Seetha Rama: ಕಮಿಷನ್ ಆಸೆಗೆ ಭಾರ್ಗವಿಯನ್ನು ರಾಮನ ಬಳಿಯೇ ತಗಲಾಕಿಸುತ್ತಾನಾ ಚರಂಡಿ..?

By ಎಸ್ ಸುಮಂತ್

ರಾಮನಿಗೆ ಆಫೀಸಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎನ್ನುವುದಷ್ಟೇ ಗೊತ್ತು. ಆದರೆ, ಅದರ ಹಿಂದೆ ಇರುವ ಕೈ ಯಾವುದು ಎಂಬುದರ ಹುಡುಕಾಟ ನಡೆಯುತ್ತಿದೆ. ಅಶೋಕನಿಗೆ 50% ಅನುಮಾನ ಭಾರ್ಗವಿಯ ಮೇಲಿದೆ. ಆದರೆ,‌ ಅದನ್ನು ಅರ್ಥ ಮಾಡಿಕೊಂಡು, ಅದರ ಹಿಂದಿನ ಸತ್ಯ ತಿಳಿಯುವ ಪ್ರಯತ್ನವನ್ನು ರಾಮ್ ಮಾಡುವುದಕ್ಕೆ ಸಿದ್ಧವಿಲ್ಲ. ಇದು ಅಶೋಕನ ಕೋಪಕ್ಕೆ ಕಾರಣವಾಗಿದೆ.

ಸೀತಾಳ ಸ್ಯಾಲರಿ ವಿಚಾರಕ್ಕೆ ಚಿಕ್ಕಿಯೇ ಏನೋ ಕುತಂತ್ರ ಮಾಡಿದ್ದಾಳೆ ಎಂಬುದು ಅಶೋಕನಿಗೆ ಗೊತ್ತು. ಆದರೆ, ಅದನ್ನು ರಾಮ ಒಪ್ಪಿಕೊಳ್ಳದೆ ಇರುವುದಕ್ಕೆ ಅಶೋಕ ಕೋಪ ಮಾಡಿಕೊಂಡಿದ್ದ. ಹಾಗೋ ಹೀಗೋ ಸಮಸ್ಯೆಗಳನ್ನೆಲ್ಲಾ ಸರಿ ಮಾಡಿ, ಈಗ ಫ್ರೆಂಡ್‌ಶಿಪ್ ಸರಿಹೋಗಿದೆ.

zee-kannada-serial-seetharama

ಚರಂಡಿ ತಾಕತ್ತಿನ ಬಗ್ಗೆ ಚಾಲೆಂಜ್ ಮಾಡಿದ ಭಾರ್ಗವಿ

ಭಾರ್ಗವಿಯ ಎಲ್ಲಾ ಅನೈತಿಕ ವ್ಯವಹಾರಗಳಿಗೂ ಚರಂಡಿ ಭಾಗಿಯಾಗಿದ್ದಾನೆ. ಯಾಕಂದ್ರೆ, ಆ ಹಣದಲ್ಲಿ ಭಾರ್ಗವಿ, ಚರಂಡಿಗೂ ಕೊಟ್ಟು ಸಮಾಧಾನ ಮಾಡುತ್ತಿದ್ದಾಳೆ. ಈಗ ಹೊಸದೊಂದು ಪ್ರಾಜೆಕ್ಟ್ ಬಗ್ಗೆಯೂ ಹಣ ಸಿಗುವ ಆಸೆಯನ್ನ ಭಾರ್ಗವಿ ತೋರಿಸಿದ್ದಾಳೆ. ಅದಕ್ಕೆ ಮುತುವರ್ಜಿ ವಹಿಸಿ, ಈಗ ಚರಂಡಿಯೇ, ಭಾರ್ಗವಿಗೆ ಕಾಲ್ ಮಾಡಿದ್ದಾನೆ. ಪ್ರಾಜೆಕ್ಟ್ ಏನಾಯಿತು..? ನನಗೂ ಕಮಿಷನ್ ಕೊಡುತ್ತೀನಿ ಅಂತ ಹೇಳಿದ್ರಿ ಅಲ್ವಾ ಎಂದಿದ್ದಾನೆ. ಆದರೆ, ಭಾರ್ಹವಿ ಹಳೆ ಪ್ರಾಜೆಕ್ಟ್ ಬಿಟ್ಟು, ಹೊಸ ಪ್ರಾಜೆಕ್ಟ್ ಬಗ್ಗೆ ಚರಂಡಿಗೆ ಸವಾಲು ಹಾಕಿದ್ದಾಳೆ.

