Shravani subramanya: ಅಕ್ಕನ ಪ್ರಾಣ ಉಳಿಸಿದ ಶ್ರಾವಣಿ: ಮುಂದೆ ಸರಿಯಾಗುತ್ತಾ ಮನಸ್ಸುಗಳು?

By ಎಸ್ ಸುಮಂತ್

'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ಯಡವಟ್ಟು ರಾಣಿಯಾಗಿದ್ದಾಳೆ ಶ್ರಾವಣಿ. ಅಪ್ಪನ ಪ್ರೀತಿಯನ್ನು ಪಡೆಯಬೇಕೆಂದು ಹಾತೊರೆಯುತ್ತಿರುವ ಶ್ರಾವಣಿಗೆ ಅಪ್ಪ ಎದುರು ಬಂದಾಗಲೇ ಏನಾದರೊಂದು ಯಡವಟ್ಟಾಗುತ್ತದೆ. ಅದರಲ್ಲೂ ಎಲ್ಲಾ ಆಸ್ತಿ ತನಗೆ ಬರಬೇಕು ಎಂದು ಒಳಗೊಳಗೆ ಪ್ಲ್ಯಾನ್ ಮಾಡುತ್ತಿರುವ ವಿರೇಂದ್ರನ ತಂಗಿಯಿಂದಾನೇ ಶ್ರಾವಣಿಗೆ ನೂರೆಂಟು ಸಮಸ್ಯೆಯಾಗುತ್ತಿದೆ.

ವೀರೇಂದ್ರನಿಗೆ ಮೊದಲೇ ಶ್ರಾವಣಿಯನ್ನು ಕಂಡರೆ ಆಗುತ್ತಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ಅತ್ತೆ, ಸಣ್ಣ ಸಣ್ಣ ವಿಚಾರದಲ್ಲೂ ಶ್ರಾವಣಿಯನ್ನು ಟಾರ್ಗೆಟ್ ಮಾಡುತ್ತಾಳೆ, ವೀರೇಂದ್ರನಿಗೆ ಕೋಪ ಬರುವಂತೆ ಮಾಡುತ್ತಿದ್ದಾಳೆ. ಮನೆಯಿಂದ ಹೊರಗೆ ಹಾಕಿಸುವ ಪ್ರಯತ್ನವನ್ನು ಮಾಡಿದ್ದಳು. ಆದರೆ ಈಗ ಅದೇ ಶ್ರಾವಣಿಯಿಂದ ಮಗಳು ಮೋಕ್ಷಾಳ ಪ್ರಾಣ ಉಳಿದಿದೆ.

Zee kannada serial Shravani subramanya Written Update on April 5th episode

ಶ್ರಾವಣಿ ಸುಬ್ರಮಣ್ಯ ಜೋರು ಓಡಾಟ

ವೀರೇಂದ್ರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ವೀರೇಂದ್ರ ತಂಗಿ ವಿಜಯಾಂಬಿಕೆ ಮಗಳು ಮೋಕ್ಷಾಳ ಮದುವೆಯಲ್ಲಿ ಶ್ರಾವಣಿ ಸುಬ್ರಮಣ್ಯರದ್ದೇ ಓಡಾಟ. ಎಲ್ಲಾ ಕೆಲಸಗಳನ್ನು ಇಬ್ಬರು ಸೇರಿ ಮಾಡುತ್ತಿದ್ದಾರೆ. ತೊಇರಣ ಕಟ್ಟುವುದರಿಂದ ಹಿಡಿದು, ಹೂಗಳ ಅಲಂಕಾರದವರೆಗೂ ಇಬ್ಬರೇ ಓಡಾಡುತ್ತಿದ್ದಾರೆ. ಶ್ರಾವಣಿ ತನ್ನುಡುಗಿ ಎಂದು ಎಲ್ಲರ ಬಳಿ ಹೇಳುವ ಮದನ್, ಈ ದೃಶ್ಯ ಕಂಡು ಕಣ್ಣು ಕೆಂಪಗಾಗಿಸಿಕೊಂಡಿದ್ದಾನೆ. ಶ್ರಾವಣಿ-ಸುಬ್ರಮಣ್ಯನ ಸಂಬಂಧ ಎಂಥದ್ದು ಎಂಬುದು ವೀರೇಂದ್ರನಿಗೆ ಗೊತ್ತಿರುವ ಕಾರಣ ಯಾರೂ ಏನೇ ಕುತಂತ್ರ ಮಾಡಿದರು ಫಲಿಸುತ್ತಿಲ್ಲ.

