Shravani subramanya: ದುಃಖ ತಡೆಯಲಾದೇ ತಬ್ಬಿಕೊಂಡ ಶ್ರಾವಣಿ; ವಿಜಯಾಂಬಿಕೆಯಿಂದ ಬಿತ್ತು ಪೆಟ್ಟು

By ಎಸ್ ಸುಮಂತ್

ಶ್ರಾವಣಿ ಓದುವುದರಲ್ಲಿ ಸ್ವಲ್ಪ ವೀಕ್. ಪ್ರತಿಸಲ ಫೇಲ್ ಆಗ್ತಾನೆ ಇರುತ್ತಾಳೆ. ಅವರ ತಂದೆ ನೋಡಿದರೆ ಶಿಕ್ಷಣ ಸಚಿವ. ಮಗಳಿಗೆ ಸರಿಯಾದ ಶಿಕ್ಷಣ ಕೊಡಲು ಆಗಲ್ಲ ಎಂಬ ವಿಚಾರವನ್ನೇ ಇಟ್ಟುಕೊಂಡು ಮರ್ಯಾದೆ ತೆಗೆಯಲು ವಿಜಯಾಂಬಿಕೆ ಪ್ಲ್ಯಾನ್ ಮಾಡುತ್ತಲೇ ಇರುತ್ತಾಳೆ. ಇದರ ನಡುವೆ ಶ್ರಾವಣಿಗೂ ತಂದೆಯ ಪ್ರೀತಿಯನ್ನು ಗೆಲ್ಲಲೇಬೇಕೆಂಬ ಆಸೆ. ಆದರೆ ಅದ್ಯಾಕೋ ಅದು ಅಷ್ಟು ಸುಲಭ ಎನ್ನಿಸುತ್ತಿಲ್ಲ.

ಶ್ರಾವಣಿ ಈ ಬಾರಿಯೂ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ಫೇಲ್ ಆಗುವುದು ಹೊಸದೇನು ಅಲ್ಲ. ಈ ಸಲ ಫೇಲ್ ಆದರೆ ಮದುವೆ ಮಾಡಿ ಕಳುಹಿಸಿ ಬಿಡುತ್ತೇನೆ ಎಂದೇ ವೀರೇಂದ್ರ ಹೇಳಿದ್ದ. ಅದರಂತೆ ಫೇಲ್ ಆಗಿದ್ದೇ ತಡ, ವಿಜಯಾಂಬಿಕೆ ಹಾಗೂ ಮದನ್ ಸೇರಿ ಆ ವಿಚಾರದಲ್ಲಿ ವೀರೇಂದ್ರನ ಮನಸ್ಸು ಕೆಡಿಸಿದ್ದಾರೆ. ಮಗಳು ಕಣ್ಣೀರಿಟ್ಟರು, ಇಂಥ ದರಿದ್ರನ ಮನೆಯಲ್ಲಿ ಇಟ್ಟುಕೊಳ್ಳುವ ಬದಲು ಮದುವೆ ಮಾಡಿ ಕಳುಹಿಸುವುದೇ ಉತ್ತಮ ಎಂದಿದ್ದಾನೆ.

Zee kannada serial shravani subramanya Written Update on April 19th episode

ಹೆಂಡತಿ ವಿಚಾರಕ್ಕೆ ಗದರಿದ ವೀರೇಂದ್ರ

ವೀರೇಂದ್ರನಿಗೆ ಹೆಂಡತಿ ಕಂಡರೆ ಆಗುವುದೇ ಇಲ್ಲ. ಹೆಂಡತಿಯ ವಿಚಾರ ಬಂದರೂ ಸಹಿಸುವುದಿಲ್ಲ. ಮಗಳನ್ನು ಮಾತ್ರ ಕರೆದುಕೊಂಡು ಬಂದಿರುವ ವೀರೇಂದ್ರ ಅವಳ ಮೇಲೂ ಪ್ರೀತಿ ತೋರುತ್ತಿಲ್ಲ. ಈಗ ಮದುವೆ ಮಾಡಬೇಕು ಎಂದುಕೊಂಡಿದ್ದ. ಆದರೆ ಗಂಡಿನ ಮನೆಯವರು ಹೆಂಡತಿ ವಿಚಾರ ಕೇಳಿದ್ದೇ ತಡ ಕೋಪಗೊಂಡ ವೀರೇಂದ್ರ ಅವರ ಸಂಬಂಧವನ್ನೇ ಕಿತ್ತೆಸೆದಿದ್ದಾನೆ.

ಸುಬ್ಬು ಮುಂದೆ ಬಯಲಾಯ್ತು ಗುಟ್ಟು

ಆಕ್ಚುಲಿ ವೀರೇಂದ್ರ ಮನೆಗೆ ಬಂದು ಶ್ರಾವಣಿಯನ್ನು ನೋಡಿಕೊಂಡು ಹೋದವರು ನಿಜವಾದವರೇ ಅಲ್ಲ. ಆ ಸಂಬಂಧ ವಿಜಯಾಂಬಿಕೆಯೇ ಹುಟ್ಟು ಹಾಕಿರುವುದು.‌ಅವರಿಗೆ ಹಣ ಕೊಟ್ಟು, ಮಗನಿಗೆ ಒಳ್ಳೆ ಸಂಬಂಧವನ್ನು ಹುಡುಕಿ ಕೊಡುತ್ತೇವೆ ಎಂದು ಹೇಳಿದ್ದಾಳೆ. ಮಗನ ಮುಂದೆ ಸತ್ಯ ಹೇಳಿದ್ದಾಳೆ. ವೀರೇಂದ್ರನೇ ನಿನಗೆ ಶ್ರಾವಣಿ ಕೊಡುತ್ತೇನೆ ಎಂದು ಬರಬೇಕು ಆ ರೀತಿ ಮಾಡುತ್ತೇನೆ ಎಂದಿದ್ದಾಳೆ. ಇದಕ್ಕೆ ಮದನ್ ಅಮ್ಮನನ್ನು ಹೊಗಳಿ, ಖುಷಿ ಪಟ್ಟಿದ್ದಾನೆ. ಈ ಗುಟ್ಟು ಸುಬ್ಬು ಕಿವಿಗೆ ಬಿದ್ದಿದೆ.

