Seetha Rama Serial: ರಾಮನ ಹಿಂದೆ ಬಿದ್ದಿರೋ ಭಾರ್ಗವಿಗೆ ಶಾಂತಮ್ಮನ ವಠಾರ ಸಿಗುತ್ತಾ?
ಸೀತಾಳ ಅನಾರೋಗ್ಯದಿಂದಾಗಿ ರಾಮ್ ಈಗ ಸೇವಕನಾಗಿದ್ದಾನೆ. ಸೀತಾಳಿಗಾಗಿ ಅಡುಗೆ ಮಾಡಿದ್ದಾನೆ. ಸಿಹಿಗೆ ಧೈರ್ಯ ತುಂಬಿದ್ದಾನೆ. ಯಾರೂ ಇಲ್ಲ ಎಂಬ ಭಾವನೆಯನ್ನು ದೂರ ಮಾಡಿದ್ದಾನೆ. ಫ್ರೆಂಡ್ ಎಂದರೆ ಹೇಗಿರಬೇಕು ಎಂಬ ಅರ್ಥಕ್ಕೆ ಸರಿಯಾಗಿದ್ದಾನೆ. ಕಷ್ಟದ ಸಮಯದಲ್ಲಿ ಹೆಗಲಾಗಿ ನಿಂತಿದ್ದಾನೆ.
ಜ್ವರ ಎಂದು ತಿಳಿದ ಕೂಡಲೇ ಮನೆಗೆ ಓಡೋಡಿ ಬಂದಿದ್ದಾನೆ. ಸೀತಾಳಿಗೆ ಬೇಕಾದ ಟ್ಯಾಬ್ಲೆಟ್ ತಂದಿದ್ದಾನೆ. ಅಮ್ಮ-ಮಗಳ ಜೊತೆ ಸೇರಿ ನಗು ಅಂದರೆ ಏನು ಅನ್ನೋದನ್ನು ತಿಳಿದುಕೊಂಡಿದ್ದಾನೆ. ರಾಮ್‌ನನ್ನು ಕಂಡು ಪ್ರಿಯಾಳಿಗೆ ಹೊಟ್ಟೆ ಉರಿದಿದೆ.

ಫ್ರೆಂಡ್ ಎಂದರೆ ರಾಮ್ ರೀತಿ ಇರಬೇಕು
ಸ್ನೇಹ ಅನ್ನೋದು ಬರೀ ಸುಖಕ್ಕೆ ಆಗುವುದಲ್ಲ, ಕಷ್ಟದ ಸಮಯದಲ್ಲಿ ಕೈಹಿಡಿದು ನಡೆಸುವುದು ಎಂಬುದನ್ನು ರಾಮ್ ತೋರಿಸಿದ್ದಾನೆ. ಸೀತಾಗೆ ಜ್ವರ ಎಂದು ಗೊತ್ತಾದ ಕೂಡಲೇ ಯಾರಿಗೂ ಹೇಳದೆ, ಕೇಳದೆ ಸೀತಾ ಮನೆಗೆ ಹೋಗಿದ್ದಾನೆ. ಚರಣ್ ಈ ಕಡೆ ರಾಮ್‌ನನ್ನು ಹುಡುಕುತ್ತಿದ್ದಾನೆ. ಆಫೀಸ್‌ನಲ್ಲಿ ಬಾಸ್ ಅಂತ ನಾನೊಬ್ಬ ಇದ್ದೀನಿ. ಹೇಳದೆ ಕೇಳದೆ ಹೋಗಿದ್ದಾನೆ ಅಂತ ಕೂಗಾಡಿದ್ದಾರೆ. ಆದರೆ, ಪ್ರಿಯಾಳಿಗೆ ರಾಮ್ ಬಗ್ಗೆ ಹೆಮ್ಮೆ ಎನಿಸಿದೆ. ಫ್ರೆಂಡ್ ಎಂದರೆ ಹೀಗಿರಬೇಕು. ಸ್ವಲ್ಪ ಜ್ವರ ಎಂದ ಕೂಡಲೇ ಎಷ್ಟು ಬೇಗ ಹೋಗಿದ್ದಾನೆ ಎಂದು ಖುಷಿ ಪಟ್ಟಿದ್ದಾಳೆ.
