Seetha Rama Serial: ಸಿಹಿಗೂ ಟೆನ್ಶನ್, ರಾಮನಿಗೂ ಟೆನ್ಶನ್.. ರಾಮ್‌ಗಲ್ಲ ಸೀತಾಗೆ ಇನ್ನಷ್ಟು ಸಂಕಷ್ಟ
ಸೀತಾಳಿಗೆ ಆರೋಗ್ಯ ಸರಿ ಇಲ್ಲ. ಇದೇ ಸಮಯದಲ್ಲಿ ಅಜ್ಜಿ-ತಾತ ಕೂಡ ಮನೆಯಲ್ಲಿ ಇಲ್ಲ. ರಾಮ ಒಬ್ಬ ಇಲ್ಲವಾಗಿದ್ದರೆ ಸಿಹಿಯಿಂದ ಸೀತಾಳನ್ನು ನೋಡಿಕೊಳ್ಳುವುದಕ್ಕೆ ಬಹಳಾನೇ ಕಷ್ಟವಾಗುತ್ತಿತ್ತು. ಆದರೆ, ರಾಮನಿಂದಾಗಿ ಸಿಹಿಗೂ ಧೈರ್ಯ ಬಂತು, ಸೀತೆಯೂ ಕೊಂಚ ಹುಷಾರಾದಳು. ದೇಸಾಯಿ ಮನೆಯಲ್ಲಿ ಭಾರ್ಗವಿಗೆ ರಾಮನದ್ದೇ ಚಿಂತೆಯಾಗಿದೆ.
ರಾಮನ ಹಿಂದೆ ಬಿದ್ದಿರುವ ಭಾರ್ಗವಿ, ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಅಂತ ತಲೆಕೆಡಿಸಿಕೊಂಡು ಪತ್ತೆದಾರಿಕೆ ಶುರು ಮಾಡಿದ್ದಾಳೆ. ರಾಮ ಯಾವುದೇ ಕಾರಣಕ್ಕೂ ಖುಷಿಯಾಗಿರುವುದು ಇಷ್ಟವಿರದ ಭಾರ್ಗವಿ, ಸತ್ಯ ತಿಳಿಯುವುದಕ್ಕೆ ಬೇರೆ ಬೇರೆ ಮಾರ್ಗಗಳನ್ನೇ ಹಿಡಿಯುತ್ತಾಳೆ. ಆದರೆ ರಾಮ ಸದ್ಯಕ್ಕಂತು ಚಿಕ್ಕಿಯ ಕೈಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾನೆ. ಇವತ್ತು ರಾಮನೇ ಲಾಕ್ ಆಗುವ ಎಲ್ಲಾ ಸಾಧ್ಯತೆ ಇದೆ.

ಸೀತಾಗೆ ಜ್ವರ ಕಡಿಮೆ ಆಗಲೇ ಇಲ್ಲ
ಸೀತಾಳಿಗೆ ಜ್ವರ ಜಾಸ್ತಿಯಾಗುತ್ತಲೆ ಇದೆ. ಜ್ವರ ಎಂದು ಗೊತ್ತಾದ ಕೂಡಲೇ ರಾಮ್, ಸೀತಾ ಮನೆಗೆ ಬಂದಿದ್ದಾನೆ. ಸೀತಾಳಿಗೆ ಎದ್ದು ತಿಂಡಿ ಮಾಡುವಷ್ಟು ಶಕ್ತಿ ಇರಲಿಲ್ಲ. ರಾಮ್ ಬಂದ ಮೇಲೆ ತಿಂಡಿ ಮಾಡಿ, ಮಾತ್ರೆ ಕೊಟ್ಟು ಉಪಚರಿಸಿದ್ದಾನೆ. ಇದರಿಂದಾಗಿ ಸೀತಾ ಕೊಂಚ ಸುಧಾರಿಸಿಕೊಂಡಿದ್ದಳು. ಮುಖ್ಯವಾಗಿ ಸಿಹಿಗೆ ರಾಮ್ ಇರುವುದೇ ಒಂದು ಧೈರ್ಯ. ಸೀತಾಳಿಗೆ ರೆಸ್ಟ್ ಮಾಡಲು ಹೇಳಿ ಮನೆಯ ಎಲ್ಲಾ ಕೆಲಸವನ್ನು ಇಬ್ಬರು ಸೇರಿ ಮುಗಿಸಿದ್ದಾರೆ.
ಸಿಹಿಗೂ ಟೆನ್ಶನ್, ರಾಮನಿಗೂ ಟೆನ್ಶನ್
ರಾಮ್ ಬರುವುದಕ್ಕೂ ಮುನ್ನ ಸೀತಾ ತಲೆ ಸುತ್ತಿ ಬಿದ್ದಿದ್ದಳು. ಆಗ ಸಿಹಿ ಒಬ್ಬಳೆ ರಾಮ್ ಬಂದ ಮೇಲೆ ಸಂಜೆಯ ತನಕ ಸೀತಾಳ ಹಾರೈಕೆ ಮಾಡಿದ್ದಾರೆ. ಆದರೂ, ಅದ್ಯಾಕೋ ಸೀತಾಳ ಆರೋಗ್ಯ ಸ್ಥಿತಿ ಸರಿಯಾಗಲಿಲ್ಲ. ಸಂಜೆ ವೇಳೆಗೆ ಕುಸಿದು ಬಿದ್ದಿದ್ದಾಳೆ. ರಾಮ್‌ಗೆ ಮತ್ತು ಸಿಹಿ ಇಬ್ಬರಿಗೂ ಟೆನ್ಶನ್ ಶುರುವಾಗಿದೆ.

