Seetha Raama: ಸಿಹಿಯನ್ನು ಕಿಡ್ನಾಪ್ ಮಾಡಿದ ರೌಡಿಗಳು, ಸೀತಾಗೆ ತಪ್ಪದ ತಲೆನೋವು
ಸೀತಾರಾಮದಲ್ಲಿ ಪ್ರಿಯಾಗೆ ವರ್ಗಾವಣೆ ಬಿಸಿ ತಾಗಿದ್ರೆ, ಇದೀಗ ಸಿಹಿ ಕಿಡ್ನಾಪ್ ಆಗಿದ್ದಾಳೆ. ಭಾರ್ಗವಿಯ ಮಾತಿನ ಪ್ರಕಾರ ಎಲ್ಲವೂ ನಡೆದು ಹೋಗುತ್ತಿದೆ. ಇತ್ತ, ರಾಮ ಹಾಗೂ ಅಶೋಕ್ ನಡುವೆ ಇರುವಂತಹ ಒಂದು ಸೀಕ್ರೆಟ್ ರಾಮನ ಚಿಕ್ಕಪ್ಪನಿಗೆ ತಿಳಿದು ಹೋಗಿದೆ. ಆತ ಇದನ್ನೆಲ್ಲಾ ಭಾರ್ಗವಿಯ ಬಳಿ ಹೇಳಿದರೆ ಆಕೆಗೆ ಖುಷಿಯಾಗುತ್ತದೆ.
ಇತ್ತ, ಅಶೋಕನ ಬಳಿಗೆ ಸೀತಾ ಹಾಗೂ ಪ್ರಿಯ ಬೆಳಗಾವಿಗೆ ಟ್ರಾನ್ಸ್ಫರ್ ಕೊಟ್ಟಿರುವ ವಿಚಾರವನ್ನು ಖಂಡಿಸಿರುವ ಸೀತಾ ಬಾ ಪ್ರಿಯ ಬಾಸ್ ಬಳಿ ಮಾತನಾಡೋಣ ಎಂದು ಹೇಳುತ್ತಾಳೆ. ಅಶೋಕನ ಬಳಿಗೆ ಪ್ರಿಯಾಳನ್ನು ಕರೆದುಕೊಂಡು ಬಂದ ಸೀತಾ, ಬಾಸ್ ಪ್ರಿಯಾಗೆ ಬೆಳಗಾವಿಗೆ ಟ್ರಾನ್ಸ್ಫರ್ ಕೊಟ್ಟಿದ್ದೀರಾ, ಇದು ಆಕೆಗೆ ಬಹಳ ಕಷ್ಟವಾಗುತ್ತದೆ. ಆಕೆ ಇದೀಗ ರೂಂಗೆ ಅಡ್ವಾನ್ಸ್ ಕೂಡ ಪೇ ಮಾಡಿದ್ದಾಳೆ. ದಯವಿಟ್ಟು ಆಕೆಗೆ ಇಲ್ಲಿ ಇರುವ ಹಾಗೆ ಮಾಡಿ ಎನ್ನುತ್ತಾಳೆ.

