Seetha Rama: ಭಾರ್ಗವಿಯ ಕುತಂತ್ರದಿಂದ ರುದ್ರಪ್ರತಾಪನ ವಶವಾಗುತ್ತಾಳಾ ಸೀತಾ? ರಾಮನ ಕಥೆಯೇನು?
ಭಾರ್ಗವಿಯ ಕುತಂತ್ರ ರಾಮನಿಗೆ ತಿಳಿದಿಲ್ಲ. ಅಶೋಕನಿಗೆ ಕೊಂಚ ಅನುಮಾನ ಬಂದಿದೆ. ಮನೆಯಲ್ಲಿಯೂ ಅಷ್ಟೇ ನಾಟಕವನ್ನು ನಾಟಕ ಎನಿಸುವುದೇ ಇಲ್ಲ. ತುಂಬಾ ಸಲೀಸಾಗಿ ಆಡುತ್ತಾಳೆ. ಗಂಡನನ್ನೇ ಕಂಟ್ರೋಲ್‌ನಲ್ಲಿಟ್ಟುಕೊಂಡಿರುವ ಭಾರ್ಗವಿ, ಎಲ್ಲವೂ ಗಂಡ ಹೇಳಿದಂತೆ ನಡೆಯುತ್ತಿದೆ ಎಂಬಂತೆಯೇ ಡ್ರಾಮಾ ಮಾಡುತ್ತಾಳೆ. ಗಂಡನಿಗೂ ಕುಳಿತುಕೋ ಅಂದರೆ ಕೂರುವಂತೆ ನಿಲ್ಲು ಎಂದರೆ ನಿಲ್ಲುವಂತೆ ಮಾಡಿಕೊಂಡಿದ್ದಾಳೆ.
ಆ ನಾಟಕದಲ್ಲಿ ರಾಮನ ವಿಚಾರವೂ ಒಂದಾಗಿದೆ. ಈಗ ರಾಮನ ಮೇಲೆ ಭಾರ್ಗವಿಯ ಕಣ್ಣು ಬಿದ್ದಿದೆ. ಅದಕ್ಕೆ ಅವನ ನೆಮ್ಮದಿಯ ಹಾದಿ ತಿಳಿದು ಕೊಳ್ಳಿ ಇಡುವುದಕ್ಕೆ ನಿಂತಿದ್ದಾಳೆ. ಅದರ ಭಾಗವಾಗಿಯೇ ಸೀತಾಳಿಗೆ ಅವಮಾನ ಮಾಡಿದ್ದಾಳೆ.

ದೇವಸ್ಥಾನದಲ್ಲಿ ಸೀತಾ -ರಾಮ ಭೇಟಿ
ಭಾರ್ಗವಿಯ ಪ್ಲ್ಯಾನ್ ಅಂದರೆ ಹಾಗೆ ಇರುತ್ತದೆ. ಯಾರಿಗೂ ಅನುಮಾನ ಬರುವಂತೆ ಇರಲ್ಲ. ಈಗ ರಾಮನನ್ನು ದೇವಸ್ಥಾನಕ್ಕೆ ಕಳುಹಿಸಿ, ಭಾರ್ಗವಿ ನೇರ ಆಫೀಸಿಗೆ ಬಂದಿದ್ದಾಳೆ. ಅಲ್ಲಿ ಸೀತಾಳನ್ನು ಕರೆದು ಅನುಮಾನವೇ ಬಾರದಂತೆ ಅವಮಾನ ಮಾಡಿದ್ದಾಳೆ. ಬಾಸ್ ನಡುವೆ ಸೀತಾ ನಡುವೆ ಕೆಟ್ಟ ಸಂಬಂಧ ಬರುವಂತ ಮಾತುಗಳನ್ನೇ ಆಡಿದ್ದಾಳೆ. ಇದಕ್ಕೆ ನೊಂದ ಸೀತಾ, ದೇವಸ್ಥಾನಕ್ಕೆ ಹೋಗಿದ್ದಾಳೆ. ತಾಯಿಯ ಹುಟ್ಟುಹಬ್ಬದ ದಿನವನ್ನು ದೇವರ ಮುಂದೆ ಆಚರಿಸಲು ಬಂದ ರಾಮ್‌ಗೆ ಸೀತಾ ಎದುರಾಗಿದ್ದಾಳೆ. ಆದರೆ ಮೊದಲ ಖುಷಿ ಇಲ್ಲ. ಕಣ್ಣಲ್ಲಿ ನೀರು ತುಂಬಿತ್ತು.
ಸತ್ಯ ಗೊತ್ತಿಲ್ಲದೆ ಅಂಗಲಾಚಿದ ರಾಮ
ರಾಮ್ ಅದು ಬಿಗ್ ಸಪ್ರೈಸ್. ಸೀತಾಗೆ ಏನು ಅನ್ನಿಸುತ್ತಿಲ್ಲ. ಭಾರ್ಗವಿಯ ಮಾತುಗಳೇ ಕಿವಿಯಲ್ಲಿ ಗುನುಗುತ್ತಿವೆ. ರಾಮ್ ಬಳಿಯೂ ಅದಕ್ಕೆ ಉತ್ತರ ಪಡೆಯಲು ಯತ್ನಿಸಿದ್ದಾಳೆ. ತಾನು ಅಂತವಳಲ್ಲ ಎಂಬುದನ್ನು ರಾಮ್‌ಗೆ ಅರ್ಥ ಮಾಡಿಸಲು ಹೋಗಿದ್ದಾಳೆ. ಆದರೆ, ಆಫೀಸಲ್ಲಿ ಏನು ಆಯಿತು ಅನ್ನೋದು ರಾಮ್‌ಗೆ ಗೊತ್ತಿಲ್ಲ. ಅಡ್ವಾನ್ಸ್ ಸ್ಯಾಲರಿಯನ್ನು ನೀವೂ ಪಡೆಯಲೇಬೇಕೆಂದು ರಾಮ್ ಮತ್ತೆ ಹಠ ಹಿಡಿದಿದ್ದಾನೆ. ದೇವಸ್ಥಾನದಲ್ಲಿಯೇ ಕುಳಿತಿದ್ದಾನೆ. ಆದರೆ, ಸೀತಾ ಅದಕ್ಕೆ ಸೊಪ್ಪು ಹಾಕದೆ ಮುಂದೆ ನಡೆದೇ ಬಿಟ್ಟಿದ್ದಾಳೆ.

