Shravani subramanya: ಅಪ್ಪ – ಅಮ್ಮನ ಪ್ರೀತಿ ಶ್ರಾವಣಿ ಮುಂದೆ ಅನಾವರಣ; ಪ್ರೀತಿ ಈಗ ಯಾಕಿಲ್ಲ?

By ಎಸ್ ಸುಮಂತ್

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ತಂದೆ ಮಗಳ ಬಾಂಧವ್ಯವನ್ನು ಸಾರುವಂತ ಧಾರಾವಾಹಿ ಇದಾಗಿದೆ. ಅಪ್ಪನ ಪ್ರೀತಿಗಾಗಿ ಕಾಯುತ್ತಿರುವ ಮಗಳ ಕಥೆಯಲ್ಲಿ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ. ತಾಯಿಯ ಹೆಸರೇ ತಿಳಿಯದೇ, ತಂದೆ ಯಾಕಿಷ್ಟು ದ್ವೇಷ ಮಾಡುತ್ತಾರೆ ಎಂಬುದನ್ನೇ ಅರಿಯದೆ ಇಷ್ಟು ದಿನ ಸುಮ್ಮನೆ ಬದುಕಿ ಬಿಟ್ಟಳು ಶ್ರಾವಣಿ.

ಪರೀಕ್ಷೆಯಲ್ಲಿ ಫೇಲ್ ಆದರೆ ಮದುವೆ ಮಾಡಿ ಕಳುಹಿಸಿ ಬಿಡುತ್ತೇನೆ ಎಂಬ ತಂದೆಯ ಮಾತಿಗೆ ಹೆದರಿ, ಹಗಲು ರಾತ್ರಿ ಕಷ್ಟ ಪಟ್ಟು ಓದುತ್ತಿದ್ದಾಳೆ ಶ್ರಾವಣಿ. ತಂದೆ ಪ್ರೀತಿ ತೋರಿಸದೆ ಇದ್ದರು ಪರವಾಗಿಲ್ಲ ಆದರೆ ತಂದೆಯ ಕಣ್ಣ ಮುಂದೆ ಇರಲೇಬೇಕು ಎಂಬುದು ಶ್ರಾವಣಿಯ ಹೆಬ್ಬಯಕೆಯಾಗಿದೆ. ಆದರೆ ಅದಕ್ಕೆಲ್ಲಾ ಶತ್ರುವಿನಂತೆ ಕಾಡುತ್ತಿರುವುದು ಮಾತ್ರ ಶ್ರಾವಣಿಯ ಅತ್ತೆ ವಿಜಯಾಂಬಿಕೆ. ಆದರೆ ಈಗ ಶ್ರಾವಣಿಗೆ ಎಲ್ಲಾ ಸತ್ಯಗಳು ತಿಳಿಯುವ ಸಮಯ ಹತ್ತಿರ ಬಂದಿಎ.

Zee kannada serial shravani subramanya Written Update on may 20th episode

ತಂದೆ ಬರೆದ ಪ್ರೇಮ ಪತ್ರ ಸಿಕ್ತು

ಇತ್ತಿಚೆಗಷ್ಟೇ ಸ್ಟೋರ್ ರೂಮಿನ ಬೀಗ ತೆಗೆದಾಗ ವಿಜಯಾಂಬಿಕೆ ಅದರಲ್ಲಿ ನಮ್ಮ ಮನೆಗೆ ಬೇಡದೆ ಇರುವವರಿಗೆ ಬೇಕಾದ ವಸ್ತುಗಳು ಇದಾವೆ ಎಂದು ಹೇಳಿದ್ದಳು. ಅದನ್ನು ಕೇಳಿಸಿಕೊಂಡ ನಂದಿನಿ ಅದರಲ್ಲಿ ಏನಿರಬಹುದು ಎಂದು ಹುಡುಕಲು ಹೊರಟಿದ್ದಾರೆ. ಅವಳಿಗೂ ಗೊತ್ತು ಈ ಮನೆಯಲ್ಲಿ ಬೇಡದೆ ಇರುವವರು ಎಂದರೆ ನಮ್ಮ ತಾಯಿ ಅಂತ. ಆ ಸ್ಟೋರ್ ರೂಮಿನ ಒಳಗೆ ಕಾಲಿಟ್ಟಾಗಲೇ ಗೊತ್ತಾಗಿದ್ದು, ಅಲ್ಲಿ ಅಮ್ಮನ ನೆನಪುಗಳಿವೆ. ಅಮ್ಮನ ವಸ್ತುಗಳು ಇದಾವೆ ಎಂಬುದು.

