Seetha Rama Serial: ಜ್ವರದಿಂದ ಬಳಲುತ್ತಿರೋ ಸೀತಾ ಸಹಾಯಕ್ಕೆ ಬರ್ತಾನಾ ರಾಮ್? ಬಂದರೆ ಏನಾಗ್ಬಹುದು?
ರಾಮ್ ಯಾವತ್ತಿಗೂ ರುದ್ರಪ್ರತಪಾನ ರೀತಿ ಆಡಿಲ್ಲ. ಬಾಯಲ್ಲಿ ಬ್ಯೂಟಿಫುಲ್ ಮಾತಾಡಿ, ಮನಸ್ಸಿನ ಒಳಗೆ ಸ್ವಾರ್ಥ ತುಂಬಿಕೊಂಡಿಲ್ಲ. ಅದರ ಬದಲಿಗೆ ಸೀತಾಗೆ ಮನಸಾರೆ ಸಹಾಯ ಮಾಡುತ್ತಿದ್ದಾನೆ. ಯಾಕಂದ್ರೆ, ಸಿಹಿ ಎಂದರೆ ರಾಮ್‌ಗೆ ಪಂಚಪ್ರಾಣ. ಸಿಹಿ ಮನೆಯೆಂದರೆ ಪಂಚಪ್ರಾಣ. ಸೀತಾಳಿಗೆ ಹಣದ ಸಹಾಯ ಮಾಡಿದಾಗ ಮಾತ್ರ ಸಿಹಿಗೆ ಖುಷಿ ಕೊಡುವುದಕ್ಕೆ ಸಾಧ್ಯವಾಗುತ್ತದೆ.
ರಾಮ್ ಅದಕ್ಕಾಗಿಯೇ ಸಾಕಷ್ಟು ಪ್ರಯತ್ನ ಮಾಡಿದ. ಇನ್ನೇನು ಸಕ್ಸಸ್ ಆಗಬೇಕು ಎನ್ನುವಷ್ಟರಲ್ಲಿ ಭಾರ್ಗವಿ ಎಲ್ಲಾ ಪರಿಹಾರಕ್ಕೂ ಹುಳಿ ಹಿಂಡಿದಳು. ಅದನ್ನು ಹೇಗೋ ಸರಿ ಮಾಡಬೇಕು ಎನ್ನುವಷ್ಟರಲ್ಲಿ, ಆಫೀಸಿಗೆ ಬಂದ ಭಾರ್ಗವಿ ಸೀತಾಳ ನಡವಳಿಕೆ ಬಗ್ಗೆಯೇ ಪ್ರಶ್ನೆ ಬರುವಂತ ಮಾತುಗಳನ್ನ ಆಡಿದ್ದಾಳೆ. ಇದನ್ನು ನೆನೆದು ನೆನೆದೆ ಸೀತಾಳಿಗೆ ಜ್ವರ ಬಂದಿದೆ.

ಮಗಳಿಗೂ ನೀತಿ ಕಥೆ ಹೇಳಿದ ಸೀತಾ
ಸೀತಾ ಇಷ್ಟು ದಿನ ಒಂಟಿಯಾಗಿದ್ದರು, ಯಾರೊಂದಿಗೂ ಸಹಾಯಕ್ಕಾಗಿ ಕೈ ಚಾಚಿರಲಿಲ್ಲ. ಯಾಕೆಂದರೆ ಕೆಟ್ಟದಾಗಿ ಯಾರೂ ಮಾತನಾಡಬಾರದು ಎಂಬ ಕಾರಣಕ್ಕೆ. ರಾಮ್‌ನನ್ನು ನಂಬಿದ್ದ ಸೀತಾಳಿಗೆ ಭಾರ್ಗವಿಯಿಂದ ಕೆಟ್ಟ ಮಾತುಗಳನ್ನು ಕೇಳುವಂತೆ ಆಯಿತು. ಇದಕ್ಕೆಲ್ಲ ಕಾರಣ ರುದ್ರ ಪ್ರತಾಪನ ಸ್ವಾರ್ಥ. ಸೀತಾಳನ್ನು ಮದುವೆಯಾಗಬೇಕೆಂಬ ದುರಾಸೆ. ಈ ಎಲ್ಲದರಿಂದ ನೊಂದಿದ್ದ ಸೀತಾ, ಮಗಳ ಬಳಿ ಚಿನ್ನದ ಕೋಳಿಯನ್ನು ಒಂದೇ ಸಲ ಶ್ರೀಮಂತನಾಗಬೇಕೆಂಬ ಆಸೆಯಿಂದ ಕೊಯ್ದ ಮಾಲೀಕನ ಕಥೆ ಹೇಳಿ, ತನ್ನ ಮನಸ್ಸನ್ನು ಹಗುರ ಮಾಡಿಕೊಂಡಳು.
ಬೆಳಗ್ಗೆಯಷ್ಟರಲ್ಲಿ ಸೀತಾಗೆ ಜ್ವರ
ಸೀತಾಳಿಗೆ ತನ್ನ ಮಗಳು ಸಿಹಿಯೇ ಮೆಡಿಸನ್. ಹೊರಗಿನ ಜನರ ಮಾತನ್ನು ಕೇಳಿ, ಯೋಚನೆಯಲ್ಲಿ ಸೀತಾಗೆ ಜ್ವರವೇ ಬಂದಿದೆ. ಬೆಳಗ್ಗೆ ಏಳುವಷ್ಟರಲ್ಲಿ ಆಫೀಸ್ ಸಮಯ ಮೀರಿ ಹೋಗಿತ್ತು. ಸೀತಾ ಆದರೂ ಮಗಳಿಗೆ ತಿಂಡಿ ಮಾಡಿ, ಕೆಲಸ ಮಾಡಲು ಹೋದಳು. ಆದರೆ, ಅದು ಆಗಲಿಲ್ಲ. ಸಿಹಿ ಕೂಡ ಶಾಲೆಗೆ ಹೋಗದೆ, ಅಮ್ಮನನ್ನು ಆರೈಕೆ ಮಾಡಲು ಉಳಿದುಕೊಂಡಿದ್ದಾಳೆ.

