Shravani subramanya: ಶ್ರಾವಣಿ ಫೇಲ್: ಸುಬ್ಬು ಗುಟ್ಟಾಗಿಟ್ಟರೆ, ವಿಜಯಾಂಬಿಕೆ ಹಬ್ಬ ಮಾಡುತ್ತಿದ್ದಾಳೆ!
ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿ ಶಿಕ್ಷಣ ಸಚಿವ ವೀರೇಂದ್ರ ಅವರ ಮಗಳು. ಆದರೆ ಓದುವುದರಲ್ಲಿ ತೀರಾ ಹಿಂದೆ. ಈ ವಿಚಾರದಲ್ಲಿ ಕಾಲೇಜಲ್ಲೂ ಶ್ರಾವಣಿಯನ್ನ ಅದೇ ವಿಚಾರಕ್ಕೆ ಗೇಲಿ ಮಾಡುವವರು ಜಾಸ್ತಿ. ಇದನ್ನೆಲ್ಲಾ ಮೆಟ್ಟಿ ನಿಲ್ಲಬೇಕು ಅಂತಾನೆ ಸಾಕಷ್ಟು ಕಷ್ಟ ಪಟ್ಟು ಓದಿದ್ದಾಳೆ. ಆದರೂ ದೇವರು ವರ ಕೊಟ್ಟಿಲ್ಲ.
ಶ್ರಾವಣಿ ಈ ಬಾರಿಯ ಪರೀಕ್ಷೆಯಲ್ಲಿ ಪಾಸು ಮಾಡು ಅಂತ ಸಂಪೂರ್ಣವಾಗಿ ದೇವರ ಮೇಲೆ ಭಾರ ಹಾಕಿದ್ದಳು. ಅದಕ್ಕೆಂದೆ ಬೆಳಗಿನ ಜಾವವೇ ಎದ್ದು ದೇವರ ಮೊರೆ ಹೋಗಿ, ಪೂಜೆಯನ್ನು ಮಾಡಿದ್ದಳು. ಅರಳಿಕಟ್ಟೆಯನ್ನು ಸುತ್ತು ಹಾಕಿದ್ದಳು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಶ್ರಾವಣಿ ಫೇಲ್ ಆಗಿದ್ದಾಳೆ. ಅದಕ್ಕೆ ಕಾರಣವೂ ಶ್ರಾವಣಿಯೇ. ಪರೀಕ್ಷೆಯ ದಿನ ಇದ್ದ ಪ್ರಶ್ನೆ ಪತ್ರಿಕೆಯೆ ಬೇರೆ, ಅವಳು ಓದಿದ ಪತ್ರಿಕೆಯೇ ಬೇರೆ ಆಗಿತ್ತು. ಸುಬ್ಬು ಅದನ್ನು ತಿಳಿಸುವುದಕ್ಕೆ ಪ್ರಯತ್ನ ಪಟ್ಟರು, ಆಗಿರಲಿಲ್ಲ.

ಶ್ರಾವಣಿ ಪರೀಕ್ಷೆ ಫಲಿತಾಂಶ ಬಂತು
ಶ್ರಾವಣಿ ಪಾಸಾಗಲೆಂದು ಫಲಿತಾಂಶ ಪ್ರಕಟಕ್ಕೂ ಮುನ್ನವೇ ಸುಬ್ಬು ಕೂಡ ದೇವರ ಬಳಿ ಪ್ರಾರ್ಥನೆ ಮಾಡಿದ್ದ. ಆದರೆ ಅದು ಕೂಡ ಪ್ರಯೋಜನವಾಗಲಿಲ್ಲ. ಶ್ರಾವಣಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ಮನೆಯಲ್ಲಿಯೇ ಇದ್ದರೆ ಫಲಿತಾಂಶ ನೋಡಿದಾಗ ಹೇಗೆ ರಿಯಾಕ್ಟ್ ಮಾಡಬೇಕೆಂಬುದು ತಿಳಿಯದೆ, ಧೈರ್ಯ ಸಾಲದೇ ಶ್ರಾವಣಿ ನೇರವಾಗಿ ಸುಬ್ಬು ಮನೆಗೆ ಬಂದಿದ್ದಾಳೆ.
ಮಲ್ಲಿಯಿಂದ ತಿಳಿಯಿತು ಸತ್ಯ
ಶ್ರಾವಣಿ ಬರುವ ಮುನ್ನವೆ ಸುಬ್ಬು ಮನೆಯವರಿಗೆ ಫಲಿತಾಂಶ ತಿಳಿದಿತ್ತು. ಶ್ರಾವಣಿ ಫೇಲ್ ಆಗಿರುವುದು, ಯಾರು ಫಸ್ಟ್ ರ್ಯಾಂಕ್ ಬಂದಿರುವುದು. ಆದರೆ ಶ್ರಾವಣಿ ಬಂದಾಗ ಅದನ್ನು ಮುಚ್ಚಿಟ್ಟರು. ನಿಜಾಂಶ ಗೊತ್ತಾದರೆ ಅವಳಿಂದ ಆ ದುಃಖ ತಡೆದುಕೊಳ್ಳುವುದಕ್ಕೆ ಆಗಲ್ಲ ಎಂಬ ಕಾರಣಕ್ಕೆ ಮುಚ್ಚಿಟ್ಟದ್ದರು. ಇದನ್ನ ತಿಳಿದ ಮಲ್ಲಿ ಮನೆಯವರ ನೆಮ್ಮದಿಯನ್ನೆ ಹಾಳು ಮಾಡಿದ್ದಾಳೆ. ಶ್ರಾವಣಿಯನ್ನು ಕಂಡರೆ ಆಗದ ಮಲ್ಲಿ, ಸ್ವೀಟ್ ಬಾಕ್ಸ್ ತೆಗೆದುಕೊಂಡು ಹೋಗಿ, ಸಂಭ್ರಮಿಸಿದ್ದಾಳೆ. ಆಗಲೇ ಶ್ರಾವಣಿಗೆ ಫಲಿತಾಂಶ ಬಂದಿರುವ ಸತ್ಯ ಗೊತ್ತಾಗಿದೆ.
ಮದನ್‌ಗೂ ರಿಸಲ್ಟ್ ಗೊತ್ತಾಯ್ತು
ಶ್ರಾವಣಿ ನಾನು ಈ ಸಲ ಪಾಸ್ ಆಗಿಯೇ ಆಗ್ತೀನಿ ಎಂಬ ನಂಬಿಕೆ ಇಟ್ಟುಕೊಂಡಿದ್ದಳು. ಆದರೆ ಫಲಿತಾಂಶ ಬೇರೆಯಾಗಿಯೇ ಬಂದಿದೆ. ಅದನ್ನ ಸುಬ್ಬು ಮನೆಯವರೆಲ್ಲ ಮುಚ್ಚಿಟ್ಟಿದ್ದರು ಕೂಡ. ಆದರೆ ಅದು ಈಗ ಗೊತ್ತಾಗಿದೆ. ಸುಬ್ಬು ಸತ್ಯ ಒಪ್ಪಿಕೊಳ್ಳಲೇಬೇಕಾಗಿದೆ. ಶ್ರಾವಣಿಯ ಮನಸ್ಸು ಒಡೆದಿದೆ. ಶ್ರಾವಣಿಯ ವಿಚಾರ ಈಗ ಮದನ್‌ಗೂ ಗೊತ್ತಾಗಿದೆ.

