Shravani subramanya: ಸುಬ್ಬುಗೆ ಜೈ ಎಂದವರು ಶ್ರಾವಣಿ ಪಾತ್ರಧಾರಿ ಬದಲಾವಣೆಗೆ ಒತ್ತಾಯ!

By ಎಸ್ ಸುಮಂತ್

ಜೀ ಕನ್ನಡದಲ್ಲಿ ಶ್ರಾವಣಿ ಸುಬ್ರಮಣ್ಯ ಎಂಬ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಒಬ್ಬರಿಗೆ ಪ್ರೀತಿಯ ಕೊರತೆ, ಇನ್ನೊಬ್ಬರಿಗೆ ಹಣದ ಕೊರತೆ. ಈ ಇಬ್ಬರು ಒಂದಾದರೇ ನೆಮ್ಮದಿಯ ಜೀವನ ಖಂಡಿತ ಸಿಗುವ ಸಾಧ್ಯತೆ ಇದೆ. ಇಬ್ಬರ ನಡುವೆ ಬಾಂಧವ್ಯ ಬೆಸೆಯುವುದೇ ಈ ಒಂದು ಕೊರತೆ, ಸಮಸ್ಯೆಗಳ ಸಾಗರವೇ ಇರಬೇಕು.

ಶ್ರಾವಣಿ ತಂದೆಯ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ಸುಬ್ಬು ಮನೆಯವರ ಖುಷಿಗಾಗಿ ಹಗಲು ರಾತ್ರಿ ದುಡಿಯುತ್ತಾನೆ. ಈ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಜನಕ್ಕೆ ಕಥೆ ಇಷ್ಟವಾಗಿದೆ, ಹೀರೋ ಇಷ್ಟವಾಗಿದ್ದಾನೆ. ಆದರೆ ಅದ್ಯಾಕೋ ಮೊದಲು ನಾಯಕಿಯನ್ನು ಬದಲಾಯಿಸಿ ಎಂಬ ಡಿಮ್ಯಾಂಡ್ ಇಡುತ್ತಿದ್ದಾರೆ.

Zee kannada serial shravani subramanya Written Update on March 21st episode

ಅಪ್ಪನ ಪ್ರೀತಿಗಾಗಿ ಕಾಯುವ ಹುಡುಗಿ

ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಮೂಲಕ ಶ್ರಾವಣಿ ಪಾತ್ರದಲ್ಲಿ ಆಸಿಯಾ ಫೀರ್ದೀಸ್ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಪ್ಪನಿಗಾಗಿ ಮಿಡಿಯುತ್ತದೆ ಮಗಳ ಹೃದಯ. ಅಪ್ಪ ಯಾವಾಗ ತನ್ನನ್ನು ಒಪ್ಪಿಕೊಳ್ಳುತ್ತಾರೆ, ಯಾವಾಗ ಅಪ್ಪನ ಪ್ರೀತಿ ಸಿಗಬಹುದು ಎಂಬ ಆಸೆಯ ಕಣ್ಗಳಿಂದಾನೇ ಕಾಯುತ್ತಿದ್ದಾಳೆ‌. ಆದೃ ಅದ್ಯಾಕೋ ಅಪ್ಪ ನಾಯಿಯನ್ನು ಬೇಕಾದರೆ ಪ್ರೀತಿ ಮಾಡುತ್ತಾರೆ, ಮಗಳನ್ನು ಅಲ್ಲ ಎಂಬಂತೆ ವರ್ತಿಸುತ್ತಾರೆ. ಇದು ಶ್ರಾವಣಿಯ ಮನಸ್ಸಿಗೆ ಬಹಳ ಸಲ ನೋವು ಕೊಟ್ಟಿದೆ. ಆದರೂ ತಾಳ್ಮೆ ಅಪ್ಪನ ವಿಚಾರಕ್ಕೆ ಹೆಚ್ಚಾಗಿದೆ. ಸುಬ್ಬು ಪಾತ್ರದಲ್ಲಿ ಅಮೋಘ್ ಆದಿತ್ಯಾ ಅಭಿನಯಿಸಿದ್ದಾರೆ. ಮನೆಯ ಎಲ್ಲಾ ಜವಾಬ್ದಾರಿಯನ್ನು ತಲೆ ಮೇಲೆ ಹಾಕಿಕೊಂಡು ತನ್ನ ಸಂತೋಷವನ್ನೇ ಮರೆತಿದ್ದಾನೆ.