ಸೀತಾಗೆ ಖಡಕ್ ಎಚ್ಚರಿಕೆ ನೀಡಿದ ಅಶೋಕ
ಹಾಗಾದರೆ ಪ್ರಿಯಾ ಬದಲಿಗೆ ನೀವೇ ಹೋಗಿ ಎಂದು ಸೀತಾಗೆ ಅಶೋಕ ಹೇಳುತ್ತಾನೆ. ಅಶೋಕನ ಮಾತಿಗೆ ಸೀತಾ ಕಂಗಾಲಾಗಿ ಹೋಗುತ್ತಾಳೆ ಆ ಬಳಿಕ ಸುಮ್ಮನೆ ಆಗುತ್ತಾಳೆ. ಏನೇ ಹೇಳಿದರು ಅಶೋಕ ಮಾತ್ರ ಇದಕ್ಕೆ ಒಪ್ಪದೇ ಹೋಗುತ್ತಾನೆ. ಆಫೀಸ್ ರೂಲ್ಸ್ ಅನ್ನ ಎಲ್ಲರೂ ಫಾಲೋ ಮಾಡಲೇಬೇಕು ಎಂದು ಖಡಕ್ಕಾಗಿ ಹೇಳಿ ಅಲ್ಲಿಂದ ಹೋಗುತ್ತಾನೆ.
ಸಿಹಿಯನ್ನು ಸಿಟಿಯಲ್ಲಿ ಬಿಟ್ಟು ಬಂದ ಬಂದ ತಾತ
ಇನ್ನು ಸಿಹಿ ಹಾಗೂ ತಾತ ಸಿಟಿಗೆ ಹೋಗಿರುತ್ತಾರೆ. ತಾತನಿಗೆ ಮರೆವಿನ ಕಾಯಿಲೆ ಇರುವ ಕಾರಣಸಿಹಿಯನ್ನು ಅಲ್ಲೇ ಬಿಟ್ಟು ತಾತ ಬರುತ್ತಾರೆ. ಮನೆಗೆ ಬಂದಾಗ ಅಜ್ಜಿ ರೀ ಸಿಹಿ ಎಲ್ಲಿ ಎಂದು ಕೇಳುತ್ತಾರೆ. ಆಗ ಸಿಹಿ ನನ್ನ ಜೊತೆ ಬಂದೇ ಇಲ್ಲ ಎಂದು ತಾತ ಹೇಳುತ್ತಾರೆ. ಇದನ್ನು ಕೇಳಿ ಶಾಂತಮ್ಮನಿಗೆ ಬಹಳ ಆತಂಕವಾಗುತ್ತದೆ. ನಿಮ್ಮ ಜೊತೆ ಸಿಹಿ ಬಂದಿದ್ದಾಳೆ ಅವಳನ್ನು ನಿಮ್ಮ ಜೊತೆ ಕಳಿಸಿಕೊಟ್ಟಿದ್ದು ಇದೀಗ ಸಿಹಿಯನ್ನು ಅಲ್ಲೇ ಬಿಟ್ಟು ಬಂದಿದ್ದಿರಾ ಎಂದು ಕೇಳಿದಾಗ ಆಕೆಯ ಗಂಡನಿಗೆ ಬಹಳ ಶಾಕ್ ಆಗುತ್ತದೆ.

ಆತ ವಾಪಸ್ ಸಿಟಿಗೆ ಹೋಗಿ ಸಿಹಿಯನ್ನು ಎಲ್ಲಾ ಕಡೆ ಹುಡುಕುತ್ತಾನೆ. ಆದರೆ ಸಿಹಿ ಮಾತ್ರ ಆತನ ಕಣ್ಣಿಗೆ ಬೀಳುವುದಿಲ್ಲ. ಸಿಹಿ ತನ್ನ ತಾತನನ್ನು ಹುಡುಕಿಕೊಂಡು ಎಲ್ಲಾ ಕಡೆ ತಿರುಗುತ್ತಾಳೆ. ಆದರೆ ತಾತ ಇಲ್ಲದೆ ಇರುವುದನ್ನು ಊಹಿಸಿಕೊಂಡ ಸಿಹಿ ಏನು ಮಾಡುವುದು ಎಂದು ದಿಕ್ಕು ತೋಚಿದೆ ಸುಮ್ಮನೆ ಕುಳಿತಿರುತ್ತಾಳೆ.
ತಾತನನ್ನು ಹುಡುಕಿ ಹುಡುಕಿ ಸುಸ್ತಾದ ಸಿಹಿ
ಆಗ ಅಲ್ಲಿಗೆ ಬಂದ ರೌಡಿ ಒಬ್ಬ ನಾನು ನಿನಗೆ ನಿನ್ನ ತಾತನನ್ನು ಹುಡುಕಿ ಕೊಡುತ್ತೇನೆ ಎಂದು ಹೇಳುತ್ತಾನೆ. ಆದರೆ ಸಿಹಿ ಅದಕ್ಕೆ ಒಪ್ಪುವುದಿಲ್ಲ ಕೊನೆಗೂ ಆಕೆಯನ್ನು ಬಲವಂತದಿಂದ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಾರೆ. ಇನ್ನು ಶಾಂತವ ಸೀತಾ ಗೆ ಕರೆ ಮಾಡಿ ಸಿಹಿ ಕಾಣೆಯಾಗಿರುವ ಬಗ್ಗೆ ಹೇಳುತ್ತಾಳೆ ಮುಂದೇನು ಕಾದು ನೋಡಬೇಕಾಗಿದೆ.


Click it and Unblock the Notifications











