Seetha Raama: ಸೀತಾ ನೆನಪಲ್ಲಿರೋ ರಾಮನ ಕಾಲೆಳೆದ ಅಶೋಕ, ಭಾರ್ಗವಿಗೆ ಟೆನ್ಶನ್ ಶುರು!

By Poorva

ಸೀತಾರಾಮ ಧಾರಾವಾಹಿಯಲ್ಲಿ ಈಗ ರಾಮನಿಗೆ ಸೀತಾ ಮೇಲೆ ಪ್ರೀತಿಯಾಗಿದೆ. ನವರಾತ್ರಿಯ ದಿನದಂದೇ ಸೀತಾ ಮೇಲೆ ರಾಮನಿಗೆ ಒಲವಾಗಿದೆ. ಸೀತಾಳನ್ನು ನೋಡಿದ ಕೂಡಲೇ ರಾಮನ ಮನದಲ್ಲಿ ತಂಗಾಳಿ ಮೂಡಿದೆ. ಸದಾ ಚಾಂದಿನಿಯ ನೆನಪಲ್ಲೇ ಇದ್ದ ರಾಮನಿಗೆ ಇದೀಗ ಸೀತಾ ಮೇಲೆ ಲವ್ ಆಗಿದೆ. ರಾಮ ಕಳೆದು ಹೋಗಿ ಬಿಡುತ್ತಾನೆ.

ಆತ ಕಣ್ಣು ಮಿಟುಕಿಸದ ಹಾಗೆ ಸೀತಾಳನ್ನು ನೋಡುತ್ತಿರುತ್ತಾನೆ. ಸೀತಾಗೆ ಎಲ್ಲರೂ ಕಾಮೆಂಟ್ ಮಾಡುತ್ತಿರುತ್ತಾರೆ. ಬಹಳ ಚೆನ್ನಾಗಿದೆ ಸೀರೆ ಬಹಳ ಸೊಗಸಾಗಿದೆ ಎಂದೆಲ್ಲ ಆದರೆ ರಾಮ ಮಾತ್ರ ಸೀತಾಳನು ನೋಡುತ್ತಿದ್ದ ಹೊರತು ಆಕೆಗೆ ಯಾವುದೇ ಕಾಮೆಂಟ್‌ಳನ್ನು ಮಾಡುತ್ತಿರಲಿಲ್ಲ. ಇದನ್ನು ನೋಡಿದ ಸೀತಾ ನಾನು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಿದ್ದೇನಾ ಎಂದು ಕೇಳುತ್ತಾಳೆ.

Zee Kannada serial Seetha Raama written update on 1st November

ಸೀತಾ ಪ್ರಶ್ನೆಗೆ ಏನು ಹೇಳಬೇಕೆಂದು ತಿಳಿಯದೆ ಬಹಳ ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಹೇಳುತ್ತಾನೆ. ಇನ್ನು ಸೀತಾ ಆಫೀಸ್ ನಿಂದ ಹೋದ ಬಳಿಕ ರಾಮನನ್ನು ಆತನ ಗೆಳೆಯ ಅಶೋಕ ಚೇಡಿಸುತ್ತಾನೆ. ಈ ಮುಂಚೆ ಅಶೋಕ ರಾಮನ ಬಳಿ ಸೀತಾಗೆ ನಿನ್ನ ಮೇಲೆ ಪ್ರೀತಿಯಾಗಿದೆ. ರಾಮ ನೀನು ಕೂಡ ಪ್ರೀತಿಯಲ್ಲಿ ಬಿದ್ದಿದ್ದೀಯಾ ಎಂದು ಹೇಳುತ್ತಿರುತ್ತಾನೆ.

