Shravani subramanya: ಸಾಲಿಗ್ರಾಮಕ್ಕೆ ಶ್ರಾವಣಿ ಹೋದ್ರೆ ವಿಜಯಾಂಬಿಕೆ ಭವಿಷ್ಯ ಅಧೋಗತಿ!

By ಎಸ್ ಸುಮಂತ್

ಶ್ರಾವಣಿ ಬದುಕಲ್ಲಿ ಹಲವು ಟರ್ನಿಂಗ್ ಪಾಯಿಂಟ್ ಸಿಗುತ್ತಿವೆ. ಅಪ್ಪನ ಪ್ರೀತಿ ಕಾಣದೆ, ಅಮ್ಮನ ಮುಖವೇ ಗೊತ್ತಿಲ್ಲದೇ, ಏನಿದು ಜೀವನ ಎಂಬ ಗೊಂದಲದಲ್ಲಿದ್ದಳು. ಅಪ್ಪ ಯಾಕೆ ತನ್ನನ್ನು ದ್ವೇಷ ಮಾಡುವುದು ಎಂಬುದು ಈಗಲೂ ಶ್ರಾವಣಿಗೆ ಅರ್ಥವೇ ಆಗುತ್ತಿಲ್ಲ. ಅಪ್ಪನ ಪ್ರೀತಿಯನ್ನು ಪಡೆಯುವುದಕ್ಕಾಗಿ ಶ್ರಾವಣಿ ಸಾಕಷ್ಟು ಕಷ್ಟಪಟ್ಟಿದ್ದಾಳೆ.

ಸುಬ್ಬು ಸಹಾಯದಿಂದ ಶ್ರಾವಣಿ ಅಪ್ಪನಿಗೆ ತೀರಾ ಹತ್ತಿರವಾಗಿದ್ದಳು. ಅಪ್ಪನ ಜೊತೆಗೆ ಟ್ರಾವೆಲ್ ಮಾಡಿದಳು, ಅಪ್ಪನಿಗೆ ಊಟ ತಿನ್ನಿಸಿದಳು ಒಂದು ಹಂತಕ್ಕೆ ಎಲ್ಲಾ ಆಸೆಗಳು ಈಡೇರಿತ್ತು.

Zee kannada serial shravani subramanya Written Update on June 27th episode

ಬಹಳ ಬೇಗನೇ ಶ್ರಾವಣಿ ಬದುಕಲ್ಲಿ ಬಿರುಗಾಳಿಯೇ ಬೀಸಿತ್ತು. ತಂದೆ ಮತ್ತೆ ಬೇಸರದ ಮಾತುಗಳನ್ನು ಆಡಿದ್ದರು. ಶ್ರಾವಣಿಯ ಕೈತುತ್ತು ವಿಷಕ್ಕೆ ಸಮ ಅಂತ ಹೇಳಿಬಿಟ್ಟರು. ತಂದೆಯ ಮಾತು ಕೇಳಿ ಶ್ರಾವಣಿ ಮನೆ ಬಿಟ್ಟು ಹೋಗುವುದಕ್ಕೆ ಹೊರಟು ಬಿಟ್ಟಳು. ಆದರೆ ಸುಬ್ಬು ಎಲ್ಲವನ್ನು ಸರಿ ಮಾಡಿ, ಮನಸ್ಸನ್ನು ಸರಿ ಮಾಡಿಬಿಟ್ಟ.

ಅಜ್ಜಿಯ ಗೌರವ ತಿಳಿದು ಶಾಕ್

ಶ್ರಾವಣಿ ಬದುಕಲ್ಲಿ ತಾಯಿಯ ಬಗ್ಗೆ ಯಾವ ಸುಳಿವು ಸಿಗದಂತೆ ಮಾಡಿದ್ದಳು ವಿಜಯಾಂಬಿಕೆ. ನಂದಿನಿ ಸ್ನೇಹಿತೆಯಿಂದ ತಾಯಿಯ ಹೆಸರು ಗೊತ್ತಾಗಿತ್ತು. ಈಗ ನರಸಯ್ಯನಿಂದ ತಾಯಿಯ ತವರಿನ ವಿಚಾರವೂ ಗೊತ್ತಾಗಿದೆ. ಸಾಲಿಗ್ರಾಮ ಅಮ್ಮನ ಊರು ಎಂಬುದರ ಜೊತೆಗೆ ಬಹಳ ಗೌರವಯುತ ಮನೆತನ ಎಂಬುದು ಅರ್ಥವಾಗಿದೆ. ಅಜ್ಜಿಯ ಹೆಸರೇಳುವುದಕ್ಕೂ ಊರ ಜನ ಎದ್ದು ನಿಲ್ಲುತ್ತಾರೆ ಎಂಬುದು ತಿಳಿದು ಖುಷಿಯಾಗಿದ್ದಾಳೆ.

ಸುಬ್ಬು ತಂದೆಗೂ ಗೊತ್ತಾ ನಂದಿನಿ?

