Srirasthu Shubhamasthu: ಮಹೇಶನಿಗೆ ಕರ್ಜೂರ ಕೊಡಲು ಬಂದ ತುಳಸಿ, ಪ್ರಶ್ನೆ ಮಾಡಿದ ಶಾರ್ವರಿಗೆ ಬುದ್ದಿ ಹೇಳಿದ ಮಾಧವ

By Poorva

ಶ್ರೀರಸ್ತು ಶುಭಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡುತ್ತಿದೆ. ಮಾಧವ ಹಾಗೂ ತುಳಸಿ ಊಟ ಮಾಡುವ ಸಂದರ್ಭದಲ್ಲಿ ಮಹೇಶ ಮಾತನಾಡಿದ್ದನ್ನು ತುಳಸಿ ಹೇಳಿದಾಗ ಮಾಧವ ಖುಷಿ ಪಡುತ್ತಾನೆ. ಯಾಕೆಂದರೆ ತಮ್ಮ ಹುಷಾರು ಆಗುತ್ತಿದ್ದಾರೆ ಎನ್ನುವ ಖುಷಿ ಮಾಧವನಲ್ಲಿ ಕಾಣಿಸುತ್ತಿದೆ. ಸುಮಾರು ವರ್ಷಗಳ ಹಿಂದೆ ನಡೆದಂತಹ ಘಟನೆ ಇದೀಗ ಮಾಧವ ತುಳಸಿಗೆ ಹೇಳುತ್ತಾನೆ .

ಮಹೇಶ ಸರಿ ಹೋಗಬೇಕೆಂದು ಮಾಧವ ಅದೆಷ್ಟು ಯೋಚನೆ ಮಾಡುತ್ತಿದ್ದನೋ ಏನೋ..? ಆದರೆ ಇದೀಗ ಒಳ್ಳೆಯ ಗಳಿಗೆ ಬಂದಿದೆ . ಮಹೇಶನಿಗೆ ಮೊದಲಿಂದಲೂ ಕರ್ಜೂರ ಅಂದರೆ ಪಂಚಪ್ರಾಣ. ತುಳಸಿ ಬಳಿ ಖರ್ಜೂರ ಎಂದು ಹೇಳಿದ್ದನ್ನ ತುಳಸಿ ಮಾಧವನ ಬಳಿ ಹೇಳುತ್ತಾಳೆ. ಇದಕ್ಕೆ ಮಾಧವ ಆತನಿಗೇ ಖರ್ಜೂರ ಅಂದರೆ ಪಂಚಪ್ರಾಣ. ಚಿಕ್ಕವಯಸ್ಸಿನಲ್ಲಿ ಆತನನ್ನು ಖರ್ಜೂರ ಎಂದೇ ನಾವು ಕರೆಯುತ್ತಿದ್ದೇವು ಎಂದು ಹೇಳುತ್ತಾನೆ.

zee-kannada-serial-srirasthu-shubhamasthu

ಇನ್ನು ತುಳಸಿ ಶಾರ್ವರಿಯ ಸ್ವಭಾವವನ್ನು ಮಾಧವನ ಮುಂದೆ ಹೇಳುತ್ತಾಳೆ. ಆಗ ಮಾಧವ ಶಾರ್ವರಿಯ ಬಗ್ಗೆ ತುಳಸಿ ಅಂದುಕೊಂಡಿರುವುದು ತಪ್ಪು ಎಂದು ಮನದಟ್ಟು ಮಾಡುತ್ತಾನೆ. ಇನ್ನು ಮಾಧವ ತುಳಸಿಯ ಬಳಿ ಖರ್ಜೂರವನ್ನು ಮಹೇಶನಿಗೆ ಕೊಡುವಂತೆ ಹೇಳುತ್ತಾನೆ. ಆದರೆ ತುಳಸಿ ಹಿಂದೇಟು ಹಾಕುತ್ತಾಳೆ. ಯಾಕೆಂದರೆ ಶಾರ್ವರಿ ತುಳಸಿಗೆ ಬೈಯುತ್ತಾಳೆ. ಇದನ್ನು ಮಾಧವನ ಬಳಿ ಹೇಳುತ್ತಾಳೆ. ನಾನು ಆ ರೂಮಿಗೆ ಹೋದರೆ ಶಾರ್ವರಿಯವರು ಕೋಪಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣ ನಾನು ರೂಮಿಗೆ ಹೋಗುವುದಿಲ್ಲ ಎನ್ನುತ್ತಾಳೆ.

