Shravani Subramanya: ವೀರೇಂದ್ರನ ಕಣ್ತಪ್ಪಿಸಿ ಶ್ರಾವಣಿ-ಸುಬ್ರಮಣ್ಯ ಸಖತ್ ಡ್ಯಾನ್ಸ್ ಗುರು!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಬರುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಕಥೆ ದಿನೇ‌ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಅದರಲ್ಲೂ ತನ್ನ ಸ್ವಾರ್ಥಕ್ಕಾಗಿ ತನ್ನ ಅಣ್ಣನ ಸಂಸಾರವನ್ನೇ ಆಳು ಮಾಡಿದವಳು ವಿಜಯಾಂಬಿಕೆ. ಇಷ್ಟು ವರ್ಷ ಬಚ್ಚಿಟ್ಟ ಸತ್ಯದ ಕುರುಹು ಸಿಕ್ಕಿದೆ. ಆದರೆ‌ ವಿಜಯಾಂಬಿಕೆಯ ಉದ್ದೇಶ ಏನು ಎಂಬುದು ಶ್ರಾವಣಿಗೆ ತಿಳಿಯುತ್ತಿಲ್ಲ. ಅದರ ಸತ್ಯ ತಿಳಿಯುವಷ್ಟರಲ್ಲಿ ಸಾಲಿಗ್ರಾಮಕ್ಕೆ ಬಂದಿದ್ದಾಳೆ.

ಸಾಲಿಗ್ರಾಮದಲ್ಲಿ ಶ್ರಾವಣಿಗೆ ತಿಳಿಯಬೇಕಾದ ಎಲ್ಲಾ ಸತ್ಯಗಳು ಅಡಗಿವೆ. ಆದರೆ ಅದನ್ನು ತಿಳಿಯಬೇಕು ಅಷ್ಟೇ. ಅದಕ್ಕೆ ಪ್ರತಿಸಲ ಕೂಡ ವಿಜಯಾಂಬಿಕೆ ಅಡ್ಡಿಯಾಗುತ್ತಲೇ ಇದ್ದಾಳೆ. ಅಮ್ಮ ಹೇಗಿದ್ದಾಳೆ, ಅಮ್ಮ ಎಲ್ಲಿದ್ದಾಳೆ, ಹೇಗಿದ್ದಳು ಎಂಬುದೆಲ್ಲವನ್ನು ತಿಳಿದುಕೊಳ್ಳಬೇಕೆಂದು ಅಜ್ಜಿಯ ಬಳಿ ಮಾತಮಾಡುವಾಗಲೇ ವಿಜಯಾಂಬಿಕೆ ಅಡ್ಡಗಾಲು ಹಾಕಿದ್ದಾಳೆ.

Zee kannada serial Shravani subramanya Fame Asiya Firdose shares dance video with Amogh

ಶ್ರಾವಣಿ ದೇವತೆಯೆನ್ನುವ ಸುಬ್ಬು

ನವರಸಗಳಲ್ಲಿ ಮುಗ್ಧತೆ ಎಂಬುದು ಇಲ್ಲ. ಆದರೆ ಆ ಮುಗ್ದತೆಯೆಂಬುದನ್ನು ಯಾರಿಂದಾನೂ ಕಲಿಸಿಕೊಡುವುದಕ್ಕೆ ಸಾಧ್ಯವಿಲ್ಲ. ಹಾಗೇ ಎಲ್ಲರ ಮುಖಭಾವಕ್ಕೂ ಈ ಮುಗ್ಧತೆ ಮ್ಯಾಚ್ ಆಗಲ್ಲ. 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ಸುಬ್ಬು ಮುಗ್ಧತೆಯ ಹುಡುಗನಾಗಿ‌ ಕಾಣಿಸಿಕೊಂಡಿದ್ದಾನೆ. ಅದರಲ್ಲೂ ತನಗೆ ಕೆಲಸ ಕೊಟ್ಟಿರುವ ಯಜಮಾನರನ್ನು ದೇವರಂತೆ ಕಾಣುತ್ತಾನೆ. ಇಡೀ ಮನೆಯವರನ್ನು ಪ್ರೀತಿಯಿಂದ ನೋಡುತ್ತಾನೆ. ಶ್ರಾವಣಿಯನ್ನಂತು ದೇವತೆ ರೀತಿಯೇ ನೋಡುತ್ತಾನೆ. ಆದರೆ ದೇವತೆಯಂತಿರುವ ಶ್ರಾವಣಿಗೆ ಸುಬ್ಬು ಮೇಲೆ ಲವ್ವಾಗಿದೆ.