ಪ್ರಜ್ಞೆ ತಪ್ಪಿ ಬಿದ್ದ ಸೀತಾ
ಸೀತಾಗೆ ಜ್ವರ ಜಾಸ್ತಿಯಾಗಿದೆ. ಬೆಳಗ್ಗೆ ಎದ್ದಾಗ ನಾರ್ಮಲ್ ಆಗಿನೆ ಇದ್ದಳು. ಆದರೆ, ಸ್ವಲ್ಪ ಸಮಯದ ನಂತರ ಜ್ವರ ಜಾಸ್ತಿಯಾಗಿ, ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಸಿಹಿ ಅಮ್ಮನನ್ನು ಎತ್ತಿ ಕೂರಿಸಲು ಪ್ರಯತ್ನ ಮಾಡಿದ್ದಾಳೆ. ಆದರೆ, ಸಿಹಿ ಒಬ್ಬಳಿಂದಾನೇ ಆಗುತ್ತಿಲ್ಲ. ಸಿಹಿಗೆ ಪರಿಸ್ಥಿತಿ ಭಯ ಕೂಡ ಹುಟ್ಟಿಸಿದೆ. ಕಷ್ಟ ಅಂತ ಬಂದಾಕ್ಷಣ ಸಿಹಿಗೆ ನೆನಪಾಗುವುದು ರಾಮ್. ತಕ್ಷಣ ರಾಮ್‌ಗೆ ಕಾಲ್ ಮಾಡಿದ ಸಿಹಿ, ಸಮಸ್ಯೆಯನ್ನು ಹೇಳಿದ್ದಾಳೆ.
ಸೀತಾಳ ಮನೆಗೆ ಬರ್ತಾನಾ ರಾಮ್..?
ರಾಮ್ ಸೀತಾಗೆ ಅಡ್ವಾನ್ಸ್ ಸ್ಯಾಲರಿ ಬಂದಿಲ್ಲ ಅಂತ ಯೋಜನೆಯಲ್ಲಿಯೇ ಓಡಾಡುತ್ತಿದ್ದ. ಆ ಕಡೆ ಸೀತಾಳ ಚೇರ್ ಬೇರೆ ಖಾಲಿ ಇತ್ತು. ಅಲ್ಲಿಗೆ ಬಂದ ಪ್ರಿಯಾ, 'ನೀನು ಎಂಥ ಫ್ರೆಂಡ್. ಸೀತಾಳಿಗೆ ಜ್ವರ ಬಂದಿದೆ' ಅಂತ ಹೇಳಿದ್ದಾಳೆ. ಅದರ ಬಗ್ಗೆಯೇ ಯೋಚಿಸುವಾಗಲೇ ಸಿಹಿ, ರಾಮ್‌ಗೆ ಕಾಲ್ ಮಾಡಿದ್ದಾಳೆ. ಸೀತಮ್ಮನಿಗೆ ಜ್ವರ ಬಂದಿದೆ ಅಂತ ಹೇಳಿದ್ದಾಳೆ. ಈಗ ರಾಮ್ ಮನೆಗೆ ಬರಲೇಬೇಕಿದೆ. ಯಾಕಂದ್ರೆ, ಅಕ್ಕ ಪಕ್ಕದಲ್ಲಿ ಅಜ್ಜಿ ತಾತ ಕೂಡ ಇಲ್ಲ. ಸೀತಾ ಬೇರೆ ಮುನಿಸಿಕೊಂಡು ಹೋಗಿದ್ದಾಳೆ. ರಾಮ್ ಮನಸ್ಸಲ್ಲಿ ಹಿಂಜರಿಕೆಯಿದ್ದರು, ಸಿಹಿ ಗಾಬರಿಯಾಗುತ್ತಾಳೆ ಅಂತ ಹೋಗಲೇಬೇಕಾಗಿದೆ.


Click it and Unblock the Notifications











