ವೀಕ್ಷಕರ ಫೇವರಿಟ್ ನಟಿ 'ಕನ್ನಿಕಾ' ಇನ್ಮುಂದೆ 'ಶ್ರಾವಣಿ' ಅವತಾರದಲ್ಲಿ ...!

By ಪ್ರಿಯಾ ದೊರೆ

ಜೀ ಕನ್ನಡ ವಾಹಿನಿಯಲ್ಲಿ ಈಗ ಹೊಸ ಧಾರಾವಾಹಿಗಳ ಪರ್ವ ಆರಂಭವಾಗಿದೆ. ಒಂದಾದ ಮೇಲೆ ಒಂದರಂತೆ ಹೊಸ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಡಬ್ಬಿಂಗ್ ಮತ್ತು ರಿಮೇಕ್ ಸೀರಿಯಲ್ ಗಳು ಕೂಡ ಕನ್ನಡ ವಾಹಿನಿಗಳಲ್ಲಿ ಹೆಚ್ಚಾಗಿವೆ.

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಅಚ್ಚುಮೆಚ್ಚಿನ ಧಾರಾವಾಹಿಗಳನ್ನೆ ನೀಡುತ್ತಿದೆ. ಯಾವುದು ಕೂಡ ಟಿಆರ್‌ಪಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಈ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರೇಕ್ಷಕರು ಕೂಡ ಒಪ್ಪಿದ್ದಾರೆ. ಪರಭಾಷೆ ಅರ್ಥವಾಗದ ಕಾರಣಕ್ಕೆ ಒಳ್ಳೆಯ ಧಾರಾವಾಹಿಗಳನ್ನು ನೋಡಲಾಗುತ್ತಿರಲಿಲ್ಲ.

zee kannada shravani subramanya

ಹಳೆಯ ಹೆಸರಿನಲ್ಲಿ ಧಾರಾವಾಹಿಗಳು

ಈ ಹಿಂದೆ ವಾಹಿನಿಯೂ ಬ್ರಹ್ಮಗಂಟು ಮತ್ತು ಶ್ರಾವಣಿ ಸುಬ್ರಮಣ್ಯ. ಈ ಎರಡೂ ಬೇರೆ ಬೇರೆ ಧಾರಾವಾಹಿಗಳ ಪ್ರೊಮೋವನ್ನು ಒಟ್ಟಿಗೆ ರಿಲೀಸ್ ಮಾಡಿತ್ತು. ಬ್ರಹ್ಮಗಂಟು ಎಂಬ ಹೊಸ ಧಾರಾವಾಹಿ ಅಕ್ಕ-ತಂಗಿಯರ ಕಥೆಯಾಗಿದೆ.

ಅಕ್ಕನ ಖುಷಿಗೋಸ್ಕರ ಬದುಕನ್ನೇ ಮುಡಿಪಾಗಿಟ್ಟ ದೀಪಾ ಕಥೆ ಎಂದು ಜೀ ಕನ್ನಡ ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ. ಅದಾಗಲೇ ಬ್ರಹ್ಮಗಂಟು ಹೆಸರಲ್ಲಿ ಜೀ ವಾಹಿನಿಯಲ್ಲೇ ಧಾರಾವಾಹಿ ಪ್ರಸಾರವಾಗಿದ್ದು, ಈಗ ಮತ್ತದೇ ಹೆಸರಲ್ಲಿ ಹೊಸ ರಿಮೇಕ್ ಕಥೆ ಶುರುವಾಗುತ್ತಿದೆ.

zee kannada shravani subramanya

ಮತ್ತೆ ಬರಲಿರುವ ಶ್ರಾವಣಿ ಸುಬ್ರಮಣ್ಯ

ಇನ್ನು ಶ್ರಾವಣಿ ಸುಬ್ರಮಣ್ಯ ಹೆಸರಲ್ಲೂ ಹಳೆಯ ಧಾರಾವಾಹಿ ಒಂದಿದ್ದು, ಇದೀಗ ಮತ್ತೊಂದು ಧಾರಾವಾಹಿಯು ಆರಂಭವಾಗುತ್ತಿದೆ. ಅಪ್ಪನ ಪ್ರೀತಿಗೆ ಹಂಬಲಿಸುವ ಹೆಣ್ಣು ಮಗಳ ಕಥೆ ಇದು. ಈ ಧಾರಾವಾಹಿ ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮ್ಮಾಯಿಗಾರು ರಿಮೇಕ್ ಆಗಿದೆ.

