Srirasthu shubhamastu: ಸಂಧ್ಯಾಳ ಅತಿಯಾಸೆಯಿಂದ ಅಭಿ-ಸಮರ್ಥ್ ಮಧ್ಯೆ ಸಿಲುಕಿಕೊಂಡ ತುಳಸಿ!

By Poorva

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮತ್ತು ಸಮರ್ಥ್ ಕಿತ್ತಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ ತುಳಸಿ ಯಾರ ಪರ ನಿಲ್ಲಬೇಕು ಎಂಬ ಯೋಚಯಲ್ಲಿ ಬಿದ್ದಿದ್ದಾಳೆ. ಸಂಧ್ಯಾ ಮಾಡಿರುವ ಕಿತಾಪತಿಗೆ ಇದೀಗ ಸಮರ್ಥ ಹಾಗೂ ತುಳಸಿ ಬೆಲೆ ತೆರುವ ಹಾಗೆ ಆಗಿದೆ.

ಸಂಧ್ಯಾಳನ್ನ ಬಿಟ್ಟು ಅಭಿ ಸಮರ್ಥ್‌ನ ಟಾರ್ಗೆಟ್ ಮಾಡಿದ್ದಾನೆ. ಸಮರ್ಥ್‌ಗೆ ಈಗಾಗಲೇ ಕೆಲಸದವ ಎನ್ನುವ ಪಟ್ಟ ಕಟ್ಟಿದ್ದಾನೆ ಅಭಿ. ಇದೆಲ್ಲವನ್ನು ನೋಡಿಕೊಂಡಿದ್ದ ತುಳಸಿ ಬಹಳ ಬೇಸರ ಪಟ್ಟುಕೊಂಡಿದ್ದಾಳೆ. ತನ್ನ ಮಗನಿಗೆ ಎಂತಹ ಸ್ಥಿತಿ ಬಂತು. ನನ್ನಿಂದಾಗಿ ನನ್ನ ಮಗ ಬೆಲೆ ತೆರುವ ಹಾಗಾಯಿತು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

Zee kannada serial Srirasthu Shubhamasthu written update on 21th November

ಸಂಧ್ಯಾಳ ದುಡ್ಡಿನ ಯೋಚನೆ ಬಹಳ ಕೆಟ್ಟ ದಾರಿ ಹಿಡಿಯುವ ಹಾಗೆ ಮಾಡಿದೆ. ಆದರೆ ಇದಕ್ಕೆಲ್ಲ ಸಮರ್ಥ್ ಬೆಲೆ ತೆರುವ ಹಾಗೆ ಆಗಿದೆ. ಸಂಧ್ಯಾ ಬಳಿ ಸಮರ್ಥ್ ಹಣ ಕೊಡುವಂತೆ ಕೇಳುತ್ತಾನೆ. ಆ ಒಂದು ಲಕ್ಷ ಹಣವನ್ನು ಏನು ಮಾಡಿದೆ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ ಆದರೆ ಸಂಧ್ಯಾ ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ಸುಳ್ಳಿನ ಗೋಪುರವನ್ನು ಕಟ್ಟಿಕೊಂಡಿದ್ದಾಳೆ.

ಸುಳ್ಳಿನ ಗೋಪುರ ಕಟ್ಟಿದ ಸಂಧ್ಯಾ

ತಾನು ಗರ್ಭಿಣಿ ಅದಕ್ಕಾಗಿ ನನ್ನ ಆರೈಕೆಗೋಸ್ಕರ ಬಂದಿದ್ದೇನೆ. ನನಗೆ ದುಡ್ಡಿನ ಅವಶ್ಯಕತೆ ಇದೆ ಅದಕ್ಕಾಗಿ ನಾನು ಒಂದು ಲಕ್ಷ ತೆಗೆದುಕೊಂಡು ಇದ್ದೇನೆ . ಇದೀಗ ಆ ಹಣವನ್ನು ನಾನು ಪ್ರಸಾದ್‌ಗೆ ಕೊಟ್ಟಿದ್ದೇನೆ ಎಂದೆಲ್ಲ ಹೇಳಿದಾಗ ಆ ಕೂಡಲೇ ಸಮರ್ಥ್ ಪ್ರಸಾದ್ ಗೆ ಕರೆ ಮಾಡಿ ಕೇಳಿದಾಗ ಅದೆಲ್ಲ ಸುಳ್ಳು ಎನ್ನುವ ವಿಚಾರ ಮನೆ ಮಂದಿಗೆಲ್ಲ ಗೊತ್ತಾಗುತ್ತದೆ.

Zee kannada serial Srirasthu Shubhamasthu written update on 21th November

ಅಭಿ ಕಾಲರ್ ಪಟ್ಟಿ ಹಿಡಿದ ಸಮರ್ಥ್

ಇನ್ನು ಏನೇ ಮಾಡಿದರು ಸಂಧ್ಯಾ ಬಳಿ ದುಡ್ಡು ತೆಗೆದುಕೊಳ್ಳಲು ಸಮರ್ಥ್‌ನ ಕೈಯಿಂದ ಆಗುವುದಿಲ್ಲ. ಬಳಿಕ ಸಮರ್ಥ್ ಆಫೀಸಿಗೆ ಹೋಗಿ ಅಭಿಗೆ ಒಂದು ಲಕ್ಷ ಹಣವನ್ನು ಕೊಡುತ್ತಾನೆ. ಅಷ್ಟು ಹೊತ್ತಿಗೆ ಅಲ್ಲಿಗೆ ತುಳಸಿ ಬರುತ್ತಾಳೆ. ಇದೇ ವೇಳೆ ಅಭಿ ಬೇಕು ಎಂದೇ ಸಮರ್ಥ್ ತಂದೆ ತಾಯಿಯ ಬಗ್ಗೆ ಮಾತನಾಡುತ್ತಾನೆ. ಇದನ್ನು ಕೇಳಿದ ಸಮರ್ಥ್ ತುಂಬಾ ಕೋಪದಿಂದ ಅಭಿ ಮೇಲೆ ಕೂಗಾಡುತ್ತಾನೆ. ಹಾಗೆಯೇ ಅಭಿ ಕಾಲರ್ ಹಿಡಿದು ಎಳೆದಾಡುತ್ತಾ ಇರುತ್ತಾನೆ.. ಇದೆಲ್ಲವನ್ನೂ ನೋಡಿದ ತುಳಸಿ ಎನು ಮಾಡಬೇಕು ಎಂದು ತಿಳಿಯದೇ ಬಿಡುತ್ತಾಳೆ.

More from Filmibeat

English summary
Srirasthu shubhamastu serial 21th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X