Seetha Rama Serial: ಸಿಹಿಯ ಉಪವಾಸಕ್ಕೆ ಅಸ್ತು ಎಂದ ಗಣೇಶ.. ಸಿಹಿ ಕಣ್ಣ ಮುಂದೆ ಬಂತು ಹೆಲಿಕಾಪ್ಟರ್

By ಎಸ್ ಸುಮಂತ್

ಸಿಹಿ ಆಸೆ ಪಡುವುದು ತುಂಬಾ ಅಂದರೆ ತುಂಬಾ ಕಡಿಮೆ. ಸೀತಮ್ಮನಿಗೆ ಕಷ್ಟ ಆಗುತ್ತೆ ಅಂತಾನೇ ಕೈಗೆ ಎಟಕದ್ದನ್ನು ಆಸೆ ಪಡಲ್ಲ. ಒಂದು ವೇಳೆ ಏನೋ ಒಂದು ಇಷ್ಟವಾಗಿ ಬಿಟ್ಟರೆ ಅಮ್ಮನ ಬಳಿ ಕೇಳುತ್ತಾರೆ. ಸೀತಾ ಹಣ ಇಲ್ಲ ಬಂಗಾರಿ ಅಂದರೆ ಮುಗೀತು. ಸುಮ್ಮನೆ ಆಗಿ ಬಿಡುತ್ತಾಳೆ. ಅದಕ್ಕೆ ಉದಾಹರಣೆ ಗಣೇಶನ ಹಬ್ಬ. ಕಲೆಕ್ಷನ್ ಮಾಡಿದ ಹಣವನ್ನು ಮಾವ ಕಿತ್ತುಕೊಂಡು ಹೋದ. ನೋವಾಗಿದ್ದಕ್ಕೆ ಕಣ್ಣೀರು ಹಾಕಿದಳು. ಆದರೆ ಸೀತಮ್ಮನ ಪ್ರೀತಿಯ ಮುಂದೆ ಅದು ಕರಗಿ ಹೋಯಿತು. ಅಷ್ಟು ಒಳ್ಳೆ ಮನಸ್ಸಿನ ಮಗು ಅದು.

ಆದರೆ, ಬೇಕೆ ಬೇಕು ಅಂತ ಹಠ ಮಾಡುತ್ತಿರುವುದು ಒಂದನ್ನೇ. ಹೆಲಿಕಾಪ್ಟರ್‌ನಲ್ಲಿ ಹೋಗಲೇಬೇಕು ಎಂಬ ಹಠ. ಪ್ರಾಮೀಸ್ ಮಾಡಿರುವ ರಾಮ್ ಕೂಡ ಕರೆದುಕೊಂಡು ಹೋಗಲು ರೆಡಿ ಇದ್ದಾನೆ. ಆದರೆ, ಸೀತಾ ಅದಕ್ಕೆ ಒಪ್ಪಿಲ್ಲ. ಈಗ ಗಣೇಶ ಒಪ್ಪಿಗೆ ಕೊಟ್ಟು ಆಯಿತು.

seetha-rama-kannada-serial

ಉಪವಾಸ ಮಾಡಿದ್ದ ಸಿಹಿ

ಸಿಹಿಗೆ ಮೊದಲೇ ಡಯಾಬಿಟೀಸ್ ಇದೆ. ಇಂಜೆಕ್ಷನ್ ಹಾಕಿಸಿಕೊಳ್ಳುವ ಕಾರಣಕ್ಕೆ ಸಿಹಿ ಹೊಟ್ಡೆ ತುಂಬಾ ಊಟ ಮಾಡಲೇಬೇಕು. ಆದರೆ, ಗಣಪತಿಗೆ ಒಂದು ದಿನ ಉಪವಾಸ ಮಾಡಿದರೆ ಕೇಳಿದ್ದನ್ನು ಈಡೇರಿಸತ್ತಾನೆ ಎಂದು ಯಾರೋ ಹೇಳಿದ್ದನ್ನು ಕೇಳಿದ ಸಿಹಿ, ತನ್ನ ಹೆಲಿಕಾಪ್ಟರ್‌ನಲ್ಲಿ ಹೋಗುವ ಆಸೆ ಈಡೇರಿಸು ದೇವರೆ ಅಂತ, ಸೀತಮ್ಮನಿಗೆ ಕಣ್ತಪ್ಪಿಸಿ, ಉಪವಾಸ ಮಾಡಿದ್ದಾಳೆ.