ಮತ್ತಷ್ಟು ಮನಸ್ತಾಪಕ್ಕೆ ಪ್ಲ್ಯಾನ್
ಮದನ್ ಯಾವಾಗಲೂ ಶ್ರಾವಣಿಯನ್ನು ಸಿಕ್ಕಿ ಹಾಕಿಸುವುದಕ್ಕೆ ಕಾಯುತ್ತಿರುತ್ತಾನೆ. ಈಗ ಅದಕ್ಕೆ ಸ್ಟ್ರಾಂಗ್ ಕಾರಣ ಸಿಕ್ಕಿದೆ. ಶ್ರಾವಣಿ ಫೇಲ್ ಆಗಿರುವುದನ್ನುಅವನ ಬಳಿ ಹೇಳಿಬಿಡೋಣಾ ಎಂದು ಪ್ಲ್ಯಾನ್ ಮಾಡಿದ್ದಾನೆ. ಇದನ್ನೇ ಅವನ ತಾಯಿ ವಿಜಯಾಂಬಿಕೆ ಬಳಿಯೂ ಚರ್ಚೆ ಮಾಡಿದ್ದಾನೆ. ಆದರೆ ವಿಜಯಾಂಬಿಕೆಗೆ ವೀರೇಂದ್ರನ ಬಗ್ಗೆ ಗೊತ್ತಿರುವ ಕಾತಣ, ಮಗಳು ಫೇಲ್ ಆಗಿದ್ದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಅಂತ ಗೊತ್ತು. ಹೀಗಾಗಿ ದೊಡ್ಡಮಟ್ಟದಲ್ಲಿ ಫೇಲ್ ಆದ ಸುದ್ದಿ ಹರಬೇಕು ಎಂದೇ ಪ್ಲ್ಯಾನ್ ಮಾಡಿದ್ದಾಳೆ. ಮರ್ಯಾದೆಗೆ ಅಂಜುವ ವೀರೇಂದ್ರನಿಗೆ ಮಗಳಿಗೆ ಒಂದು ಪರೀಕ್ಷೆಯಲ್ಲಿ ಪಾಸ್ ಆಗುವ ಯೋಗ್ಯತೆಯಿಲ್ಲ ಎಂಬುದನ್ನು ಜನ ಮಾತನಾಡಬೇಕು. ಮಗಳೇ ಫೇಲ್ ಆದರೆ ಶಿಕ್ಷಣ ಮಂತ್ರಿಯಾಗಿ ಶೈಕ್ಷಣಿಕ ಅಭಿವೃದ್ಧಿ ಹೇಗೆ ಎಂಬುದನ್ನು ಪ್ರಶ್ನೆ ಮಾಡಬೇಕು. ಅಷ್ಟು ದೊಡ್ಡಮಟ್ಟಕ್ಕೆ ಸನಸ್ಯೆ ಸೃಷ್ಟಿಸಲು ಹೊರಟಿದ್ದಾಳೆ.


Click it and Unblock the Notifications