ರಾಮ್ ತಾಕತ್ತಿನ ಬಗ್ಗೆ ಚರಂಡಿ ಸವಾಲು

ಚರಂಡಿಗೆ ಹಣ ಅಷ್ಟೇ ಮುಖ್ಯ. ಶರ್ಮಾ ಗ್ರೂಪ್ ಆಫ್ ಕಂಪನಿಯ ಫೈಲ್ ಅಶೋಕನ ಬಳಿ ಇದೆ. ಅದನ್ನು ಹೇಗಾದಾರೂ ಮಾಡಿ, ಭಾರ್ಗವಿಯ ಕೈಗೆ ತಲುಪಿಸಬೇಕು. ಇದು ಚರಂಡಿಗೆ ಹೊಸ ಚಾಲೆಂಜ್. ರಾಮ್ ಯಾರು? ಏನು? ಎಂಬುದನ್ನು ತಿಳಿಯದ ಚರಂಡಿ, ಈ ಫೈಲ್ ಕೊಡುವುದಕ್ಕೆ ಅವನನ್ನೇ ಬಳಸಿಕೊಂಡಿದ್ದಾನೆ. "ನಿಂಗೆ ಬಾಸ್ ತುಂಬಾ ಕ್ಲೋಸ್ ಅಲ್ವಾ. ಹಾಗಾದರೆ ಅವರ ಬಳಿ ಇರುವ ಶರ್ಮಾ ಫೈಲ್ ಅನ್ನ ತೆಗೆದುಕೊಂಡು, ನಾನು ಹೇಳುವ ಅಡ್ರೆಸ್‌ಗೆ ಕೊಟ್ಟು ಬಾ. ಇದು ನಿನ್ನ ತಾಕತ್ತನ್ನು ತೋರಿಸುತ್ತದೆ" ಎಂದು ರಾಮ್‌ಗೆ ಸವಾಲು ಹಾಕಿದ್ದಾನೆ.

zee-kannada-serial-seetharama

ಚರಂಡಿಯ ಸವಾಲು ಗೆದ್ದ ರಾಮ್

ರಾಮ್ ಮತ್ತು ಅಶೋಕ ಮೋಸ ಕಂಡು ಹಿಡಿಯುವುದಕ್ಕೇನೆ ಬಂದಿರುವುದು. ಹಾಗೇ ಹುದ್ದೆ ಕೂಡ ಬೇರೆ ಬೇರೆ ಆಗಿರುವುದು. ಹೀಗಿರುವಾಗ ಕಳ್ಳನನ್ನು ಹಿಡಿಯಲು ಫೈಲ್ ತೆಗೆದುಕೊಂಡು ಹೋಗುವುದು ಕಷ್ಟವಾ. ಶರ್ಮಾ ಫೈಲ್ ಅನ್ನು ಈಸಿಯಾಗಿ ರಾಮ್ ತನ್ಮ ಕೈಗೆ ತೆಗೆದುಕೊಂಡಿದ್ದಾನೆ. ಚರಂಡಿ ಬಳಿ ಬಂದು ಹಾಕಿದ ಚಾಲೆಂಜ್ ಗೆದ್ದ ಬಗ್ಗೆಯೂ ಹೇಳಿ, ಅಡ್ರೆಸ್ ತೆಗೆದುಕೊಂಡು ಹೊರಟಿದ್ದಾನೆ.

ರಾಮ್ ಮುಂದೆ ಸಿಕ್ಕಿಕೊಳ್ತಾಳಾ ಚಿಕ್ಕಿ?

ಶರ್ಮಾ ಫೈಲ್‌ನಲ್ಲಿ ಎಲ್ಲಾ ಬಿಲ್‌ಗಳು ನಕಲಿಯೇ. ಹೀಗಾಗಿ ಆ ಫೈಲ್ ತೆಗೆಸಿಕೊಳ್ಳುವುದು ಭಾರ್ಗವಿಗೆ ಅನಿವಾರ್ಯವಾಗಿತ್ತು. ಚರಂಡಿ ಒಳ್ಳೆಯ ಬುದ್ದಿವಂತ ಎಂದುಕೊಂಡು ಈ ಕೆಲಸವನ್ನು ಅವನಿಗೆ ಹೇಳಿದ್ದಾಳೆ. ಆದರೆ, ಚರಂಡಿಯ ಹಣದ ಆಸೆ, ಭಾರ್ಗವಿಯನ್ನೇ ಲಾಕ್ ಮಾಡಿಸುವ ಮಾರ್ಗ ತೋರಿದೆ. ಆಫೀಸಲ್ಲಿ ಮೋಸ ನಡೆಯುತ್ತಿದೆ ಎಂದು ಗೊತ್ತಿದ್ದ ರಾಮ್ ಹಾಗೂ ಅಶೋಕನಿಗೆ ಮಾಡುತ್ತಿರುವುದು ಯಾರು ಎಂಬುದು ತಿಳಿದಿರಲಿಲ್ಲ. ಈಗ ಆ ಜಾಡು ಹಿಡಿದು ರಾಮ್ ಹೊರಟಿದ್ದಾನೆ. ಭಾರ್ಗವಿ ಕಣ್ಣಿಗೆ ರಾಮನೇ ಫೈಲ್ ತಂದಿರುವುದು ಬಿದ್ದರೆ, ಅಲ್ಲಿ ಚರಂಡಿಯ ಕಥೆ ಮುಗಿದಿರುತ್ತೆ.

More from Filmibeat

English summary
Zee kannada serial Seetharama Written Update on October 6th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X