು ರೂಪಾಯಿ ಕೊಡಿ ಎಂದು ಕೇಳುತ್ತಾಳೆ. ಇದನ್ನು ಕೇಳಿ ದಿವ್ಯಾಗೆ ಮನೆಯವರ ಮುಂದೆ ಏನು ಹೇಳಬೇಕು ಎಂದೇ ತಿಳಿಯದಾಗುತ್ತದೆ.


Click it and Unblock the Notifications











