Srirasthu Shubhamasthu: ಮಹೇಶನ ಮುಂದೆ ನಿಂತ ತುಳಸಿ ಕೈಯಲ್ಲಿ ಮಾತ್ರೆ! ಶಾರ್ವರಿ ಬಣ್ಣ ಬಯಲಾಗುತ್ತಾ?

By Poorva

ಶ್ರೀರಸ್ತು ಶುಭಮಸ್ತು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು ನೋಡುಗರಲ್ಲಿ ಕುತೂಹಲ ಮನೆ ಮಾಡಿದೆ. ಇನ್ನು ಅಭಿಯ ನಡವಳಿಕೆಯ ಬಗ್ಗೆ ತುಳಸಿಗೆ ಬಹಳ ಆತಂಕ ಹೆಚ್ಚಾಗುತ್ತಿದೆ ಯಾಕೆಂದರೆ ಅಭಿ ಆಫೀಸ್‌ನಲ್ಲಿ ತುಳಸಿಯ ಮಗನನ್ನೇ ಬೇರೆ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದಾನೆ. ಇದನ್ನಿಲ್ಲ ನೋಡಿದ ತುಳಸಿಗೆ ಬಹಳ ಆತಂಕ ಹೆಚ್ಚಾಗುತ್ತದೆ. ನನ್ನ ಮಗ ಸಮರ್ಥ್ ಗೆ ಏನಾದರೂ ಮಾಡಿಬಿಡುತ್ತಾನೊ ಎನ್ನುವ ಆತಂಕದಲ್ಲಿ ತುಳಸಿ ಯೋಚನೆ ಮಾಡುತ್ತಿರುತ್ತಾಳೆ.

ಅಭಿಯ ಮನಸ್ಸನ್ನು ಹೇಗೆ ಬದಲಾಯಿಸಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ. ಇಷ್ಟರಲ್ಲಿ ರೂಮ್‌ನಲ್ಲಿ ಏನೋ ದೊಡ್ಡದಾಗಿ ಸದ್ದು ಕೇಳುತ್ತದೆ. ಆಕೆ ಮಹೇಶನ ರೂಮಿನತ್ತ ಓಡಿಕೊಂಡು ಬಂದಾಗ ಮಹೇಶ ಬೆಡ್‌ನಿಂದ ಕೆಳಗೆ ಬೀಳುವ ಹಂತದಲ್ಲಿರುತ್ತಾನೆ. ಇದನ್ನು ನೋಡಿದ ತುಳಸಿಗೆ ಬಹಳ ಶಾಕ್ ಆಗುತ್ತದೆ.

zee-kannada-serial-srirasthu-shubhamasthu

ಏನಾಯಿತು... ಏನಾಯಿತು ಎಂದು ಓಡಾಡಿಕೊಂಡು ಬರುತ್ತಾಳೆ ಮಹೇಶನ ಬಳಿಗೆ. ಆದರೆ ಮಹೇಶ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಮಹೇಶನನ್ನು ಹೇಗಾದರೂ ಮಾಡಿ ಬೆಡ್ ಮೇಲೆ ಮಲಗಿಸಿ ಮಹೇಶ್ ಅವರೇ ನಿಮಗೆ ಏನಾದರೂ ಬೇಕಿತ್ತಾ ನೀವು ಊಟ ಮಾಡಿದ್ರಾ, ಹಸಿವಾಗುತ್ತಿದೆಯಾ, ನಿಮಗೆ ಮಾತ್ರೆ ಏನಾದರೂ ಬೇಕಿತ್ತಾ ಎಂದೆಲ್ಲಾ ಪ್ರಶ್ನೆ ಮಾಡ್ತಾ ಇರುವಾಗ ಮಹೇಶ್ ಸ್ತಬ್ಧವಾಗಿ ಮಲಗಿರುತ್ತಾನೆ.

ಮಹೇಶನ ಮುಖ ನೋಡಿ ಬೇಸರ ಮಾಡಿಕೊಂಡ ತುಳಸಿ

ಇನ್ನು ಮಹೇಶನನ್ನು ನೋಡಿದ ತುಳಸಿಗೆ ಮಾತ್ರ ಇವರು ಮಾತನಾಡಲು ಆಗದ ಸ್ಥಿತಿಯಲ್ಲಿ ಇದ್ದಾರಲ್ಲ ಇವರಿಗೆ ಏನಾದರೂ ಬೇಕಾ ಎಂದು ಯೋಚನೆ ಮಾಡುತ್ತಿರುತ್ತಾಳೆ. ಇನ್ನು ಮಾತುಗಳನ್ನ ಹುಡುಕಾಡಿದಾಗ ಆ ಮಾತ್ರೆಗಳೆಲ್ಲ ಕೆಳಗೆ ಬಿದ್ದಿದ್ದವು. ಕೆಳಗೆ ಬಿದ್ದ ಮಾತ್ರೆಗಳನ್ನು ನೋಡಿದ ತುಳಸಿ ಅದನ್ನ ಎತ್ತಿಕೊಳ್ಳುತ್ತಾಳೆ. ಇದೇನು ಮೂರು ಮೂರು ಬಗೆಯ ಮಾತ್ರೆಗಳು ಇವೆಯಲ್ಲ, ಎಂದು ಅದನ್ನ ತೆಗೆದು ನೋಡುತ್ತಾ ಯೋಚನೆ ಮಾಡುತ್ತಿರುತ್ತಾಳೆ ಆಗ ಅಲ್ಲಿಗೆ ಬಂದ ಶಾರ್ವರಿ ಶಾಕ್ ಆಗುತ್ತಾಳೆ.