ರುದ್ರಪ್ರತಾಪ ವಶವಾಗುತ್ತಾಳಾ..?
ವಕೀಲ ರುದ್ರಪ್ರತಾಪ ಸರಿ ಇಲ್ಲ ಎನ್ನುವುದು ರಾಮ್‌ಗೆ ಅದ್ಯಾವಾಗಲೋ ಗೊತ್ತಾಗಿದೆ. ಸೀತಾಳನ್ನು ಆತನಿಂದ ಬಹಳಷ್ಟು ಬಾರಿ ಕಾಪಾಡಿದ್ದಾನೆ. ಆದರೆ, ಈಗ ಸೀತಾಳೇ ಅವನ ಬಳಿ ತಗಲಾಕಿಕೊಂಡಿದ್ದಾಳೆ. ರಾಮ್ ಮೇಲಿನ ಕೋಪ, ಆಫೀಸಲ್ಲಿ ನಡೆದ ಘಟನೆಗಳೆಲ್ಲಾ ಸೀತಾ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಕಷ್ಟಕ್ಕೆ ರುದ್ರಪ್ರತಾಪ ಸಹಾಯ ಮಾಡುತ್ತಾನೆಂದು ಅಲ್ಲಿಗೆ ನಡೆದೆ ಬಿಟ್ಟಿದ್ದಾಳೆ. ಕಷ್ಟ ಕೊಟ್ಟ ರುದ್ರಪ್ರತಾಪ ಈಗ ಸೀತಾಳ ಕೆಟ್ಟ ಸಮಯವನ್ನು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾನೆ.
ಅಶೋಕನಿಂದ ವಿಷಯ ತಿಳಿಯುತ್ತಾ..?
ರಾಮ್‌ಗೆ ಮನೆಯವರ ಮೇಲೆ ನಂಬಿಕೆ ಜಾಸ್ತಿ. ಅದರಲ್ಲೂ ನಾಟಕವಾಡುವ ಚಿಕ್ಕಿಯ ಮೇಲೆ ಅಪಾರವಾದ ಪ್ರೀತಿ, ನಂಬಿಕೆ. ಅಶೋಕನಿಗೆ ಇದು ಗೊತ್ತಿರುವ ವಿಚಾರವೇ ಆಗಿರುವ ಕಾರಣ ಸತ್ಯ ಹೇಳುವುದಕ್ಕೆ ಆಗುವುದಿಲ್ಲ. ಈಗ ಸೀತಾಳ ನೋವಿಗೆ ಕಾರಣವೇನು ಎಂಬುದಾದರೂ ರಾಮ್‌ಗೆ ಅರ್ಥವಾಗಲೇಬೇಕಾಗಿದೆ. ಆದರೆ, ಭಾರ್ಗವಿಯ ಮುಖವಾಡ ರಾಮನ ಮುಂದೆ ಅಷ್ಟು ಸುಲಭವಾಗಿ ಕಳಚುವುದಿಲ್ಲ. ಹಾಗಂತ ರಾಮ್ ತನ್ನ ಫ್ರೆಂಡ್ ಹಾಗೂ ಸೀತಾಳನ್ನು ಬಿಟ್ಟುಕೊಡುವುದಕ್ಕೂ ಸಿದ್ಧ ಇಲ್ಲ. ಈಗ ಅಶೋಕನಿಂದ ಅಥವಾ ಸೀತಾಳಿಂದ ಸತ್ಯ ಗೊತ್ತಾಗಲೇಬೇಕಾಗಿದೆ.


Click it and Unblock the Notifications