ರಾಮ್ ಸಂತಸಕ್ಕೆ ಪಾರವೇ ಇಲ್ಲ
ರಾಮ್ ಖುಷಿಯಾಗಿರಬೇಕು ಎಂದರೆ ಸಿಹಿ ಒಬ್ಬಳಿದ್ದರೆ ಸಾಕು. ರಾಮ್ ಯಾವಾಗಲೂ ಜಗತ್ತಿನ ನೋವೆಲ್ಲಾ ಮರೆತು ಖುಷಿಯಾಗಿರುತ್ತಾನೆ. ಸೀತಾಳಿಗೆ ಹುಷಾರಿಲ್ಲ ಅಂತ, ಸಿಹಿ ದೊಡ್ಡ ಜವಾಬ್ದಾರಿ ಹುಡುಗಿಯಂತೆ ಎಲ್ಲಾ ನೋಡಿಕೊಳ್ಳುತ್ತಿದ್ದಾಳೆ. ಅದರ ಜೊತೆಗೆ ರಾಮ್ ಕೂಡ ಸಹಾಯಕ್ಕೆ ನಿಂತಿದ್ದಾನೆ. ಅಡುಗೆಯ ಮನೆಗೆ ಹೋಗದ ರಾಮ್, ಸಿಹಿಯ ಆದೇಶದಂತೆ ಉಪ್ಪಿಟ್ಟನ್ನು ಮಾಡಿದ್ದಾನೆ. ಜೀವನ ಏನು ಅನ್ನೋದನ್ನು ಚೆನ್ನಾಗಿಯೇ ಕಲಿತಿದ್ದಾನೆ. ಈಗ ಸಿಹಿಯ ತುಂಟಾಟಕ್ಕೆ ಹೆಣ್ಣು ಮಕ್ಕಳಂತೆ ಮೇಕಪ್ ಮಾಡಿಕೊಂಡು ಸೀತಾಳನ್ನು ನಕ್ಕು ನಗಿಸಿದ್ದಾನೆ.
ರಾಮ್ ಹುಡುಕಾಟಕ್ಕೆ ನಿಂತ ಭಾರ್ಗವಿ
ನಾಟಕದ ಪ್ರೀತಿಯಲ್ಲಿ ತೊಡಗಿರುವ ಭಾರ್ಗವಿ, ರಾಮ್ ಸಂತಸದಿಂದ ಇರುವುದಕ್ಕೆ ಬಿಡಲು ತಯಾರಿಲ್ಲ. ಒಂದು ಊರು ಬಿಟ್ಟು ಬೇರೆ ಎಲ್ಲಿ ಬೇಕಾದರೂ ಬದುಕಬಹುದು. ಆಫೀಸಿನಲ್ಲಿ ನಡೆಯುತ್ತಿರುವ ಕರ್ಮ ಕಾಂಡಗಳನ್ನು ಕೇಳಬಾರದು. ಇದಕ್ಕೆಲ್ಲಾ ತಲೆ ಹಾಕುತ್ತಿರುವ ರಾಮ್‌ಗೆ ಸ್ಲೋ ಪಾಯಿಸನ್ ರೀತಿಯಲ್ಲಿ ಭಾರ್ಗವಿ ನೋವನ್ನು ಕೊಡುತ್ತಿದ್ದಾಳೆ. ಈಗ ರಾತ್ರಿ ಸಮಯ ಜಾಸ್ತಿಯಾದರೂ ಮನೆಗೆ ಬಾರದ ರಾಮ್‌ನನ್ನು ಹುಡುಕಲು ಶುರು ಮಾಡಿದ್ದಾಳೆ.
ಶಾಂತಮ್ಮನ ವಠಾರದ ಕಡೆಗೆ ದಾರಿ ಕಾಣುತ್ತಾ?
ರಾಮ್ ಎಲ್ಲಿ ಹೋಗುತ್ತಾನೆ, ಬರುತ್ತಾನೆ ಎಂಬ ಯಾವ ವಿಚಾರವನ್ನು ಭಾರ್ಗವಿಗೆ ತಿಳಿಸಲ್ಲ. ಈ ಕಾರಣಕ್ಕೇನೆ ದೊಡ್ಡ ಕಣ್ಣನ್ನೇ ರಾಮನ ಮೇಲಿಟ್ಟಿದ್ದಾಳೆ ಭಾರ್ಗವಿ. ಈಗ ಮನೆಯನ್ನೇ ಮರೆತ ರಾಮ, ಸೀತಾ ಮನೆಯಲ್ಲಿ ಆನಂದದ ಸಮಯವನ್ನು ಕಳೆಯುತ್ತಿದ್ದಾನೆ. ಇದು ಭಾರ್ಗವಿಯ ನೆಮ್ಮದಿ ಕೆಡಿಸಿದೆ. ಅಶೋಕನಿಗೆ ಕರೆ ಮಾಡಿದರೆ, ಇನ್ಮೊಂದು ಸ್ಚಲ್ಪ ಸಮಯದಲ್ಲಿ ಬರುತ್ತಾನೆ ಎಂದಿದ್ದಾನೆ. ಮೊದಲೇ ಸೀತಾಳ ಮೇಲೆ ಅನುಮಾನದ ಗುಡ್ಡವನ್ನೇ ಬೆಳೆಸಿಕೊಂಡಿದ್ದಾಳೆ ಭಾರ್ಗವಿ. ಈಗ ರಾಮ ಎಲ್ಲಿಂದಾನೇ ಎಂಬುದನ್ನು ಹುಡುಕಲು ಹೊರಟಿರುವ ಭಾರ್ಗವಿಗೆ ಶಾಂತಮ್ಮನ ವಠಾರ ಸಿಗುವುದು ಅಷ್ಟೊಂದು ಕಷ್ಟವಾಗುವುದಿಲ್ಲ ಎನಿಸುತ್ತದೆ.


Click it and Unblock the Notifications











