Seetha Raama: ಚಾಂದಿನಿಯ ನೆನಪಲ್ಲಿ ರಾಮ, ಸಿಹಿಯ ಮಾತಿಗೆ ರಾಮನ ಮನಸ್ಸು ನಿರಾಳ

By Poorva

ಸೀತಾರಾಮ ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ಪ್ರಸಾರ ಆಗುತ್ತಿದ್ದು, ಈ ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ. ಇದೀಗ ರಾಮನ ಜೀವನದಲ್ಲಿ ಆಟ ಆಡಲು ಭಾರ್ಗವಿ ಶುರು ಮಾಡಿದ್ದಾಳೆ. ರಾಮನಿಗೆ ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿರುವ ಸಂಚಿನಲ್ಲಿ ಇದ್ದಾಳೆ. ಆದರೆ ಪಾಪ ರಾಮನಿಗೆ ಈ ವಿಚಾರ ತಿಳಿದೇ ಇಲ್ಲ.

ಹಳದಿ ಬಣ್ಣದ ಕಾರು ನೋಡಿದ ರಾಮನಿಗೆ ಅದೇನಾಯಿತೋ ಗೊತ್ತಿಲ್ಲ.. ಮೈಂಡ್ ಬ್ಲಾಂಕ್ ಆಗಿ ಹೋಗುತ್ತದೆ. ಚಾಂದಿನಿ ಎಂದು ನಿಧಾನವಾಗಿ ಅಶೋಕನ ಬಳಿ ಹೇಳುತ್ತಾನೆ. ಇದನ್ನು ನೋಡಿದ ಅಶೋಕ ರಾಮನನ್ನು ಕಂಟ್ರೋಲ್ ಮಾಡುತ್ತಾನೆ. ಆತ ಮೆತ್ತಗೆ ಹೇಳುತ್ತಾನೆ ಚಾಂದಿನಿ ನಿನ್ನ ಜೀವನದಲ್ಲಿ ಯಾವತ್ತೂ ಬರಲು ಸಾಧ್ಯವಿಲ್ಲ. ನೀನು ಯಾಕೆ ಪದೇ ಪದೆ ಅದೇ ವಿಚಾರವನ್ನು ನೆನೆದು ಕೊರಗುತ್ತಿಯಾ? ಯೋಚನೆ ಮಾಡಬೇಡ ಎಂದು ಹೇಳುತ್ತಾನೆ. ಇದನ್ನು ಕೇಳಿದ ರಾಮ ಕೊಂಚ ರಿಲ್ಯಾಕ್ಸ್ ಆಗುತ್ತಾನೆ.

Zee Kannada serial Seetha Raama written update on 17th October

ಹಾಗೆಯೇ ಆತ ಮನೆಗೆ ಬರುತ್ತಾನೆ. ಅಶೋಕನ ಜೊತೆ ಆಗ ಮನೆ ಮಂದಿ ಕೂಡ ರಾಮ ಲವ್‌ನಲ್ಲಿ ಬಿದ್ದಿದ್ದಾನೆ ಎಂದು ಖುಷಿಯಲ್ಲಿ ವಿಶ್ ಮಾಡಿದಾಗ ರಾಮ ಕೊಂಚ ಜೋರಾಗಿಯೇ ಯಾವ ಲವ್ ಇಲ್ಲ... ಎನು ಇಲ್ಲ ಎಂದು ಹೇಳಿ ಅಲ್ಲಿಂದ ನೇರವಾಗಿ ರೂಮ್‌ಗೆ ಹೋಗುತ್ತಾನೆ.. ಯಾವತ್ತೂ ರಾಮ್ ಯಾರ ಮೇಲೂ ವಿನಾಕಾರಣ ರೇಗಿದವನಲ್ಲ.