ನಂದಿನಿ ಬಗ್ಗೆ ಮಾಹಿತಿಗಾಗಿ ಶ್ರಾವಣಿ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ. ಆದರೆ ಶ್ರಾವಣಿ ತಾಯಿ ನಂದಿನಿ ಬಗ್ಗೆ ಸುಬ್ಬು ತಂದೆಗೂ ಗೊತ್ತು. ಆದರೆ ಅವರು ಏನು ಬಾಯಿ ಬಿಡುತ್ತಿಲ್ಲ. ಈಗ ನರಸಯ್ಯ ಪದ್ದುನನ್ನು ಊರಿಗೆ ಕರೆದುಕೊಂಡು ಬರುವುದಕ್ಕೆ ಹೇಳಿದ್ದಾರೆ. ಸುಬ್ಬು ಬಂದಾಗ ಅದೆಲ್ಲವನ್ನು ಖುಷಿಯಿಂದ ಹೇಳಿದ ಶ್ರಾವಣಿ, ನಿಮ್ಮ ತಂದೆಯನ್ನು ಕರೆದುಕೊಂಡು ಬರುವುದಕ್ಕೆ ಹೇಳಿದ್ದಾರೆ. ಹಾಗಾದ್ರೆ ನಿಮ್ಮ ತಂದೆಯೂ ನಮ್ಮ ಅಜ್ಜಿಗೆ ಗೊತ್ತಾ ಸುಬ್ಬು ಎಂದು ಕೇಳಿದ್ದಾಳೆ.

Zee kannada serial shravani subramanya Written Update on June 27th episode

ಸಾಲಿಗ್ರಾಮ ಹೆಸರು ಕೇಳಿ ವಿಜಯಾಂಬಿಕೆ ಶಾಕ್

ಸುಬ್ಬು ಜೊತೆಗೆ ಖುಷಿಯಿಂದ ಮಾತನಾಡುತ್ತಾ ಇದ್ದಳು ಶ್ರಾವಣಿ. ಆ ಕಡೆಯಿಂದ ವಿಜಯಾಂಬಿಕೆ ತನ್ನ ಲಕ್ಕಿ ವಾಸ್ ಬಗ್ಗೆ ವಿವರಣೆ ನೀಡುತ್ತಾ, ಇದನ್ನು ಕಟ್ಟಿಕೊಂಡಾಗೆಲ್ಲಾ ನನಗೆ ಯಶಸ್ಸು ಸಿಕ್ಕಿದೆ ಎಂದೇ ಹೇಳುತ್ತಿದ್ದಳು. ಶ್ರಾವಣಿ ಅದ್ಯಾವಾಗ ಸಾಲಿಗ್ರಾಮದ ಹೆಸರು ಹೇಳಿದಳೋ, ಲಕ್ಕಿ ವಾಚ್ ಅನ್ನೋದನ್ನು ನೆನಪಿಟ್ಟುಕೊಳ್ಳದೆ ಬೀಳಿಸಿದ್ದಾಳೆ. ಶ್ರಾವಣಿ ಯಾವುದೇ ಕಾರಣಕ್ಕೂ ಸಾಲಿಗ್ರಾಮಕ್ಕೆ ಹೋಗಬಾರದು ಎಂದಿದ್ದಾಳೆ. ಅಲ್ಲಿಗೆ ಶ್ರಾವಣಿ ಹೋದರೆ ಇಷ್ಟು ದಿನ ಮಾಡಿದ್ದೆಲ್ಲವೂ ವ್ಯರ್ಥವಾಗುತ್ತದೆ ಎಂದು ವಿಜಯಾಂಬಿಕೆ ಗಾಬರಿಯಾಗಿದ್ದಾಳೆ.

ಸಾಲಿಗ್ರಾಮದಲ್ಲಿ ಬಯಲಾಗುತ್ತಾ ಸತ್ಯ

ಹಣ, ಆಸ್ತಿಗಾಗಿ ವಿಜಯಾಂಬಿಕೆ ಮನೆಗೆ ಕೆಡುಕು ಬಯಸುತ್ತಿದ್ದಾಳೆ. ತಮ್ಮನ ಬದುಕನ್ನೇ ಹಾಳು ಮಾಡುತ್ತಿದ್ದಾಳೆ. ನಂದಿನಿ ಹಾಗೂ ವೀರೇಂದ್ರ ಪ್ರೀತಿ ಮಾಡಿ ಮದುವೆಯಾಗಿದ್ದವರು. ಆದರೆ ವಿಜಯಾಂಬಿಕೆಯ ಕುತಂತ್ರದಿಂದ ಇಬ್ಬರು ದೂರವಾದರು. ಶ್ರಾವಣಿಯನ್ನು ಕಂಡರು ಆಗದಂತೆ ಮಾಡಿದ್ದಾಳೆ. ಶ್ರಾವಣಿ, ವೀರೇಂದ್ರನ ಮಗಳೇ ಅಲ್ಲ ಎಂಬಂತೆ ಸುಳ್ಳು ಕಥೆ ಕಟ್ಟಿದ್ದಾಳೆ. ಈಗ ಸಾಲಿಗ್ರಾಮ ಹೋಗುವುದರಿಂದ ಶ್ರಾವಣಿಗೆ ತನ್ನ ತಾಯಿಯ ಬಗ್ಗೆ ಒಂದಷ್ಟು ವಿಚಾರಗಳು ತಿಳಿಯುವುದರ ಜೊತೆಗೆ ವೀರೇಂದ್ರನಿಗೂ ಸತ್ಯ ಅರ್ಥವಾಗಬಹುದೇನೋ..?

More from Filmibeat

English summary
Zee kannada serial shravani subramanya today episode. Here is the details about The hidden truth of Vijayambike is coming out in Saligram;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X