sri Rastu Shubhamastu: ದತ್ತನಿಗೆ ಗೊತ್ತಿಲ್ಲದೆ ಮನೆಯಲ್ಲಿ ನಡೆಯುತ್ತಿದೆ ಗ್ರ್ಯಾಂಡ್ ಪಾರ್ಟಿ..!

By ಎಸ್ ಸುಮಂತ್

ದತ್ತನ ಕ್ಯಾರೆಕ್ಟರ್ ಎಂಥದ್ದು ಎಂಬುದನ್ನು ಬಾಯಿ ಬಿಟ್ಟು ಹೇಳುವಂಗೆ ಇಲ್ಲ. ಏನಾದರೊಂದು ಹೇಳಿ ಮನೆಯವರಿಗೆ ಉರಿಸುತ್ತಲೇ ಇರುತ್ತಾರೆ ದತ್ತ. ಆದ್ರೆ ಮಾವನ ಬಗ್ಗೆ ಗೊತ್ತಿರುವ ತುಳಸಿ ತಾನು ಹರ್ಟ್ ಮಾಡುವುದಿಲ್ಲ, ಮಕ್ಕಳಿಗೂ ಹರ್ಟ್ ಮಾಡುವುದಕ್ಕೆ ಬಿಡುವುದಿಲ್ಲ. ಅದಕ್ಕೆ ದತ್ತನಿಗೆ ತುಳಸಿ ಎಂದರೆ ಭಲೇ ಪ್ರೀತಿ.

ಗಂಡನನ್ನು ಕಳೆದುಕೊಂಡ ಮೇಲೆ ಸಮರ್ಥ್ ನನ್ನು ಸಾಕಬೇಕಾದ ಜವಬ್ದಾರಿ ತುಳಸಿಯ ಮೇಲೆ ಬಿದ್ದಿತ್ತು. ಆದರೆ ತುಳಸಿಗೆ ಮನೆಯಿಂದ ಹೊರಗೆ ಹೋಗಿಯೂ ಅಭ್ಯಾಸವಿರಲಿಲ್ಲ. ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಿರಲಿಲ್ಲ. ದತ್ತನೇ ಕೆಲಸ ಮಾಡಿ, ತುಳಸಿ ಮತ್ತು ಸಮರ್ಥ್ ನನ್ನು ಸಾಕಿದ್ದಾನೆ. ಇದೆ ಋಣಕ್ಕೆ ತುಳಸಿ ಯಾವಾಗಲೂ ಮಾವನಿಗೆ ಋಣಿಯಾಗಿದ್ದಾಳೆ. ಅದಕ್ಕೆ ತನ್ನ ಮಾವನಿಗೆ ಯಾರು ಏನೆ ಎಂದರು ಸಹಿಸುವುದಿಲ್ಲ.

ದತ್ತನಿಗೆ 75 ವರ್ಷ ತುಂಬಿದೆ. ದತ್ತನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವುದಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ. ತಾತನಿಗೆ ಗೊತ್ತೆ ಆಗದಂತೆ ಮೊಮ್ಮಗ ಹಾಗೂ ಸಿರಿ ಸೇರಿ ಎಲ್ಲಾ ಅರೆಂಜ್ಮೆಂಟ್ ಮಾಡಿದ್ದಾರೆ. ತಾತನ ಹುಟ್ಟುಹಬ್ಬ ಯಾವಾಗಲೂ ನೆನಪಿರಬೇಕು ಆ ರೀತಿ ಎಲ್ಲಾ ಸಿದ್ಧತೆ ನಡೆಸಿದ್ದಾರೆ. ದತ್ತನ ಬರ್ತ್ ಡೇ ಪಾರ್ಟಿಗೆ ಎಲ್ಲರು ಸಿದ್ಧರಾಗಿದ್ದಾರೆ.

ದತ್ತನಿಗೆ ಕಾಡಿಸುತ್ತಿರುವ ಮೊಮ್ಮಕ್ಕಳು, ದತ್ತನಿಗೆ ಬೇಸರವೋ ಬೇಸರ..!

ದತ್ತನಿಗೆ ಕಾಡಿಸುತ್ತಿರುವ ಮೊಮ್ಮಕ್ಕಳು, ದತ್ತನಿಗೆ ಬೇಸರವೋ ಬೇಸರ..!

ದತ್ತನ ಹುಟ್ಟುಹಬ್ಬ ಎಂಬುದು ಮನೆಯವರಿಗೆಲ್ಲಾ ಗೊತ್ತು. ಆದರೆ ಹುಟ್ಟುಹಬ್ಬಕ್ಕೆಂದು ಸ್ಪೆಷಲ್ ಆಗಿ ಪ್ಲ್ಯಾನ್ ಮಾಡುತ್ತಿದ್ದಾರೆ. ತಾತನ ನೆನಪಿನಲ್ಲಿ ಉಳಿಯುವಂತೆ ಆಚರಣೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ತಾತನ ಮುಂದೆ ಎಲ್ಲದನ್ನು ಒಪ್ಪಿಕೊಂಡು ಬಿಟ್ಟರೆ ಆ ಸರ್ಪೈಸ್ ಗೆಲ್ಲಿಯ ಬೆಲೆ. ಅದಕ್ಕೆಂದೆ ಪ್ಲ್ಯಾನ್ ಮಾಡಿ ತಾತನ ಮುಂದೆ ಎಲ್ಲರೂ ಸೇರಿ ನಾಟಕವಾಡುತ್ತಿದ್ದಾರೆ. ಆ ನಾಟಕದಲ್ಲಿ ತುಳಸಿಯನ್ನು ಸೇರಿಸಿಕೊಂಡಿದ್ದಾರೆ. ಮಾವನಿಗೆ ಯಾವತ್ತಿಗೂ ನೋವಾಗಬಾರದು ಎಂದು ಬಯಸುವ ತುಳಸಿ ಮಗ ಮತ್ತು ಸೊಸೆಯ ಮಾತು ಕೇಳಿ ನೋವು ಕೊಡುತ್ತಿದ್ದಾಳೆ.

