Shravani subramanya: ತಂದೆ ಮಾತಿಗೆ ಕಾಯುತ್ತಿದ್ದ ಶ್ರಾವಣಿಗೆ, ಸುಬ್ಬು ಆಕ್ಸಿಡೆಂಟ್ ವರದಾನವಾಗಿದೆ!

By ಎಸ್ ಸುಮಂತ್

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಎರಡು ರೀತಿಯ ಕಥೆ ನಡೆಯುತ್ತಿದೆ. ಶ್ರಾವಣಿಗೆ ಎಲ್ಲಾ ಸೌಕರ್ಯವಿದೆ. ಶ್ರೀಮಂತಿಕೆ ತುಂಬಿ ತುಳುಕುತ್ತಿದೆ. ಆದರೆ ಪ್ರೀತಿಗೆ ಬಡತನ ತಾಂಡವವಾಡುತ್ತಿದೆ. ಸುಬ್ಬು ಮನೆಯಲ್ಲಿ ಸೌಕರ್ಯಕ್ಕೆ ಬಡತನವಿದ್ದರು, ಪ್ರೀತಿಗೆ ಅಪಾರವಾದ ಜಾಗವಿದೆ.

ಇತ್ತೀಚೆಗೆ ಆ ಪ್ರೀತಿ ತುಂಬಿದ ಸಮುದ್ರಕ್ಕೆ ಶ್ರಾವಣಿ ಕೂಡ ಹೋಗಿ ಬಂದಿದ್ದಾಳೆ. ಆದರೆ ಏನೇ ಹೊರಗಿನ ಪ್ರೀತಿ ಸಿಕ್ಕರು, ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ ನಮ್ಮ ಶ್ರಾವಣಿ.

Zee kannada serial shravani subramanya Written Update on April 25th episode

ತಂದೆ ಯಾಕೆ ಮುನಿಸು ತೋರುತ್ತಿದ್ದಾರೆ ಎಂಬುದು ಇಲ್ಲಿಯವರೆಗೂ ಶ್ರಾವಣಿಗೆ ಗೊತ್ತಿಲ್ಲ. ಆದರೆ ಕೆಂಡಕ್ಕೆ ತುಪ್ಪ ಹಾಕಿ ಹಾಕಿ ಬೆಂಕಿ ಉರಿಯುವಂತೆ ಮಾಡುತ್ತಿರುವುದು ಮಾತ್ರ ವಿಜಯಾಂಬಿಕೆ. ಆ ಬೆಂಕಿಯಲ್ಲಿಯೇ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾಳೆ.

ಶ್ರಾವಣಿ ಮೇಲೆ ವೀರೇಂದ್ರ ಕನಿಕರ

ಸುಬ್ಬು ಎಂದರೆ ಪಂಚ ಪ್ರಾಣ ವೀರೇಂದ್ರನಿಗೆ. ಬಹಳವಾಗಿ ಅವನ ಮೇಲೆ ನಂಬಿಕೆ ಇಟ್ಟಿದ್ದಾನೆ. ಅವನಿಗೆ ಸಣ್ಣ ಗಾಯವಾದರೂ ವೀರೇಂದ್ರ ಸಹಿಸುವುದಿಲ್ಲ. ಆದರೆ ಮದನ್ ಬಂದಾಗಿನಿಂದ ಸುಬ್ಬು ಪ್ರಾಣಕ್ಕೆ ಅಪಾಯ ಒದಗಿದೆ. ಸಾಕಷ್ಟು ಬಾರಿ ಮದನ್‌ಗೆ ಎಚ್ಚರಿಕೆ ಕೊಟ್ಟಿದ್ದಾನೆ ವೀರೇಂದ್ರ. ಆದರೂ ತಲೆ ಕೆಡಿಸಿಕೊಳ್ಳದೇ ಮತ್ತೆ ಅಪಘಾತ ಮಾಡಿಸಿದ್ದಾನೆ. ಸುಬ್ಬು ಪ್ರಾಣ ಉಳಿಯಲು ಮಗಳೇ ಕಾರಣವೆಂದು ತಿಳಿದು, ಕೋಪಿಸಿಕೊಳ್ಳದೆ, ಏನು ಹೇಳಬೇಕು ಎಂಬುದನ್ನು ತಿಳಿಯದೆ ವೀರೇಂದ್ರ ಹೊರಟೆ ಹೋಗಿದ್ದಾನೆ.