Zee kannada serial shravani subramanya Written Update on April 19th episode

ಸುಬ್ಬು ಬಳಿ ದುಃಖ ತೋಡಿಕೊಂಡ ಶ್ರಾವಣಿ

ಆ ಕಡೆ ಮದುವೆ ಮಾಡಿಬಿಡುತ್ತಾರೆ ಎಂಬ ನೋವಿಗೆ ಶ್ರಾವಣಿ ರೂಮಿನ ಡೋರ್ ಹಾಕಿಕೊಂಡು ಸುಮ್ಮನೆ ಮಲಗಿ ಬಿಟ್ಟಿದ್ದಾಳೆ. ಇದು ದೊಡ್ಡಮ್ಮನಿಂದ ಸುಬ್ಬು ಕಿವಿಗೆ ಬಿದ್ದಿದೆ. ಸಮಾಧಾನ ಮಾಡಲು ಹೋಗಿದ್ದಾನೆ. ಸುಬ್ಬು ಜೊತೆಗೆ ಎಲ್ಲವನ್ನು ಹಂಚಿಕೊಳ್ಳುವ ಶ್ರಾವಣಿಗೆ ಸ್ವಲ್ಪ ಸಲಿಗೆ ಜಾಸ್ತಿಯೇ. ಹೀಗಾಗಿ ನೋವನ್ನು ತಡೆಯಲಾಗದೆ ತಬ್ಬಿಕೊಂಡು, ಅಪ್ಪನ ನಂಬಿಕೆ ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ. ನಾನು ಸೋತೋದೆ ಅಲ್ವಾ ಸುಬ್ಬು ಎಂದಿದ್ದಾಳೆ. ಸುಬ್ಬುಗೆ ಏನು ಮಾಡಬೇಕೆಂಬುದು ತಿಳಿಯದೆ ಕಂಗಲಾಗಿ ನಿಂತಿದ್ದಾನೆ.‌

ಶ್ರಾವಣಿಯಿಂದ ಪೆಟ್ಟು ತಿಂದ ಸುಬ್ಬು

ಇದನ್ನು ಗಮನಿಸಿದ ವಿಜಯಾಂಬಿಕೆ, ಸುಬ್ಬುಗೆ ಕಪಾಳಕ್ಕೆ ಹೊಡೆದಿದ್ದಾಳೆ. ಮದನ್‌ಗೆ ಮೊದಲೇ ಕೋಪವಿದ್ದ ಕಾರಣಕ್ಕೆ ಇನ್ನು ಹಿಗ್ಗಾಮುಗ್ಗಾ ಚಚ್ಚಿದ್ದಾನೆ. ಅವಳ ಲೆವೆಲ್ ಏನು, ನೀನು ಇರುವ ಸ್ಥಾನ ಯಾವುದು ಎಂದು ಸಿಕ್ಕ ಸಿಕ್ಕ ಕಡೆ ಒದ್ದಿದ್ದಾನೆ. ಸುಬ್ಬುಗೆ ರಕ್ತ ಬರುವ ತನಕ ಹೊಡೆದಿದ್ದಾನೆ. ಶ್ರಾವಣಿ ಬಿಡಿಸಲು ಪ್ರಯತ್ನ ಪಟ್ಟರು ನಿಲ್ಲಿಸಿಲ್ಲ. ಕಡೆಗೆ ಶ್ರಾವಣಿಯ ದೊಡ್ಡಮ್ಮ ಅದಕ್ಕೆ ಅಡ್ಡ ಬಂದಿದ್ದಾಳೆ.

ಶ್ರಾವಣಿ ಆಸ್ತಿ ಮೇಲೆ ವಿಜಯಾಂಬಿಕೆ ಕಣ್ಣು

ಇಡೀ ಆಸ್ತಿ ಶ್ರಾವಣಿಯ ಹೆಸರಲ್ಲಿ ಇರುವುದು ವಿಜಯಾಂಬಿಕೆಗೆ ಗೊತ್ತಾಗಿದೆ. ಅವಳನ್ನ ಪ್ರೀತಿ ಮಾಡುತ್ತಿಲ್ಲ, ನಾಟಕವನ್ನು ಆಡುತ್ತಿಲ್ಲ. ಆದರೆ ಅವಳನ್ನು ತನ್ನ ಮಗ ಮದನ್‌ಗೆ ಮದುವೆ ಮಾಡಿಕೊಂಡರೆ ಎಲ್ಲಾ ಆಸ್ತಿ ನಮಗೆ ಸಿಗುತ್ತದೆ ಎಂಬ ದುರಾಸೆ. ಅದಕ್ಕೆ ಸಂಬಂಧಗಳನ್ನು ಅವಳೇ ದುಡ್ಡು ಕೊಟ್ಟು ಕರೆಸುತ್ತಿದ್ದಾಳೆ. ಈ ಕುತಂತ್ರ ತಿಳಿದ ಸುಬ್ಬು ಯಾರ ಬಳಿಯೂ ಹೇಳುವಂತೆಯೂ ಇಲ್ಲ.

More from Filmibeat

English summary
Shravani subramanya kannada serial today episode. Here is the details about Subbu slapped the forehead with vijayambike;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X