ಹೆಲಿಕಾಪ್ಟರ್ ಅಂದರೆ ಸಿಹಿಗೆ ಪ್ರಾಣ

ಹೆಲಿಕಾಪ್ಟರ್‌ನಲ್ಲಿ ಹೋಗಬೇಕು ಎಂಬುದು ಸಿಹಿಗೆ ಮೊದಲಿದ್ದ ಆಸೆ ಅಲ್ಲ. ಸೀತಮ್ಮ ಹೆಲಿಕಾಪ್ಟರ್‌ನಲ್ಲಿ ಬಂದಿದ್ದು ಗೊತ್ತಾದ ಮೇಲೆ ನಾನು ಹೋಗಬೇಕು ಎಂದು ಹಠ ಮಾಡಿದ್ದಾಳೆ. ಸೀತಾಗೆ ಬರುವ ಸಂಬಳ ಮನೆ, ಸ್ಕೂಲು, ಸಿಹಿ ಖರ್ಚಿಗೆ ಸಾಕಾಗುತ್ತದೆ. ಹೀಗಾಗಿ ಸಿಹಿಯನ್ನು ಸೀತಾ ಹೆಚ್ಚಾಗಿ ಎಲ್ಲಿಯೂ ಕರೆದುಕೊಂಡು ಹೋಗುವುದಿಲ್ಲ. ವಿಡಿಯೋ ಕಾಲ್‌ನಲ್ಲಿ ಸ್ವಿಮ್ಮಿಂಗ್ ಪೂಲ್ ಕಂಡಾಗಲೂ ರಾಮ್‌ಗೆ ಬೇಡಿಕೆ ಇಟ್ಟಿದ್ದಳು. ಯಾವತ್ತು ಹೆಲಿಕಾಪ್ಟರ್‌ನಲ್ಲಿ ಹೋಗುತ್ತೀನೋ ಎಂಬ ಆಸೆಯಿಂದ ಕಾಯುತ್ತಿದ್ದಾಳೆ.

seetha-rama-kannada-serial

ರಾಮ್‌ಗೆ ಗೊತ್ತಾಯ್ತು ಸತ್ಯ

ಗಣಪತಿ ಉತ್ಸವ ಈ ಬಾರಿ ಶಾಂತಮ್ಮನ ವಠಾರದಲ್ಲಿ ಜೋರಾಗಿದೆ. ಎಲ್ಲರೂ ಕುಣಿದು ಕುಪ್ಪಳಿಸುವಾಗ ಸಿಹಿಗೆ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಬೆಳಗ್ಗೆಯಿಂದ ಏನೂ ತಿನ್ನದೆ, ಉಪವಾಸ ಮಾಡಿದ್ದರ ಪರಿಣಾಮ, ಸಿಹಿಗೆ ಶುಗರ್ ಲೆವೆಲ್ ಕಡಿಮೆಯಾಗಿದೆ. ಆಸ್ಪತ್ರೆಗೆ ಸೇರಿಸಿದ ಮೇಲೆ ಈ ವಿಷಯ ತಿಳಿದಿದೆ. ರಾಮ್ ಒಂದು ಕ್ಷಣವೂ ಯೋಚಿಸದೆ, ಸಿಹಿಗೆ ಹೆಲಿಕಾಪ್ಟರ್ ಬಳಿ ಕರೆದುಕೊಂಡು ಬಂದಿದ್ದಾನೆ. ಕಡೆಗೂ ಆ ಗಣೇಶ ಸಿಹಿಯ ಆಸೆ ಈಡೇರಿಸಿದ್ದಾನೆ.

ಕೊನೆಯ ಬಾರಿ ಮಿಸ್ ಆಗಿತ್ತು ಪ್ಲ್ಯಾನ್

ರಾಮ್ ಮತ್ತು ಸಿಹಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಮೊದಲ ಬಾರಿಗೆ ಆಫೀಸಿಗೆ ಬಂದಾಗಲೇ ರಾಮ್ ಬಳಿ ಹೆಲಿಕಾಪ್ಟರ್‌ನಲ್ಲಿ ಹೋಗುವ ಆಸೆ ಹೇಳಿದ್ದಳು. ರಾಮ್ ಪ್ರಾಮೀಸ್ ಕೂಡ ಮಾಡಿದ್ದ. ಅದಕ್ಕೆ ಎಲ್ಲಾ ತಯಾರಿ ಕೂಡ ಆಗಿತ್ತು. ಅಲ್ಲಿ ಹೆಲಿಕಾಪ್ಟರ್ ರೈಡ್‌ಗೆ ರೆಡಿಯಾಗಿತ್ತು. ಆದರೆ, ಮನೆಯಲ್ಲಿ ಸೀತಮ್ಮ ಮಾತ್ರ ಸುತರಾಮ್ ಒಪ್ಪಲೇ ಇಲ್ಲ. ಅದು ಆಫೀಸ್ ಪ್ರಾಪರ್ಟಿ. ಯಾವುದೇ ಕಾರಣಕ್ಕೂ ಬಳಸುವುದು ಬೇಡ ಎಂದಳು. ಅಂದು ಸಿಹಿಗೆ ಬೇಸರವಾಗಿತ್ತು. ಆದರೆ ಗಣಪತಿಯ ಕೃಪಾಕಟಾಕ್ಷ ಇಂದು ಆ ಆಸೆ ಈಡೇರಿದೆ.

More from Filmibeat

English summary
Zee Kannada serial Seetha Rama Written Update on September 22nd episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X