Shravani Subramanya: ವಿಜಯಾಂಬಿಕೆ ಊಹಿಸದ ಘಟನೆ ನಡೆದೇಹೋಯ್ತು; ಶ್ರಾವಣಿಯನ್ನು ಆಹ್ವಾನಿಸಿದ ವೀರೇಂದ್ರ!
ಶ್ರಾವಣಿಯ ಬದುಕಲ್ಲಿ ಸಂತಸವೇ ಕಾಣಬಾರದೆಂದು ಶಪಥ ಮಾಡಿದ್ದಾಳೆ ವಿಜಯಾಂಬಿಕೆ. ವೀರೇಂದ್ರನ ಮನೆಯಲ್ಲಿ ತನ್ನದೇ ಅಧಿಕಾರ ನಡೆಯಬೇಕು, ವೀರೇಂದ್ರ ತನ್ನ ಕೈಗೊಂಬೆಯಾಗಿರಬೇಕು ಎಂಬ ಕಾರಣದಿಂದ ನಂದಿನಿಯನ್ನು ಹಿಂಸೆ ಕೊಟ್ಟು ಓಡಿಸಿದ್ದಾಳೆ. ವೀರೇಂದ್ರನಿಗೂ ಶ್ರಾವಣಿಗೂ ಸಂಬಂಧವೇ ಇಲ್ಲ ಎಂಬಂತೆ ಬಿಂಬಿಸಿದ್ದಾಳೆ. ವಿಜಯಾಂಬಿಕೆಯ ಮಾತೇ ವೇದ ವಾಕ್ಯ ಎಂಬಂತೆ ಕೇಳುತ್ತಾನೆ ವೀರೇಂದ್ರ. ಹೀಗಾಗಿಯೇ ಮಗಳಿಗೆ ಮಗಳ ಪ್ರೀತಿ ಕೊಡದೆ ದ್ವೇಷ ಮಾಡುತ್ತಿದ್ದಾನೆ.
ಇತ್ತಿಚಿನ ದಿನಗಳಲ್ಲಿ ಸುಬ್ಬು ಮಾತು ಕೇಳುತ್ತಿರುವ ಶ್ರಾವಣಿಗೆ ಎಲವೂ ಒಳೀತೆ ಆಗುತ್ತಿದೆ. ಅಪ್ಪನ ಪ್ರೀತಿಯೂ ಸಿಗುತ್ತಿದೆ. ಆಗಾಗ ಮನಸ್ಸಿಗೆ ಬೇಸರ ಆಗುವಂಥ ಘಟನೆಗಳು ನಡೆದರು ಕೂಡ ಕಡೆಯಲ್ಲಿ ಏನೋ ಮನಸ್ಸಿಗೆ ಸಮಾಧಾನವಾಗುವಂತ ಘಟನೆಗಳು ನಡೆಯುತ್ತಿವೆ. ಈಗ ತಂದೆಯಿಂದಾನೇ ಸಾಲಿಗ್ರಾಮಕ್ಕೆ ಆಹ್ವಾನ ಸಿಕ್ಕಿದೆ.

ಸಾಲಿಗ್ರಾಮಕ್ಕೆ ಬರಲ್ಲ ಎಂದ ಶ್ರಾವಣಿ
ಸಾಲಿಗ್ರಾಮಕ್ಕೆ ಹೋಗಬೇಕೆಂದು ಶ್ರಾವಣಿ ತುದಿಗಾಲಿನಲ್ಲಿ ನಿಂತಿದ್ದಳು. ಆದರೆ ತಂದೆಯೇ ಕರೆಯಬೇಕು ಎಂಬ ಆಸೆ ಬೇರೆ. ಅದು ಸುಮ್ಮನೆ ಇದ್ದರೆ ವರ್ಕ್ ಆಗಲ್ಲ. ಶ್ರಾವಣಿಯ ಯಾವ ಆಸೆಯೂ ಕಮರಿ ಹೋಗುವುದಕ್ಕೆ ಸುಬ್ಬು ಇಷ್ಟ ಪಡಲ್ಲ. ಅದಕ್ಕೆ ಶ್ರಾವಣಿಗೆ ಐಡಿಯಾ ಒಂದನ್ನು ನೀಡಿದ್ದಾನೆ. ಸಾಲಿಗ್ರಾಮಕ್ಕೆ ಬರಲ್ಲ ಅಂತ ಹೇಳಿ ಎಂದಿದ್ದಾನೆ. ಸುಬ್ಬು ಮಾತನ್ನು, ಪ್ಲ್ಯಾನ್ ಅನ್ನು ಶ್ರಾವಣಿ ತೆಗೆದು ಹಾಕಿದ ಮಾತೇ ಇಲ್ಲ. ಇಉಗ ಅದು ಕೂಡ ವರ್ಕೌಟ್ ಆಗಿದೆ.
ವಿಜಯಾಂಬಿಕೆ ಖುಷಿ ಮಾಯ
ಶ್ರಾವಣಿ ಸಾಲಿಗ್ರಾಮಕ್ಕೆ ಹೋಗುವುದು ವಿಜಯಾಂಬಿಕೆಗೆ ಸ್ವಲ್ಪವು ಇಷ್ಟವಿಲ್ಲ. ಅಲ್ಲಿಗೆ ಹೋದರೆ ಆಕೆಯ ತಾಯಿಯ ಬಗ್ಗೆ ಎಲ್ಲಾ ಸತ್ಯ ಗೊತ್ತಾಗಿ ಬಿಡುವ ಭಯ. ಈಗ ತಂದೆಯ ಮುಂದೆ ಶ್ರಾವಣಿಯೇ ತಾನೂ ಸಾಲಿಗ್ರಾಮಕ್ಕೆ ಬರಲ್ಲ ಎಂದಿದ್ದು ವಿಜಯಾಂಬಿಕೆಗೆ ಫುಲ್ ಖುಷಿಯಾಗಿದೆ. ಶ್ರಾವಣಿ ಸಾಲಿಗ್ರಾಮಕ್ಕೆ ಹೋಗದೆ ಇದ್ದರೆ ಸತ್ಯವೇ ಗೊತ್ತಾಗಲ್ಲ. ತನ್ನದೇ ಆಟ ನಡೆಯುತ್ತೆ ಎಂದುಕೊಂಡಿದ್ದಾಳೆ. ಆದರೆ ಆ ಖುಷಿ ಸ್ವಲ್ಪ ಸಮಯದಲ್ಲಿಯೇ ದುಃಖ ತರಿಸಿದೆ.

