Shravani subramanya: ಸುಬ್ಬುಗೆ ಸಂಕಷ್ಟ: ಶ್ರಾವಣಿ ತಪ್ಪಿನಿಂದ ನಂಬಿಕೆಯೇ ಕಳೆದೋಗುತ್ತಾ..?
ಶ್ರಾವಣಿ ದೊಡ್ಡ ಶ್ರೀಮಂತೆ. ಶಿಕ್ಷಣ ಸಚಿವರ ಮಗಳು. ಸುಬ್ಬು ಸಚಿವ ವೀರೇಂದ್ರ ಅವರ ಪಿಎ. ನಂಬಿಕಸ್ಥ ಹುಡುಗ. ಮನೆಯಲ್ಲಿ ಕಷ್ಟವಿದ್ದರು ಮೋಸ ಮಾಡುವವನಲ್ಲ. ಇದು ವೀರೇಂದ್ರನಿಗೆ ಚೆನ್ನಾಗಿಯೇ ಗೊತ್ತು. ಅದಕ್ಕೆ ಅದೆಷ್ಟೋ ಬಾರಿ ಸುಬ್ಬು ಮೇಲೆ ಆಪಾದನೆ ಬಂದಿದ್ದರು, ಅದನ್ನು ತಳ್ಳಿ ಹಾಕಿದ್ದಾನೆ.
ಸುಬ್ಬುಗೆ ಇರುವುದು ಒಂದೇ ಆಸೆ ಅಪ್ಪ ಮಗಳು ಒಂದಾಗಬೇಕು. ಯಜಮಾನರು ಶ್ರಾವಣಿಯ ಜೊತೆಗೆ ಮಾತನಾಡಬೇಕು ಎಂಬುದು. ಅದಕ್ಕಾಗಿ ಹಲವು ದಾರಿಗಳನ್ನು ಸುಬ್ಬುನೇ ಹುಡುಕಿ ಕೊಟ್ಟಿದ್ದಾನೆ. ಫೇಲ್ ಆಗಿದ್ದ ಶ್ರಾವಣಿಗೆ ಮತ್ತೆ ಪರೀಕ್ಷೆ ಬರೆಯುವಂತೆ ಮಾಡಿದ್ದಾನೆ. ಶ್ರಾವಣಿಯ ಖುಷಿಗಾಗಿ ಸದಾ ನಿಲ್ಲುತ್ತಾನೆ. ಆದರೆ ಶ್ರಾವಣಿ ಹೇಳದೆ ಕೇಳದೆ ಮಾಡಿದ ಯಡವಟ್ಟು ಸುಬ್ಬು ಹಾಗೂ ಯಜಮಾನರ ನಂಬಿಕೆಗೆ ಕಂಟಕ ತರುವಂತೆ ಆಗಿದೆ.

