Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Shrirasthu Shubhamasthu:ಶಾರ್ವರಿಯ ಕೋಪಕ್ಕೆ ಪ್ರಾಣ ಕಳೆದುಕೊಳ್ಳುತ್ತಾ ಪೂರ್ಣಿ ಮಗು..?
'ಶ್ರೀರಸ್ತು ಶುಭಮಸ್ತು' ಶುರುವಾದ ಕೆಲವೇ ದಿನಗಳಲ್ಲಿ ಜನರ ಮನಸ್ಸನ್ನು ಗೆದ್ದು ತೋರಿಸಿದೆ. ಅದರಲ್ಲೂ ಸುಧಾರಾಣಿಯ ನಟನೆಗೆ ಎಲ್ಲರೂ ಮಾರು ಹೋಗಿದ್ದಾರೆ. ತುಳಸಿ ಮತ್ತು ಮಾಧವನನ್ನು ಕಥೆಯೂ ಎಲ್ಲರ ಮನಸ್ಸನ್ನು ಹಿಡಿದಿಟ್ಟುಕೊಂಡಿದೆ. ಈಗಂತು ತುಳಸಿಗೆ ಸೊಸೆ ಬಂದಿದ್ದಾಳೆ, ಮಾಧವನ ಭೇಟಿಯಾಗಿದೆ. ಈ ಎಲ್ಲಾ ಅಂಶಗಳು ಜನರನ್ನು ಮತ್ತಷ್ಟು ಖುಷಿಕೊಟ್ಟಿದೆ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಸೆಂಟರ್ ಆಫ್ ಅಟ್ರಾಕ್ಷನ್. ಅದರಲ್ಲೂ ಈಗ ಪೂರ್ಣಿಯ ಸೀಮಂತದ ಸಂಭ್ರಮ ನಡೆಯುತ್ತಿದೆ. ಈ ಸಂಭ್ರಮದಲ್ಲಿ ನೋಡುಗರು ಕೂಡ ಮಿಂದೇಳುತ್ತಿದ್ದಾರೆ.
ಕೆಂಡಸಂಪಿಗೆ:
ಮನೆಯಿಂದ
ಹೊರಗೆ
ಹೋಗ್ತಾಳ
ಸುಮನಾ...?

ಪೂರ್ಣಿ ಸೀಮಂತದಲ್ಲಿ ಒಂದಾದ ಅಪ್ಪ-ಮಗ
ಮಾಧವನಿಗೆ ಎಲ್ಲಾ ಇದ್ದರೂ ಬೇಕಾಗಿದ್ದೇ ಸಿಗುತ್ತಿಲ್ಲ. ಮಗನ ಪ್ರೀತಿಗಾಗಿ ಹಂಬಲಿಸುತ್ತಾ ಇದ್ದಾರೆ. ಆದರೆ, ಮಗನ ಒಂದು ತಪ್ಪು ಕಲ್ಪನೆ ಅಪ್ಪನ ಮುಖವನ್ನು ನೋಡದೆ ಇರುವಂತೆ ಮಾಡಿಟ್ಟಿದೆ. ಆದರೆ ಪೂರ್ಣಿ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುತ್ತಿದ್ದಾಳೆ. ಹೊಟ್ಟೆಯೊಳಗಿರುವ ಮಗಳ ಹೆಸರೇಳಿ ಅಪ್ಪ-ಮಗನನ್ನು ಒಂದು ಮಾಡುತ್ತಿದ್ದಾಳೆ.

ಪೂರ್ಣಿ ನಿರ್ಧಾರಕ್ಕೆ ಖುಷಿಯಾದ ಮಾವ
ಮಾಧವ ಮತ್ತು ಪೂರ್ಣಿಯ ಸಂಬಂಧ ಬರೀ ಮಾವ ಮತ್ತು ಸೊಸೆಯ ಸಂಬಂಧವಾಗಿ ಉಳಿದುಕೊಂಡಿಲ್ಲ. ಅಪ್ಪ ಮಗಳ ಸಂಬಂಧವಾಗಿದೆ. ಪೂರ್ಣಿಗೆ ಹೆತ್ತವರು ಇಲ್ಲ ಎಂಬ ಕೊರಗನ್ನು ನೀಗಿಸಿದ್ದಾರೆ ಮಾಧವ. ಹೀಗಾಗಿ ಎಂದಿಗೂ ಪೂರ್ಣಿ ತನ್ನ ಮಾವನನ್ನು ಬಿಟ್ಟು ಕೊಟ್ಟ ಮಾತೇ ಇಲ್ಲ. ಸೀಮಂತದ ಶಾಸ್ತ್ರ ಮಾಡುವವರು ಯಾರು ಎಂದಾಗಲೂ ಪೂರ್ಣಿ ನಿಂತಿದ್ದು ತನ್ನ ಮಾವನ ಪರವಾಗಿ. ನನ್ನ ಮಾವನೇ ಈ ಎಲ್ಲಾ ಶಾಸ್ತ್ರವನ್ನು ಮಾಡಬೇಕು ಎಂದು. ಅದಕ್ಕೆ ಶಾಸ್ತ್ರಿಗಳು ಒಪ್ಪಿದರು, ತನ್ನ ಗಂಡನು ಒಪ್ಪಿದರು.