ವೀರೇಂದ್ರನ ಮಾತಿಗೆ ಕಾದಿದ್ದ ಶ್ರಾವಣಿ
ಶ್ರಾವಣಿ ಸಾಲಿಗ್ರಾಮಕ್ಕೆ ಬರಲ್ಲ ಎಂದಿದ್ದಕ್ಕೆ ಬೇರೆ ಕಾರಣವೇ ಇದೆ. ಅದಕ್ಕೆ ಸ್ವಲ್ಪ ನಾಟಕವನ್ನು ಆಡಿದ್ದಾಳೆ. ಯಾಕೆ ಬರಲ ಎಂದು ಕೇಳಿದಾಗ 'ಅಪ್ಪನಿಗೆ ಈ ಮುಖ ನೋಡುವುದಕ್ಕೆ ಇಷ್ಟವಿಲ್ಲ. ಇಷ್ಟವಿಲ್ಲದವರು ಅಲ್ಲಿಯ ತನಕ ಜೊತೆಗೆ ಹೇಗೆ ಬರುವುದು. ನಾನು ಸಾಲಿಗ್ರಾಮಕ್ಕೆ ಬರಲ್ಲ ಚಿಕ್ಕಪ್ಪ' ಎಂದು ಹೇಳಿ ಮುಂದೆ ಹೋಗುವಂತೆ ನಾಟಕವಾಡಿದ್ದಾಳೆ. ಆಗ ವೀರೇಂದ್ರ ನಿಲ್ಲು ಅಂತ ಹೇಳಿ, ನೀನು ಸಾಲಿಗ್ರಾಮಕ್ಕೆ ಬರಬೇಕು. ಬಂದರೆ ನನಗೂ ಖುಷಿಯಾಗುತ್ತೆ ಎಂದಿದ್ದಾನೆ. ಶ್ರಾವಣಿಗೆ ಇದೇ ಬೇಕಿದ್ದಿದ್ದು, ಸುಬ್ಬು ಹೇಳಿದಂತೆಯೇ ಎಲ್ಲಾ ನಡೆದಿದೆ.
ಅತ್ತೆಯ ಮಾತು ಮೀರದ ವೀರೇಂದ್ರ
ವೀರೇಂದ್ರ, ನಂದಿನಿ ಎಂಬ ಹೆಸರೆತ್ತಿದರೇನೆ ಕೋಪ ಮಾಡಿಕೊಳ್ಳುತ್ತಾನೆ. ಆದರೆ ಅತ್ತೆ ಹೆಸರೇಳಿದರೆ ಅಷ್ಟೇ ಗೌರವ ಕೊಡುತ್ತಾನೆ. ಅತ್ತೆ ಎಂದರೆ ಸಾಕು ಕೋಪವನ್ನೆಲ್ಲಾ ಮರೆತು ಹೋಗುತ್ತಾನೆ. ಈಗ ಅದೇ ಅತ್ತೆಯ ಒಂದು ಕರೆಗೆ ಹೂಗೊಟ್ಟು ಸಾಲಿಗ್ರಾಮಕ್ಕೆ ಹೊರಟಿದ್ದಾನೆ. ಮಗಳಿಂದಾನೇ ಪೂಜೆಯಾಗಬೇಕಾಗಿರುವ ಕಾರಣ ಶ್ರಾವಣಿಯನ್ನು ಕರೆದುಕೊಂಡು ಹೊರಟಿದ್ದಾನೆ. ಶ್ರಾವಣಿಗೆ ಅಮ್ಮನ ಬಗ್ಗೆ ತಿಳಿಯುವ ಆಸೆ. ಅದು ಅಜ್ಜಿಯಿಂದ ಈಡೇರಲು ಬಹುದು. ವೀರೇಂದ್ರನಿಗೂ ತನ್ನ ಮನಸ್ಸಲ್ಲಿರುವ ಅನುಮಾನಗಳು ಹೋಗಬಹುದು.


Click it and Unblock the Notifications