ರಾಮನ ಮಾತಿಗೆ ಮನೆ ಮಂದಿ ಕಕ್ಕಾ ಬಿಕ್ಕಿ

ಆದರೆ ಇದೀಗ ಕೊಂಚ ಜೋರಾಗಿಯೇ ರೇಗಾಡುತ್ತಾ ಇರುತ್ತಾನೆ. ಇನ್ನೂ ಅದೇ ಸಂದರ್ಭದಲ್ಲಿ ರಾಮನಿಗೆ ಸಿಹಿ ವಿಡಿಯೋ ಕಾಲ್ ಮಾಡುತ್ತಾಳೆ. ಮೊದಲಿಗೆ ಬಹಳ ಸಪ್ಪೆಯಿಂದ ಹಲೋ ಎಂದು ಹೇಳಿದಾಗ ಸಿಹಿ ಆ ಕಡೆಯಿಂದ ಏನು ಫ್ರೆಂಡ್ ಬ್ಯುಸಿ ಇದ್ದೀಯಾ ಎಂದೆಲ್ಲ ಕೇಳುತ್ತಾ ಇರುತ್ತಾಳೆ .. ಆಗ ರಾಮ ಹಾಗೇನಿಲ್ಲ ಎಂದೆಲ್ಲ ಹೇಳುತ್ತಾನೆ.

ಸಿಹಿ ಮಾತಿಗೆ ಖುಷಿ ಪಟ್ಟ ರಾಮ

ರಾಮ ಸಿಹಿ ಮಾತಿಗೆ ಯಾವತ್ತೂ ಬೇಸರ ಪಟ್ಟುಕೊಂಡಿಲ್ಲ. ಯಾಕೆಂದರೆ ಅಷ್ಟು ಚೆನ್ನಾಗಿ ಸಿಹಿ ರಾಮ ನನ್ನು ಆವರಿಸಿಕೊಂಡು ಬಿಟ್ಟಿದ್ದಾಳೆ. ಆದರೆ ರಾಮ ಮಾತ್ರ ಸಿಹಿ ಮಾತಿಗೆ ನಕ್ಕು ನಕ್ಕು ಸುಸ್ತು ಆಗುತ್ತಿದ್ದ. ಇನ್ನೂ ಸಿಹಿಗೆ ಕ್ಯಾಮರಾದಲ್ಲಿ ನೋಡಿದಾಗಲೇ ತಿಳಿಯುತ್ತದೆ. ಇದು ರಾಮನ ಮನೆ ಅಲ್ಲ ಎಂದು ಆ ಕೂಡಲೇ ರಾಮ ನನ್ನು ಪ್ರಶ್ನೆ ಮಾಡಿದಾಗ ಅಶೋಕ ಮೆತ್ತಗೆ ರಾಮ ನ ಬಳಿ ಬಂದು ನಿಂತು ಇದು ನನ್ನ ಮನೆ ಎಂದು ಹೇಳುತ್ತಾನೆ.

Zee Kannada serial Seetha Raama written update on 17th October

ಬಾಸ್‌ನನ್ನು ನೋಡಿ ಭಯ ಪಟ್ಟ ಸೀತಾ

ಇನ್ನೂ ಬಾಸ್‌ನ ನೋಡಿ ಸೀತಾಗೆ ಮಾತ್ರ ಬಹಳ ಭಯ ಆಗುತ್ತದೆ. ಅವರಿಬ್ಬರೂ ಏನಾದರು ಕೆಲಸದಲ್ಲಿ ಇರಬಹುದು. ನಾವು ಕರೆ ಮಾಡಿ ತಪ್ಪು ಮಾಡಿದೆ ಎಂದೆಲ್ಲ ಹೇಳುವಾಗ ಅಶೋಕ ಮಾತ್ರ ಕೂಲ್ ಆಗಿ ಅದೇನಿಲ್ಲ. ಹಾಗೆಲ್ಲ ಯೋಚನೆ ಮಾಡಬೇಡಿ ಎಂದು ಹೇಳುತ್ತಾನೆ .ಆ ಬಳಿಕ ಸಿಹಿ ಹಾಗೂ ರಾಮನ ಮಾತುಕತೆ ಮುಂದುವರೆಯುತ್ತದೆ.

More from Filmibeat

English summary
zee Kannada serial Seetha Raama update on 17th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X