ರಿಯಲ್ ಲೈಫ್ ಸುಬ್ಬು ಬೇರೆ

ಸುಬ್ಬು ಅಲಿಯಾಸ್ ಅಮೋಘ್ ಈ ಮೊದಲೇ ಹಲವು ಧಾರಾವಾಹಿಗಳನ್ನು ಮಾಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಹೀರೋ ಕಳೆ ಎದ್ದು ಕಾಣಿಸುತ್ತದೆ. ಜಿಮ್‌ನಲ್ಲಿ ಜೋರು ಕಸರತ್ತು ಮಾಡುವ ಅಮೋಘ್, ಒಳ್ಳೊಳ್ಳೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಹಾಗೇ ಮಹಿಳಾ ಅಭಿಮಾನಿಗಳು ಅಮೋಘ್‌ಗೆ ಜಾಸ್ತಿ ಇದ್ದಾರೆ. ಹೀಗಾಗಿ ಅವರು ಶೇರ್ ಮಾಡುವ ಫೋಟೋಗಳಿಗೆ ಸಿಕ್ಕಾಪಟ್ಟೆ ಕಮೆಂಟ್ ಬಂದಿವೆ. ಸತ್ಯ ಧಾರಾವಾಹಿಯಲ್ಲಿ ಅಮೋಘ್ ಅಭಿನಯಕ್ಕೆ ಸಾಕಷ್ಟು ಜನ ಫಿದಾ ಆಗಿದ್ದರು. ಆ ಧಾರಾವಾಹಿಯಲ್ಲೂ ಅಮೋಘ್ ಮುಗ್ಧನ ಪಾತ್ರವನ್ನೇ ಮಾಡಿದ್ದರು.

ಶ್ರಾವಣಿ ರಿಯಲ್ ಲೈಫ್ ಹೇಗಿದೆ..?

ಶ್ರಾವಣಿ ಕೂಡ ತಮ್ಮ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇವರ ರಿಯಲ್ ನೇಮ್ ಆಶಿಯಾ. ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಹಾರ್ಟ್ ಕದ್ದಿದ್ದಾರೆ. ಹೊಸದಾಗಿ ಫೋಟೋಶೂಟ್ ಮಾಡಿಸಿರುವ ಶ್ರಾವಣಿಯ ಬ್ಯೂಟಿ ಮತ್ತಷ್ಟು ಹೆಚ್ಚಾದಂತೆ ಕಾಣುತ್ತಿದೆ. ಧಾರಾವಾಹಿಯಲ್ಲೂ ಅಷ್ಟೇ ಯಾವಾಗಲೂ ಚೂಡಿದಾರ್‌ನಲ್ಲಿಯೇ ಕಾಣಿಸಿಕೊಳ್ಳುವ ಶ್ರಾವಣಿ ರಿಯಲ್ ಲೈಫ್‌ನಲ್ಲಿ ದಂತದ ಗೊಂಬೆ, ಚಿನ್ನದಂತ ಬ್ಯೂಟಿ.

ಶ್ರಾವಣಿ-ಸುಬ್ರಮಣ್ಯ ಮಸ್ತ್ ಡ್ಯಾನ್ಸ್

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿಗೆ ಬೆಸ್ಟ್ ಫ್ರೆಂಡ್ ಸುಬ್ಬು. ಯಾವಾಗಲೂ ಬನ್ನಿ ಮೇಡಂ, ಹೇಳಿ ಮೇಡಂ ಅಂತ ಸುಬ್ಬು ಕರೀತಾ ಇದ್ರೆ ಕೇಳೋರಿಗೇನೆ ಚೆಂದ ಅನ್ನಿಸುತ್ತೆ. ಧಾರಾವಾಹಿ ಹೊರತು ಪಡಿಸಿದರೆ ರಿಯಲ್‌ ಲೈಫ್‌ನಲ್ಲೂ ಇಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿಯೇ ಇದ್ದಾರೆ. ಅದರಲ್ಲೂ ಡ್ಯಾನ್ಸ್ ವಿಡಿಯೋ ಜಾಸ್ತಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಸಾಲಿಗ್ರಾಮದಲ್ಲಿರುವ ಶ್ರಾವಣಿ ಸುಬ್ಬು, ವೀರೇಂದ್ರನ ಕಣ್ತಪ್ಪಿಸಿ ಡ್ಯಾನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರ ಡ್ಯಾನ್ಸ್ ನೋಡಿದವರು, ವಾವ್ ಅದ್ಭುತವಾಗಿ ಡ್ಯಾನ್ಸ್ ಮಾಡ್ತೀರಾ ಅಂತಿದ್ದಾರೆ. ಇನ್ನು ಒಂದಷ್ಟು ಜನ ರಿಯಲ್ ಲೈಫ್‌ನಲ್ಲೂ ಜೋಡಿಯಾಗಿ ಬಿಡಿ ಎಂದು ಸಲಹೆ ನೀಡಿದ್ದಾರೆ.

More from Filmibeat

English summary
Zee kannada serial shravani subramanya Written Update on Shravani social media. Here is the details about Subbu and shravani dance viral;
Read more about: tv filmibeat news sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X