Seetha Raama: ಸೀತಾ ಬಳಿ ಪ್ರೀತಿ ಹೇಳಲು ಓಡೋಡಿ ಬಂದ ರಾಮ, ಅಪಾಯಕ್ಕೆ ಸಿಲುಕಿದ್ದಾನಾ?
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ರಾಮನಿಂದ ದೂರ ಹೋಗಲು ರೆಡಿಯಾಗಿದ್ದಾಳೆ. ಆಕೆಗೆ ಬೆಳಗಾವಿಗೆ ಈಗಾಗಲೇ ವರ್ಗಾವಣೆಯಾಗಿದ್ದು, ಬೆಂಗಳೂರನ್ನು ಬಿಟ್ಟು ಬೆಳಗಾವಿಗೆ ಹೋಗಲೇಬೇಕಾಗಿ ಬಂದಿದೆ. ಆದರೆ ರಾಮನಿಗೆ ಮಾತ್ರ ಸೀತಾಳನ್ನು ಬಿಟ್ಟು ಒಂದು ಕ್ಷಣವು ಇರಲು ಸಾಧ್ಯ ಆಗುತ್ತಿಲ್ಲ.
ರಾಮ ಸೀತಾಳನ್ನು ಪದೇ ಪದೇ ನೆನಪು ಮಾಡಿಕೊಂಡು ಇರುತ್ತಾನೆ.
ಅಶೋಕನ ತಂತ್ರವೇನೋ ಫಲಿಸಿದೆ. ಆದರೆ ಸೀತಾ ಮಾತ್ರ ಬೆಳಗಾವಿಗೆ ಹೋಗುವುದು ತಪ್ಪಿಲ್ಲ. ಭಾರ್ಗವಿಗೆ ರಾಮನಿಂದ ಸೀತಾಳನ್ನು ಹೇಗಾದರೂ ದೂರ ಮಾಡಬೇಕು ಎಂದು ಆಸೆ . ಆದರೆ ಅದಕ್ಕಾಗಿ ಸೀತಾಗೆ ಶಿಕ್ಷೆ ನೀಡಿದ್ದಾಳೆ ಭಾರ್ಗವಿ. ಸೀತಾ ಬೆಳಗಾವಿಗೆ ಹೊರಟರೆ ಸಿಹಿ ಮಾತ್ರ ಬಹಳ ಬೇಸರ ಮಾಡಿಕೊಂಡಿದ್ದಾಳೆ.

ತನ್ನ ಗೆಳೆಯನನ್ನು ಬಿಟ್ಟು ಹೇಗೆ ಹೋಗಬೇಕು ಎನ್ನುವ ಯೋಚನೆ ಸಿಹಿಗೆ . ಇತ್ತೀಚಿನ ದಿನಗಳಲ್ಲಿ ಸಿಹಿ ರಾಮನನ್ನು ಬಹಳ ಹಚ್ಚಿಕೊಂಡಿರುತ್ತಾಳೆ. ರಾಮ ಕೂಡ ಸಿಹಿಯನ್ನು ಬಿಟ್ಟು ಇರಲು ಆಗದೆ ಬಹಳ ಹಚ್ಚಿಕೊಂಡಿರುತ್ತಾನೆ. ಆದರೆ ಈಗ ಸಿಹಿ ಮತ್ತು ಸೀತಾ ಕೂಡ ನನ್ನನ್ನ ಬಿಟ್ಟು ಹೋಗುತ್ತಿದ್ದಾಳೆ ಎಂದು ಬಹಳ ಬೇಸರಪಟ್ಟುಕೊಂಡಿದ್ದಾನೆ.
ರಾಮನನ್ನು ಕಾಡಿದೆ ಸೀತಾ ನೆನಪು
ಆಫೀಸಿಗೆ ರಾಮ ಹೋದಾಗ ಸೀತಾ ಗೆಳತಿ ಸೀತಾ ಅವರಿಗೆ ಹೋಗಿ ಸ್ವಲ್ಪ ಸಹಾಯ ಮಾಡೋಣ ಎಂದು ಹೇಳಿದ್ದರು. ಆದರೆ, ರಾಮ ಮಾತ್ರ ಎಲ್ಲಿಗೂ ಹೋಗದೆ, ತನ್ನ ತಾತನ ಬಳಿಗೆ ಹೋಗುತ್ತಾನೆ . ತಾತನ ಬಳಿ ಹೋಗಿ ಕುಳಿತುಕೊಂಡ ರಾಮ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ರಾಮನ ಮುಖ ನೋಡಿದ ತಾತ ಏನೋ ವಿಚಾರ ಈತನ ಮನದಲ್ಲಿ ಇದೆ ಎಂದು ತಾತನಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು .

ತಾತನ ಮಾತಿಗೆ ಧೈರ್ಯಗೊಂಡ ರಾಮ
ಇದರಿಂದ ಧೈರ್ಯ ಹೇಳಿದ ತಾತ, ಯಾವುದು ಕಳೆದುಕೊಂಡರು ಪ್ರೀತಿಯನ್ನು ಕಳೆದುಕೊಳ್ಳಬಾರದು ಎಂದು ಹೇಳುತ್ತಾರೆ. ತಾತನ ಮಾತು ಕೇಳಿಸಿಕೊಂಡ ರಾಮ ಸೀತಾಳನ್ನು ತಡೆಯಲು ಹೋಗುತ್ತಾನೆ. ಹೀಗಿರುವಾಗ ಸಿಹಿ ಮಾತ್ರ ನನ್ನ ಗೆಳೆಯ ಇನ್ನು ಬಂದಿಲ್ಲ ಎಂದು ತನ್ನ ತಾಯಿಯ ಬಳಿ ಹೇಳುತ್ತಿದ್ದಾಗ ಸೀತಾ ಹೇಳುತ್ತಾಳೆ, ನಾವು ನಿನ್ನ ಫ್ರೆಂಡ್‌ಗೆ ಬಸ್ ನಿಂದ ವಿಡಿಯೋ ಕಾಲ್ ಮಾಡೋಣ ಎಂದು ಹೇಳಿ ಸಿಹಿಯನ್ನು ಸಮಾಧಾನ ಮಾಡಿ ಬಸ್ ಒಳಗಡೆ ಕರೆದುಕೊಂಡು ಹೋಗುತ್ತಾಳೆ.
ಸೀತಾ ಬಳಿ ನಿಜ ಹೇಳಲು ಓಡಿ ಬಂದ ರಾಮ
ಇನ್ನೂ ರಾಮ ಮಾತ್ರ ಕಾರಿನಲ್ಲಿ ಬಹಳ ವೇಗವಾಗಿ ಬಸ್ಸನ್ನು ಫಾಲೋ ಮಾಡಿಕೊಂಡು ಬರುತ್ತಾನೆ. ಸಿಹಿ ರಾಮನಿಗೆ ವಿಡಿಯೋ ಕರೆ ಮಾಡುತ್ತಾಳೆ. ಆ ಬಳಿಕ ರಾಮನ ಬಳಿ ನೀವು ಯಾಕೆ ಬಂದಿಲ್ಲ ನನ್ನನ್ನು ನೋಡಲು. ನನ್ನನ್ನು ಅಮ್ಮ ಬೆಳಗಾವಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುತ್ತಾಳೆ. ಆಗ ರಾಮ, ನಾನು ಬಸ್ಸಿನ ಹಿಂದೆ ಇದ್ದೇನೆ. ಒಮ್ಮೆ ಕೆಳಗೆ ಇಣುಕಿ ನೋಡು ಎಂದು ಹೇಳಿದಾಗ ಸಿಹಿ ಇಣುಕಿ ನೋಡಿದಾಗ ರಾಮ ಕಾರಿನಲ್ಲಿ ಬರುತ್ತಿರುತ್ತಾನೆ. ಬಸ್ ಅನ್ನು ಅಡ್ಡ ಹಾಕುತ್ತಾನೆ ಬಸ್ ಬ್ರೇಕ್ ಹಾಕುವ ಸಂದರ್ಭ ಕಾರಿಗೆ ತಾಗುತ್ತದೆ. ರಾಮನಿಗೆ ಏನಾಯಿತು ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.


Click it and Unblock the Notifications