Zee kannada serial shravani subramanya Written Update on April 25th episode

ಕಾರು ಹತ್ತಿ ಹೊರಟೇ ಬಿಟ್ಟ ವೀರೇಂದ್ರ

ಶ್ರಾವಣಿ ರಕ್ತ ಕೊಡುವಾಗ ಕಣ್ಣು ಮುಚ್ಚಿ ಮಲಗಿದ್ದಳು. ಆದರೆ ಕೊಠಡಿ ಒಳಗೆ ಯಾರೋ ಬಂದ ಹಾಗೇ ಆಗಿದೆ. ರಜ್ತ ಕೊಟ್ಟು ಬಂದ ಮೇಲೆ ಅಲ್ಲಿಯೇ ಇದ್ದ ಸುಬ್ಬು ಅಪ್ಪ ಅಮ್ಮನನ್ನು ಕೇಳಿದ್ದಾಳೆ. ಆಗಲೇ ಯಾರೋ ಒಳಗೆ ಬಂದ ಹಾಗೇ ಆಯ್ತು ಯಾರದು ಅಂತ. ಅದಕ್ಕೆ ಸುಬ್ಬು ಅಪ್ಪ ಅಮ್ಮ ನಿಮ್ಮ ತಂದೆಯವರು ಎಂದು ಹೇಳಿದ್ದಾರೆ. ಅಪ್ಪನನ್ನು ಮಾತನಾಡಿಸಲು ಓಡೋಡಿ ಬಂದಿದ್ದಾಳೆ. ಆದರೆ ಅದು ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಕಾರು ಹತ್ತಿ ವೀರೇಂದ್ರ ಹೊರಟೆ ಹೋಗಿದ್ದಾರೆ.

ಶ್ರಾವಣಿ ಕಿವಿಗೆ ಬಿತ್ತು ಖುಷಿಯ ಸುದ್ದಿ‌

ಮನೆಯಲ್ಲಿ ಶ್ರಾವಣಿಯನ್ನು ಒಮ್ಮೆಯೂ ಕಣ್ಣೆತ್ತಿ ನೋಡಿಲ್ಲ ವೀರೇಂದ್ರ. ಶ್ರಾವಣಿ ಎದುರು ಬಂದರೆ ದೂರ ಹೋಗಿ, ಮರೆಯಲ್ಲಿರು ಎಂಬಂತೆಯೇ ನಿಂದಿಸುತ್ತಿದ್ದ. ಅವಳು ಅನಿಷ್ಠ ಎಂಬಂತೆ ವೀರೇಂದ್ರನ ಅಕ್ಕ ವಿಜಯಾಂಬಿಕೆ ಬಿಂಬಿಸಿರುವ ಪರಿಣಾಮ, ವೀರೇಂದ್ರನೂ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತಾನೆ. ಆದರೆ ಈ ಸಲ ಅದೆಲ್ಲವೂ ಉಲ್ಟಾ ಆಗಿತ್ತು. ಶ್ರಾವಣಿ ಮನೆಯ ಒಳಗೆ ಎಂಟ್ರಿಯಾಗುತ್ತಿದ್ದಂತೆ ಕೆಲಸದವರು ಗುಡ್ ನ್ಯೂಸ್ ಹೇಳಿದ್ದಾರೆ. ಸರ್ ನಿಮ್ಮನ್ನ ಕರೆಯುತ್ತಿದ್ದಾರೆ. ಮೇಲೆ ರೂಮಿಗೆ ಹೋಗಬೇಕಂತೆ ಎಂದಿದ್ದಾರೆ.

ತಂದೆಯೇ ಮಗಳನ್ನು ಕಾಪಾಡುತ್ತಾನಾ?

ಶ್ರಾವಣಿಗೆ ತಂದೆ ಕರೆಯುತ್ತಿದ್ದಾರೆ ಎಂಬುದನ್ನು ಕೇಳಿಯೇ ಸಂತಸ ತಡೆದುಕೊಳ್ಳುವುದಕ್ಕೆ ಆಗಿಲ್ಲ. ರಕ್ತ ಕೊಟ್ಟು ಅದಾಗಲೇ ಸುಸ್ತಾಗಿ ಹೋಗಿದ್ದಳು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ತಂದೆಯ ರೂಮಿಗೆ ಓಡಿದ್ದಾಳೆ. ಅಪ್ಪ ಎಂದು ಕರೆದೊಡನೆ, ವೀರೇಂದ್ರ, ಸುಬ್ಬುನನ್ನು ಕಾಪಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾನೆ. ಇದನ್ನು ಕೇಳಿದ ಶ್ರಾವಣಿಗೆ ಬಹಳ ಸಂತಸವಾಗಿದೆ. ಮೊದಲೇ ಕೊಂಚ ತಲೆ ತಿರುಗುತ್ತಿದ್ದ ಶ್ರಾವಣಿ, ಬಿದ್ದರೂ ಬೀಳಬಹದು. ತಂದೆಯಿಂದಾನೇ ಅವಳ ಆರೋಗ್ಯದ ಕಾಳಜಿಯೂ ಶುರುವಾಗಬಹುದು. ಇಂಥ ದಿನಕ್ಕಾಗಿಯೇ ಶ್ರಾವಣಿ‌ಕಾಯುತ್ತಿದ್ದಳು. ಅದು ಸುಬ್ಬು ಆಕ್ಸಿಡೆಂಟ್‌ನಿಂದ ಸಾಧ್ಯವಾಗುತ್ತಿದೆ.

More from Filmibeat

English summary
Shravani subramanya kannada serial today episode. Here is the details about Virendra thanked his daughter;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X