Shravani subramanya: ಸುಬ್ಬು ಪ್ರಾಣ ಉಳಿಸಿದ ಶ್ರಾವಣಿ: ಸೌಧಾಮಿನಿಯಿಂದ ಅಪ್ಪ-ಮಗಳ ಬದುಕಿಗೊಂದು ಟ್ವಿಸ್ಟ್..!

By ಎಸ್ ಸುಮಂತ್

ಶ್ರಾವಣಿ- ಸುಬ್ರಮಣ್ಯ ಕಥೆ ದಿನೇ ದಿನೇ ಇಂಟ್ರೆಸ್ಟಿಂಗ್ ಆಗಿದೆ. ತಾಯಿಯನ್ನೇ ಕಾಣದ ಶ್ರಾವಣಿಗೆ ತಂದೆ ಪ್ರೀತಿಯನ್ನಾದರೂ ಪಡೆಯುವ ಹಂಬಲ. ಅದಕ್ಕಾಗಿಯೇ ಸಾಕಷ್ಟು ಪ್ರಯತ್ನ ಪಡುತ್ತಾ ಇರುತ್ತಾಳೆ. ಆದರೆ ತಂದೆಯಿಂದ ಅವಳಿಗೆ ಆಗುವುದು ಮಾತ್ರ ಬರೀ ನೋವು. ಅದರಲ್ಲೂ ಅತ್ತೆ ವಿಜಯಾಂಬಿಕೆಯಿಂದಾನೇ ಶ್ರಾವಣಿಯ ಜೀವನ ಸಂಕಷ್ಟಕ್ಕೆ ಸಿಲುಕುತ್ತಾ ಇರುತ್ತದೆ.

ವೀರೇಂದ್ರನಿಗೆ ಹೆಂಡತಿಯನ್ನು ಕಂಡರೆ ಆಗದಂತೆ ಮಾಡಿದ್ದಾಳೆ ವಿಜಯಾಂಬಿಕೆ. ಹೀಗಾಗಿಯೇ ಮನೆಯಲ್ಲಿ ಒಂದೇ ಒಂದು ಫೋಟೋ ಕೂಡ ಇಲ್ಲ. ಅದಿರಲಿ ಶ್ರಾವಣಿ ಅಮ್ಮನ ಹೆಸರೇನು ಎಂಬುದು ಕೂಡ ಇಲ್ಲಿಯವರೆಗೂ ತಿಳಿದಿರಲಿಲ್ಲ. ಮನೆಯಲ್ಲೂ ಕೂಡ ಯಾರೂ ಆ ವಿಚಾರವನ್ನು ಮಾತನಾಡುವಂತೆಯೂ ಇರಲಿಲ್ಲ. ಹೀಗಾಗಿ ಶ್ರಾವಣಿಗೆ ಅಮ್ಮನ ಬಗ್ಗೆ ತಿಳಿದುಕೊಳ್ಳಬೇಕೆಂದರು ಎಲ್ಲಾ ದಾರಿಗಳು ಮುಚ್ಚಿ ಹೋಗಿದ್ದವು. ಇದೀಗ ಪೂಜೆಗೆ ಬಂದ ಸೌಧಾಮಿನಿಯಿಂದ ವಿಚಾರಗಳು ಬಯಲಾಗುವ ಸಾಧ್ಯತೆ ಇದೆ.

Zee kannada serial shravani subramanya Written Update on April 24th episode

ಅಮ್ಮನ ಬಗ್ಗೆ ತಿಳಿಯುವ ಕಾತುರ ಶ್ರಾವಣಿಗೆ

ಬಲು ಅಪರೂಪಕ್ಕೆ ಸೌಧಾಮಿನಿ, ವೀರೇಂದ್ರನ ಮನೆಗೆ ಬಂದಿದ್ದಾಳೆ. ಸೌಧಾಮಿನಿ ಹಾಗೂ ನಂದಿನಿ ಬೆಸ್ಟ್ ಫ್ರೆಂಡ್ಸ್. ಎಲ್ಲಾ ವಿಚಾರವೂ ಸೌಧಾಮಿನಿಗೆ ಗೊತ್ತಿದೆ. ಹೀಗಾಗಿಯೇ ವಿಜಯಾಂಬಿಕೆ ಫುಲ್ ಟೆನ್ಶನ್ ನಲ್ಲಿದ್ದಾಳೆ. ಪೂಜೆಯ ಮುನ್ನವೇ ಸೌಧಾಮಿನಿ, ವಿಜಯಾಂಬಿಕೆಗೆ ಮತ್ತಷ್ಟು ಟೆನ್ಶನ್ ಕೊಟ್ಟಿದ್ದಾಳೆ. ನಂದಿನಿಯ ಹೆಸರೇಳಿದ್ದಾಳೆ. ನಂದಿನಿ ನನ್ನ ಅಮ್ಮನ ಹೆಸರೆಂದು ತಿಳಿದ ಶ್ರಾವಣಿ ಫುಲ್ ಖುಷಿಯಾಗಿದ್ದಾಳೆ. ಸೌಧಾಮಿನಿಯಿಂದಾನೇ ವಿಜಯಾಂಬಿಕೆಯ ಮೋಸ ಬಯಲಾಗುವ ಸಾಧ್ಯತೆ ಇದೆ.