ಫ್ರೆಂಡ್ಸ್ ಜೊತೆ ತಮಾಷೆ ಮಾಡುವ ಹುಡುಗಿ

ಶ್ರಾವಣಿಯ ಪಾತ್ರ ಎರಡು ತರದಲ್ಲಿ ಸಾಗುತ್ತದೆ. ಮನೆಯಲ್ಲಿ ಒಂದು, ಕಾಲೇಜು-ಫ್ರೆಂಡ್ಸ್ ಜೊತೆಗೆ ಮತ್ತೊಂದು. ಮನೆಯಲ್ಲಿದ್ದಾಗ ಅವಳ ಪಾಲಿಗೆ ಸಿಗುವುದು ಬರೀ ಕಣ್ಣೀರು. ಅಪ್ಪ ಅಂತು ಮಾತನಾಡಲ್ಲ, ಅತ್ತೆ ಅಂತು ಕೊಂಕು ಮಾತು ಬಿಡಲ್ಲ. ಇನ್ನು ಕಾಲೇಜಿಗೆ ಹೋದರೆ ಫುಲ್ ಖುಷಿಯಾಗಿರುತ್ತಾಳೆ. ಜಾಲಿ ಮೂಡಿನಲ್ಲಿ ಇರುತ್ತಾಳೆ. ಹುಡುಗರಿಗೆ ಗದರುತ್ತಾಳೆ, ಹುಡುಗಿಯರ ಜೊತೆಗೆ ನಕ್ಕು ನಲಿಯುತ್ತಾಳೆ. ಕಾಲೇಜು ಹುಡುಗಿಯೇ ಆಗಿರುವ ಕಾರಣ, ಸೀರಿಯಸ್‌ನೆಸ್ ಹೊರಗಡೆ ಕಡಿಮೆ ಎಂಬಂತೆಯೇ ಕಾಣುತ್ತಾಳೆ‌.

ಎಮೋಷನಲ್ ಆಗಿಯೂ ಕಾಡುವ ಹುಡುಗಿ

ಶ್ರಾವಣಿ ಎಲ್ಲಾ ರೀತಿಯಿಂದಾನೂ ಇಷ್ಟವಾಗುತ್ತಾಳೆ. ಅಪ್ಪನ ವಿಚಾರ ಬಂದಾಗ, ತನ್ನ ವೈಯಕ್ತಿಕ ವಿಚಾರ ಬಂದಾಗ ಕಣ್ಣೀರು ಹಾಕುತ್ತಾಳೆ. ಅವಳ ಒಂದೊಂದು ಮಾತು ಕೂಡ ನೋಡುಗರ ಮನಸ್ಸಿಗೆ ನಾಟಬೇಕು ಆ ರೀತಿ ಭಾವನಾತ್ಮಕವಾಗಿ ಸೆಳೆಯುತ್ತಾಳೆ‌. ಇನ್ನು ಕಾಲೇಜಲ್ಲಿದ್ದಾಗ ವಾಹ್ ಎನಿಸಬೇಕು ಅಷ್ಟು ಫನ್ ಮಾಡುತ್ತಾಳೆ‌.

Zee kannada serial shravani subramanya Written Update on March 21st episode

ಓವರ್ ಆಕ್ಟಿಂಗ್ ಅಂದ ನೆಟ್ಟಿಗರು

ಧಾರಾವಾಹಿಯ ಪ್ರೋಮೋ ಒಂದಕ್ಕೆ ನೆಟ್ಟಿಗರು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ‌. 'ಮೊದಲು ಹಿರೋಯಿನ್ ಬದಲಾವಣೆ‌ ಮಾಡಿ. ಹೀರೋಯಿನ್ ಓವರ್ ಆಕ್ಟಿಂಗ್ ಮಾಡುತ್ತಿದ್ದಾಳೆ, ಹೀರೋಯಿನ್ ಸರಿಯಾಗಿ ಆಕ್ಟಿಂಗ್ ಮಾಡುತ್ತಿಲ್ಲ. ಹೀರೋ ಸೂಪರ್ ಆಕ್ಟಿಂಗ್. ಹೀರೋಯಿನ್ ಒಳ್ಳೆ ಕಾಲೇಜು ಹುಡುಗಿಯಂತೆ ಕಾಣುತ್ತಿದ್ದಾಳೆ' ಹೀಗೆ ಸಾಲು ಸಾಲು ಕಮೆಂಟ್ ಹಾಕುತ್ತಿದ್ದಾರೆ‌. ಕಥೆ ಮುಂದೆ ಸಾಗುತ್ತಾ ಸಾಗುತ್ತಾ ಶ್ರಾವಣಿ ಪಾತ್ರಧಾರಿಯೇ ಅದಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗಬಹುದು. ನೋಡುಗರು ಕೆಲವೊಮ್ಮೆ ಪಾತ್ರಗಳ ಬಗ್ಗೆ ಕಮೆಂಟ್ ಮಾಡುತ್ತಾರೆ. ಟೀಂನವರಿಗೂ ಅದು ಸರಿ ಎನಿಸಿದರೆ ಮಾತ್ರ ಅಲ್ಲಿ ಬದಲಾವಣೆಯಾಗುವುದು. ಆದರೆ ಶ್ರಾವಣಿ ವಿಚಾರದಲ್ಲಿ ಹಾಗೆಲ್ಲ ಆಗಲ್ಲ ಅನ್ನಿಸುತ್ತೆ.

More from Filmibeat

English summary
Zee kannada serial shravani subramanya today episode. Here is the details about Request for change of actress;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X