ತುಳಸಿಯನ್ನು ರೂಮ್‌ನಲ್ಲಿ ನೋಡಿ ಶಾರ್ವರಿ ಶಾಕ್

ತುಳಸಿ ಕೈಯಲ್ಲಿ ಮಾತ್ರೆಗಳು ಇರುತ್ತದೆ ಮಾತ್ರೆಯನ್ನು ನೋಡಿದ ತುಳಸಿ ಬಹಳ ಶಾಕ್ ಅಲ್ಲಿ ಇರುತ್ತಾಳೆ. ಯಾಕೆಂದರೆ ಮಹೇಶ ಸರಿ ಹೋಗದಂತೆ ಶಾರ್ವರಿ ಆಗಾಗ ಬೇರೆ ಮಾತ್ರೆಗಳನ್ನು ಬದಲಿಸಿ ಆತನಿಗೆ ಕೊಡುತ್ತಿರುತ್ತಾಳೆ. ಈ ವಿಚಾರ ಮನೆಯವರಿಗೆ ಯಾರಿಗೂ ತಿಳಿದಿರುವುದಿಲ್ಲ. ತನ್ನ ಗಂಡ ಎಲ್ಲಾದರೂ ಸರಿ ಹೋದರೆ ನನಗೆ ಈ ಮನೆಯಲ್ಲಿ ಉಳಿಗಾಲ ಇಲ್ಲ ಎಂದು ಯೋಚನೆ ಮಾಡುತ್ತಿರುತ್ತಾಳೆ. ಇದರಿಂದಾಗಿ ಮಾತ್ರೆಯನ್ನು ಬದಲು ಮಾಡಿ ಮಹೇಶನಿಗೆ ಕೊಡುತ್ತಿರುತ್ತಾಳೆ.

zee-kannada-serial-srirasthu-shubhamasthu

ತುಳಸಿಗೆ ಬೈದ ಶಾರ್ವರಿ

ಇನ್ನು ತುಳಸಿ ಮಾತ್ರ ಸುಮ್ಮನೆ ಮಾತ್ರೆಗಳನ್ನು ನೋಡಿಕೊಂಡು ನಿಂತುಕೊಂಡು ಇರಬೇಕಾದರೆ ಜೋರಾಗಿ ಶಾರ್ವರಿ ತುಳಸಿಗೆ ಬೈಯುತ್ತಾಳೆ. ನಿನ್ನನ್ನು ಈ ರೂಮಿನತ್ತ ಯಾರು ಬರಲು ಹೇಳಿದರು. ಯಾಕೆ ಇಲ್ಲಿಗೆ ಬಂದೆ ಎಂದು ಜೋರಾಗಿ ಮಾತನಾಡುತ್ತಿರುತ್ತಾಳೆ. ಆದರೆ ತುಳಸಿ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಬಳಿಕ ತುಳಸಿ ಕೈಯಲ್ಲಿದ್ದ ಮಾತ್ರೆಯನ್ನು ಹಿಡಿದುಕೊಂಡು ಕೈಯಲ್ಲಿ ಅಡಗಿಸಿ ಇಡುತ್ತಾಳೆ. ಇದನ್ನೆಲ್ಲ ನೋಡಿದ ತುಳಸಿಗೆ ಏನು ಇಲ್ಲಿ ಮೋಸ ನಡೆಯುತ್ತಿದೆ ಎಂದು ಯೋಚನೆ ಮಾಡುತ್ತಿರುತ್ತಾಳೆ.

ಮಹೇಶನ ಮಾತು ಕೇಳಿ ತುಳಸಿ ಶಾಕ್

ಬಳಿಕ ತುಳಸಿ ಕೋಣೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮಹೇಶ ಒಮ್ಮಲೇ ತುಳಸಿಯನ್ನು ಕರೆದು ಹೇಳುತ್ತಾನೆ . ತನ್ನ ಹೆಂಡತಿಯತ್ತ ಬೆರಳು ತೋರಿಸಿ ಇವಳು ಸರಿ ಇಲ್ಲ ಎಂದು ಹೇಳುತ್ತಾನೆ. ಇದನ್ನ ಕೇಳಿಸಿಕೊಂಡ ತುಳಸಿಗೆ ಶಾಕ್ ಆಗುತ್ತದೆ. ಮಹೇಶ್ ಅವರು ಮಾತನಾಡುತ್ತಾರಾ ಎಂದು ಯೋಚನೆ ಮಾಡುತ್ತಿರುತ್ತಾಳೆ. ಆಗ ಮಹೇಶನ ಮಾತು ಕೇಳಿದಂತಹ ಶಾರ್ವರಿ ಸಡನ್ ಶಾಕ್‌ನಲ್ಲಿ ನಿಂತುಬಿಡುತ್ತಾಳೆ.

More from Filmibeat

English summary
Srirasthu Shubhamasthu serial 13th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X