ಮಹೇಶನ ರೂಮಿಗೆ ಹೋಗಲು ಒಪ್ಪದ ತುಳಸಿ

ನಾನು ಹೇಳಿದ್ದೇನೆ ನೀನು ಮಹೇಶನಿಗೆ ಖರ್ಜೂರ ಕೊಡು ಎಂದು ಹೇಳುತ್ತಾನೆ.. ಇನ್ನು ಅದಕ್ಕೆ ಒಪ್ಪಿಕೊಂಡ ತುಳಸಿ, ನೇರವಾಗಿ ಮಾಧವನ ಮಾತಿನಂತೆ ಮಹೇಶನಿಗೆ ಖರ್ಜೂರವನ್ನು ಕೊಡುತ್ತಾಳೆ. ಅದೇ ವೇಳೆ ಅಲ್ಲಿಗೆ ಬಂದ ಶಾರ್ವರಿ ತುಳಸಿ ಮೇಲೆ ಬಹಳ ಜೋರಾಗಿ ಕೂಗುತ್ತಾಳೆ. ಇದನ್ನು ಕೇಳಿಸಿಕೊಂಡ ಮಾಧವ ನಾನೇ ತುಳಸಿ ಅವರಿಗೆ ಮಹೇಶನಿಗೆ ಕರ್ಜೂರ ಕೊಡಲು ಹೇಳಿದೆ ಎಂದು ಹೇಳುತ್ತಾರೆ.

zee-kannada-serial-srirasthu-shubhamasthu

ಮಾಧವನ ಮಾತು ಕೇಳಿ ಶಾಕ್ ಆದ ಶಾರ್ವರಿ

ಇದನ್ನು ಕೇಳಿಸಿಕೊಂಡ ಶಾರ್ವರಿ ಅವಕ್ಕಾಗಿ ನಿಲ್ಲುತ್ತಾಳೆ . ಆಕೆಗೆ ಬಹಳ ಶಾಕ್ ಆಗುತ್ತದೆ . ಇನ್ನು ಮಹೇಶನನ್ನು ಮಾಧವ ಮಾತನಾಡಿಸಿದಾಗ ಮಹೇಶ 'ಸಾವು' ಎನ್ನುವ ಪದವನ್ನು ಪದೇ ಪದೇ ಉಚ್ಚರಣೆ ಮಾಡುತ್ತಾನೆ. ಇದನ್ನು ಕೇಳಿದ ಮಾಧವನಿಗೆ ಬೇಸರವಾಗುತ್ತದೆ ನಾನು ಕೇಳಿದ ಮೊದಲ ಶಬ್ದ ಸಾವು ಎಂದು ಆಗುತ್ತದೆ. ನೀನು ಏನಾದರೂ ಬೇರೆ ಮಾತನಾಡು ಎಂದು ತಮ್ಮನ ಬಳಿ ಕೇಳಿಕೊಂಡಾಗ, ಆತ ಸಾವು ಎಂದು ಹೇಳುವುದನ್ನು ಬಿಟ್ಟರೆ ಮತ್ತೇನನ್ನು ಹೇಳುವುದಿಲ್ಲ. ಇನ್ನು ಶಾರ್ವರಿಗೆ ಇದೀಗ ಆತಂಕ ಶುರುವಾಗಿದೆ. ನನ್ನ ಎಲ್ಲಾ ಪ್ಲಾನ್ ಗಳು ಬುಡಮೇಲಾಗುವ ಲಕ್ಷಣಗಳು ಕಾಣುತ್ತಿದೆ ಎಂದು ಯೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Srirasthu Shubhamasthu serial 17th November update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X