ಶ್ರಾವಣಿಗೆ ಖುಷಿ ತಂದು ಕೊಟ್ಟಿದ್ದ ಸುಬ್ಬು
ಅಪ್ಪ ಎಂದರೆ ಶ್ರಾವಣಿಯ ಬದುಕಲ್ಲಿ ಅವಳದ್ದೇ ಆತ್ಮವಿದ್ದಂತೆ. ಆದರೆ ವೀರೇಂದ್ರನಿಗೆ ಮಗಳನ್ನು ಕಣ್ಣೆತ್ತಿ ಕೂಡ ನೋಡುವ ಆಸೆಯಿಲ್ಲ. ಯಾಕಂದ್ರೆ ಶ್ರಾವಣಿಯನ್ನು ನೋಡಿದಾಗೆಲ್ಲಾ ನಂದಿಯ ನೆನಪಾಗುತ್ತದೆ. ಹೆಂಡತಿ ಎಂದರೆ ತುಂಬಾ ಕೋಪ ತಂದುಕೊಳ್ಳುತ್ತಾನೆ ವೀರೇಂದ್ರ. ಆದರೆ ಸುಬ್ಬುವಿನಿಂದಾಗಿ ಎಲ್ಲವೂ ಸಾಧ್ಯವಾಗಿದೆ. ಶ್ರಾವಣಿಯ ಹೆಸರು ತಂದೆ ಬಾಯಿಂದ ಬಂದಿದೆ. ಅವರಿಂದಾನೇ ಸನ್ಮಾನವಾಗಿದೆ. ಕನ್ನಸಲ್ಲೂ ಊಹಿಸದ ಘಟನೆ ನಡೆದಿದೆ. ಅವರ ಪಕ್ಕದಲ್ಲೇ ಕೂತು ಶ್ರಾವಣಿ ಸಂಚಾರ ಮಾಡಿದ್ದಾಳೆ.
ಸುಬ್ಬುನೇ ಬೆಸ್ಟ್ ಫ್ರೆಂಡ್
ಸುಬ್ಬು, ಶ್ರಾವಣಿ ಅಪ್ಪನ ಪಿಎ ಆಗಿರಬಹುದು. ಆದರೆ ಶ್ರಾವಣಿಗೆ ಬೆಸ್ಟ್ ಫ್ರೆಂಡ್. ಶ್ರಾವಣಿ ತನ್ನೆಲ್ಲಾ ಕಷ್ಟ ಸುಖವನ್ನು ಅವನ ಬಳಿಯೇ ಹೇಳಿಕೊಳ್ಳುವುದು. ಸುಬ್ಬು ಇಲ್ಲ ಎಂದರೆ ಅವಳಿಂದ ಸಮಯ ಕಳೆಯುವುದಕ್ಕೆ ತಿಳಿಯುವುದಿಲ್ಲ. ಆಕ್ಸಿಡೆಂಟ್ ಆಗಿ ಸುಬ್ಬು ಮನೆಯಲ್ಲಿದ್ದಾಗ ಶ್ರಾವಣಿ ವಿಲ ವಿಲ ಅಂತ ಒದ್ದಾಡಿದ್ದಾಳೆ. ಮನೆಯಲ್ಲಿ ಅಪ್ಪ, ಚಿಕ್ಕಪ್ಪನನ್ನು ಕಂಡು ಸುಬ್ಬು ಎಂದಿದ್ದಾಳೆ. ಆದರೆ ಇಂಥ ಬೆಸ್ಟ್ ಫ್ರೆಂಡ್‌ಗೆ ಸಂಕಷ್ಟ ತಂದೊಡ್ಡಿದ್ದಾಳೆ.
ಶ್ರಾವಣಿ ಬಳಿ ಸಹಾಯ ಕೇಳಿದ ಯುವತಿ
ಶ್ರಾವಣಿ ಹೊರಗಿನಿಂದ ಮನೆಗೆ ಬರುತ್ತಿದ್ದಳು. ಆಗ ಅಲ್ಲಿಗೆ ಬಂದ ಯುವತಿ ಗೋಳಾಡುತ್ತಾ, ಶ್ರಾವಣಿಯ ಕಾಲಿಗೆ ಬೀಳುವುದಕ್ಕೆ ಬಂದಳು. ಆಗ ಶ್ರಾವಣಿ ಆಕೆಯ ಸಮಸ್ಯೆಯನ್ನು ಕೇಳಿದಳು. ಮನೆಯಲ್ಲಿ ತುಂಬಾ ಕಷ್ಟವಿದೆ. ಓದುತ್ತಿದ್ದೀನಿ. ಆದರೆ ಅಪ್ಪನ ಆಪರೇಷನ್ ಖರ್ಚಿಗೆ ಹತ್ತು ಲಕ್ಷ ಬೇಕು ಎಂದಳು. ಅದಕ್ಕೆ ಶ್ರಾವಣಿ ಹಿಂದೆ ಮುಂದೆ ನೋಡದೆ ಹಣ ಕೊಡುವುದಕ್ಕೆ ಮುಂದಾಗಿದ್ದಾಳೆ. ವಿಜಯಾಂಬಿಕೆಗೆ ವಿಚಾರ ಮುಟ್ಟಿಸಿದಳು. ಉಇರ ಉಸಾಬರಿ ನಿನಗ್ಯಾಕೆ ಎಂದಾಗಲೂ ಶ್ರಾವಣಿ ಕೇಳಲಿಲ್ಲ.

ಸುಬ್ಬುಗೆ ಹೇಳದೆ ಚೆಕ್ ಕೊಟ್ಟ ಶ್ರಾವಣಿ
ಸುಬ್ಬು ಬಳಿಯೇ ವೀರೇಂದ್ರ ಚೆಕ್, ಡಾಕ್ಯುಮೆಂಟ್ ಎಲ್ಲಾ ಇರುತ್ತದೆ. ಸೀದಾ ರೂಮಿಗೆ ಹೋದವಳೆ ಚೆಕ್ ತೆಗೆದು ಹತ್ತು ಲಕ್ಷ ಬರೆದಿದ್ದಾಳೆ. ಆ ಚೆಕ್ ಅನ್ನು ಆ ಹುಡುಗಿಗೆ ಕೊಟ್ಟಿದ್ದಾಳೆ. ಮೊದಲೇ ಶ್ರಾವಣಿ ಅಂದ್ರೆ ಎಂಥ ಕಷ್ಟ ಬೇಕಾದರೂ ಸಹಿಸಿಕೊಳ್ಳುತ್ತಾನೆ ಸುಬ್ಬು. ಈಗ ಚೆಕ್ ನಲ್ಲಿ ಹತ್ತು ಲಕ್ಷ ರೂಪಾಯಿ ಡ್ರಾ ಆದರೆ, ತಪ್ಪಾಯ್ತು ಎಂದು ಕೇಳಿದರೆ ಮಯಗೀತು. ಸುಬ್ಬು ತನಗೆ ಕಷ್ಟವಾದರೂ ತಾನೇ ತಪ್ಪಿತಸ್ಥ ಎಂದು ಒಪ್ಪಿಕೊಳ್ಳುತ್ತಾನೆ. ಇದರಿಂದ ವೀರೆಂದ್ರ ಇಟ್ಟಿರುವ ನಂಬಿಕೆಗೂ ಕುತ್ತು ಬರಬಹುದು.


Click it and Unblock the Notifications