ವಿಜಯಾಂಬಿಕೆ ತಮ್ಮನಿಂದ ಸಂಕಷ್ಟ

ವೀರೇಂದ್ರನಿಗೆ ಆಕ್ಸಿಡೆಂಟ್ ಆಗಿ ವಿಶ್ರಾಂತಿ ಪಡೆಯುವಂತೆ ಆಗಿದೆ. ಅವನ ಎಲ್ಲಾ ಕೆಲಸಗಳನ್ನು ಸುಬ್ಬುಗೆ ವಹಿಸಿದ್ದಾನೆ. ಇದನ್ನು ವಿಜಯಾಂಬಿಕೆ ಕೈಯಿಂದ ಸಹಿಸುವುದಕ್ಕೆ ಆಗುತ್ತಿಲ್ಲ. ಜೊತೆಗೆ ಇಡೀ ಆಸ್ತಿಯನ್ನು ಶ್ರಾವಣಿಯ ಹೆಸರಿಗೆ ಬರೆಯಲಾಗಿದೆ. ಹೀಗಾಗಿ ಏನನ್ನೂ ಮಾಡುವುದಕ್ಕೂ ಆಗುತ್ತಿಲ್ಲ. ಇದರಿಂದಾನೇ ವಿಜಯಾಂಬಿಕೆ ತನ್ನ ತಮ್ಮ ಮದನ್ ನನ್ನು ಕರೆಸಿ, ಸುಬ್ಬು ಹಾಗೂ ವೀರೇಂದ್ರ ನಡುವಿನ ಸಂಬಂಧ ಹಾಳು ಮಾಡಲು ಯತ್ನಿಸುತ್ತಿದ್ದಾಳೆ. ಅದರ ಜೊತೆಗೆ ಮದನ್, ಶ್ರಾವಣಿಯ ಹಿಂದೆ ಬಿದ್ದು ಇನ್ನಷ್ಟು ಅವಾಂತರ ಸೃಷ್ಟಿಸುತ್ತಿದ್ದಾನೆ.

Zee kannada serial Shravani subramanya Written Update on April 5th episode

ಮೋಕ್ಷಾ ಸತ್ಯ ಶ್ರಾವಣಿ ಮುಂದೆ ಬಯಲು

ಮೊದಲೇ ಯಡವಟ್ಟು ರಾಣಿ ಶ್ರಾವಣಿ. ಮದನ್ ಮಾಡಿದ ಕಿತಾಪತಿಯಿಂದ ತಂದೆಯ ಕೋಪಕ್ಕೆ ಮತ್ತೆ ಗುರಿಯಾಗಿದ್ದಾಳೆ. ಇದರಿಂದ ಒಂದು ಕಡೆ ಕುಳಿತು ನನ್ನದೇ ತಪ್ಪು ಎಂದು ಪಶ್ವಾತ್ತಾಪ ಪಡುವಾಗಲೇ ಶ್ರಾವಣಿಯ ಮಡಿಲಿಗೆ ಒಂದು ಫೋಟೋ ಬಂದು ಬಿದ್ದಿದೆ. ಅದು ಮೋಕ್ಷಾಳ ಹಳೆಯ ಪ್ರೀತಿ. ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು, ಫೋಟೋ ಮತ್ತು ಲೆಟರ್ ಕೊಟ್ಟು ಹೋಗಿದ್ದಾನೆ. ಅದರಲ್ಲಿ ಹಳೆಯ ಪ್ರೇಮದ ಮಾಹಿತಿ ಜೊತೆಗೆ ಮದುವೆ ದಿನ ಬಂದು ಎಲ್ಲಾ ಸತ್ಯವನ್ನು ಹೇಳುವುದಾಗಿ ಹೇಳಿದ್ದಾನೆ. ಇದನ್ನು ನೋಡಿ ಮೋಕ್ಷಾ ನೇಣು ಹಾಕಿಕೊಳ್ಳಲು ಹೋಗಿದ್ದಾಳೆ.

ಮೋಕ್ಷಾಳನ್ನು ಉಳಿಸಲು ಹೋದ ಶ್ರಾವಣಿ

ಫೋಟೋ ಸಿಕ್ಕ ಕೂಡಲೇ ಶ್ರಾವಣಿ, ಮೋಕ್ಷಾಳ ಕೋಣೆಗೆ ಓಡಿದ್ದಾಳೆ. ಅಷ್ಟರಲ್ಲಿ ನೇಣು ಹಾಕಿಕೊಳ್ಳಲು ಯತ್ನಿಸುತ್ತಿದ್ದಳು. ಅದನ್ನು ತಪ್ಪಿಸಿ, ನಾನು ಸರಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾಳೆ. ಹೊರಗಡೆ ಬಂದು ಸುಬ್ಬುನನ್ನು ಕರೆದುಕೊಂಡು ಹೊರಟಿದ್ದಾಳೆ. ಆತನನ್ನು ಹುಡುಕಿ, ಸರಿ ಮಾಡಲು ಹೋಗಿದ್ದಾಳೆ. ಸುಬ್ಬು ಕಾರಿನಲ್ಲಿಯೇ ಗಂಡಿಗೆ ಕೊಡಬೇಕಾದ ಆಸ್ತಿಯ ಪತ್ರ ಇತ್ತು. ಮದುವೆಗೂ ಮುನ್ನ ಅದನ್ನು ಗಂಡಿನ ಕಡೆಯವರು ಕೇಳಿದ್ದಾರೆ. ಆದರೆ ಸುಬ್ಬು ಸರಿ ಇಲ್ಲ ಎಂದು ಮದನ್ ಬಿಂಬಿಸಲು ಹೋಗಿದ್ದಾನೆ. ಹೊಡೆದಾಡಿ, ರಕ್ತವೆಲ್ಲ ಬಂದಿರುವ ಹಾಗೆಯೇ ಸುಬ್ಬು ಮದುವೆ ಮನೆಗೆ ಎಂಟ್ರಿಕೊಟ್ಟಿದ್ದಾನೆ. ಕುತಂತ್ರಿಗಳ ನಡುವೆ ಮತ್ತೆ ಸುಬ್ಬು ನಂಬಿಕಸ್ಥ ಎಂಬುದನ್ನು ವಿರೇಂದ್ರನ ಮುಂದೆ ಸಾಬೀತು ಮಾಡಿಕೊಂಡಿದ್ದಾನೆ.

More from Filmibeat

English summary
Shravani subramanya kannada serial today episode. Here is the details about Shravani saved Moksha's life after trying to commit suicide;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X