ಮದನ್‌ಗೆ ಸುಬ್ಬು ಟಾರ್ಗೆಟ್

ಇತ್ತ ತಾಯಿಯ ಹೆಸರು ಗೊತ್ತಾದ ಖುಷಿಯಲ್ಲಿದ್ದ ಶ್ರಾವಣಿಗೆ ಆಘಾತಕಾರಿ ಘಟನೆ ಕಣ್ಣಿಗೆ ಬಿದ್ದಿದೆ. ಸುಬ್ಬುಗೆ ಅಪಘಾತವಾಗಿದೆ. ಶ್ರಾವಣಿಯನ್ನು ಪಡೆಯುವ ಸಲುವಾಗಿ ಮದನ್, ಸುಬ್ಬುನಾ ಟಾರ್ಗೆಟ್ ಮಾಡಿದ್ದಾನೆ. ಶ್ರೀವಲ್ಲಿ ಗಾಡಿಯಲ್ಲಿ ಬರ್ತಾ ತರಕಾರಿಯನ್ನೆಲ್ಲಾ ಚೆಲ್ಲಿಕೊಂಡಿದ್ದಳು. ಅವಳಿಗೆ ಸಹಾಯ ಮಾಡಲು ಸುಬ್ಬು, ರಸ್ತೆಯಲ್ಲಿ ಬಿದ್ದ ತರಕಾರಿಯನ್ನು ಹಾಯುತ್ತಿದ್ದ. ಇದೇ ಸರಿಯಾದ ಸಮಯ ಎಂದು ತಿಳಿದ ಮದನ್ ಲಾರಿ ಹತ್ತಿಸಲು ಹೇಳಿದ್ದಾನೆ.

Zee kannada serial shravani subramanya Written Update on April 24th episode

ಶ್ರಾವಣಿಯಿಂದ ಉಳಿಯಿತು ಸುಬ್ಬು ಜೀವ

ಸುಬ್ಬುಗೆ ಜೋರು ಅಪಘಾತವಾಗಿದ್ದು, ತಲೆಯಲ್ಲಿ ಜೋರು ರಕ್ತ ಬಂದಿದೆ. ಆಗ ಶ್ರಾವಣಿ ಕೂಡ ಅಲ್ಲಿಯೇ ಇದ್ದಳು. ತಕ್ಷಣ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಸೇರಿಸಿದ್ದಾಳೆ. ಆದರೆ ಅಪಘಾತ ತೀವ್ರತರವಾಗಿದ್ದ ಕಾರಣ, ರಕ್ತ ಜಾಸ್ತಿ ಹೋಗಿತ್ತು. ಸುಬ್ಬು ಉಳಿಸಲು ಶ್ರಾವಣಿಯೇ ರಕ್ತ ನೀಡಿದ್ದಾಳೆ. ಇದರಿಂದ ಅಪಾಯದ ಅಂಚಿನಲ್ಲಿದ್ದ ಸುಬ್ಬು ಬದುಕುಳಿದಿದ್ದಾನೆ.

ಶ್ರಾವಣಿಯನ್ನು ಮಾತನಾಡಿಸುತ್ತಾನಾ ವೀರೇಂದ್ರ?

ವೀರೇಂದ್ರನಿಗೆ ಸುಬ್ಬು ಎಂದರೆ ಪಂಚಪ್ರಾಣ. ಮಗನಿದ್ದಂತೆ. ಪೂಜೆ ಮಾಡುವಾಗಲೇ ವಿಚಾರ ಕಿವಿಗೆ ಬಿದ್ದಿದೆ. ತಕ್ಷಣ ಅಲ್ಲಿಂದ ಆಸ್ಪತ್ರೆಗೆ ಓಡಿ ಹೋಗಿದ್ದಾನೆ. ಅಷ್ಟರಲ್ಲಿ ಶ್ರಾವಣಿ ರಕ್ತ ಕೊಟ್ಟು ಸುಬ್ಬು ಪ್ರಾಣ ಕಾಪಾಡಿದ್ದಳು. ವೈದ್ಯರು ಕೂಡ ವೀರೇಂದ್ರ ಅವರ ಬಳಿ ಆ ಹುಡುಗಿ ಸಮಯಕ್ಕೆ ಸರಿಯಾಗಿ ಬಂದಿದ್ದಕ್ಕೆ, ರಕ್ತ ಕೊಟ್ಟಿದ್ದಕ್ಕೆ ಪ್ರಾಣ ಉಳಿಯಿತು ಎಂದಿದ್ದಾರೆ. ಆಗ ವಿರೇಂದ್ರ, ಸುಬ್ಬು ಮನೆಯವರಿಗೆ, ಯಾರು ಆ ಹುಡುಗಿ. ನಾನು ಥ್ಯಾಂಕ್ಸ್ ಹೇಳಬೇಕು ಎಂದಿದ್ದಾನೆ. ಆಗ ಮನೆಯವರೆಲ್ಲ ಖುಷಿಯಿಂದಾನೆ ಮಗನ ಪ್ರಾಣ ಉಳಿಸಿದ್ದು ಬೇರೆ ಯಾರೂ ಅಲ್ಲ ನಿಮ್ಮ ಮಗಳು ಶ್ರಾವಣಿ ಅಮ್ಮನವ್ರು ಎಂದಿದ್ದಾರೆ.ಒಂದು ಕ್ಷಣ ವೀರೇಂದ್ರನ ಮನಸ್ಸು ಕದಲಿದೆ. ಶ್ರಾವಣಿಯನ್ನು ನೋಡಿದಾಗ ಮೊದಲಿನ ಕೋಪ ಕಾಣಲಿಲ್ಲ. ಶ್ರಾವಣಿಯ ಒಳ್ಳೆ ಗುಣಗಳೇ ವೀರೇಂದ್ರನನ್ನು ಬದಲಾಯಿಸಬಹುದು.

More from Filmibeat

English summary
Shravani subramanya kannada serial today. Here is the details about Virendra understand his daughter?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X