ಶಾರ್ವರಿಯ ಕೋಪಕ್ಕೆ ತುತ್ತಾದ ಪೂರ್ಣಿ
ಶಾರ್ವರಿಯ ಗಂಡ ಹಾಸಿಗೆ ಹಿಡಿಯುವುದಕ್ಕೆ ಮಾಧವನೇ ಕಾರಣ ಎಂಬ ತಪ್ಪು ಕಲ್ಪನೆಯಲ್ಲಿದ್ದಾಳೆ. ಆದ್ರೆ ಮಾಧವ ಮಾತ್ರ ತನ್ನ ತಮ್ಮನನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇಂಥ ಶಾರ್ವರಿಯ ತಪ್ಪು ಕಲ್ಪನೆ, ಮೇಲ್ನೋಟಕ್ಕೆ ಎಲ್ಲರನ್ನು ಚೆನ್ನಾಗಿಯೇ ಮಾತನಾಡಿಸುವ ಶಾರ್ವರಿ ಒಳಗೊಳಗೆ ಕತ್ತಿ ಮಸೆಯುತ್ತಿದ್ದಾಳೆ. ಅವಕಾಶ ಸಿಕ್ಕಾಗಲೆಲ್ಲಾ ಕೆಟ್ಟದ್ದನ್ನೇ ಮಾಡುತ್ತಿದ್ದಾಳೆ. ಈಗ ಸೊಸೆಯ ಮೇಲೂ ಕೆಂಡಕಾರುತ್ತಿದ್ದಾಳೆ. ಮನೆಗೆ ಮಗು ಬರುವುದಕ್ಕೂ ಮುನ್ನವೇ ಎಲ್ಲವನ್ನು ಬದಲಾಯಿಸಲು ಹೊರಟ ಪೂರ್ಣಿ ಮೇಲೆ ಕೆಂಡಕಾರುತ್ತಿರುವ ಶಾರ್ವರಿ, ಮಗು ಭೂಮಿಗೆ ಬರಲೇ ಬಾರದು ಎಂದು ನಿರ್ಧರಿಸಿದ್ದಾಳೆ.

ಸೀಮಂತದ ಊಟದಲ್ಲಿ ವಿಷ
ಶಾರ್ವರಿಗೆ ಈಗ ಮನದಲ್ಲಿ ಕೆಂಡ ಕುದಿಯುತ್ತಾ ಇದೆ. ಎಷ್ಟೆಂದರೆ ಹೇಗಾದರೂ ಮಾಡಿ ಮನೆಯೊಳಗಿರುವ ಸಂತೋಷವನ್ನು ಹಾಳು ಮಾಡಲೇಬೇಕೆಂದು. ಸೀಮಂತ ಕಾರ್ಯವೆಲ್ಲಾ ಪೂರ್ಣಿ ಅಂದುಕೊಂಡಂತೆ ನಡೆದಿದೆ. ಮಾವನ ಕೈನಿಂದಾನೇ ಶಾಸ್ತ್ರವೆಲ್ಲಾ ಮಾಡಿಸಿಕೊಂಡಿದ್ದಾಳೆ. ಅಪ್ಪ-ಮಗನನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಸಿದ್ದಾಳೆ, ಅವರಿಬ್ಬರ ಕೈನಿಂದ ಊಟ ಮಾಡಿದ್ದಾಳೆ. ಈ ಎಲ್ಲಾ ಬೆಳವಣೊಗೆ ಹೊಡೆದು ಹೋಗಿರುವ ಅಪ್ಪ ಮಗನನ್ನು ಒಂದು ಮಾಡುವ ಲಕ್ಷಣ ಕಾಣುತ್ತಿದೆ. ಅದಕ್ಕೆಂದೆ ಮಗುವನ್ನೇ ಕೊಲ್ಲುವ ಪ್ಲ್ಯಾನ್ ಮಾಡಿದ್ದಾಳೆ ಶಾರ್ವರಿ. ಅದಕ್ಕೆ ಪೂರ್ಣಿ ತಿನ್ನುವ ಆಹಾರದಲ್ಲಿ ಮಗು ಬದುಕುಳಿಯದಂತ ವಿಷ ಬೆರೆಸಿದ್ದಾಳೆ. ಕಾರ್ಯಕ್ರಮದ ಬಳಿಕ ಪೂರ್ಣಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಮಾಧವನೆ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ಆದ್ರೆ ಕಾರು ಓಡಿಸುವುದಕ್ಕೂ ಮಾಧವನುಗೆ ಭಯವಾಗುತ್ತಿದೆ. ಇದೇ ಕಾರು ಡ್ರೈವಿಂಗ್ ಮಾಡಲು ಹೋಗಿ ತನ್ನವರನ್ನು ಕಳೆದುಕೊಂಡಿದ್ದ. ಈಗ ಧೈರ್ಯ ಮಾಡಿ ಸೊಸೆ ಮತ್ತು ಮಗು ಉಳಿಸಲು ಹೊರಟಿದ್ದಾರೆ.