ಸೀತಾಳನ್ನು ನೋಡಿ ಕಳೆದು ಹೋದ ರಾಮ

ಅಶೋಕನ ಮಾತಿಗೆ ರಾಮನಿಗೆ ಏನು ಹೇಳಬೇಕೆಂದು ತಿಳಿಯದೆ ನಾವು ಆಫೀಸಿನಿಂದ ಹೊರಟು ಮನೆಗೆ ಹೋಗುವ ಎಂದು ಹೇಳುತ್ತಾನೆ. ಇನ್ನು ಕಾರಿನಲ್ಲಿ ಕುಳಿತಿರಬೇಕಾದರೆ ಕೂಡ ರಾಮನ ಕಾಲು ಎಳೆಯುತ್ತಾನೆ ಅಶೋಕ. ಆಗಲಿ ತನ್ನ ಗೆಳೆಯನ ಬಳಿ ತನ್ನ ಹೊಸ ಮನೆಗೆ ಗೃಹಪ್ರವೇಶ ಇದೆ. ಅದಕ್ಕೆ ನಿನ್ನನ್ನು ಕರೆಯುವುದಿಲ್ಲ ನೀನು ಕೂಡ ನನ್ನ ಮನೆಯವ ಎಂದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಅಶೋಕ ಮಾತ್ರ ನನ್ನ ಮಾತಿನ ದಾಟಿಯನ್ನು ಬದಲಾಯಿಸಿದೆ ಎನ್ನುತ್ತಾನೆ. ರಾಮ ನಸು ನಕ್ಕು ಸುಮ್ಮನಾಗುತ್ತಾನೆ.

ರಾಮನ ಮದುವೆ ಬಗ್ಗೆ ಯೋಚಿಸುತ್ತಾ ಇರುವ ತಾತ

ಇನ್ನು ಮರುದಿನ ರಾಮನ ಮನೆಯ ಗ್ರಹಪ್ರವೇಶಕ್ಕೆ ಎಲ್ಲರೂ ಬಂದಿರುತ್ತಾರೆ. ಆಮೇಲೆ ರಾಮನ ತಾತ, ರಾಮ ಮತ್ತು ಆತನ ಹೆಂಡತಿ ಪೂಜೆಗೆ ಕುಳಿತಿದ್ದರೇ ಬಹಳ ಚೆನ್ನಾಗಿತ್ತು. ಅವರಿಬ್ಬರೂ ಪೂಜೆಗೆ ಕುಳಿತುಕೊಳ್ಳಬಹುದಿತ್ತು ಎಂದು ಹೇಳಿದಾಗ ರಾಮ ಸುಮ್ಮನಾದರೆ ಭಾರ್ಗವಿ ಮಾತ್ರ ಬಹಳ ಕೋಪ ಮಾಡಿಕೊಂಡಿರುತ್ತಾಳೆ. ಆದರೆ ಇದನ್ನೆಲ್ಲ ನೋಡಿದ ರಾಮನ ಚಿಕ್ಕಪ್ಪನಿಗೆ ಬಹಳ ಖುಷಿಯಾಗುತ್ತದೆ.

Zee Kannada serial Seetha Raama written update on 1st November

ಮಾವನ ಮಾತು ಕೇಳಿ ಕೋಪಗೊಂಡ ಭಾರ್ಗವಿ

ಭಾರ್ಗವಿಗೆ ರಾಮನಿಗೆ ಬರುವ ಹೆಂಡತಿ ಪಾಠ ಕಲಿಸುತ್ತಾಳೆ ಎಂದು ರಾಮನ ಚಿಕ್ಕಪ್ಪ ಮನದಲ್ಲಿ ಅಂದುಕೊಳ್ಳುತ್ತಾನೆ .ಇನ್ನು ಗೃಹಪ್ರವೇಶದ ಪೂಜೆಗೆ ಭಾರ್ಗವಿ ಪೂಜೆಗೆ ಕುಳಿತುಕೊಳ್ಳುತ್ತಿರುತ್ತಾಳೆ. ಇನ್ನು ಮನೆಯಿಂದ ಹೊರ ಬರಬೇಕಾದರೆ ರಾಮನ ಚಿಕ್ಕಪ್ಪ ಭಾರ್ಗವಿಯ ಬಳಿ ನೀನು ಈ ಮನೆಗೆ ಮಾಡಿದ ಮೋಸ ಖಂಡಿತವಾಗಿಯೂ ಹೊರ ಬಂದೇ ಬರುತ್ತಿದೆ. ರಾಮನಿಗೆ ಅತ್ತಿಗೆ ಯಾವತ್ತು ಕಾವಲಾಗಿ ಇರುತ್ತಾರೆ. ನಿನ್ನ ಆಟ ಇನ್ನೂ ತುಂಬಾ ದಿನ ನಡೆಯುವುದಿಲ್ಲ ಎಂದು ಹೇಳಿದಾಗ ಭಾರ್ಗವಿಗೆ ಬಹಳ ಕೋಪ ಬರುತ್ತದೆ.

More from Filmibeat

English summary
Seetha Raama serial November 1st episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X