ದತ್ತನಿಗೇ ಆಶ್ಚರ್ಯವೋ ಆಶ್ಚರ್ಯ..

ದತ್ತನಿಗೇ ಆಶ್ಚರ್ಯವೋ ಆಶ್ಚರ್ಯ..

ಮನೆಯಲ್ಲಿ ದತ್ತನ ಬರ್ತ್ ಡೇಯನ್ನು ಯಾರು ಮರೆತಿಲ್ಲ. ಆದರೆ ಮರೆತಿರುವಂತೆ ನಾಟಕವಾಡುತ್ತಿದ್ದಾರೆ. ದತ್ತನೋ ಫುಲ್ ಟಿಪ್ ಟಾಪ್ ಆಗಿ ರೆಡಿಯಾಗಿ ಬಂದು ಡೈನಿಂಗ್ ಟೇಬಲ್ ಮೇಲೆ ಬಂದು ಕೂತಿದ್ದಾನೆ. ಆದ್ರೆ ಬಂದ ಕೂಡಲೇ ಎಲ್ಲರು ವಿಶ್ ಮಾಡುತ್ತಾರೆ ಎಂದುಕೊಳ್ಳುತ್ತಿದ್ದ ದತ್ತನಿಗೆ ಎಲ್ಲರೂ ನಾರ್ಮಲ್ ಆಗಿ ಇದ್ದಿದ್ದು ಕಂಡು ಶಾಕ್ ಆಗಿದೆ. ಯಾರಿಗೂ ನೆನಪಿಲ್ಲವಾ ಎಂಬ ಬೇಸರ ದತ್ತನನ್ನು ಕಾಡಿದೆ. ಮಾವನ ಬೇಸರದ ಮುಖ ನೋಡಿ ತುಳಸಿಗೂ ಬೇಸರವಾಗುತ್ತಿದೆ. ಮನಸ್ಸಿನಲ್ಲಿಯೇ ಕ್ಷಮೆಯನ್ನು ಕೇಳಿಕೊಂಡಿದ್ದಾಳೆ. "ಮಕ್ಕಳಿಗೋಸ್ಕರ ನಿಮ್ಮನ್ನು ನೋಯಿಸುತ್ತಾ ಇದ್ದೀನಿ ಮಾವ ಕ್ಷಮಿಸಿ" ಎಂದಿದ್ದಾಳೆ.

ಪೊಂಗಲ್ ನೋಡಿ ಖುಷಿ ಪಟ್ಟ ದತ್ತ..!

ಪೊಂಗಲ್ ನೋಡಿ ಖುಷಿ ಪಟ್ಟ ದತ್ತ..!

ಎಲ್ಲರೂ ನಾಟಕವಾಡುತ್ತಿದ್ದದ್ದು ದತ್ತನಿಗೆ ಗೊತ್ತೆ ಆಗಿಲ್ಲ. ಬಳಿಕ ತುಳಸಿಯನ್ನು ತಿಂಡಿ ಏನು ಅಂತ ಕೇಳಿದ್ದಾನೆ. ಆಗ ಖಾರ ಪೊಂಗಲ್, ಸಿಹಿ ಪೊಂಗಲ್ ಎಂದಾಗ ದತ್ತನಿಗೆ ಖುಷಿಯಾಗಿದೆ. "ನಂಗೆ ಗೊತ್ತು ಇವತ್ತು ನೀನು ಸ್ವೀಟ್ ಮಾಡೇ ಮಾಡಿ ಇರ್ತೀಯಾ ಅಂತ. ಇವತ್ತಿನ ಸ್ಪೆಷಲ್" ಅಂತ ದತ್ತ ಎನ್ನುತ್ತಿದ್ದಂತೆ ಸಿರಿ ಮಧ್ಯೆ ಪ್ರವೇಶಿಸಿ, "ಅದೇ ತಾತ ಇವತ್ತು ಸಂಕಷ್ಟ ಚತುರ್ಥಿ ಅಲ್ವಾ. ಅದಕ್ಕೆ ಮಾಡಿದ್ದಾರೆ" ಎಂದಾಗ ದತ್ತನ ಮುಖ ಇನ್ನು ಬೇಸರದಲ್ಲಿ ತುಂಬಿಕೊಂಡು ಬಿಟ್ಟಿದೆ.

More from Filmibeat

English summary
Zee Kannada serial Sri Rastu Shubhastu Written Update on January 31th episode. Here is the details about Datta Birthday Party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X