ಅವನು ಮತ್ತೆ ಶ್ರಾವಣಿ, ಶ್ರಾವಣಿ ಸುಬ್ರಮಣ್ಯ ಹೆಸರಿನಲ್ಲಿ ಈಗಾಗಲೇ ಧಾರಾವಾಹಿಗಳು ಪ್ರಸಾರವಾಗಿವೆ. ಹಾಗಿದ್ದರೂ ಈಗ ಮತ್ತೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಹೊಸ ಪಾತ್ರಗಳು, ಹೊಸ ಕಥೆಯೊಂದಿಗೆ ಪ್ರಸಾರವಾಗಲು ಸಜ್ಜಾಗಿದೆ.

zee kannada shravani subramanya

ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಶ್ರೀರಸ್ತು ಶುಭಮಸ್ತು, ಸೀತಾ ರಾಮ ಹಾಗೂ ಅಮೃತಧಾರೆ ಧಾರಾವಾಹಿಗಳು ವೀಕ್ಷಕರ ಮನವನ್ನು ಗೆದ್ದಿದ್ದು, ಮುಂದೆ ಪ್ರಸಾರವಾಗುವ ಧಾರಾವಾಹಿಗಳ ಕತೆ ಹೇಗೆ ವೀಕ್ಷಕರನ್ನು ಹೃದಯ ಗೆಲ್ಲಲಿವೆ ಎಂಬುದನ್ನು ಮುಂದೆ ತಿಳಿಯಬೇಕಿದೆ.

ಅಮ್ಮಾಯಿಗಾರು ಕನ್ನಡದಲ್ಲಿ ಶ್ರಾವಣಿ ಸುಬ್ರಮಣ್ಯ

ನಟ ಯಶ್ವಂತ್ ಹಾಗೂ ನಟಿ ನಿಶಾ ರವಿಕೃಷ್ಣನ್ ಅವರು ತೆಲುಗಿನಲ್ಲಿ ಅಮ್ಮಾಯಿಗಾರು ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ನಟಿಸಿರುವ ಅಮ್ಮಾಯಿಗಾರು ಸೀರಿಯಲ್ ಈಗ ಕನ್ನಡದಲ್ಲಿ ರಿಮೇಕ್ ಆಗುತ್ತಿದೆ.

zee kannada shravani subramanya

ಸತ್ಯ ಧಾರಾವಾಹಿಯ ನಟ ರಾಕೇಶ್ ಅಲಿಯಾಸ್ ಅಮೋಘ್ ಅವರು ಶ್ರಾವಣಿ ಸುಬ್ರಮಣ್ಯದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಮೋಘ್ ಆನಂದ್ ಅವರು ಸಿನಿಮಾ ಹಾಗೂ ದೊರೆಸಾನಿ ಧಾರಾವಾಹಿಯಲ್ಲೂ ನಟಿಸಿದ್ದು, ಉದಯೋನ್ಮುಖ ನಟನಾಗಿದ್ದಾರೆ.

ನಟಿ ಆಸಿಯಾ ನಟನೆಯ ಧಾರಾವಾಹಿ

ಕನ್ಯಾಕುಮಾರಿ ಧಾರಾವಾಹಿಯ ನಟಿ ಕನ್ನಿಕಾ ಅಲಿಯಾಸ್ ಆಸಿಯಾ ಫಿರ್ದೋಸ್ ಅವರು ಶ್ರಾವಣಿ ಆಗಿ ಮಿಂಚಲಿದ್ದಾರೆ. ಕನ್ಯಾಕುಮಾರಿ ಅಲ್ಲದೇ, ಆಸಿಯಾ ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ದ್ವಂದ್ವ ಎಂಬ ಸಿನಿಮಾದಲ್ಲೂ ಆಸಿಯಾ ಅವರು ಬಣ್ಣ ಹಚ್ಚಿದ್ದಾರೆ.

ಜೊತೆಗೆ ಟೆಲಿ ಟಾಕೀಸ್ ನಲ್ಲಿ ಮಿಲನ ಎಂಬ ಸಿರೀಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಪರಿಮಳ ಅಲಿಯಾಸ್ ಅಪೂರ್ವಶ್ರೀ ಅವರು ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಈಗಾಗಲೇ ತೆಲುಗಿನಲ್ಲಿ ಹಿಟ್ ಆಗಿದ್ದು, ಇನ್ಮುಂದೆ ಕನ್ನಡದಲ್ಲೂ ಕಮಾಲ್ ಮಾಡಲಿದೆ. ಆದರೆ, ಶ್ರಾವಣಿ ಸುಬ್ರಮಣ್ಯ ಯಾವಾಗ ಹಾಗೂ ಯಾವ ಸ್ಲಾಟ್ ನಲ್ಲಿ ಪ್ರಸಾರವಾಗುತ್ತದೋ ಇನ್ನೂ ಗೊತ್ತಿಲ್ಲ.

More from Filmibeat

English summary
zee kannada channel new serial shravani subramanya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X