ಆಂಬುಲೆನ್ಸ್‌ಗೆ ಕರೆ ಮಾಡಿದ ರಾಮ
ಸೀತಾಳಿಗೆ ತುಂಬಾನೇ ಆರೋಗ್ಯ ಸರಿ ಇಲ್ಲ ಅನ್ನುವುದು ರಾಮ್‌ಗೆ ಅರ್ಥವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡಿದ. ಸೀತಾ ಇದಕ್ಕೆ ಒಪ್ಪದೆ ಇದ್ದರು ರಾಮ್ ಆಂಬುಲೆನ್ಸ್‌ಗೆ ಕಾಲ್ ಮಾಡಿದ. ಆದರೆ, ಇಲ್ಲೊಂದು ಸಮಸ್ಯೆ ಎಂದರೆ ಫ್ಯಾಮಿಲಿ ಆಸ್ಪತ್ರೆಗೆ ರಾಮ್ ಕಾಲ್ ಮಾಡಿದ್ದಾನೆ. ಹೀಗಾಗಿ ಆಂಬುಲೆನ್ಸ್ ವಠಾರಕ್ಕೆ ಬರುವ ಬದಲಿಗೆ ದೇಸಾಯಿ ಮನೆ ಕಡೆಗೆ ಹೊರಟಿದೆ. ಗಾಬರಿಯಲ್ಲಿ, ಆತಂಕದಲ್ಲಿ ರಾಮ್ ಫ್ಯಾಮಿಲಿ ಡಾಕ್ಟರ್‌ಗೆ ಕರೆ ಮಾಡಿದ್ದಾನೆ.
ಭಾರ್ಗವಿಗೆ ಸತ್ಯ ಗೊತ್ತಾಗಿ ಬಿಡುತ್ತದಾ..?
ಮೊದಲೇ ಬೆಳಗ್ಗೆಯಿಂದ ರಾಮ್ ಆಫೀಸಿಗೆ ಹೋಗಿಲ್ಲ. ಎಲ್ಲಿಗೆ ಹೋಗಿರಬಹುದು ಎಂಬ ಯೋಜನೆಯಲ್ಲಿ ಭಾರ್ಗವಿ ಇದ್ದಳು. ಮಾವನ ಬಳಿ ಆ ಬಗ್ಗೆ ಪರೋಕ್ಷವಾಗಿ ತಿಳಿದುಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಳು. ಆದರೆ, ಮಾವನಿಗೂ ವಿಚಾರ ಗೊತ್ತಿಲ್ಲದ ಕಾರಣ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಭಾರ್ಗವಿ ಬಯಸಿದ್ದು, ಕಾಲ್ ಮೂಲಕ ವಿಚಾರ ತಲುಪಿದೆ. ರಾಮ್ ಆಂಬುಲೆನ್ಸ್ ಬೇಕು ಅಂತ ಹೇಳಿದ್ದು, ವಠಾರಕ್ಕೆ. ಆದರೆ, ಆಸ್ಪತ್ರೆಯವರು ಅಡ್ರೆಸ್ ತಿಳಿದುಕೊಂಡಿದ್ದು ಮನೆಗೆ ಬೇಕು ಅಂತ. ಹೀಗಾಗಿ ಆಸ್ಪತ್ರೆಯವರು ಮನೆಗೆ ಕಾಲ್ ಮಾಡಿ ಕಳುಹಿಸುವುದಾಗಿ ಹೇಳಿದ್ದಾರೆ. ಈ ಕಾಲ್ ಅನ್ನು ಭಾರ್ಗವಿಯೇ ಅಟೆಂಡ್ ಮಾಡಿದ್ದಾಳೆ. ಇದು ಮನೆಯವರೆಲ್ಲರ ತಲೆ ಕೆಡಿಸಿದ್ದು ಅಲ್ಲದೆ, ಈಗ ರಾಮ ವಠಾರದಲ್ಲಿ ಬಿಡಾರ ಹೂಡಿದ ಸತ್ಯ ಭಾರ್ಗವಿಗೆ ತಿಳಿಯುವ ಸಾಧ್ಯತೆ ಇದೆ.


Click it and Unblock the Notifications