ಅಪ್ಪನ ಸಾಲು ಓದಿ ಕಣ್ಣಲ್ಲಿ ನೀರು

ವೀರೇಂದ್ರ ಹಾಗೂ ನಂದಿನಿ ಪ್ರೀತಿಸಿ ಮದುವೆಯಾದವರು. ಆದರೆ ವಿಜಯಾಂಬಿಕೆಯಿಂದ ಒಬ್ಬರಿಗೊಬ್ಬರನ್ನು ಕಂಡರೆ ಬೆಟ್ಟದಷ್ಟು ದ್ವೇಷ ಬರುವಷ್ಟು ದೂರವಾಗಿದ್ದಾರೆ. ನಂದಿನಿ ಹೆಸರೇಳಿದರೆ ಸಾಕು ಕೆಂಡಾಮಂಡಲನಾಗುತ್ತಾನೇ ವೀರೂ. ಆದರೆ ವೀರೂ ಬರೆದ ಪ್ರೇಮ ಪತ್ರದಲ್ಲಿ ಅವನ ಪ್ರೀತಿ ಎಷ್ಟು ಗಾಢವಾಗಿದೆ ಎಂಬುದು ಅಡಗಿದೆ. ಅದೀಗ ಶ್ರಾವಣಿ ಮುಂದೆ ಅನಾವರಣವಾಗಿದೆ.

ವೀರೇಂದ್ರನ ಬಳಿ ಬಿತ್ತು ಒಂದು ಪತ್ರ

ವೀರೂ ಪ್ರೀತಿ ತುಂಬಿದ ಒಂದೊಂದೆ ಪತ್ರಗಳನ್ನು ಶ್ರಾವಣಿ ಓದಿದ್ದಾಳೆ. ನಂದಿನಿಗಾಗಿ ತಂದೆಯ ಹೃದಯ ಹೇಗೆ ಮಿಡಿಯುತ್ತಾ ಇತ್ತು ಎಂಬುದು ಅದರಲ್ಲಿ ಅನಾವರಣವಾಗಿದೆ. ದೂರದಲ್ಲಿಯೇ ಇದ್ದರೂ ಸದಾ ನಿನ್ನ ನೆನಪಲ್ಲಿಯೇ ಇದ್ದೇನೆ. ಅಷ್ಟೇ ಅಲ್ಲದೆ ಈ ಪತ್ರಗಳನ್ನು ಬರೆದ ಉದ್ದೇಶ ನಮ್ಮ ಮಗು ಮುಂದೊಂದು ದಿನ ಈ ಪತ್ರಗಳನ್ನು ನೋಡಿದಾಗ ನಮ್ಮ ಪ್ರೀತಿ ಬಗ್ಗೆ ಆ ಮಗುವಿಗೆ ತಿಳಿಯಬೇಕು ಎಂದು ಬರೆದಿದ್ದಾನೆ. ಇದನ್ನು ನೋಡಿ ಶ್ರಾವಣಿ ಕಣ್ಣಲ್ಲಿ ನೀರು ತುಂಬಿತ್ತು.

Zee kannada serial shravani subramanya Written Update on may 20th episode

ತಂದೆಯನ್ನು ಪ್ರಶ್ನಿಸಿದ ಶ್ರಾವಣಿ

ಶ್ರಾವಣಿ ಓದುತ್ತಿದ್ದ ಪತ್ರ ಬಂದು ವೀರೇಂದ್ರ ಕಾಲಡಿ ಬಿದ್ದಿದೆ. ನಂದಿನಿ ಹೆಸರು ಹೇಳಿದರೇನೆ ಕೋಪಗೊಳ್ಳುವ ವೀರೂ ಇನ್ನು ಪತ್ರ ಸಿಕ್ಕರೆ ಬಿಡುತ್ತಾನಾ. ಜೋರಾಗಿ ಕಿರುಚಿದ್ದಾನೆ. ಮನೆಯವರೆಲ್ಲಾ ಬಂದ ಕೂಡಲೇ ಶ್ರಾವಣಿ, ತಂದೆಗೆ ಪ್ರಶ್ನೆ ಮಾಡಿದ್ದಾಳೆ. ಅಷ್ಟೊಂದು ಪ್ರೀತಿ ಮಾಡುವ ನೀವೂ ನನ್ನ ಇಷ್ಟೊಂದು ಯಾಕಪ್ಪ ದ್ವೇಷ ಮಾಡುತ್ತೀರಾ ಎಂದು ವೀರೂ ಕಾಲಿಡಿದು ಕಣ್ಣೀರು ಹಾಕಿದ್ದಾಳೆ. ಇನ್ನಾದರೂ ವೀರೂ ಸರಿ ಆಗುತ್ತಾನಾ..? ಮಗಳನ್ನು ಒಪ್ಪಿಕೊಳ್ಳುತ್ತಾನ ನೋಡಬೇಕಿದೆ.

More from Filmibeat

English summary
Shravani subramanya kannada serial today episode. Here is the details about Shravani got father's love letter;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X